ಚುನಾವಣೆ ಎಂದರೇನು

ಚುನಾವಣೆ ಎಂದರೇನು, Chunavane Endarenu in Kannada, ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಜಾಗೃತಿ, Chunavana information in kannada

ಚುನಾವಣೆ ಎಂದರೇನು:

ಈ ಲೇಖನಿಯಲ್ಲಿ ಚುನಾವಣೆ ಹಾಗೂ ಅದರ ಮಹತ್ವವನ್ನು ನಿಮಗೆ ಅನುಕೂಲವಾಗುವಂತೆ ಒಂದಿಷ್ಟು ಮಾಹಿತಿ ಒದಗಿಸಿದ್ದೇವೆ.

ಚುನಾವಣೆ:

ಚುನಾವಣೆ ಎಂದರೆ “ಮತದಾರರು ತಮ್ಮನ್ನಾಳುವ ಪ್ರತಿನಿಧಿಯನ್ನು ತಾವೇ ಆಯ್ಕೆ ಮಾಡುವ ವಿಧಾನವನ್ನೆ ಚುನಾವಣೆ” ಎನ್ನುತ್ತೇವೆ. ಚುನಾವಣೆ ಎಂಬ ಪದವು ಲ್ಯಾಟಿನ್‌ ಪದ ʼEligeré ಎಂಬುದರಿಂದ ಬಂದಿದೆ.ʼEligeré ಎಂದರೆ ಅರಿಸು, ಆಯ್ಕೆ ಮಾಡು, ಚುನಾಯಿಸು ಎಂಬರ್ಥವಾಗುತ್ತದೆ.

ಪ್ರಜೆಗಳು ಹೊಂದಿರುವ ಈ ಮತದಾನದ ಹಕ್ಕಿನ ಮೂಲಕ ಅವರು ಭಾರತದಲ್ಲಿ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧಾರ ಮಾಡುವರು.

ಸಂವಿಧಾನದಿಂದ ದತ್ತವಾದ ಮತದಾನದ ಹಕ್ಕಿನ ಮೂಲಕ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರತಿನಿಧಿಗಳನ್ನು ಪ್ರಜೆಗಳೇ ಆಯ್ಕೆ ಮಾಡುವರು. ಮತದಾರರು ತಮಗೆ ಬೇಕಾದ ಪಕ್ಷವನ್ನು ಅಧಿಕಾರಕ್ಕೆ ತರಲು ಕಲ್ಪಿಸಿರುವ ರಾಜಕೀಯ ಅವಕಾಶವಾಗಿದೆ.

ಚುನಾವಣೆಗಳಲ್ಲಿ ಮತದಾರರು ಚಲಾಯಿಸುವ ಮತ ಇಂದು ಹೆಚ್ಚು ಮಹತ್ವವನ್ನು ಪಡೆದಿದೆ. ಅದಕ್ಕಾಗಿಯೇ ಕೆಲವು ಬುದ್ದಿಜೀವಿಗಳುʼಪ್ರಜಾಪ್ರಭುತ್ವದಲ್ಲಿ ಮತಪತ್ರವು ಬಂದೂಕಿನ ಬುಲೆಟ್ಟಿಗಿಂತ ಹೆಚ್ಚು ಶಕ್ತಿಶಾಲಿಯಾದುದುʼಎಂದು ಅಭಿಪ್ರಾಯಪಟ್ಟಿರುತ್ತಾರೆ.

ಚುನಾವಣೆಗಳು ಪ್ರಜೆಗಳಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ತಮಗೆ ಬೇಕಾದ ಸರ್ಕಾರವನ್ನು ಅಧಿಕಾರಕ್ಕೆ ತರಲು ಅವಕಾಶವನ್ನು ಒದಗಿಸುತ್ತದೆ. ಅದಕ್ಕಾಗಿಯೇ ಚುನಾವಣೆಗಳನ್ನು ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಎಂದು ಕರೆಯಲಾಗಿದೆ.

ಜನಬೆಂಬಲವನ್ನು ಪಡೆದ ಪಕ್ಷವು ಅಧಿಕಾರಕ್ಕೆ ಬಂದು ಆಡಳಿತ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉಳಿದ ರಾಜಕೀಯ ಪಕ್ಷಗಳು ವಿರೋಧ ಪಕ್ಷಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇದು ವಿವಿಧ ಚುನಾವಣೆಗಳಾದ ಸಾರ್ವತ್ರಿಕ ಚುನಾವಣೆ, ಮರುಚುನಾವಣೆ, ಮಧ್ಯಂತರ ಚುನಾವಣೆ, ಉಪಚುನಾವಣೆಗೆ ದಾರಿ ಮಾಡಿಕೊಡುತ್ತದೆ.

ಭಾರತದಲ್ಲಿ 18 ವರ್ಷ ತುಂಬಿತ ಎಲ್ಲಾ ಸ್ತ್ರೀ-ಪುರುಷರು, ಜಾತಿ, ಧರ್ಮ, ಲಿಂಗ, ಬುಡಕಟ್ಟು, ಅರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಮುಂತಾದವುಗಳನ್ನು ತಾರತ್ಯಮವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುವುದನ್ನೆ ಸಾರ್ವತ್ರಿಕ ವಯಸ್ಕ ಮತದಾನ ಪದ್ದತಿ ಎನ್ನುತ್ತೇವೆ.

ಶಾಸನ ಸಭೆಗಳಿಗೆ ಜನಪ್ರತಿನಿಧಿಗಳನ್ನು ಅರಿಸಲು ದೇಶದ ಎಲ್ಲ ಮತದಾರರೂ ನಿಯತಕಾಲಿಕವಾಗಿ ನಡೆಯುವ ಚುನಾವಣೆಗಳಲ್ಲಿ ಮತ ಹಾಕುವ ಪದ್ದತಿಯೇ ಸಾರ್ವತ್ರಿಕ ಚುನಾವಣೆ ಎನ್ನುತ್ತೇವೆ.

ಯಾವುದೇ ರೀತಿಯ ಅವ್ಯವಹಾರಗಳು ನಡೆದರೆ ಅಲ್ಲಿನ ಚುನಾವಣೆಗಳನ್ನು ರದ್ದುಗೊಳಿಸಿ ಪುನಃ ಚುನಾವಣೆಗಳನ್ನು ನಡೆಸುವುದೇ ಮರುಚುನಾವಣೆ ಎನ್ನತ್ತೇವೆ.

ಇತರೆ ಪ್ರಬಂಧಗಳು:

ಪುಸ್ತಕದ ಮಹತ್ವ ಕನ್ನಡ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

Leave a Comment