ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಈ ಲೇಖನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆಯನ್ನು ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.ಈ ಮಾಹಿತಿಯು ಓದುಗಾರಿಗೆ ಸಹಾಯವಾಗುತ್ತದೆ.

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಪೀಠಿಕೆ:

ಜಯ ಭಾರತ ಜನನಿಯ ತನುಜಾತೆ, ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗುವ ನೀ ಅನಿಕೇತನ ಹೀಗೆ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕುವೆಂಪು ಅವರು ಕನ್ನಡ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಕಂಡ ದೈತ್ಯ ಪ್ರತಭೆ.

ಕುವೆಂಪುರವರ ಜೀವನ ಚರಿತೆ:

ಕನ್ನಡ ರಾಷ್ಟ್ರಕವಿ, ಸಾಹಿತ್ಯ ದಿಗ್ಗಜ ಎಂದೇ ಪ್ರಸಿದ್ದರಾಗಿರು ಕುವೆಂಪು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904 ರಲ್ಲಿ ಜನಿಸಿದರು.ತಾಯಿ ಸೀತಮ್ಮ ತಂದೆ ವೆಂಕಟಪ್ಪ ತೀರ್ಥಹಳ್ಳಿ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಕುವೆಂಪು 1927ರಲ್ಲಿ ಬಿ.ಎ 1929ರಲ್ಲಿ ಎಂ.ಎ ಪದವಿಯನ್ನು ಪಡೆದು ತಾವು ಓದಿದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು. 1955ರಲ್ಲಿ ಪ್ರಾಂಶುಪಾಲರಾದರು.ವರಕವಿ ಬೇಂದ್ರೆ ಯವರಿದಂದ ಯುಗದ ಕವಿ ಜಗದ ಕವಿ ಎನಿಸಿಕೊಂಡವರು.ವಿಶ್ವಮಾನವ ಸಂದೇಶ ನೀಡಿದವರು.ವಿಶ್ವಮಾನವ ಸಂದೇಶ ನೀಡಿದವರು.ಕನ್ನಡದ ಎರಡನೇ ರಾಷ್ಟ್ರಕವಿ,ಜ್ಞಾನಪೀಠ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು.ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದವರು.

ಕುವೆಂಪು ಅವರ ಸಾಹಿತ್ಯ ಸೃಷ್ಟಿ ವೈವಿಧ್ಯಮಯವಾದದ್ದು.ಅಂತೆಯೇ ವಿಪುಲವಾದದ್ದು ಹೌದು. ಅದರ ಗಾತ್ರ ಮತ್ತು ಗುಣ ಎರಡು ಗಣನೀಯವಾದದ್ದು. ಚಿತ್ರಾಂಗದಾ,ಕೊಳಲು,ನವಿಲು,ಪಾಂಚಜನ್ಯ, ಅನಿಕೇತನ,ಪಕ್ಷಿಕಾಶಿ ಇತ್ಯಾದಿ ಕವನಸಂಕಲನಗಳು,ಕಾನೂನು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು ಬೃಹತ್‌ ಕಾದಂಬರಿಗಳು, ಬೆರಳ್ಗೆ ಕೊರಳ್‌, ರಕ್ತಾಕ್ಷಿ, ಸ್ಮಶಾನ ಕರುಕ್ಷೇತ್ರ,ಯಮನಸೋಲು, ಮುಂತಾದ ನಾಟಕಗಳು,ಕುವೆಂಪು ರಾಷ್ಟ್ರೀಯ ಪ್ರತಿಷ್ಠಾನ ಇವರು ಜನಿಸಿದ ಮನೆಯನ್ನು ಕವಿಮನೆ ಹೆಸರಿನ ಮ್ಯೂಸಿಯಂ ಮಾಡಿದ್ದಾರೆ.

ಕುವೆಂಪು ಅವರ ಕೃತಿಗಳು:

೧.ಕವನ ಸಂಕಲನ: ಕೊಳಲು,ಅಗ್ನಿಹಂಸ,ಪ್ರೇಮಕಾಶ್ಮೀರ,ಪಾಂಚಜನ್ಯ,ಚಂದ್ರಮಂಚಕೆ ಬಾ ಚಕೋರಿ,ಅನಿಕೇತನ,ಪಕ್ಷಿಕಾಶಿ,ನಮಿಲು…….ಮುಂತಾದದವು.

೨. ನಾಟಕ:ಜಲಗಾರ,ಯಮನಸೋಲು,ಬಿರುಗಾಳಿ,ರಕ್ತಾಕ್ಷಿ,ಸ್ಮಶಾನಂ ಕುರುಕ್ಷೇತ್ರಂ,ಬೆರಳ್ಗೆ ಕೊರಳ್‌,ಶೂದ್ರತಪಸ್ವಿ… ಮುಂತಾದವು.

೩. ಜೀವನ ಚರಿತ್ರೆ: ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ನೆನಪುಗಳಲ್ಲಿ ವಿವೇಕಾನಂದರು.

೪.ವಿಮರ್ಶೆ: ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ,ವಿಭೂತಿ ಪೊಜೆ, ದ್ರೌಪದಿಯ ಶ್ರೀಮುಂಡಿ,ರಸೋವೈಸಃ……

೫.ಕಾದಂಬರಿ: ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು.

೬.ಖಂಡಕಾವ್ಯ: ಚಿತ್ರಾಂಗದಾ

೭.ಮಹಾಕಾವ್ಯ: ಶ್ರೀ ರಾಮಾಯಣ ದರ್ಶನಂ

ಪ್ರಶಸ್ತಿ ಪುರಸ್ಕಾರಗಳು:

೧.1955 ರಲ್ಲಿ” ಶ್ರೀ ರಾಮಾಯಣ ದರ್ಶನಂ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೨.1956 ರಲ್ಲಿ ಮೈಸೂರು ವಿಶ್ವವಿದ್ಯಾಲಯ , 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ,1969 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಿ.ಲಿಟ್.‌ ಪ್ರಶಸ್ತಿ ನೀಡಿ ಗೌರವಿಸಿದರು.

೩.1957 ರಲ್ಲಿ ಧಾರಾವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

೪.1958 ರಲ್ಲಿ ಭಾರತ ಸರ್ಕಾರವು “ಪದ್ಮಭೂಷಣ” ಪ್ರಶಸ್ತಿ ನೀಡಿತು.

೫.1964 ರಲ್ಲಿ ಕರ್ನಾಟಕ ಸರ್ಕಾರ “ರಾಷ್ಟ್ರಕವಿ” ಪ್ರಶಸ್ತಿ ನೀಡಿತು.

೬.1968 ರಲ್ಲಿ ಪಂಪ ಪ್ರಶಸ್ತಿ ದೊರೆಯಿತು.

೭.1969 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆಯಿತು.

೮.1992 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ದೊರೆಯಿತು.

೯.ಕುವೆಂಪು ಅವರ ಶಿಷ್ಯರೂ, ಅಭಿಮಾನಿಗಳೂ ಸೇರಿ “ಉಡೂಗೊರೆ”,ʼ ಗಂಗೋತ್ರಿ”, “ಸಹ್ಯಾದ್ರಿ”, ಎಂಬ ಮೂರು ಅಭಿನಂದನ ಗ್ರಂಥಗಳನ್ನು ಅರ್ಪಿಸಿದ್ದಾರೆ.

೧೦.ಕನ್ನಡ ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ದೊರೆಯಿತು.(ಮರಣೋತ್ತರ).

ಉಪಸಂಹಾರ:

ಕುವೆಂಪು ಅವರ ಜೀವನ ಬಹಳ ಸುಂದರ ಹಾಗೂ ಸಾಧಾರಣ ವ್ಯಕ್ತಿಯಾಗಿದ್ದರು.ಅವರ ಜೀವನ ಪರಿಚಯವನ್ನು ಕಾಣಬಹುದು ಅವರ ಕೃತಿಗಳನ್ನು ತಿಳಿಯಬಹುದು. ಈ ಮೂಲಕ ಅವರ ಜೀವನ, ಸಾಧನೆಗಳನ್ನು ಕಾಣಬಹುದು.

ಇತರೆ ಪ್ರಬಂಧಗಳು:

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಪುಸ್ತಕಗಳ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment