ಸಾಮಾಜಿಕ ಪಿಡುಗುಗಳು ಪ್ರಬಂಧ | Samajika Pidugu Galu Prabandha

ಸಾಮಾಜಿಕ ಪಿಡುಗುಗಳು ಬಗ್ಗೆ ಪ್ರಬಂಧ ಕನ್ನಡದಲ್ಲಿ, Samajika Pidugu Galu Prabandha in Kannada, Samajika Pidugu Galu Essay in Kannada ಸಾಮಾಜಿಕ ಪಿಡುಗುಗಳು essay in kannada

ಸಾಮಾಜಿಕ ಪಿಡುಗುಗಳು ಪ್ರಬಂಧ

ಸಾಮಾಜಿಕ ಪಿಡುಗುಗಳು ಪ್ರಬಂಧ ಕನ್ನಡ

ಈ ಲೇಖನಿಯಲ್ಲಿ ಸ್ನೇಹಿತರೇ ಸಾಮಾಜಿಕ ಪಿಡುಗುಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ನಿಮಗೆ ಒದಗಿಸಿದ್ದೇವೆ.

ಪೀಠಿಕೆ:

ಸಮಾಜಕ್ಕೆ ಸಮಸ್ಯೆಯನ್ನು ಅಥವಾ ಕೆಡಕನ್ನುಂಟು ಮಾಡುವಂತಹ ಅನಿಷ್ಟಗಳೇ ಸಮಾಜಿಕ ಪಿಡುಗುಗಳು. ಅವುಗಳೆಂದರೆ ಅನಕ್ಷರತೆ, ಜಾತೀಯತೆ, ಅಸ್ಪೃಶ್ಯತೆ, ಭಿಕ್ಷಾಟನೆ, ಮಾದಕ ವಸ್ತುಗಳ ಸೇವನೆ ಮುಂತಾದವು. ಈ ಸಮಾಜಿಕ ಪಿಡುಗುಗಳು ದೇಶ ಎದುರಿಸಬೇಕಾಗಿರುವ ಸವಾಲುಗಳಾಗಿ ಪರಿಣಮಿಸಿದೆ. ಸಮಾಜ ಕಲುಷಿತವಾಗಲು ದಾರಿ ಮಾಡಿಕೊಡುವ ಇವುಗಳಿಂದ ಸಾಮಾಜಿಕ ಕ್ಷೋಭೆ ಪರಿಸರ ಹಾನಿಯೂ ಉಂಟಾಗುತ್ತಿದೆ. ಇಂತಹ ಪದ್ದತಿಗಳು ನಮ್ಮ ದೇಶವನ್ನು ಅಭಿವೃದ್ದಿಪಥದತ್ತ ಕೊಂಡೊಯ್ಯಲು ಕಂಟಕವಾಗಿದೆ.

ವಿಷಯ ವಿವರಣೆ:

ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜಕ್ಕೆ ಅಂಟಿಕೊಂಡು ಬಂದಿರುವ, ಸಮಾಜದ ಅಭಿವೃದ್ದಿಗೆ ಕಂಟಕವಾಗಿರುವ ಬಡತನ, ಅನಕ್ಷರತೆ, ಬಾಲ್ಯವಿವಾಹ, ವರದಕ್ಷಣೆ, ಸ್ತ್ರೀಶೋಷಣೆ, ಭಿಕ್ಷಾಟನೆ, ಜಾತೀಯತೆ, ಅಸ್ಪೃಷ್ಯತೆ, ಸತಿಪದ್ದತಿ, ದೇವದಾಸಿ ಪದ್ದತಿ, ಜೀತಪದ್ದತಿ, ಪರದಾ ಪದ್ದತಿಯಂತಹ ಸಾಮಾಜಿಕ ಪಿಡುಗುಗಳು ನಮ್ಮನ್ನು ಇಂದಿಗೂ ಕಾಡುತ್ತಿವೆ. ಇಂತಹ ಅನಿಷ್ಟಗಳನ್ನು ಹೋಗಲಾಡಿಸಿದಾಗ ಮಾತ್ರ ನಮ್ಮ ಸಮಾಜದ ಏಳಿಗೆಯಾಗಲು ಸಾಧ್ಯವಿದೆ. ಇಲ್ಲವಾದರೆ ಸಮಾಜ ಅಭಿವೃದ್ದಿ ಕುಂಠಿತಗೊಂಡು ದಾಸ್ಯದಲ್ಲಿರಬೇಕಾಗುತ್ತದೆ. ಸಮಾಜಿಕ ಪಿಡುಗುಗಳು ಸಮಾಜಕ್ಕೆ ಹಿಡಿದ ಗೆದ್ದಲಿನಂತೆ ಸಮಾಜವನ್ನು ವಿನಾಶದತ್ತ ಕೊಂಡೊಯ್ಯತ್ತವೆ.

ಸಮಾಜಿಕ ಪಿಡುಗುಗಳು:

1. ಅನಕ್ಷರತೆ:

ಇದು ಅನೇಕ ಮೂಢನಂಬಿಕೆಗಳಿಗೆ ಎಡೆ ಮಾಡಿಕೊಡುತ್ತದೆ. ನಿರುದ್ಯೋಗ, ಬಡತನ, ಅಜ್ಞಾನ, ಜನಸಂಖ್ಯೆಯ ಹೆಚ್ಚಳ ಇವುಗಳಿಗೆಲ್ಲ ಅನಕ್ಷರತೆಯೇ ಮುಖ್ಯ ಕಾರಣ. ಪ್ರಜಾಪ್ರಭುತ್ವದ ಯಶಸ್ವಿಗೂ ಇದು ಅಡ್ಡಿಯಾಗಿದೆ. ಇದನ್ನು ಮನಗಂಡ ಸರ್ಕಾರ ಅಕ್ಷರ ದಾಸೋಹ, ಅನೌಪಚಾರಿಕ ಶಿಕ್ಷಣ, ರಾಷ್ಟ್ರೀಯ ವಯಸ್ಕರ ಶಿಕ್ಷಣ ಮುಂತಾದ ಕಾರ್ಯಕ್ರಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ವರ್ಗ, ಪಂಗಡ ಮತ್ತು ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.

2. ಭಿಕ್ಷಾಟನೆ:

ಮನುಷ್ಯ ದುಡಿದು ತನ್ನಬೇಕು ಎಂಬ ತತ್ವಕ್ಕೆ ವಿರುದ್ದವಾಗಿ ಸೋಮಾರಿಗಳು ಭಿಕ್ಷಾಟನೆಯೆಂಬ ಸುಲಭ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇದು ದೇಶದ ಘನತೆಗೆ ಕುಂದು ತರುವ ವಿಷಯವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೀಡುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿದ್ದರೂ ಭಿಕ್ಷಾಟನೆ ನಡೆಯುತ್ತಲೇ ಇದೆ.

3. ಮಾದಕ ವಸ್ತುಗಳ ಸೇವನೆ:

ಅಫೀಮು, ಗಾಂಜಾ, ಕೊಕೇನ್‌, ಹೆರಾಯಿನ್‌, ಬ್ರೌನ್‌ ಷುಗರ್‌ ಮುಂತಾದ ಮಾದಕ ವಸ್ತುಗಳ ಸೇವನೆಗೆ ತೊಡಗುವವರು ಹೆಚ್ಚಾಗಿ ಯುವಕ ಯುವತಿಯರು, ಇದೊಂದು ದುಶ್ಚಟವಾಗಿ ಸಾಮಾಜಿಕ ಶಾಂತಿಗೆ ಭಂಗ ತರುವುದಲ್ಲದೆ ಕಳ್ಳ ಸಾಗಾಣಿಕೆಗೂ ದಾರಿ ಮಾಡಿಕೊಡುತ್ತದೆ ಮತ್ತು ಭರಿಸುವ ಮಾದಕ ವಸ್ತುಗಳ ಸೇವನೆಯಿಂದಾಗಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳವುದಲ್ಲದೆ ಮಾನಸಿಕ ತುಮುಲಕ್ಕೂ ಒಳಗಾಗುತ್ತಾರೆ. ಸಮಾಜದಲ್ಲಿ ಅಗೌರವಕ್ಕೆ ಪಾತ್ರರಾಗುತ್ತಾರೆ. ಅಪಘತಾಗಳಿಗೆ ಕಾರಣರಾಗುತ್ತಾರೆ. ಆ ಮೂಲಕ ಸಾಮಾಜಿಕ ಸಮಸ್ಯೆಗಳಿಗೂ ಕಾರಣರಾಗುತ್ತಾರೆ. ಮಾದಕ ವಸ್ತುಗಳ ಸೇವನೆ ಯುವ ಜನತೆಯನ್ನು ದಿಕ್ಕುಗಡಿಸುವುದಲ್ಲದೆ ಅವರ ಏಳಿಗೆಗೂ ಮಾರಕವಾಗಿದೆ.

4. ಜಾತೀಯತೆ:

ಸರ್ವ ಧರ್ಮ ಸಮನ್ವಯದ ಬೀಡಾದ ಭಾರತ ದೇಶದಲ್ಲಿ ಜಾತೀಯತೆ ಒಂದು ದೊಡ್ಡ ಪಿಡುಗಾಗಿದೆ. ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಜಾತೀಯತೆ ನಿರ್ಮೂಲನವಾಗದಿದ್ದಲ್ಲಿ ರಾಷ್ಟ್ರದ ಪ್ರಗತಿ ಅಸಾಧ್ಯ ವ್ಯಕ್ತಿಯ ವಿಕಾಸಕ್ಕೆ ಅಡ್ಡಿಯನ್ನುಂಟು ಮಾಡುವ ಜಾತೀಯತೆ ಪ್ರಾಂತೀಯತೆಗೂ ಕಾರಣವಾಗುತ್ತದೆ. ದೇಶದ ಹಿತದೃಷ್ಟಿಯಿಂದ, ಸಮಾಜದ ಹಿತದೃಷ್ಟಿಯಿಂದ ಜಾತೀಯತೆಯ ಮನೋಭಾವ ಖಂಡಿತಾ ಒಳ್ಳೆಯ ಬೆಳವಣಿಗೆ ಶಿಕ್ಷಣವು ಜಾತಿ ವ್ಯವಸ್ಥೆಯ ದುಷ್ಪರಿಣಾಮಗಳನ್ನು ಅರಿತುಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ. ಸಮಾನತೆಗಾಗಿ ವಿಶಾಲ ಸಾಮಾಜಿಕ ಬದಲಾವಣೆಯ ಅಗತ್ಯವಿದೆ. ಮಕ್ಕಳಿಗೆ ಮೌಲ್ಯ ಮತ್ತು ನೈತಿಕ ಶಿಕ್ಷಣ ನೀಡುವ ವಿಶೇಷ ತರಗತಿಗಳನ್ನು ಶಾಲೆಗಳಲ್ಲಿ ಸೇರಿಸಬೇಕು.

5.ವರದಕ್ಷಣೆ:

ವರದಕ್ಷಿಣೆಯು ಭಾರತೀಯ ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದೆ. ಸ್ಥಾನಮಾನವನ್ನು ಉಳಿಸಿಕೊಳ್ಳಲು ಜನರು ವರದಕ್ಷಿಣೆಯನ್ನೂ ಕೇಳುತ್ತಿದ್ದಾರೆ. ಸಾಮಾನ್ಯವಾಗಿ ಮಧ್ಯಮ ಮತ್ತು ಕೆಳವರ್ಗಕ್ಕೆ ಸೇರಿದ ವಧುವಿನ ಕುಟುಂಬವು ಅದರ ಕಹಿ ಭಾಗವನ್ನು ಎದುರಿಸುತ್ತದೆ. ಪಾಲಕರು ತಮ್ಮ ಮಗಳ ಮದುವೆಗಾಗಿ ಆಗಾಗ್ಗೆ ಸಾಲವನ್ನು ತೆಗೆದುಕೊಳ್ಳುತ್ತಾರೆ.ಹೆಚ್ಚಿನ ಬಾರಿ, ತಮ್ಮ ಹೆತ್ತವರ ಕೊಳಕು ಪರಿಸ್ಥಿತಿಯನ್ನು ಗಮನಿಸಿದರೆ, ವಧು ಮಾನಸಿಕವಾಗಿ ಪ್ರಭಾವಿತರಾಗುತ್ತಾರೆ. ಕೆಲವೊಮ್ಮೆ ವರದಕ್ಷಿಣೆಯಿಂದ ಉಂಟಾಗುವ ಮಾನಸಿಕ ಹಿಂಸೆಯು ಆತ್ಮಹತ್ಯೆಯ ಪ್ರವೃತ್ತಿಗೆ ಕಾರಣವಾಗುತ್ತದೆ.

6.ಸತಿಪದ್ದತಿ:

ಸಮಾಜದಲ್ಲಿ ಸತಿ ಪದ್ದತಿಯಂತಹ ಆಚರಣೆಗಳು ನಮ್ಮ ದೇಶದಲ್ಲಿ ಇದೆ. ಇವುಗಳು ನಮ್ಮ ಸಮಾಜಕ್ಕೆ ಅಂಟಿದ ಸಮಸ್ಯೆಯಾಗಿದೆ. ಅನಿಷ್ಟವಾದ ಪದ್ದತಿಯಾಗಿದೆ, ಹೆಣ್ಣಿಗೆ ಸ್ವಾತಂತ್ರ್ಯವನ್ನು ಈ ಸಮಾಜ ಕಸಿದುಕೊಂಡಿದೆ. ಗಂಡ ಸತ್ತರೆ ಹೆಂಡತಿಯು ಸತಿಯಾಗುವಂತೆ ಅದರೆ ಅವಳು ಅವನ ಜೊತೆ ಚಿತೆಗೆ ಹಾರುವುದು ಈ ರೀತಿಯಾ ಕೆಟ್ಟ ಪದ್ದತಿಗಳು ನಮ್ಮ ಸಮಾಜದಲ್ಲಿ ಇದೆ. ಅವಳಿಗೆ ಇಷ್ಟ ಇಲ್ಲದೇ ಇದ್ದರು ಅವಳು ಗಂಡನ ಶವದ ಜೊತೆ ಅವಳು ಸುಟ್ಟು ಹೋಗುವಂತೆ ಮಾಡುತ್ತಾರೆ. ಸ್ರೀಯರು ಮಾನಸಿಕವಾಗಿ ನೊಂದು ಇರುತ್ತಾರೆ.

7.ಅಸ್ಪೃಶ್ಯತೆ:

ಸಮಾಜದಲ್ಲಿ ನಾವು ಈಗ ಹೆಚ್ಚಾಗಿ ಅಸ್ಪೃಶ್ಯತೆಯನ್ನು ನಾವು ಕಾಣುತ್ತೇವೆ. ಮೇಲು-ಕೀಳು ಎಂಬ ಭಾವನೆಗಳು ಹೆಚ್ಚಾಗಿದೆ. ಸಮಾಜಕ್ಕೆ ತೊಡಕು ಉಂಟು ಮಾಡುವ ಕಾರ್ಯವಾಗಿದೆ. ಅಸ್ಪೃಶ್ಯರನ್ನು ಕಾಲಿನ ಕಸದ ಹಾಗೇ ನೋಡುತ್ತಾರೆ. ಅವರಿಗೆ ಸಮಾಜದಲ್ಲಿ ಯಾರು ಗೌರವ ನೀಡುವುದಿಲ್ಲ ಅವರನ್ನು ಜೀತ ಮಾತ್ರ ಸೀಮಿತವಾಗಿರಿಸುತ್ತಾರೆ. ಸಮಾಜದಲ್ಲಿ ಅವರಿಗೆ ನೀಡಬೇಕಾದ ಗೌರವ-ಸ್ಥಾನಮಾನ ಏನು ನೀಡುವುದಿಲ್ಲ. ಅವರಿಗೆ ಅವಮಾನವಾಗುವ ಚಟುವಡಟಿಕೆಗಳು ಸಮಾಜದಲ್ಲಿ ನೆಡೆಯುತ್ತದೆ. .ಯುವಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಹರಡುತ್ತಿರುವ ಅಶಿಸ್ತು ಗಂಭೀರ ಸಮಸ್ಯೆಯಾಗಿದೆ.

ಉಪಸಂಹಾರ:

ಹೀಗೆ ಸಾಮಾಜಿಕ ಪಿಡುಗುಗಳು ಅನೇಕ ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಇವುಗಳನ್ನು ಹೋಗಲಾಡಿಸಲು ಸರ್ಕಾರದೊಂದಿಗೆ ಪ್ರತಿಯೊಬ್ಬರೂ ಸಹಕರಿಸಬೇಕು. ಆಗ ಮಾತ್ರ ಇವುಗಳನ್ನು ನಿವಾರಿಸಲು ಸಾಧ್ಯವಾಗಿದೆ. ಹಾಗೇ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಅರಿವು ಮೂಡಿಸುವುದು.

ಸಾಮಾಜಿಕ ಪಿಡುಗುಗಳು essay in kannada ಸಾಮಾಜಿಕ ಪಿಡುಗುಗಳು ಕನ್ನಡ ಪ್ರಬಂಧ

FAQ

ಸಾಮಾಜಿಕ ಪಿಡುಗುಗಳನ್ನು ಉದಾಹರಣೆ ಕೂಡಿ ?

ಅನಕ್ಷರತೆ,ಬಾಲ್ಯವಿವಾಹ,ಜಾತೀಯತೆ,ವರದಕ್ಷಣೆ, ಮತ್ತು ಅಸ್ಪೃಶ್ಯತೆ.

ಸಾಮಾಜಿಕ ಪಿಡುಗು ಎಂದರೇನು?

ಸಮಾಜದ ಅಭಿವೃದ್ದಿಗೆ ತೊಡಕನ್ನು ಉಂಟು ಮಾಡುವ ಪದ್ದತಿಗಳನ್ನು ಸಾಮಾಜಿ ಪಿಡುಗು ಎನ್ನುವರು.

ಸಾಮಾಜಿಕ ಪಿಡುಗುಗಳ ಪರಿಣಾಮವೇನು ?

ಇವು ಸಮಾಜ ಮತ್ತು ದೇಶದ ಸ್ವಾತ್ಯ ಹಾಳುಮಾಡಿ, ಅಭಿವೃದ್ದಿ ಫಥದತ್ತ ಕೊಂಡ್ಯೊಯಲು ಕಂಟಕ ವಾಗಿದೆ.

ಇತರೆ ಪ್ರಬಂಧಗಳು:

100+ ಕನ್ನಡ ಪ್ರಬಂಧಗಳು

ಮಣ್ಣಿನ ಮಾಲಿನ್ಯ ಬಗ್ಗೆ ಪ್ರಬಂಧ 

ಸಾವಿತ್ರಿಬಾಯಿ ಫುಲೆ ಪ್ರಬಂಧ 

Leave a Comment