ಗಣರಾಜ್ಯ ಎಂದರೇನು ?

ಗಣರಾಜ್ಯ ಎಂದರೇನು ಆಚರಣೆ ಮಹತ್ವ, Ganarajya Endarenu in Kannada, ಗಣರಾಜ್ಯ ಪದದ ಅರ್ಥ, ganarajya dinacharane information in kannada

ಗಣರಾಜ್ಯ ಎಂದರೇನು:

ಈ ಲೇಖನಿಯಲ್ಲಿ ಗಣರಾಜ್ಯದ ಕುರಿತು ಅದರ ಬಗ್ಗೆ ವಿವರಣೆಯನ್ನು ನಿಮಗೆ ಅನುಕೂಲವಾಗುವಂತೆ ಎಲ್ಲರಿಗೂ ಒದಗಿಸಿದ್ದೇವೆ.

ಗಣರಾಜ್ಯ:

ಗಣರಾಜ್ಯವು ಯಾವುದೇ ದೇಶದಲ್ಲಿ ಪ್ರಜೆಗಳನ್ನು ಆಳುವ ಸರಕಾರವನ್ನು ನಿರ್ಧರಿಸುವ ಶಕ್ತಿ ಅಂತಿಮವಾಗಿ ಅದೇ ಪ್ರಜೆಗಳ ಕೈಯಲ್ಲಿ ಇರುವಂತಹ ಸರಕಾರದ ವಿಧ. ಬ್ರಿಟೀಷ ಆಳ್ವಿಕೆಯಿಂದ ನಮ್ಮ ದೇಶ 1947 ರಲ್ಲಿ ಸ್ವತಂತ್ರವಾದ ಬಳಿಕ 1950 ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಅನ್ವಯಿಸಿಕೊಂಡು ಗಣರಾಜ್ಯೋತ್ಸವವೆನಿಸಿಕೊಂಡಿತು.

ನಂತರ ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಗಣ ಎಂದರೆ ಗುಂಪು ಎಂದರ್ಥ,ಇದನ್ನೆ ಜನರ ಗುಂಪು ಎಂದು ಕರೆಯುವುದುಂಟು. ಅಂದಾಗೇ ಇದು ಜನಸಮುದಾಯದ ರಾಜ್ಯಶಾಸ್ತ್ರ ಇದನ್ನೆ ನಾವು ಪ್ರಜಾಸರ್ಕಾರ ಎನ್ನುವುದು.

“ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ಆಳುವ ಸರ್ಕಾರ ಪ್ರಜಾಪ್ರಭುತ್ವ ಸರ್ಕಾರ” ಇದನ್ನೆ ಗಣರಾಜ್ಯ ಎನ್ನುವುದು. ಭಾರತ ತನ್ನ ಸಂವಿಧಾನವನ್ನು ಜಾರಿಗೊಳಿಸಿ, ಸ್ವತಂತ್ರ ಗಣರಾಜ್ಯವಾದದ ದಿನವನ್ನು ಗಣರಾಜ್ಯೋತ್ಸವ ದಿನ ಎನ್ನಲಾಗುತ್ತದೆ.1950 ಜನವರಿ 26 ರಂದು ಭಾರತ ಸಂವಿಧಾನವನ್ನು ಜಾರಿಗೊಳಿಸಿತು. ಈ ಪ್ರಯುಕ್ತ ಹೊಸದಿಲ್ಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಆಕರ್ಷಕ ಪರೇಡ್‌ ನಡೆಯುತ್ತದೆ.

ದೇಶಾದ್ಯಂತ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ಮೂಲಕ ಆಚರಿಸಲಾಗುತ್ತದೆ. ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ಧ್ವಜಾರೋಹಣ ನೆಡೆಸಿದರೆ, ರಾಜ್ಯದಗಳಲ್ಲಿ ಆಯಾ ರಾಜ್ಯದ ರಾಜ್ಯಪಾಲರು ಧ್ವಜಾರೋಹಣ ನಡೆಸುತ್ತಾರೆ.

ಆಗಸ್ಟ್‌ 15 1947 ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್‌ 29 ರಂದು ಡಾ. ಅಂಬೇಡ್ಕರ್‌ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್4‌ 1947 ರಂದು ಶಾಸನಸಭೆಯಲ್ಲಿ ಮಂಡಿಸಿತು.

ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ 26,1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪೂರ್ಣಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರ್ನಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು.

ಇತರೆ ಪ್ರಬಂಧಗಳು:

ಪುಸ್ತಕದ ಮಹತ್ವ ಕನ್ನಡ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

Leave a Comment