ಯೋಗದ ಮಹತ್ವ ಪ್ರಬಂಧ | Yogabhyasa Prabandha in Kannada

ಯೋಗದ ಮಹತ್ವ ಪ್ರಬಂಧ, ಯೋಗದ ಮಹತ್ವ ಕುರಿತು ಕನ್ನಡ ಪ್ರಬಂಧ, ಯೋಗದ ಉಪಯೋಗಗಳು, Yogada Mahatva Prabandha in Kannada, yogabhyasa prabandha in kannada

ಯೋಗದ ಮಹತ್ವ ಪ್ರಬಂಧ:

yogabhyasa prabandha in kannada
yogabhyasa prabandha in kannada

ಈ ಲೇಖನಿಯಲ್ಲಿ ಸ್ನೇಹಿತರೆ ಯೋಗದ ಮಹತ್ವವನ್ನು ಸಂಪೂರ್ಣ ಮಾಹಿತಿ ನಿಮಗೆ ಅನುಕೂಲವಾಗುವಂತೆ ನಿಮಗೆ ಒದಗಿಸಿದ್ದೇವೆ.

ಪೀಠಿಕೆ:

ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಯೋಗ ಎನ್ನುವ ಪದ ಸಂಸ್ಕೃತದ ಮೂಲಧಾತುವಾದ “ಯುಜ್”‌ ನಿಂದ ಬಂದಿದ್ದು. ಇದು ಕೂಡಿಸು ಕೇಂದ್ರಿಕರಿಸು ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಅಮೂಲ್ಯ ಸಂಪತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ.

ವಿಷಯ ವಿವರಣೆ:

ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಪುನರ್‌ ಯೌವನಗೊಳಿಸುವ ಸಾಮರಸ್ಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಹಾಗೆ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವು ಮಕ್ಕಳ ಮನೋವಿಜ್ಞಾನದ ಬೆಳವಣಿಗೆಗೆ ಕಾರಣವಾಗುತ್ತದೆ ಅದೂದರಿಂದ ಶಾಲೆಗಳಲ್ಲಿ ಪಠ್ಯಕ್ರಮಗಳ ಜತೆಗೆ ಯೋಗ ಕಲಿಕೆಯನ್ನು ಆರಂಭಿಸಲಾಗಿದೆ.

ಯೋಗ ಕಲಿಕೆಯಿಂದ ಮಕ್ಕಳಲ್ಲಿ ವೈಚಾರಿಕತೆ, ಭಾವನಾತ್ಮಕ ರಚನೆ ಮತ್ತು ಸೃಜನ ಶೀಲತೆಯನ್ನು ಗಮನಿಸಬಹುದಾಗಿದೆ. ʼಯಮ-ನಿಯಮ ಅನುಷ್ಟಾನೇ ಪಾಪ ನಿವೃತ್ತಿʼ ಅಂದರೆ ಯಮ-ನಿಯಮಗಳ ಅಭ್ಯಾಸವು ವ್ಯಕ್ತಿಯ ಮನಸ್ಸಿನಲ್ಲಿ ಬರುವ ಪಾಪಕರ್ಮಗಳನ್ನುಮಾಡಬೇಕೆಂಬ ಯೋಗನೆಗಳನ್ನು ನಾಶಗೊಳಿಸುತ್ತದೆ.

ಸಂಕುಚಿತವಾದ ಅಹಂಕಾರ ತುಂಬಿದ ವ್ಯಕತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳೂ ಪರಿಹಾರವಾಗುತ್ತದೆ.

ಯೋಗಾಭ್ಯಾಸದಿಂದ ನಿಮ್ಮನ್ನು ನೀವೇ ಮರುರೂಪಿಸಿಕೊಳ್ಳತ್ತೀರಿ.ನಿಮ್ಮ ಚೈತನ್ಯವು ಉನ್ನತ ಸ್ಥಾಯಿಯಲ್ಲಿದ್ದರೆ, ನಿಮ್ಮ ಶರೀರವು ಬಹಳ ಸುಲಭವಾಗಿ ಕೆಲಸ ಮಾಡುತ್ತದೆ. ನಾವು ಇದನ್ನು ಮೂರರಿಂದ ಆರು ವಾರಗಳಲ್ಲಿ ನಿಮಗೆ ನಿರೂಪಿಸುತ್ತೇವೆ. ನೀವು ಕೆಲವು ಅಭ್ಯಾಸಗಳನ್ನು ಮಾಡಿ ನಿಮ್ಮ ಚೈತನ್ಯವನ್ನು ಒಂದು ಮಟ್ಟಕ್ಕೆ ತರಲು ಸಾಧ್ಯವಾದರೆ, ನಿಮ್ಮ ಭೌತಿಕ ಅಂಶಗಳು ನಿರಾಯಾಸವಾಗಿ ಸಾಗುತ್ತದೆ.

ಯೋಗಗಳು:

ಚಂಚಲವಾದ ಮನಸ್ಸು ಏಕಾಗ್ರತೆ ತರಲು ಯೋಗದ ಮೊದಲು ಪ್ರಾರ್ಥನೆ ಮಾಡಿ ನಂತರ ದೇಹದ ಅಂಗಾಂಗಗಳು ಸಡಿಲಗೊಳ್ಳಲು ಶಿಥಿಲೀಕರಣ ವ್ಯಾಯಾಮವನ್ನು ಮಾಡಬೇಕು. ಇದು ದೇಹಕ್ಕೆ ಆರಾಮ ನೀಡುವುದರ ಜೊತೆಗೆ ಗಂಟುನೋವು ಮತ್ತು ಗಂಟುಗಳಲ್ಲಿ ಬರುವ ಶಬ್ದಗಳನ್ನು ನಿವಾರಿಸಲು ನೆರವಾಗುತ್ತದೆ.

ಸೂರ್ಯ ನಮಸ್ಕಾರ:

ಇದು ದೇಹಕ್ಕೆ ಮತ್ತು ಮಾನಸಿಕವಾಗಿ ಸಾಮರ್ಥಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೂ ಮನಸ್ಸು ಪ್ರಶಾಂತವಾಗಿ ಇರುತ್ತದೆ.

ಪ್ರಾಣಯಾಮ:

ಇದು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ವಿಷವನ್ನು ತೆಗೆದು ಹಾಕುವುದರ ಜೊತೆಗೆ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

ಕಪಾಲಭಾತಿ:

ಇದು ಮಾನಸಿಕ ಯೋಗಕ್ಷೇಮ, ಮಧುಮೇಹ ನಿಯಂತ್ರಣ, ಬೆನ್ನುನೋವು, ಅಜೀರ್ಣದಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅಗುವುದು ಮತ್ತು ವಿವಿಧ ಕಾಯಿಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

ತಾಡಾಸನ:

ಇದು ನಮ್ಮ ಪಾದಗಳು ಮತ್ತು ಕಾಲುಗಳಿಗೆ ಸಾಕಷ್ಟು ರಕ್ತ ಪರಿಚಲನೆ ನೀಡುವ ಮೂಲಕ ಹೆಚ್ಚು ಶಕ್ತಿ ಒದಗಿಸುತ್ತದೆ ಹಾಗೆಯೇ ಖಿನ್ನತೆಯನ್ನು ನಿವಾರಿಸುತ್ತದೆ.

ಶವಾಸನ:

ಇದು ನಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡ, ಆಯಾಸ, ಖಿನ್ನತೆಯನ್ನು ನಿವಾರಿಸಿ, ನಿದ್ರಾಹೀನತೆಯನ್ನು ಗುಣಪಡಿಸುತ್ತದೆ.

ಒಟ್ಟಿನಲ್ಲಿ ಪುರಾತನ ಕಾಲದಿಂದಲೂ ಯೋಗಾಸನವು ಹೆಚ್ಚಿನ ಪ್ರಾಮುಖ್ಯತೆ ಮಹತ್ವವನ್ನು ಪಡೆದುಕೊಂಡಿದೆ. ಜೀವನದಲ್ಲಿ ಸುಂದರವಾದ ಬದುಕನ್ನು ಸಾಗಿಸಬೇಕಾದರೆ ಆರೋಗ್ಯವು ಚೆನ್ನಾಗಿರಬೇಕು.

ಧ್ಯಾನ ಮತ್ತು ಯೋಗ ಮಾಡಲು ಅತ್ಯುತ್ತಮ ಸಮಯ:

ಯೋಗ್ಯಭ್ಯಾಸಗಳನ್ನು ಮಾಡಲು ಅತ್ಯುತ್ತಮ ಸಮಯ ಮತ್ತು ಇದು ನೀವು ಎತ್ತ ಸಾಗಲು ಇಚ್ಛಿಸಿದ್ದೀರ ಎನ್ನುವುದರ ಮೇಲೆ ಅವಲಂಬಿತವಾಗಿದೆ ಎಂಬುವುದನ್ನು ಸದ್ಗುರುಗಳು ವಿವರಿಸಿದ್ದಾರೆ.

ಸೂರ್ಯ ನಮಸ್ಕಾರ ಮತ್ತು ಶಿವ ನಮಸ್ಕಾರದಂತಹ ಅಭ್ಯಾಸಗಳನ್ನು ಹಗಲು-ರಾತ್ರಿಗಳ ನಡುವಿನ ಸಂಧಿಸಮಯವಾದ ಪರಿವರ್ತನಾ ಸಮಯದಲ್ಲಿಯೇ ಅಭ್ಯಾಸ ಮಾಡಬೇಕು. ಸಂಧ್ಯಾಕಾಲಗಳಲ್ಲಿ, ಅಂದರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಸಮಸ್ತವೂ ಪರಿವರ್ತಿತವಾಗುವ ಸಮಯ. ನಿಮ್ಮ ಅಭ್ಯಾಸಗಳನ್ನು ಈ ಸಮಯದಲ್ಲಿ ಮಾಡುವುದರಿಂದ, ಸೀಮಿತತೆಯನ್ನು ದಾಟುವ ನಿಮ್ಮ ಸಾಮರ್ಥ್ಯ ಉತ್ತಮವಾಗಿರುತ್ತದೆ ಏಕೆಂದರೆ ನಿಮ್ಮ ಪ್ರಾಣಶಕ್ತಿಯು ಪರಿವರ್ತನ ಅವಸ್ಥೆಯಲ್ಲಿ ಇರುತ್ತದೆ. ಇದು ಅನೇಕ ಅಂಶಗಳಲ್ಲಿ ಒಂದು

ಭಾರತದ ಉಷ್ಣ ವಲಯಗಳಲ್ಲಿ ಯೋಗದ ವಿಕಾಸನವಾಗಿದ್ದರಿಂದ ನಾವು ಪ್ರಾತಃಕಾಲ ೮:೩೦ ಮೊದಲು ಅಥವಾ ಸಾಯಂಕಾಲ ೪:೩೦ ನಂತರ ಯಾವುದೇ ಯೋಗಾಭ್ಯಾಸ ಮಾಡಲು ಒಳ್ಳೆಯ ಸಮಯ ಎಂದು ಹೇಳುತ್ತೇವೆ.

ನೀವು ಭವಿಷ್ಯದ ಜೀವಿಯಾಗಲು ಬಯಸಿದರೆ, ನಿಮ್ಮ ಮೂಲ ಮರುರೂಪಾಂತರ ಅನಿವಾರ್ಯ. ಯೋಗಾಭ್ಯಾಸದಿಂದ ಇದನ್ನು ಸಾಧ್ಯವಾಗುತ್ತದೆ.

ಯೋಗದ ಉಪಯೋಗಗಳು:

  • ದೇಹಕ್ಕೆ ಚೈತನ್ಯ ಸಿಗುವುದು.
  • ಉರಿಯೂತ ಶಮನ ಮಾಡಿಕೊಳ್ಳಬಹುದು.
  • ಚಂಚಲವಾದ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
  • ಉತ್ತಮವಾದ ಆರೋಗ್ಯ ಪಡೆಯಬಹುದು.
  • ಹೃದಯ ಸಂಬಂಧಿ ರೋಗಗಳು ತಡೆಗಟ್ಟುತ್ತದೆ.
  • ಪ್ರತಿರೋಧಕವಾದ ಶಕ್ತಿಯನ್ನು ಹೆಚ್ಚಿಸುತ್ತದೆ.
  • ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.
  • ಬೆನ್ನು ನೋವು, ಕೀಲುನೋವು, ಗಂಡುನೋವುಗಳು ಕಡಿಮೆಯಾಗುತ್ತದೆ.
  • ಒತ್ತಡವನ್ನು ನಿವಾರಿಸಿಕೊಳ್ಳಬಹುದು
  • ದೇಹವು ಆರೋಗ್ಯವಾಗಿ ಇರುತ್ತದೆ.
  • ಯೋಗವು ಒಬ್ಬ ವ್ಯಕ್ತಿಯ ನಡುವಿನ ಸೌಹಾರ್ದತೆಯನ್ನು ಸೃಷ್ಟಿಸುತ್ತದೆ.

ಉಪಸಂಹಾರ:

ಯೋಗವು ದೈಹಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳು ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಶಿಕ್ಷಣದ ಮೂಲಕ ಯೋಗದ ಮಹತ್ವ ತಿಳಿಸುವುದು, ಯೋಗವನ್ನು ಹೆಚ್ಚು ಜನರು ಮಾಡುತ್ತಿದ್ದಾರೆ ಅದರೆ ಇನ್ನು ಕೆವರು ಮಾಡುತ್ತಿಲ್ಲ ಯೋಗವನ್ನು ಮಾಡುವಂತೆ ಎಲ್ಲರ ಮನಸ್ಸಿಗೆ ಮುಟ್ಟುವಂತೆ ತಿಳಿಸುವುದು.

FAQ

ಯೋಗದ ಅರ್ಥ ?

ಯೋಗದ ಅರ್ಥ ದೈಹಿಕ ಮತ್ತು ಮಾನಸಿಕ ಪ್ರಕಾರದ ಶಿಸ್ತುಗಳು ಮತ್ತು ಅಭ್ಯಾಸಗಳ ಸಮೂಹ ಎಂದು ಕರೆಯಲಾಗುತ್ತದೆ.

ಯೋಗದ ಉದ್ದೇಶವೇನು?

ಯೋಗದ ಉದ್ದೇಶ ದೇಹ ಮತ್ತು ಮನಸ್ಸಿನ ನಡುವೆ ಸಮತೋಲನವನ್ನು ಸಾಧಿಸುವುದು, ಜ್ಞಾನೋದಯವನ್ನು ಸಾಧಿಸುವುದು.

ಇತರೆ ಪ್ರಬಂಧಗಳು:

ಬುದ್ಧನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

Download Kannada Prabandha App Click Here

ಯೋಗದ ಮಹತ್ವ ಪ್ರಬಂಧ ಬಗ್ಗೆ ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಹಾಗೆ ನಿಮಗೆ ಗೋತ್ತಿರುವ ಯೋಗಗಳನ್ನು Comment ಮಾಡುವ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Leave a Comment