ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ, gandhiji avara bagge prabandha in kannada, mahatma gandhiji bhagya prabandha kannada, ಮಹಾತ್ಮ ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ:

ಈ ಲೇಖನದಲ್ಲಿ ಗಾಂಧೀಜಿಯವರ ಬಗ್ಗೆ ಪ್ರಬಂಧ ಬರೆದು,ಸಂಪೂರ್ಣ ಮಾಹಿತಿಯನ್ನು ಒದಗಿಸುವುದು, ಅದರ ಜೂತೆ ಇವರ ವಿಚಾರಧಾರೆಗಳನ್ನು ಎಲ್ಲರಿಗೂ ಸಹಾಯವಾಗುವಂತೆ ಒದಗಿಸಿದೆ.

ಪೀಠಿಕೆ:

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್‌ 2 ನ್ನು ನಾವು ಗಾಂಧಿ ಜಯಂತಿ ಎಂದು ಆಚರಿಸುತ್ತೆವೆ. ಇದು ಭಾರತದ ರಾಷ್ಟೀಯ ಹಬ್ಬವಾಗಿದೆ.ಗಾಂಧಿಯವರ ಜನ್ಮದಿನವಂದು ದೇಶದಾದ್ಯಂತ ಹಲವು ವೈವಿಧ್ಯಮಯ ಕರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಗಾಂಧೀಜಿಯವರ ಜೀವನ ಪರಿಚಯ:

ಅಕ್ಟೋಬರ್‌ 2,1869ರಲ್ಲಿ ಗುಜರಾತ್ ನ ಪೋರಬಂದರ್‌ ನಲ್ಲಿ ಈ ಧೀಮಂತ ನಾಯಕರ ಜನನವಾಯಿತ್ತು.ಇವರ ತಂದೆ ಕರಮಚಂದ್ ಗಾಂಧಿ,ತಾಯಿ ಪುತಲೀಬಾಯಿ.ಇವರ ಪೂರ್ಣಹೆಸರು ಮೋಹನದಾಸ್‌ ಕರಮ ಚಂದ್‌ ಗಾಂಧಿ.ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯ್ತು.ಇಬ್ಬರಿಬ್ಬರಿಗೆ ನಾಲ್ಕು ಮಕ್ಕಳು ಜನಿಸಿದರು.ಹರಿಲಾಲ್‌ ಗಾಂಧಿ,ಮಣಿಲಾಲ್‌ ಗಾಂಧಿ,ರಾಮದಾಸ್‌ ಗಾಂಧಿ,ಮತ್ತು ದೇವದಾಸ್‌ ಗಾಂಧಿ.ತನ್ನ19ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್‌ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.

ಭಾರತದಲ್ಲಿ ಚಳುವಳಿಗಳ ಆರಂಭ:

ಸುದೀರ್ಘ ವರ್ಷಗಳ ನಂತರ ಗಾಂಧೀಜಿ 1915ರಲ್ಲಿ ಭಾರತಕ್ಕೆ ಮರಳಿದರು.ಅದೇ ವರ್ಷ ಅಹಮದಾಬಾದಿನಲ್ಲಿ ಸತ್ಯಾಗ್ರಹ ಅಶ್ರಮವನ್ನು ಸ್ಥಾಪಿಸಿದ ಗಾಂಧಿ, ಬ್ರಿಟೀಷರ ಹಿಡಿತದಲ್ಲಿ ಭಾರತವನ್ನು ನೋಡಿ ಮರುಗಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಗದೆ ಬೇರೆ ದಾರಿ ಇಲ್ಲ ಎಂದು ತಮ್ಮ ವಕೀಲ ವೃತ್ತಿಯನ್ನು ತ್ಯಜಿಸಿ ಸಂಪೂರ್ಣ ಹೋರಾಟಕ್ಕೆ ಇಳಿದರು. ಹಾಗೆ ಅವರು 1920-22 ಅಸಹಕಾರ ಚಳುವಳಿ,1930ರಲ್ಲಿ ಉಪ್ಪಿನ ಸತ್ಯಾಗ್ರಹ ,1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಹೋದಾಟ ನಡೆಸಿದರು. 1920ರಂದು ಅಮೃತಸರದಲ್ಲಿ ನಡೆದ ಜಲಿಯನ್‌ ವಾಲಾ ಬಾಗ್‌ ಹತ್ಯಾಕಾಂಡ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು.ಗಾಂಧೀಜಿಯವರ ಜೀವನದ ಪ್ರಸಿದ್ಥ ಕಾರ್ಯಗಳಲ್ಲಿ ಒಂದು ದಂಡಿ ಯಾತೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್‌ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ 12-1930ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಬಂದು ಉಪ್ಪನ್ನು ಉತ್ಪಾದಿಸಿದರು. ಮೇ 8,1933 ರಂದು ಆರಂಭಗೊಂಡು 21 ದಿನಗಳ ಕಾಲ ಬ್ರಿಟಿಷ್‌ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಗಾಂಧೀಜಿಯ ಚಳುವಳಿ ಅಲ್ಲಿಂದ ಆರಂಭವಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ವಿರುದ್ಥ ಬಿಳಿಯರು ಮಾಡುತ್ತಿರುವ ಶೋಷಣೆಯನದನ್ನು ಖಂಡಿಸಿದ ಮೋದಿ ವರ್ಣಭೇದ ನೀತಿ ವಿರುದ್ಧ ಹೋರಾಡಿ ಸಫಲರಾದರು.

ಗಾಂಧೀಜಿ ತತ್ವ ಸಿದ್ದಾಂತಗಳು:

ಮಹಾತ್ಮಗಾಂಧಿ ಅವರ ಪ್ರಮುಖ ತತ್ವ ಸಿದ್ದಾಂತವೆಂದರೆ ಅದು ಸತ್ಯ ಮತ್ತು ಅಹಿಂಸೆ. ಗಾಂಧಿ ತಮ್ಮ ಆತ್ಮಚರಿತ್ರೆ “ನನ್ನ ಸತ್ಯಾನ್ವೇಷಣೆ” ಯಲ್ಲಿ ಸತ್ಯ ಮತ್ತು ಅಹಿಂಸೆಗಳು, ತಲೆತಲಾಂತರರದಿಂದ ಬಂದ ನೀತಿಬೋಧನೆಗಳಾಗಿವೆ. ಅದರಲ್ಲಿ ನಾನು ಹೊಸದಾಗಿ ಹೇಳಿರುವುದು ಏನೂ ಇಲ್ಲ ಎಂದಿದ್ದಾರೆ. ಈ ಸತ್ಯ ಮತ್ತು ಅಹಿಂಸೆಗಳು, ಗಾಂಧಿಯವರ ಮುಖವಾಡ ಮಾತ್ರ ಅಗಿರದೆ ಅದರಂತೆ ಬದುಕಿ ತೋರಿಸಿದ್ದರು.ಈ ಸತ್ಯ ಮತ್ತು ಅಹಿಂಸೆಯೊಂದಿಗೆ ತಮ್ಮ ಕೊನೆಯ ಉಸಿರಿರುವವರೆಗೆ ಪ್ರಯೋಗ ನಡೆಸಿದರು. ಶಿಕ್ಷಣ ಎಂದರೆ ಮಗುವನ್ನು ಮನುಷ್ಯನನ್ನಾಗಿಸುವ ಸರ್ವತ್ರ ಸಾಧನ ಎಂದಿದ್ದ ಗಾಂಧಿ,ದೇಹ, ಮೆದುಳು, ಹಾಗೂ ಚೈತನ್ಯ ಎಲ್ಲವನ್ನೂ ರೂಪಿಸುವುದೇ ಶಿಕ್ಷಣ ಎಂದು ಪ್ರತಿಪಾದಿಸಿದ್ದರು.ಗುಜರಾತ್‌ ವಿದ್ಯಾಪೀಠದ ಘೋಷವಾಕ್ಯ ಸಾ ವಿದ್ಯಾ ಯಾ ವಿಮುಕ್ತೆ ಎನ್ನುವ ಸಾಲಿನಲ್ಲಿ ಗಾಂಧೀಜಿ ಬಲವಾದ ನಂಬಿಕೆ ಇರಿಸಿದ್ದರು. ಹೀಗಾಗಿ ಪ್ರಾಥಮಿಕ ಶಿಕ್ಷಣದ ತಳಹದಿಯಾಗಬೇಕು.

ಶಿಕ್ಷಣ ಪಡೆದ ಪ್ರತಿಯೊಬ್ಬರೂ ಮಾದರಿಯಾಗುತ್ತಾರೆ ಮತ್ತು ಅವರ ಜೀವನ ಹಲವರಿಗೆ ಸ್ಫೂರ್ತಿ ಎಂದಿದ್ದ ಗಾಂಧಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮಾನವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದ್ದರು.

ಉಪಸಂಹಾರ:

ಈ ಮೂಲಕ ಗಾಂಧೀಜಿ ಅವರ ಚಳುವಳಿಗಳು ಅವರ ಸಿದ್ದಾಂತಗಳು , ರಕ್ತವಿಲ್ಲದೆ ದೇಹವು ಹೇಗೆ ಬದುಕಲು ಸಾಧ್ಯವಿಲ್ಲವೊ ಹಾಗೆಯೇ ಶ್ರದ್ದೆ ಮತ್ತು ಪ್ರಾರ್ಥನೆಗಳಿಲ್ಲದೆ ಆತ್ಮವೊ ಕೊಡ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇತರೆ ಪ್ರಬಂಧ:

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಪುಸ್ತಕಗಳ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ 

Leave a Comment