ಸರ್ವನಾಮ ಎಂದರೇನು

ಸರ್ವನಾಮ ಎಂದರೇನು:

ಈ ಲೇಖನಿಯಲ್ಲಿ ಸರ್ವನಾಮ ಮತ್ತು ಅದರ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ.

ಸರ್ವನಾಮ:

ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ಮಾಡುವ ಪದಗಳಿಗೆ ಸರ್ವನಾಮಗಳು ಎನ್ನುತ್ತಾರೆ.

ಉದಾಹರಣೆ: ಅದು, ಇದು, ಯಾವುದು, ಅವನು, ಇವಳು, ತಾನು, ತಾವು, ನಾನು, ನೀವು,

ರಾಮನು ಓದುವುದರಲ್ಲಿ ಚುರುಕು, ಅವನು ಹಾಡುವುದರಲ್ಲಿಯೂ ತುಂಬ ಚುರುಕು.

ಸರ್ವನಾಮದಲ್ಲಿ 4 ವಿದಗಳು:

೧.ಪುರುಷಾರ್ಥಕ ಸರ್ವನಾಮ: ಮೂರು ಪುರುಷಗಳ ಲಿಂಗ ವಚನಗಳಿಗೆ ಅನುಗುಣವಾಗಿರುತ್ತವೆ.

ಉದಾ: ಉತ್ತಮ ಪುರುಷ ಸರ್ವನಾಮ: ನಾನು, ನಾವು

ಮಧ್ಯಮ ಪುರುಷ ಸರ್ವನಾಮ: ನೀನು, ನೀವು

ಪ್ರಥಮ ಪುರುಷ ಸರ್ವನಾಮ: ಅವನು, ಅವಳು, ಅವರು, ಅದು, ಅವು

೨.ಪ್ರಶ್ನಾರ್ಥಕ ಸರ್ವನಾಮ: ಪ್ರಶ್ನೆಗಳನ್ನು ಕೇಳುವಾಗ ಬಳಸುವ ಪದಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನುತ್ತಾರೆ. ಉದಾ: ಯಾರು? ಯಾವುದು? ಏನು?

೩.ಆತ್ಮಾರ್ಥಕ ಸರ್ವನಾಮ: ತನ್ನ ತನದ ಬಗೆಗೆ ತಿಳಿಸುವ ಪದಗಳಿಗೆ ಆತ್ಮಾರ್ಥಕ ಸರ್ವನಾಮ ಎನ್ನುವರು.

ಉದಾ: ತಾನು, ತಾವು, ತನ್ನಿಂದ ತಮ್ಮಿಂದ, ತನಾಗಾಗಿ

*ಅವನನ್ನು ಎಲ್ಲರೂ ಗೇಲಿ ಮಾಡಿದರೂ ಕೂಡ ತನ್ನ ಪಾಡಿಗೆ ತಾನು ಹೊರಟುಹೋದ.

*ತನಗೆ ಕಷ್ಟವಾದರೂ ತಾವು ಇತರರಿಗಾಗಿ ಸಹಾಯ ಮಾಡುವುದನ್ನು ನಲ್ಲಿಸುವಂತಿಲ್ಲ.

೪.ನಿರ್ದೇಶಾತ್ಮಕ ಸರ್ವನಾಮ: ನಾಮಪದಗಳಿಗೆ ವಿಶೇಷಣವಾಗಿ ಕೆಲಸ ಮಾಡುವ ಪದಗಳಿಗೆ ನಿರ್ದೇಶಾತ್ಮಕ ಸರ್ವನಾಮ ಎನ್ನುತ್ತಾರೆ.

ಉದಾ: ಈ ಅದು ಇದು

*ಆ ಮನೆ ಬಹಳ ಸುಂದರ.

*ಆ ಶಾಲೆ ಮೈಸೂರಿನಲ್ಲಿದೆ.

*ಈ ಊರಿನ ದಾರಿ ಚೆನ್ನಾಗಿದೆ.

ನಾಮಪದಕ್ಕೆ ಬದಲಾಗಿ ಬರುವ ಪದಗಳನ್ನು ಸರ್ವನಾಮ ಎನ್ನಲಾಗುವುದು,

ಇತರೆ ಪ್ರಬಂಧಗಳು:

ಪುಸ್ತಕದ ಮಹತ್ವ ಕನ್ನಡ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

Leave a Comment