ಗುರುವಿನ ಮಹತ್ವ ಪ್ರಬಂಧ

ಗುರುವಿನ ಮಹತ್ವ ಪ್ರಬಂಧ ಇನ್ ಕನ್ನಡ, Guruvina Mahatva Prabandha in Kannada, ಗುರುವಿನ ಗುಣಗಳು, ಗುರುವಿನ ಸಾಧನೆ in Kannada, guruvina mahatva essay in kannada

ಗುರುವಿನ ಮಹತ್ವ ಪ್ರಬಂಧ:

ಈ ಲೇಖನಿಯಲ್ಲಿ ಸ್ನೇಹಿತರೇ ಗುರುವಿನ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಪೀಠಕೆ:

ಗುರುಗಳು ಶಿಷ್ಯರನ್ನು ತಾಯಿಯಂತೆ ಕೈಹಿಡಿದು ಮಮತೆಯಿಂದ, ಪ್ರೀತಿಯಿಂದ ತಮ್ಮೆಲ್ಲಾ ಶಕ್ತಿಯೊಂದಿಗೆ ಶಿಷ್ಯನನ್ನು ಗಮನಿಸಿ ಅವರ ಉದ್ದಾರಕ್ಕಾಗಿಯೇ ಶ್ರಮಿಸುತ್ತಿರುತ್ತಾರೆ ಪ್ರತಿ ಕ್ಷಣ ಪ್ರತಿ ಸಮಯ ಅವನ ಬಗ್ಗೆ ಅಂದರೆ ಶಿಷ್ಯನ ಬಗ್ಗೆ ವಿಚಾರವನ್ನು ಮಾಡಿ ಅವನನ್ನು ಉದ್ಧಾರ ಮಾಡುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ನಡೆದು ಭವ ಸಾಗರದಂತೆ ಇರುವ ನಮ್ಮ ಜೀವನ ನೌಕೆಯನ್ನು ಗುರುಗಳೇ ನಡೆಸಬಲ್ಲರು.

ವಿಷಯ ವಿವರಣೆ:

“ಗುರು ಬ್ರಹ್ಮ ಗುರುರ್ವಿಷ್ಣು ಗುರು ದೇವೋ ಮಹೇಶ್ವರ:

* ಗುರು ಸಾಕ್ಷಾತ್‌ ಪರ:ಬ್ರಹ್ಮ

ತಸ್ಮೈಶ್ರೀ ಗುರುವೇ ನಮಃ” ಹಿಂದಿನ ಕಾಲದಲ್ಲಿ ಇಂತಹ ಶ್ಲೋಕಗಳನ್ನು ಹಾಡಿ ಹೊಗಳುತ್ತಾ ಗುರುಗಳಿಗೆ ಮಹತ್ವ ಪೂರ್ಣ ಸ್ಥಾನ ಕೊಟ್ಟಿದ್ದರು. ಹಿಂದಿನ ಕಾಲದಲ್ಲಿ ಶಿಕ್ಷಕರೇ ವಿದ್ಯಾರ್ಥಿಗಳ ಆದರ್ಶ ವ್ಯಕ್ತಿಗಳಾಗಿದ್ದರು. ಆ ಸಮಯದಲ್ಲಿ ಗುರು-ಶಿಷ್ಯರ ಸಂಬಂಧ ಹಾಲು ಜೇನಿನಂತೆ ಇತ್ತು. ಆದರೆ ಇತ್ತೀಚೆಗೆ ಇಂತಹ ಗುರು ಶಿಷ್ಯರ ಬಾಂಧವ್ಯ ಕಾಣಿಸಿಗುವುದು ಬೆರಳೆಣಿಕೆಯಷ್ಟು ಮಾತ್ರ ಎಂಬುದು ದುಃಖಕರ ವಿಷಯ.

“ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು” ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ” ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ” ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಗುರುಗಳು.

ಗುರುಗಳು ನಮ್ಮನ್ನು ಶುದ್ದಗೊಳಿಸಿ ಅಂದರೆ ನಮ್ಮ ಅಹಂ, ದೋಷಗಳನ್ನು ತೆಗೆದು ನಮ್ಮ ಮನಸ್ಸಿನಲ್ಲಿ ಸಾತ್ವಿಕತೆಯನ್ನು ತುಂಬಿಸುತ್ತಾರೆ ಮತ್ತು ನಮ್ಮನ್ನು ಅನೇಕ ದುಷ್ಟ ಶಕ್ತಿಯಿಂದ ರಕ್ಷಣೆಯನ್ನು ಮಾಡುತ್ತಾರೆ. ಗುರುಗಳ ಕೃಪೆಯು ಶಿಷ್ಯರಿಗೆ ಮಂಗಳವಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಕರ ಬೋಧನಾ ಉತ್ಸಾಹ ಭಾವನೆಯನ್ನು ಅನುಭವಿಸುತ್ತಾರೆ. ವಿದ್ಯಾರ್ಥಿಗಳು ಈ ಉತ್ಸಾಗದಿಂದಲೇ ಶಿಕ್ಷಕರಿಗೆ ಕೆಲಸದ ಮೇಲಿರುವ ಆಸಕ್ತಿಯನ್ನು ತಿಳಿಯುತ್ತಾರೆ.

ಗುರುಗಳು ಪ್ರತಿಬಾರಿ ಸರಿಯಾದ ಸಮಯಕ್ಕೆ ಬರುತ್ತಾರೆ. ನಿಗದಿತ ಸಮಯದಂತೆ ಪಾಠ ಶುರು ಮಾಡಿ ಕೊನೆ ಗೊಳಿಸುತ್ತಾರೆ. ವಿದಾರ್ಥಿಗಳು ಸರಿಯಾದ ಸಮಯಕ್ಕೆ ಬರಲು ಇಚ್ಚಿಸುತ್ತಾರೆ ಹಾಗೂ ಅದಕ್ಕೆ ಪೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಕರು ಖುಷಿ ಪಡುತ್ತಾರೆ. ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಾರೆ. ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತಾರೆ. ಸ್ನೇಹ ಮನೋಭಾವ, ಪ್ರೀತಿ ಪೂರ್ವಕ, ಇವೆಲ್ಲವೂ ಉತ್ತಮ ಶಿಕ್ಷಕರ ಗುಣಗಳು

ಗುರುಗಳು ಮತ್ತು ಮಕ್ಕಳ ನಡುವಿನ ಸಂಬಂಧ:

ದೀಪ ತಾನು ಊರಿದು ಜಗತ್ತಿಗೆ

ಬೆಳಕು ನೀಡುವ ಹಾಗೆ

ಅಜ್ಞಾನದಿಂದ ಜ್ಞಾನದೆಡೆಗೆ

ಕರೆದೊಯ್ಯುವ

ಪ್ರತಿಯೊಬ್ಬ ಗುರುವಿಗೂ ನನ್ನ ಕೋಟಿ ಕೋಟಿ ನಮನಗಳು…!

ಗುರುವಿನ ಪಾತ್ರ ಬಹಳ ದೊಡ್ಡ ಪಾತ್ರೆಯಲ್ಲಿ ಗುರುಕುಲದ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್‌ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಹಂತಕನ ಮಂತ್ರ ಕುಡಿದೆ ಕಡೆಗೆ ಕರ್ಕೊಂಡ್‌ ಹೋಗೋದು ಅಜ್ಞಾನದಿಂದ ಸುಜ್ಞಾನದೆಡೆಗೆ ಹಾಗಾಗಿ ತಾವು ಪರಮ ಶಿಕ್ಷಕ ಪರಮಪಿತ ಪರಮಾತ್ಮ ಗುರುವಿನ ಕೃಪೆಯನ್ನು ಪಡೆಯಬೇಕು ಪರಮ ಶಿಕ್ಷಕರ ಕಲಿಬೇಕು ಆಗ ನಿಂಗೆ ಗುರುವಿನ ಅಶೀರ್ವಾದ ಸಿಗುತ್ತೆ.

ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳು ಆಗೋಚರ ಶಕ್ತಿಗಳು ನಡೆಯತೊಡಗಿದ್ದವು, ಮಾನವನು ಪ್ರಕೃತಿಗೆ ನಿಕಟವಾದ ಸಂಪರ್ಕವನ್ನು ಹೊಂದಲು ಆರಂಭಿಸಿದನು. ಪ್ರಕೃತಿಗೂ ಮಾನವನಿಗೂ ಅನೇಕ ರೀತಿ ವಿಸ್ಮಯಗಳು. ವಿದ್ಯಾಮಾನಗಳು ನಡೆಯತೊಡಗಿದವು. ಪ್ರಕೃತಿಯಲ್ಲಿನ ವಿಕೋಪಗಳು ಮಾನವರ ಮೇಲೆ ಅನೇಕ ರೀತಿ ಅನುಕೂಲಗಳು ಮತ್ತು ಅನಾನುಕೂಲಗಳು ನಡೆಯತೊಡಗಿದಾಗ ಮಹಾನ್‌ ಜ್ಞಾನಿಗಳು ಅದನ್ನು ತಿಳಿಯಲು ಮುಂದಾದರು.

ಪ್ರಕೃತಿಯಲ್ಲಿನ ವಿಸ್ಮಯಗಳು ಮಾನವರಿಗೆ ಅನೇಕ ರೀತಿಯ ನಂಟು ಎಂಬದನ್ನು ಅರಿತು ಅದರ ಕುರಿತು ಹೆಚ್ಚಿನ ಜ್ಞಾನವನ್ನು ತಿಳಿದುಕೊಂಡು ಅದನ್ನು ಇತರರಿಗೆ ತಿಳಿಸಲು ಆರಂಭಿಸಿದರು. ಅವರೇ ಗುರುಗಳು ಹಾಗೂ ಅವರ ಬಳಿ ವಿಚಾರಗಳನ್ನು ತಿಳಿದುಕೊಳ್ಳಲು ಹೋದವರು ಶಿಷ್ಯರಾದರು ಅಲ್ಲಿ ಜ್ಞಾನವನನು ಪಡೆದುಕೊಂಡರು.

ಬಾಲ್ಯದಲ್ಲಿದ್ದಾಗ ವಿದ್ಯಾರ್ಥಿಗಳ ಕೈ ಹಿಡಿದು ನವಣಕ್ಕಿಯಲ್ಲಿ ಬರೆಸಿದವರು ಶಿಕ್ಷಕರು. ಅಕ್ಷರ ಅಭ್ಯಾಸವ ಮಾಡಿಸಿ, ಸಣ್ಣ ಪುಟ್ಟ ಮಕ್ಕಳ ತುಂಟಾಟ,ಕೀಟಲೆಗಳನ್ನೆಲ್ಲವ ಸಹಿಸಿಕೊಂಡು, ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು, ವಿದ್ಯಾರ್ಥಿಗಳಿಗೆ ಬದುಕಿನ ಪಾಠಗಳನ್ನು ಸಣ್ಣ ಕಥೆಗಳ ರೂಪದಲ್ಲಿದೆ ವಿವರಿಸುವ ನಿಸ್ವಾರ್ಥ ಮಾರ್ಗದರ್ಶಕರು ಶಿಕ್ಷಕರು, ಸರಿ ತಪ್ಪುಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿ, ತಿದ್ದಿ ಬುದ್ದಿ ಹೇಳುವವರು ಶಿಕ್ಷಕರು.

ಪ್ರಾಥಮಿಕ ಹಂತದಲ್ಲಿ ನೀತಿ ಪಾಠಗಳನ್ನು ಕಲಿಸುವವರು ಶಿಕ್ಷಕರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಂತಹ ಮೌಲ್ಯಯುತ ಜೀವನ ಪಾಠ ಹೇಳಿಕೊಡುವುದು ತುಂಬಾ ವಿರಳ. ವಿದ್ಯಾರ್ಥಿಗಳ ಒಳ್ಳೆಯ ಪ್ರತಿಭೆಗಳಿಗೆ ಬೆಳಕು ಚೆಲ್ಲುವವರು ಶಿಕ್ಷಕರು. ವಿದ್ಯಾರ್ಥಿಗಳ ಒಳ್ಳೆಯ ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವವರು ಶಿಕ್ಷಕರು.

ವಿದ್ಯಾರ್ಥ ಜೀವನದಲ್ಲಿ ಶಿಸ್ತನ್ನು ರೂಪಿಸುವವರು ಶಿಕ್ಷಕರು, ಹಾಗೆಯೇ ಸ್ವಾವಲಂಬಿ ಜೀವನ ನಡೆಸಲು ಮತ್ತು ಸುಸಂಸ್ಕೃತ ಜೀವನದ ಪಾಠಗಳನ್ನು ಕಲಿಸುವವರು ಶಿಕ್ಷಕರು. ವಿದ್ಯಾರ್ಥಿಗಳು ಸೋತಾಗ ಆತ್ಮಸ್ಥೆರ್ಯ ತುಂಬಿ, ಧೆರ್ಯ ಹೇಳಿ ಪ್ರೋತ್ಸಾಹಿಸುವವರು ಶಿಕ್ಷಕರು. ಗೆದ್ದಾಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವವರು ಶಿಕ್ಷಕರು

ಗುರುಗಳ ಸಾಧನೆ:

” ಒಂದು ಕಲ್ಲು ಸುಂದರವಾದ ಮೂರ್ತಿಯಾಗಿ ಮಾರ್ಪಾಡು ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೆ ಇರುತ್ತಾರೆ”, ಅದರಂತೆಯೇ ಒಬ್ಬ ವಿದ್ಯಾರ್ಥಿಯ ಸಾಧನೆಯ ಬೆನ್ನ ಹಿಂದೆ ಶಿಕ್ಷಕರು ಅಥವಾ ಗುರು ಎಂಬ ಶಿಲ್ಪಿ ಇದ್ದೆ ಇರುತ್ತಾನೆ. ಶಿಕ್ಷಕರು ವಿದ್ಯಾರ್ಥಿಯನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುತ್ತವ ಶಿಲ್ಪಿ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಮಹತ್ತರ ಪಾತ್ರ ವಹಿಸುವ ಶಿಕ್ಷಕರಿಗೆ ಕೃತಘ್ನನಾಗಿರದೆ ಕೃತಜ್ಞನಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯವಲ್ಲಿ ಶಿಕ್ಷಕರ ಪಾತ್ರವು ಮಹತ್ವ ಪೂರ್ಣವಾದುದು.

ಎ.ಪಿ.ಜೆ ಅಬ್ದುಲ್‌ ಕಲಾಂ, ಸರ್ವಪಲ್ಲಿ ರಾಧಾಕೃಷ್ಣನ್‌ ಇಂತಹ ಮಹಾನ್‌ ವಿದ್ವಾಂಸರು ಶಿಕ್ಷಕರ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ.ಹಾಗೆಯೇ ಅಂತಹುದೇ ಹಾದಿಯಲ್ಲಿ ಅನೇಕ ಶಿಕ್ಷಕರು, ಪ್ರಾಧ್ಯಾಪಕರು, ಮಹನೀಯರು ಸೇವೆ ಸಲ್ಲಿಸಿದ್ದಾರೆ. ಭಾರತದ ಅಗ್ರಗಣ್ಯ ಶಿಕ್ಷಕ, ಮಾಜಿ ರಾಷ್ಟ್ರಪತಿ , ಶಿಕ್ಷಕ ತಜ್ಞ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ವಿದ್ಯಾರ್ಥಿ ಜೀವನದಲ್ಲಿ ಅನೇಕ ರೀತಿಯಲ್ಲಿ ಮಹತ್ವದ ಸ್ಥಾನವನ್ನು ತಂದುಕೊಟ್ಟಿದ್ದಾರೆ.

ಸತ್ಪ್ರಜೆಗಳ ನಿರ್ಮಾಣ ಕಾರ್ಯದಲ್ಲಿ ಮಾತಾ ಪಿತೃಗಳು ಮೊದಲನೇಯ ಸ್ಥಾನದಲ್ಲಿದ್ದರೆ, ಶಿಕ್ಷಕರು ಎರಡನೇ ಸ್ಥಾನವನ್ನು ಪಡೆಯುತ್ತಾರೆ. ಆದ್ದರಿಂದ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾದ ಶಿಕ್ಷಕರಿದ್ದಾರೆ.

ಗುರುಗಳ ಗುಣಗಳು:

  • ಬೋಧಿಸುವ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಕುತೂಹಲವನ್ನುಂಟು ಮಾಡುವ ಸಾಮರ್ಥ್ಯ ಹೊಂದಿರಬೇಕು.
  • ಉತ್ತಮ ಗುಣಮಟ್ಟದ ಸಂವಹನ ಕೌಶಲ್ಯವನ್ನು ಹೊಂದಿರಬೇಕು.
  • ಜೀವನ ಪರ್ಯಂತ ಹೊಸತನ್ನು ಕಲಿಯುವ ಮತ್ತು ಜ್ಞಾನವನ್ನು ಬೆಳೆಸಿಕೊಳ್ಳವ ಇಚ್ಛಾಶಕ್ತಿಯಿರಬೇಕು.
  • ಶಿಕ್ಷಣ ವೃತ್ತಿಯನ್ನು ಇಷ್ಟಪಟ್ಟು, ಸಂತಸದಿಂದ ಆಯ್ಕೆ ಮಾಡಿಕೊಂಡು ಶಿಕ್ಷಕನಾಗಬೇಕು.
  • ವಿದ್ಯಾರ್ಥಿಗಳಿಗೆ ಅವಮಾನವಾಗದಂತೆ ನೋಡಿಕೊಳುವುದು.
  • ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುವುದು.
  • ಪಾಠದ ಜೊತೆಗೆ, ಮುಖ್ಯವಾಗಿ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಆಸಕ್ತಿಯಿರಬೇಕು
  • ವಿದ್ಯಾರ್ಥಿ ಸಮೂಹ ಮತ್ತು ಸಮಾಜವು ಮೆಚ್ಚುವ ಉತ್ತಮ ನಡವಳಿಕೆ ಇರಬೇಕು. ಶಿಕ್ಷಕರ ನಡವಳಿಕೆ ಆದರ್ಶ ಪ್ರಾಯವಾಗಿರಬೇಕು.

ಉಪಸಂಹಾರ:

ಉತ್ತಮ ಶಿಕ್ಷಕರು, ಶಿಕ್ಷಣ ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಏಳಿಗೆಗೆ ಕಾರಣರಾಗುತ್ತಾರೆ. ಶಿಕ್ಷಕ ವೃತ್ತಿ ಬಹಳ ಜವಾಬ್ದಾರಿಯುತವಾದ ಮತ್ತು ಪ್ರಯಾಸದ ಕೆಲಸವೆಂದು ಹೇಳಬಹುದು. ವಿದ್ಯಾರ್ಥಿಗಳ ಮುಂದಿನ ಜೀವನವನ್ನು ರೂಪಿಸಲು ಶಿಕ್ಷಣ ಬಹಳ ಮುಖ್ಯವಾಗಿದೆ. ಶಿಕ್ಷಣದಿಂದ ಸಮಾಜದಲ್ಲಿ ಉತ್ತಮವಾದ ಪ್ರಜೆಯಾಗುತ್ತಾರೆ. ಇಲ್ಲಿ ಗುರುವಿನ ಪಾತ್ರ ಬಹಳ ಮುಖ್ಯವಾಗಿದೆ. ಗುರುವಿನ ಬಗ್ಗೆ ನಾವು ತಿಳಿದುಕೊಂಡು ಮುಂದಿನ ಮಕ್ಕಳಿಗೂ ಅವರ ಮಹತ್ವವನ್ನು ತಿಳಿಸುವಂತೆ ಮಾಡಬೇಕು.

ಇತರ ಪ್ರಬಂಧಗಳು:

ಪುಸ್ತಕದ ಮಹತ್ವ ಕನ್ನಡ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

Leave a Comment