ಭ್ರಷ್ಟಾಚಾರ ಎಂದರೇನು

ಭ್ರಷ್ಟಾಚಾರ ಎಂದರೇನು ಕನ್ನಡದಲ್ಲಿ, ಭಾರತದಲ್ಲಿ ಭ್ರಷ್ಟಾಚಾರ ಭ್ರಷ್ಟಾಚಾರ ನಿರ್ಮೂಲನೆ , Brastachara Information in Kannada Language

ಭ್ರಷ್ಟಾಚಾರ ಎಂದರೇನು

ಈ ಲೇಖನಿಯ ಮೂಲಕ ಭ್ರಷ್ಟಾಚಾರದ ಬಗ್ಗೆ ಹಾಗೂ ಅದರ ಪರಿಹಾರ ಕ್ರಮದ ಬಗ್ಗೆ ತಿಳಿಸಿದ್ದೇವೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

ಭ್ರಷ್ಟಾಚಾರ:

ಉತ್ತಮವಾದ ಅಧಿಕಾರದಲ್ಲಿ ಇದ್ದು ಸಾಮಾನ್ಯ ಜನರಿಂದ ಲಂಚ ತೆಗೆದುಕೊಳುವುದು ಭ್ರಷ್ಟಾಚಾರ. ಮತ್ತು ಭ್ರಷ್ಟಾಚಾರವು ಯಾವುದೇ ವ್ಯಕ್ತಿ ನಿಯಮಬಾಹಿರವಾದ ಮತ್ತು ತನಗೆ ತಮ್ಮವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ಹಣ ಪಡೆಯುವುದು ಅಥವಾ ಲಾಭಮಾಡಿಕೊಳ್ಳವುದು ಎನ್ನಬಹುದು

ನಮ್ಮ ದೇಶದಲ್ಲಿ ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದೆ, ಇವುಗಳಲ್ಲಿ ಅರ್ಧದಷ್ಟು ಪ್ರಕರಣಗಳ ವಿಚಾರಣೆ ಮಾತ್ರ ಪೂರ್ತಿಯಾಗಿದೆ, ಹಾಗೆ ಪ್ರಕರಣಗಳು ದಾಖಲಾದರೂ ನ್ಯಾಯ ನೀಡುವು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ವಿಳಂಬವಾಗುತ್ತಿದೆ ಎಕೆಂದರೆ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ,

ನಮ್ಮ ದೇಶದಲ್ಲಿ ಸರ್ಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಅಸ್ಪತ್ರೆಗಳಂತಹ ಮೂಲ ಸೌಲಭ್ಯ ಪಡೆಯಲು ಲಂಚ ನೀಡಬೇಕಾದ ಸ್ಥಿತಿ ಇದೆ. ಭ್ರಷ್ಟಾಚಾರ ಇಂದು ಸರ್ವವ್ಯಾಪಿಯಾಗಿದೆ. ಸರ್ಕಾರ ನೀಡುವ ಒಂದು ರೂಪಾಯಿಯಲ್ಲಿ ಹದಿನೈದು ಪೈಸೆಯಷ್ಟು ಮಾತ್ರ ಸರಿಯಾದ ಜಾಗಕ್ಕೆ ಸರಿಯಾದ ವ್ಯಕ್ತಿಗೆ ತಲುಪುತ್ತದೆ, ಉಳಿದ ಎಂಬತ್ತೈದು ಪೈಸೆ ಮಧ್ಯವರ್ತಿಗಳ ಪಾಲಾಗುತ್ತದೆ.

ಭಾರತದಲ್ಲಿ ಭ್ರಷ್ಟಾಚಾರ ಇಂದು ಮುಗಿಲುಮುಟ್ಟಿದೆ, ಅನ್ಯಾಯ, ಅತ್ಯಾಚಾರ, ಲಂಚ, ಅಪಹರಣ, ಮೋಸ, ವಂಚನೆ, ರಾಜಕೀಯ ಪಕ್ಷಗಳು, ಅಧಿಕಾರಿಗಳು ಮತ್ತು ನೌಕರರು, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರದ ಸೋಂಕಿಲ್ಲದೆ ಇಂದು ಯಾವುದೇ ಕೆಲಸ ಆಗುವುದಿಲ್ಲ ಅನ್ನುವಂತಾಗಿದೆ.

ನಮ್ಮ ದೇಶದಲ್ಲಿ ಲಂಚ ತೆಗೆದುಕೊಳ್ಳುವ ವ್ಯಕ್ತಿ ಗೌರವಾನ್ವಿತ ವ್ಯಕ್ತಿಯಾಗಿದ್ದಾನೆ. ಇಂದು ನೈತಿಕ ಮೌಲ್ಯ ಭ್ರಷ್ಟಾಚಾರಿಗಳ ಕೈಯಲ್ಲಿ ಸಿಲುಕಿದೆ ಪ್ರಭಾವಶಾಲಿ ವ್ಯಕ್ತಿ ಧನಿಕ ವ್ಯಕ್ತಿ ನ್ಯಾಯವನ್ನು ಖರೀದಿಸುವಷ್ಟರ ಮಟ್ಟಿಗೆ ಇಂದು ಭಷ್ಟಾಚಾರ ಹರಡಿದೆ.

ಭಷ್ಟಾಚಾರ ನಿರ್ಮೂಲನೆ ಮಾಡಲು ರಾಜ್ಯದಲ್ಲಿ ಲೋಕಯುಕ್ತ ಸಂಸ್ಥೆ ಅವಶ್ಯಕ. ಭ್ರಷ್ಟಾಚಾರವನ್ನು ಕಿತ್ತೊಗೆಯುವಲ್ಲಿ ಪತ್ರಿಕೆಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು.

ಭ್ರಷ್ಟಾಚಾರದ ದೊಡ್ಡ ದೊಡ್ಡ ಹಗರಣಗಳಿಂದಾಗಿ ಬಡಜನತೆ ತನಗರಿವಿಲ್ಲದೇ ಅದರ ಆಳ ಸುಳಿಗೆ ಸಿಲುಕಿ ನರಳುತ್ತಿದೆ. ನಮ್ಮ ದಿನವೂ ಕೆಲಸ ಕಾರ್ಯಗಳು ಸುಗಮವಾಗಿ ನೆಡೆಯದೆ ಇರುವುದಕ್ಕೆ ಕಾರಣ ಭ್ರಷ್ಟಾಚಾರ

ಪರಿಹಾರ ಕ್ರಮ:

ಭ್ರಷ್ಟಾಚಾರ ನಿರ್ಮೂಲನೆ ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳಿಸುವುದು ಹಾಗೆ ಅದು ಜವಾದ್ದಾರಿಯುತವಾಗಿ ಕೆಲಸ ಮಾಡುವುದು, ವಿದ್ಯಾರ್ಥಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತ ಮೂಡಿಸುವುದು. ಪ್ರತಿಯೊಬ್ಬ ಪ್ರಜೆ ಹಾಗೂ ಅಧಿಕಾರಿಯು ನಿಷ್ಠೆಯಿಂದ ಯಾವುದೇ ಅಮಿಷಕ್ಕೆ ಒಳಗಾಗದೆ ಕಾರ್ಯ ನಿರ್ವಹಿಸಿದರೆ ಭ್ರಷ್ಟಚಾರವನ್ನು ಬುಡದಿಂದ ಕಿತ್ತೊಗಿಯಬಹುದು, ಮುಂಬರುವ ಪೀಳಿಗೆ ಈಗಿನಿಂದಲೇ ಭ್ರಷ್ಟಾಚಾರದ ಬಗ್ಗೆ ಶಿಕ್ಷಣವನ್ನು ನೀಡಿ ಜಾವಾದ್ದಾರನನ್ನಗಿ ಮಾಡಿ ಮಾದರಿ ಸಮಾಜದತ್ತ ಕೊಂಡ್ಯೊಯಬೇಕು

ಇತರೆ ಪ್ರಬಂಧಗಳು:

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

ಸಾವಯವ ಕೃಷಿ ಪ್ರಬಂಧ

Leave a Comment