ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು:

ಈ ಲೇಖನಿಯಲ್ಲಿ ರಾಜ್ಯಶಾಸ್ತ್ರದ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದೇವೆ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ರಾಜ್ಯಶಾಸ್ತ್ರ ಎಂದರೇನು
ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ:

ರಾಜ್ಯಶಾಸ್ತ್ರ ಎಂದರೆ ರಾಜ್ಯದ ಮೂಲ ಮತ್ತು ಸರಕಾರದ ತತ್ವಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ ಎಂದು ಕರೆಯುವರು.

ರಾಜ್ಯಶಾಸ್ತ್ರವು ಗ್ರೀಕ್‌ ಪದವಾದ ʼಪಾಲಿಸ್‌ʼ ನಿಂದ ಬಂದಿದೆ. ಪಾಲಿಸ್‌ ಎಂದರೆ ʼನಗರ ರಾಜ್ಯʼ ಎಂದರ್ಥ.ಮೂಲತಃ ʼಪಾಲಿಸ್‌ʼ ಪದವು ಲ್ಯಾಡಿನ್‌ ಪದವಾದ ʼಪೊಲಿಟಿಕಸ್‌ʼನ ಮೂಲವಾಗಿದೆ. ನಂತರ ಆಂಗ್ಲ ಪದವಾದ ʼಪಾಲಿಟಿಕ್ಸ್‌ʼ ಎಂಬುದಾಗಿದೆ.

ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು ಮೊಟ್ಟಮೊದಲಿಗೆ ಕ್ರಮಬದ್ಧವಾಗಿ ಮತ್ತು ಸುವ್ಯವಸ್ಥಿತವಾಗಿ ಅಧ್ಯಯನ ಮಾಡಿದುದರಿಂದ ಅವರನ್ನು “ರಾಜ್ಯಶಾಸ್ತ್ರದ ಪಿತಾಮಹ” ಎಂದು ಕರೆದಿರುವರು. ರಾಜ್ಯಶಾಸ್ತ್ರ ಎಂಬ ವಿಷಯವು ಅತ್ಯಂತ ಪುರಾತನವಾದುದು.

ಪುರಾತನ ಗ್ರೀಕ್‌ ತತ್ವಜ್ಞಾನಿ ಇದಕ್ಕೆ ಉತ್ತಮವಾದ ತಳಹದಿಯನ್ನು ಹಾಕಿರುತ್ತಾರೆ. ವಾಸ್ತವಿಕವಾಗಿ ರಾಜ್ಯಶಾಸ್ತ್ರದ ಪರಿಕಲ್ಪನೆಯ ಉಲ್ಲೇಖವನ್ನು ಪುರಾತನ ಭಾರತೀಯ ಚಿಂತಕರು ತಮ್ಮ ಕೃತಿಗಳಲ್ಲಿ ಮತ್ತು ಐತಿಹಾಸಿಕ ದಾಖಲೆಗಳಲಿ ನೀಡಿರುತ್ತಾರೆ.

ಈ ಭೂಮಿಯು ಹಲವಾರು ವಿಸ್ಮಯಗಳನ್ನು ಹಲವಾದ ಬದಲಾವಣೆಗಳನ್ನು ಬೆಳವಣಿಗೆಗಳನ್ನು ಕಂಡಿದೆ. ಅವುಗಳಲ್ಲಿ ಬಹು ಪ್ರಮುಖವಾದುದು ಮನುಕುಲದ ಸೃಷ್ಟಿ. ಜಗತ್ತಿನ ಆದಿ ಮತ್ತು ಅಂತ್ಯವನ್ನು ನಿಖರವಾಗಿ ಹೇಳಲಾಗದಿದ್ದರೂ, ಮಾನವ ತನ್ನ ವಿಕಾಸ, ಬೆಳವಣಿಗೆ, ಅಭಿವೃದ್ಧಿ ಮುಂತಾದವುಗಳು ಹೇಗೆ ಸಂಭವಿಸಿದವು ಎಂಬುದರ ಅನ್ವೇಷಣೆಯಲ್ಲಿ ನಿರಂತರವಾಗಿ ತೊಡಿಗಿರುವನು.

ರಾಜ್ಯಶಾಸ್ತ್ರ ವಿಷಯದ ಬಗ್ಗೆ ತಿಳುವಳಿಕೆ ನೀಡುವುದು, ರಾಜ್ಯಶಾಸ್ತ್ರ ಸ್ವರೂಪದ ಬಗ್ಗೆ ತಿಳುವಳಿಕೆ ಮೂಡಿಸುವುದು, ವಿಷಯ ವ್ಯಾಪ್ತಿಯ ಬಗ್ಗೆ ಜ್ಞಾನ ಪಡೆಯುವಂತೆ ಮಾಡುವುದು, ಹಾಗೆ ರಾಜ್ಯಶಾಸ್ತ್ರ ಅಧ್ಯಯನದ ಮಹತ್ವದ ಬಗ್ಗೆ ಜ್ಞಾನ ಪಡೆಯುವುದರ ಮೂಲಕ ಉತ್ತಮ ನಾಗರಿಕನಾಗಲು ಪ್ರೇರೇಪಣೆ ಮಾಡುವುದು.

ಅರಿಸ್ಟಾಟಲ್‌ ರವರು ರಾಜ್ಯಶಾಸ್ತ್ರವು ನಿಸ್ಸಂದೇಹವಾಗಿ ವಿಜ್ಞಾನವಾಗಿದೆ ಎಂದು ಹೇಳಿದವರಲ್ಲಿ ಮೊದಲಿಗರು. ಹೀಗಾಗಿಯೇ ಫ್ರೆಡರಿಕ್‌ ಪೋಲಾಕ್‌ ರವರು ಅರಿಸ್ಟಾಟಲ್‌ ರಿಂದಲೇ ರಾಜ್ಯಶಾಸ್ತ್ರವು ಪ್ರಾರಂಭವಾಯಿತುʼ ಎಂದು ಹೇಳಿದರು

ರಾಜ್ಯಶಾಸ್ತ್ರವು ರಾಜ್ಯ ಮತ್ತು ಸರ್ಕಾರದ ವ್ಯವಸ್ಥೆ ಹಾಗೂ ಕಾರ್ಯನಿರ್ವಹಣೆಯನ್ನು ವಿವರಿಸುತ್ತದೆ. ಅರಿಸ್ಟಾಟಲ್‌ ಬರೆದ ಕೃತಿ ʼದಿ ಪಾಲಿಟಿಕ್ಸ್‌ʼ

ಇತರೆ ಪ್ರಬಂಧಗಳು:

ಪುಸ್ತಕದ ಮಹತ್ವ ಕನ್ನಡ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

Leave a Comment