ದೀಪಾವಳಿ ಬಗ್ಗೆ ಪ್ರಬಂಧ | deepavali habba da prabandha

ದೀಪಾವಳಿ ಬಗ್ಗೆ ಪ್ರಬಂಧ:

ಈ ಲೇಖನಿಯಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ, ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ದೀಪಾವಳಿ ಬಗ್ಗೆ ಪ್ರಬಂಧ
ದೀಪಾವಳಿ ಬಗ್ಗೆ ಪ್ರಬಂಧ

ಪೀಠಿಕೆ:

ದೀಪಾವಳಿ ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬಗಳು ಹಿಂದೂಗಳ ಪ್ರಕಾರ ಕಾರ್ತಿಕದಲದಲಿ ಆಚರಿಸಲಾಗುತ್ತದೆ,ಈ ಬೆಳಕಿನ ಹಬ್ಬವು ಐದು ದಿನಗಳ ವರೆಗೆ ಹಬ್ಬ ನೆಡೆಯುತ್ತದೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ.

ವಿಷಯ ವಿವರಣೆ:

ದೀಪವಾಳಿವು ಹಿಂದೂಗಳ ಹಬ್ಬವಾಗಿದ್ದು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ಮತ್ತು ಗಣೇಶ ದೇವರನ್ನು ಪೂಜಿಸುತ್ತಾರೆ. ಗಣೇಶನು ಶುಭ ಆರಂಭದ ದೇವರು ಮತ್ತು ಲಕ್ಷ್ಮಿ ಸಮೃದ್ದಿಯ ದೇವತೆ, ಜನರು ಯೋಗಕ್ಷೇಮಕ್ಕಾಗಿ ಮತ್ತು ಸಮೃದ್ದಿಗಾಗಿ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ,ಮನೆಗಳಲ್ಲಿ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಣ್ಣಿನ ದೀಪಗಳನು ಬೆಳಗಿಸುತ್ತಾರೆ.

ದೀಪಾವಳಿ ಹಬ್ಬದ ಬಗ್ಗೆ ಒಂದು ಒಂದು ವಿಶೇಷವಾದ ಕಥೆಯು ಇದೆ, ರಾಕ್ಷಸ ರಾಜ ರಾವಣನನ್ನು ಸೋಲಿಸಿದ ನಂತರ ಹಿಂದೂಗಳು ದೀಪಾವಳಿಯನ್ನು ಆಚರಿಸುತ್ತಾರೆ. ಭಗವಾನ್‌ ರಾಮನು ತನ್ನ ಹೆಂಡತಿ ಸೀತೆ, ಸಹೋದರ ಲಕ್ಷಣ ಮತ್ತು ಕಟ್ಟಾ ಭಕ್ತ ಹನುಮಂತನೊಂದಿಗೆ ಅಯೋಧ್ಯೆಗೆ ಹಿಂದಿರುಗಿದ ಸ್ಮರರ್ಥಾವಾಗಿ ಆಚರಿಸುತ್ತಾರೆ. ಈ ಧಾರ್ಮಿಕ ಹಬ್ಬವು ಕೆಟ್ಟದ್ದರ ಮೇಲೆ ಬೆಳಕಿನ ವಿಜಯವನ್ನು ನೆನಪಿಸುತ್ತದೆ.

ದೀಪಗಳ ಹಬ್ಬ ದೀಪಾವಳಿ ಹಬ್ಬವಾಗಿದೆ, ರಕ್ಷಸ ರಾವಣ ಕೊಂದ ನಂತರ ರಾಮನು ಅಯೋಧ್ಯೆಗೆ ಮರಳಿದನು, ಅವರ ಅಗಮನದಿಂದ ಅಯೋಧ್ಯೆಯ ನಿವಾಸಿಗಳು ಸಂತೋಷದಿಂದ ಬೀದಿಗಳು,ಮಾರುಕಟ್ಟೆ, ಮನೆಗಳಲ್ಲಿ ಎಣ್ಣೆ ದೀಪಾಗಳನ್ನು ಬೆಳಗಿದರು, ಈ ಹಬ್ಬವನ್ನು ಹಿಂದೂಗಳ ಹಬ್ಬವೆಂದು ವಿಜೃಂಭಣೆಯಿಂದ ಅಚರಿಸುವುದರ ಮೂಲಕ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ.

ದೀಪಾವಳಿ ಹಬ್ಬಗಳು ಎಲ್ಲರಿಗೂ ಖುಷಿಯನ್ನು ತರುವುದರ ಜೊತೆಗೆ ಮಕ್ಕಳು ತಮ್ಮ ನೆಚ್ಚಿನ ಸಿಹಿತಿಂಡಿ ತಿನ್ನಲು ಮತ್ತು ಹೊಸ ಬಟ್ಟೆಗಳನ್ನು ಧರಿಸಲು ಇದು ನೆಚ್ಚಿನ ಹಬ್ಬವಾಗಿದೆ. ಹಾಗೆ ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಮತ್ತು ನಾವು ಕತ್ತಲೆಯನ್ನು ಬೆಳಕಿನಿಂದ ತೊಡೆದು ಹಾಕಬೇಕು.

ಕುಟುಂಬಗಳು ಮತ್ತು ಸ್ನೇಹಿತರ ನಡುವೆ ಬಲವಾದ ಬಂಧಗಳನ್ನು ಬಲಪಡಿಸಲು ಹಬ್ಬಗಳನ್ನುಮಾಡಲಾಗುವುದು ಇದಕ್ಕೆ ದೀಪಾವಳಿ ಹಬ್ಬದಲ್ಲಿ ಎಲ್ಲರೂ ದೀಪಾವಳಿಗೆ ಮನೆಗೆ ಹೋಗುತ್ತಾರೆ ಹಾಗೆ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರೂ ಅವರ ಮನಸ್ಸಿನ ಭಾರವನ್ನು ಇಳಿಸಿಕೊಂಡು ನೆಮ್ಮದಿಯಿಂದ ಹಬ್ಬವನ್ನು ಮಾಡುವುದು ನೋಡೋಕೆ ಖುಷಿಯಾಗುತ್ತದೆ.

ದೀಪಾವಳಿಯಲ್ಲಿ ಹಬ್ಬಕ್ಕೆ ಸಂಬಂಧಿಕರು ಬಂದಿರುತ್ತಾರೆ ಎಲ್ಲರೂ ಸೇರಿ ದೀಪಾ ಮತ್ತು ಪಟಾಕಿಯನ್ನು ಹಚ್ಚುವುದು, ಮಾನವ ಜೀವನದ ಮುಖ್ಯವಾದ ಅಂಶವೆಂದರೆ ಹಬ್ಬವು ಸಂತೋಷವನ್ನು ಮೂಡಿಸುತ್ತದೆ.

ಪಟಾಕಿಗಳು ನಮ್ಮ ಸುತ್ತಮುತ್ತ ವಾಸಿಸುವ ಪ್ರಾಣಿಗಳಿಗೆ ಹಾನಿ ಮಾಡುತ್ತದೆ. ಇತರರ ಸುರಕ್ಷತೆಗೆ ಧಕ್ಕೆಯಾಗದಂತೆ ನಾವು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕು.

ಹಬ್ಬದ ಸಮಯದಲ್ಲಿ ರುಚಿಕರವಾದ ಭಕ್ಷ್ಯಗಳನ್ನು ಬೇಯಿಸಲಾಗುತ್ತದೆ ಮತ್ತು ಸೇವಿಸುವುದು ಹಾಗೆ ಬೇಯಿಸಿದ ಆಹಾರದಿಂದ ಹೊರಹೊಮ್ಮುವ ದಟ್ಟವಾದ ಪರಿಮಳದಿಂದ ಮನೆಗಳು ತುಂಬಿರುತ್ತವೆ. ಹಾಗೆ ಆಚರಣೆಯ ಹೆಸರಿನಲ್ಲಿ ಪರಿಸರವನ್ನು ಹಾಳುಮಾಡಬಾರದು.

ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ದೀಪಾ ಬೆಳಗುವ ಮೂಲಕವೇ ಶುಭ ಕಾರ್ಯಗಳನ್ನು ಮಾಡುವುದು, ದೀಪಾವಳಿ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ ಹಬ್ಬ.

ಉಪಸಂಹಾರ:

ದೀಪಾವಳಿ ಹಬ್ಬವು ಇದು ಹಿಂದೂಗಳ ಹಬ್ಬವಾಗಿದೆ, ನಾವು ಕತ್ತಲನ್ನು ದೂರಮಾಡಿ ಬೆಳಕು ಎಂಬ ದೀಪಾವನ್ನು ಹಚ್ಚುವುದು ಹಾಗೆ ಬೆಳಕಿನ ಜೊತೆಗೆ ನಮ್ಮ ಸುಂದರ ಬದುಕು ರೂಪುಗೊಳ್ಳತ್ತದೆ.

FAQ

ಬಲಿಪಾಡ್ಯಮಿ ವಿಶೇಷ

ಬಲೀಂದ್ರ ಮೂಲತಃ ಬಳ್ಳೆಯವನು ,ಅವನ ಸುತ್ತಮುತ್ತಲಿನ ಜನರು ರಾಕ್ಷಸರಾಗಿದ್ದರು. ಒಂದು ಸಾರಿ ವಿಷ್ಣು ಬಲೀಂದ್ರ ಬಳಿ ಕೇವಲ ಮೂರು ಹೆಜ್ಜೆಯನ್ನಿಡುವಷ್ಟು ಜಾಗ ಕೂಡು ನನಗೆ ಎಂದ ವಿಷ್ಣು, ಬಲೀಂದ್ರ ಹಿಂದೆಮುಂದೆ ಯೋಚಿಸದೆ ಒಪ್ಪಿದ, ವಿಷ್ಣು ಒಂದು ಹೆಜ್ಜೆಯನ್ನು ಭೂಲೋಕದಲ್ಲಿ,ಇನ್ನೊಂದು ಹೆಜ್ಜೆ ಸ್ವರ್ಗ ಲೋಕದಲ್ಲಿ,ಮೂರನೇ ಹೆಜ್ಜೆಯನ್ನು ಎಲ್ಲಿಡುವುದು ಎಂದು ಕೇಳಿದಾಗ ತನ್ನ ತಲೆ ಇಡುವಂತೆ ಬಲೀಂದ್ರ ಹೇಳುತ್ತಾನೆ.ಆಗ ವಿಷ್ಣು ಮೂರುನೇ ಹೆಜ್ಜೆಯನ್ನು ಬಲೀಂದ್ರ ತಲೆ ಮೇಲೆ ಇಟ್ಟಾಗ ಪಾತಾಳ ಲೋಕಕ್ಕೆ ಇಳಿದು ಅವನ ಜೊತೆ ಉಳಿದ ರಾಕ್ಷಸರೂ ಪಾತಾಳಕ್ಕೆ ಇಳಿಯುತ್ತಾರೆ. ಹೀಗೆ ಪಾತಾಳ ಲೋಕಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ದಿನ ನೆನೆದು ಭೂಮಿಗೆ ಕರೆಯುವ ದಿನವೇ ಬಲಿಪಾಡ್ಯ ಇದೇ ಇದರ ವಿಶೇಷ

ದೀಪಾವಳಿ ಎಂದರೇನು?

ದೀಪಾವಳಿ ಎಂದರೆ ದೀಪಾಗಳ ಸಾಲು ಎನ್ನುವರು

ಇತರೆ ಪ್ರಬಂಧಗಳು:

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಸಾವಯವ ಕೃಷಿ ಪ್ರಬಂಧ | savayava krishi prabandha in kannada

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ ವನ್ನು ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Leave a Comment