ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಈ ಲೇಖನಿಯಲ್ಲಿ ಏಸುಕ್ರಿಸ್ತನ ಜೀವನದ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ. ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

ಏಸುಕ್ರಿಸ್ತನ ಜೀವನ:

ಸುಮಾರು 2000 ವರ್ಷಗಳ ಹಿಂದೆ ಇಸ್ರೇಲ ದೇಶದ ನಜರೇಥ ಎಂಬ ನಗರದಲ್ಲಿ ಮೇರಿ ಹಾಗೂ ಜೋಸೆಫ್‌ ಎಂಬ ದಂಪತಿಗಳು ವಾಸವಾಗಿದ್ದರು. ಜೋಸೆಫ್‌ ವೃತ್ತಿಯಿಂದ ಬಡಗಿಯಾಗಿದ್ದನು. ಯಹೂದಿಗಳ ಹಳೆಯ ಗ್ರಂಥಗಳಲ್ಲಿ ಭವಿಷ್ಯದಲ್ಲಿ ಒಬ್ಬ ಅವತಾರ ಪುರುಷ ಅಥವಾ ದೇವರ ಪ್ರವಾದಿಯ ಆಗಮನದ ಬಗ್ಗೆ ಉಲ್ಲೇಖವಿತ್ತು. ಕೆಲವೊಂದಿಷ್ಟು ಜನ ಅವನ ಅಗಮನದ ನೀರಿಕ್ಷೆಯಲ್ಲಿದ್ದರು.ಆಗ ಗೇಬ್ರಿಯಲ್‌ ಎಂಬ ದೇವದೂತನಿಂದ “ಮೇರಿಯ ಹೊಟ್ಟೆಯಲ್ಲಿ ಜೀಸಸ ಎಂಬ ಪ್ರವಿತ್ರಾತ್ಮವುಳ್ಳ ಮಗ ಜನಿಸುತ್ತಾನೆ, ಅವನು ದೇವರ ಮಗ” ಎಂಬ ಆಕಾಶವಾಣಿಯಾಗುತ್ತದೆ.

ಮೇರಿ ತನ್ನ ಮಗುವಿನ ನಿರೀಕ್ಷೆಯಲ್ಲಿ ಬಹಳಷ್ಟು ಖುಷಿಯಾಗಿರುತ್ತಾಳೆ. ಅದೇ ಸಮಯಕ್ಕೆ ಜೋಸೆಫನ ಪೂರ್ವಜರ ಊರಾದ ಬೆತ್ಲೆಮನಲ್ಲಿ ಜನಗಣತಿ ಪ್ರರಂಭವಾಗುತ್ತದೆ. ಅದರಲ್ಲಿ ತಮ್ಮ ಹೆಸರುನ್ನು ನೋಂದಾಣಿಸಲು ಮೇರಿ ಹಾಗೂ ಜೋಸೆಫ್‌ ಇಬ್ಬರು ಬೆತ್ಲೆಮಗೆ ತೆರಳುತ್ತಾರೆ. ಅಲ್ಲಿ ಬಹಳಷ್ಟು ಜನ ಸೇರಿರುವುದರಿಂದ ಇವರಿಗೆ ಇರಲು ಸರಿಯಾದ ಜಾಗ ಸಿಗುವುದಿಲ್ಲ ಆಗವರು ಕುರಿಗಾಯಿಗಳ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಆಗ ಮೇರಿಗೆ ಹೆರಿಗೆ ನೋವು ಶುರುವಾಗುತ್ತದೆ. ಅಲ್ಲಿದ್ದ ಕುದುರೆ ಲಾಳದಲ್ಲಿ ಜೀಸಸನ ಜನನವಾಗುತ್ತದೆ. ಅಷ್ಟರಲ್ಲಿ ದೈವವಾಣಿಯಾಗುತ್ತದೆ. ಆಕಾಶದಲ್ಲಿ ಒಂದು ವಿಶೇಷ ನಕ್ಷತ್ರ ಮಿನುಗಿ ಮರೆಯಾಗುತ್ತದೆ. ಇದರಿಂದ ಜೀಸಸನ ಜನನದ ಬಗ್ಗೆ ಅಲ್ಲಿದ್ದ ಕುರಿಗಾಯಿಗಳಿಗೆ ಗೊತ್ತಾಗುತ್ತದೆ. ಬಂದ ಕೆಲಸ ಮುಗಿದ ನಂತರ ಮೇರಿ ಹಾಗೂ ಜೋಸಫ್‌ ತಮ್ಮ ಪುಟ್ಟ ಮಗು ಜೀಸಸನೊಂದಿಗೆ ಮತ್ತೆ ತಾವಿದ್ದ ನಜರೇಥ ನಗರಕ್ಕೆ ಹಿಂದಿರುತ್ತಾರೆ.

ಧರ್ಮಗ್ರಂಥ:

*ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ ಬೈಬಲ್‌ ನ ಹೊಸ ಒಡಂಬಡಿಕೆಯ ನಾಲ್ಕು ಭಾಗಗಳಾದ ಮತ್ತಾಯ , ಮಾರ್ಕ್‌, ಲೂಕ್‌, ಮತ್ತು ಜಾನ್‌. ಇಸ್ರೇಲನ ಬೆತ್ಲೆಹೆಮ್ ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು.

*ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್‌ ಅಧಿಕಾರಿಯ ಅಪ್ಪಣೆಯ ಮೆರೆಗೆ ಏಸುವನ್ನು ಶಿಲುಬೆಗೆ ಏರಿಸಲ್ಪಡುತ್ತಾರೆ.ಯೇಸು ಶಿಲುಬೆಗೆ ಏರಿದ ದಿನವನ್ನು ʼಗುಡ್ ಪ್ರೈಡೇʼ ಎನ್ನುವರು. ಶಿಲುಬೆಗೆ ಏರುವ ಸಂದರ್ಭದಲ್ಲಿ ಏಸು ಸಾಮಾನ್ಯ ಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಭಾರವಾದ ಶಿಲುಬೆಯನ್ನು ಹೊತ್ತು. ಮುಳ್ಳಿನ ಕೀರಿಟವನ್ನು ಧರಿಸಿ, ಅರಿಷಡ್ವರ್ಗಗಳನ್ನು ಗೆದ್ದು, ಶಿಲಬೆಗೆ ಏರುವಾಗ ದೇವರೇ ತಾವೇನು ಮಾಡುತ್ತಿದ್ದೇವೆ ಎಂಬುವುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು ಎಂದು, ದೇವರಲ್ಲಿ ತಮ್ಮನ್ನು ಶಿಲುಬೆಗೆ ಏರಿಸಿದವರಿಗೂ ಕ್ಷಮಾದಾನ ನೀಡುತ್ತಾರೆ. ಹಾಗೂ ಶಿಲಬೆ ಮೇಲೆ ಇದ್ದಾಗ ಕೊನೆಯಲ್ಲಿ ಏಳು ಶಬ್ಧಗಳನ್ನು ನುಡಿದು ತಮ್ಮ ಪ್ರಾಣವನ್ನು ದೇವರಿಗೆ ಅರ್ಪಿಸುತ್ತಾರೆ.

ಆಮೇಲೆ ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು ಎಂಬುವುದನ್ನು ಬೈಬಲ್‌ ಹೇಳುತ್ತದೆ. ಆ ದಿನವನ್ನು ʼಈಸ್ಟರ್‌ ಡೇʼ ಎಂದು ಕರೆಯುತ್ತಾರೆ.

ಏಸುಕ್ರೀಸ್ತನ ಸಿದ್ದಾಂತ:

ಜೀಸಸ ಬಾಲ್ಯದಿಂದಲೇ ಓರ್ವ ವಿಭಿನ್ನ ಬಾಲಕನಾಗಿ ಗುರ್ತಿಸಿಕೊಳ್ಳುತ್ತಾನೆ. ಅವನ ಅಲೋಚನೆಗಳು, ಮಾತುಗಳು ಬೇರೆ ಮಕ್ಕಳಿಗಿಂತ ವಿಭಿನ್ನವಾಗಿದ್ದವು. ಆತ ಸಂತನಂತೆ ಮಾತಾಡುತ್ತಿದ್ದನು. ಮುಂದೆ ಆತ ಮನೆ ಬಿಟ್ಟು ಜೇರುಸಲೆಮ ನಗರಕ್ಕೆ ಬಂದನು. ಜೇರುಸಲೆಮಗೆ ಬಂದ ಮೊದಲ ದಿನವೇ ಜೀಸಸ ತಾನು ಭೂವಿಗೆ ಬರಲು ಕಾರಣವಾದ ಕೆಲಸ ಮಾಡಲು ಪ್ರಾರಂಭಿಸಿದನು.

*ಅಲ್ಲಿನ ಒಂದು ದೊಡ್ಡ ದೇವಾಸ್ಥಾನದಲ್ಲಿ ಪ್ರಾಣಿ ಬಲಿ ಕೊಡಲು ನೂರಾರು ಮೇಕೆಗಳನ್ನು , ಪಕ್ಷಿಗಳನ್ನು, ಬಂಧಿಸಿಟ್ಟಿದ್ದರು. ಇದನ್ನು ಕಂಡು ಜೀಸಸ ಬಂಧನದಿಂದ ಬಿಡಿಸಿ ಓಡಿಸಿದನು.ದೇವಾಸ್ಥಾನದದ ಆರ್ಚಕರ ಜೊತೆಗೆವಾದ ಮಾಡಿದನು. ಪ್ರಾಣಿ ಹಿಂಸೆಯನ್ನು ಖಂಡಿಸಿದನು, “ನನ್ನ ಅಪ್ಪನ ಮನೆಯನ್ನು ಪಾಪಾದ ಮನೆಯನ್ನಾಗಿ ಮಾಡಬೇಡಿ” ಎಂದೇಳಿದನು. ಆತ ದೇವರನ್ನು ನನ್ನ ಅಪ್ಪ ಎಂದು ಸಂಭೋದಿಸುತ್ತಿದ್ದನು.ಇಲ್ಲಿಂದ ಜೀಸಸ ಸಮಾಜೋದ್ದಾರ ಆರಂಭವಾಯಿತು.

*ಜೀಸಸ ದೇವಾಸ್ಥಾನದಗಳಲ್ಲಿ , ಧರ್ಮ ಸಭೆಗಳಲ್ಲಿ ತನ್ನ ಉಪದೇಶಗಳನ್ನು, ಕೊಡಲು ಪ್ರಾರಂಭಿಸಿದನು. ಆತ ತನ್ನ ಉಪದೇಶಗಳಲ್ಲಿ ” ನನ್ನ ಮಾತುಗಳು ನನ್ನನ್ನು ಕಳುಹಿಸಿದವರದ್ದು ಅಂದರೆ ನನ್ನ ತಂದೆಯದ್ದು, ದೇವರದ್ದು. ನೀವು ನನ್ನನ್ನು ನಂಬಿದರೆ ದೇವರನ್ನು ನಂಬಿದಂತೆ, ನನ್ನನ್ನು ನೋಡಿದರೆ ದೇವರನ್ನು ನೋಡಿದಂತೆ, ನೀವು ನನ್ನಿಂದ ಆನಂತ ಜೀವನವನ್ನು ಪಡೆಯಬಲ್ಲಿರಿ..” ಹೀಗಾಗಿ ಬಹಳಷ್ಟು ಜನ ಅವನನ್ನು ಹುಚ್ಚನೆಂದರು, ಅವನನ್ನು ಕಲ್ಲಿನಿಂದ ಹೊಡೆದು ಕೊಲ್ಲಲು ಪ್ರಯತ್ನಿಸಿದರು.

*ತಾನು ದೇವರ ಮಗ ಎಂಬುವುದನ್ನು ಯಾರು ನಂಬದಿದ್ದಾಗ ಜೀಸಸ ಪವಾಡಗಳನ್ನು ಮಾಡಲು ಪ್ರಾರಂಭಿಸಿದನು. ಅವನ ಶಿಷ್ಯರಿಗೂ ಸಹ ಅವನ ಮೇಲೆ ನಂಬಿಕೆಯಿರಲಿಲ್ಲ ಅವನು ಪವಾಡಗಳನ್ನು ಮಾಡಿದ ನಂತರ ಅವನ ಶೀಷ್ಯರಿಗೆ ಅವನ ಮೇಲೆ ನಂಬಿಕೆ ಬಂತು ನಂತರ ಕೆಲವೊಂದಿಷ್ಟು ಜನರಿಗೆ ನಂಬಿಕೆ ಬಂತು. ಜೀಸಸ ಒಂದು ದಿನ ತಾಯಿಯೊಂದಿಗೆ ಮದುವೆ ಮನೆಗೆ ಹೋಗಿದ್ದ ಅಲ್ಲಿ ವೈನ ಖಾಲಿಯಾಗಿತ್ತು, ಆಗ ಜೀಸಸ ನೀರನ್ನು ವೈನ ಆಗಿ ಪರಿವರ್ತಿಸಿ ತನ್ನ ಮೊದಲ ಪವಾಡ ಮಾಡಿದನು.

*ಗಲೀಲ ಎಂಬ ಊರಲ್ಲಿ ಕೇವಲ 5 ರೊಟ್ಟಿ ಹಾಗೂ 2 ಮೀನುಗಳಿಂದ 5 ಸಾವಿರಕ್ಕೂ ಅಧಿಕ ಜನರಿಗೆ ಊಟ ಬಡಿಸಿದನು ಎರಡು ಪವಾಡಗಳನ್ನು ಮಾಡಿದನು.ಈ ರೀತಿ ಆತ ತನ್ನ ಅಸ್ಥಿತ್ವವನ್ನು ಸಾಬೀತು ಪಡಿಸಲು ಪವಾಡಗಳನ್ನು ಮಾಡುತ್ತಾ ಸಾಗಿದನು.ಸತ್ತವನ್ನು ಬದುಕಿಸಿದನು, ಹುಟ್ಟು ಕರುಡನಿಗೆ ಕಣ್ಣು ಬರಿಸಿದನು, ರೋಗಿಗಳನ್ನು ಸರಿಮಾಡಿದನು, ನೀರಿನ ಮೇಲೆ ನೆಡೆದನು, ಸುನಾಮಿಯನ್ನು ಶಾಂತಗೊಳಿಸಿದನು ಈ ರೀತಿಯಾಗಿ ಅನೇಕ ಪವಾಡ ಮಾಡಿದನು. ಹೀಗಾಗಿ ಆತ ಅಲ್ಲಿಂದ ಆರ್ಚಕರ ಕೆಂಗಣ್ಣಿಗೆ ಗುರಿಯಾದನು. ಅವನನ್ನು ಸಾಯಿಸಲು ಷಡ್ಯಂತ್ರಗಳು ಶರುವಾದವು.

*ಒಮ್ಮೆ ಜೇರುಸಲೆಮನ ಸೈನಿಕರು ಓರ್ವ ವೈಷ್ಯವನ್ನು ಎಳೆದು ತಂದು ನಡು ಬೀದಿಯಲ್ಲಿ ನಿಲ್ಲಿಸಿ ಅವಳನ್ನು ಕಲ್ಲೊಡೆದು ಸಾಯಿಸುವಂತೆ ಅಲ್ಲಿಂದ ಜನರಿಗೆ ಹೇಳಿದರು, ಆಗ ಜೀಸಸ ಮಧ್ಯೆ ಪ್ರವೇಶಿಸಿ ಅವಳನ್ನು ಕಾಪಾಡಿದನು. ನಿಮ್ಮಲ್ಲಿ ಯಾರು ಒಂದೂ ತಪ್ಪನ್ನು, ಪಾಪವನ್ನು ಮಾಡಿಲ್ಲವೋ ಅವರು ಮೊದಲು ಆಕೆಗೆ ಕಲ್ಲು ಹೊಡೆಯಿರಿ ಎಂದು ಜೀಸಸ ಗುಡುಗಿದಾಗ ಅಲ್ಲಿದ್ದ ಜನರೆಲ್ಲ ತಲೆ ಕೆಳಗಾಕಿ ಅಲ್ಲಿಂದ ತೆರಳಿದರು.ನಂತರ ಅವಳಿಗೆ ” ಇನ್ನಂದು ಪಾಪ ಮಾಡದಿರು, ಮಾಡಿರುವ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಬದುಕು ಪ್ರಾರಂಭಿಸು” ಎಂದು ಹೇಳಿ ಅವಳನ್ನು ಉದ್ದರಿಸಿದನು.

ಮರಣ:

ಜೀಸಸನಿಗೆ ಮುಂದೆ ತನ್ನೊಂದಿಗೆ ಏನಾಗುತ್ತೆ ಎಂಬುವುದು ಮೊದಲೇ ಗೊತ್ತಿತ್ತು. ಅವನ ಶಿಷ್ಯರಲ್ಲೇ ಒಬ್ಬನು ಅವನಿಗೆ ಮೋಸ ಮಾಡಿ ಅವನನ್ನು ರೋಮನ ಸೈನಿಕರಿಗೆ ಹಿಡಿದು ಕೊಡುತ್ತಾನೆ ಎಂಬುದು ಸಹ ಗೊತ್ತಿತ್ತು.ಅದಕ್ಕಾಗಿ ಜೀಸಸ ತನ್ನ ಶಿಷ್ಯರಿಗೆ ಕೊನೆಯ ಊಟಕ್ಕೆ ಕರೆದುಕೊಂಡು ಹೋದನು. ಇದನ್ನು ಲಾಸ್ಟ ಸಪರ್‌ ಎಂದು ಕರೆಯುತ್ತಾರೆ. ಜೀಸಸ ತನ್ನ ಶಷ್ಯರಿಗೆ ತನ್ನ ವಿದಾಯದ ಬಗ್ಗೆ ಹೇಳಿದನು. “ದ್ವೇಷ ಹಾಗೂ ಕಾಮದಿಂದ ದೂರವಿರಲು, ಶತ್ರುಗಳಿಗೂ ಸಹ ಕ್ಷೇಮ ಬಯಸುವುದು, ನಿಮಗೆ ಕಟ್ಟದನ್ನು ಮಾಡಿದವರನ್ನು ಕ್ಷೇಮಿಸುವುದು.ಒಂದು ಕೆನ್ನೆಗೆ ಹೊಡೆದರೆ ಮತ್ತೊಂದನ್ನು ತೋರಿಸುವುದು”ಎಂದೆಲ್ಲಾ ಉಪದೇಶಗಳನ್ನು ನೀಡಿದನು. ಹಾಗೆ ಶಿಷ್ಯ ಹತ್ತಿರ ತನ್ನ ಪುನರುಸ್ಥಾನದ ಬಗ್ಗೆ ತನ್ನ ಶಿಷ್ಯರಿಗೆ ಹೇಳಿದನು. ತನ್ನ ನಿಧಾನದ ನಂತರದ ಮೂರು ದಿನಗಳಲ್ಲಿ ನಾನು ನಿಮಗೆ ಮತ್ತೆ ಕಾಣಿಸಿಕೊಳ್ಳುವೆ ಎಂದೇಳಿ ಜೀಸಸ ತನ್ನ ಶಿಷ್ಯರಿಗೆ ವಿದಾಯ ಹೇಳಿದನು. ಸೈನಿಕರು ಜೀಸಸನನ್ನು ಬಂಧಿಸಿ ಯಹೂದಿಗಳ ಅರ್ಚಕರ ಹಾಗೂ ಮುಖ್ಯ ಮಠಾಧೀಶರ ಮುಂದೆ ಹಾಜರು ಪಡಿಸಿದರು. ಅವನನ್ನು ರೋಮನ ಗವರ್ನರನ ಮುಂದೆ ಹಾಜರು ಪಡಿಸಿದರು. ” ದೇವರ ಅಪಮಾನ ಹಾಗೂ ರಾಜನಾಗುವ ಆಸೆಗೆ ಜನರ ತಲೆ ಕೆಡಿಸಿದ” ಆರೋಪದ ಮೇಲೆ ಶಿಲುಬೆಗೆ ಏರಿಸಿ ಸಾಯಿಸುವಂತೆ ಕೇಳಿಕೊಂಡರು.ಹಾಗೆ ಗವರ್ನ ಶಿಲುಬೆ ಏರಿಸುವಂತೆ ಆದೇಶ ನೀಡಿದನು. ನಂತರ ಯಹೂದಿ ಅರ್ಚಕರು ಜೀಸಸಗೆ ಚಾವಟಿ ಏಟಿಯಿಂದ ಹೊಡೆದರು. ಅವನ ತಲೆ ಮೇಲೆ ಮುಲ್ಲಿನ ಕೀರಿಟ ಇಟ್ಟರು. ಭಾರವಾದ ಶಿಲಬೆ ಅವನ ಮೇಲೆ ಹಾಕಿದರು ಈಡೀ ಜೇರುಸಲೆಮ ನಗರ ತುಂಬೆಲ್ಲ ಮೆರವಣಿಗೆ ಮಾಡಿಸಿದರು.ನಗರದ ಆಚೆ ಶಿಲುಬೆ ಏರಿಸಿದರು, ಅವನ ಕೈ ಹಾಗೂ ಕಾಲುಗಳಿಗೆ ಮೂಳೆಗಳನ್ನು ಹೊಡೆದು ಅವನನ್ನು ಶಿಲುಬೆಗೆ ನೇತಾಕಿದರು. ಜೀಸಸನ ಶಿಷ್ಯರು ಅವನ ನಿಧನದ ನಂತರ ತಲೆ ಮರೆಸಿಕೊಂಡರು. ಅದರಲ್ಲಿ ಆರ್ಚಕರೊಂದಿಗೆ ಒಳ್ಳೆ ಸಂಪರ್ಕ ಇಟ್ಟುಕೊಡಿದ್ದನು, ಆತ ಅವರಿಗೆ ಹೇಳಿ ಜೀಸಸನ ಶವವನ್ನು ಶಿಲುಬೆಯಿಂದ ಕೆಳಗಿಳಿಸಿ ಅದನ್ನು ಸುಗಂಧ ದ್ಯವ್ಯಗಳಿಂದ ಸ್ವಚ್ಛಗೊಳಿಸಿ ಬಿಳಿ ಬಟ್ಟೆಯಿಂದ ಸುತ್ತಿ ಒಂದು ಗುಹೆಯಲ್ಲಿ ಸಮಾಧಿ ಮಾಡಿದನು. ಮರುದಿನ ಒಳಹೋಗಿ ನೋಡಿದಾಗ ಜೀಸಸ ಶರೀರ ಅಲ್ಲಿರಲಿಲ್ಲ. ಅದರ ಮಾರನೆ ದಿನ ಜೀಸಸ ತನ್ನ ಶರೀರ ಸಮೇತ ತನ್ನ ಶಿಷ್ಯರಿಗೆ ದರ್ಶನ ಕೊಟ್ಟರು.ಇದಕ್ಕೆ ಜೀಸಸನ ಪುನರುಸ್ಥಾನ ಎನ್ನುತ್ತಾರೆ.

FAQ

ಏಸುಕ್ರಿಸ್ತನ ತಂದೆ ತಾಯಿ ಯಾರು?

ಏಸುಕ್ರಿಸ್ತನ ತಂದೆ ಜೋಸೆಫ್‌ ತಾಯಿ ಮೇರಿ

ಏಸುಕ್ರಿಸ್ತನ ಜನನ?

ಮೇರಿಗೆ ಹೆರಿಗೆ ನೋವು ಶುರುವಾಗುತ್ತದೆ,ಅಲ್ಲಿದ್ದ ಕುದುರೆ ಲಾಳದಲ್ಲಿ ಜೀಸಸನ ಜನನವಾಗುತ್ತದೆ.

ಗುಡ್ ಫ್ರೈಡೇ ಆಚರಣೆ ಮಹತ್ವ?

ಜೀಸಸನನ್ನು ಶಿಲುಬೆಗೆ ಏರಿಸಿದ ದಿನವನ್ನು ಗಡ್‌ ಫ್ರೈಡೆ ಎಂದು ಆಚರಿಸುವುದು.

ಪುನರುತ್ಥಾನದ ದಿನ ಆಚರಣೆ ಏನು?

ಈಸ್ಟರ್‌ ಸಂಡೆ ಎಂದು ಆಚರಿಸುತ್ತಾರೆ

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ರಾಜ್ಯಶಾಸ್ತ್ರ ಎಂದರೇನು:

ದೀಪಾವಳಿ ಬಗ್ಗೆ ಪ್ರಬಂಧ

Leave a Comment