Agama Sandhi Examples in Kannada, ಆಗಮ ಸಂಧಿ ಮತ್ತು ಉದಾಹರಣೆಗಳು, agama sandhi information in kannada, ಆಗಮ ಸಂಧಿ 10 ಉದಾಹರಣೆಗಳು
Agama Sandhi Examples in Kannada

ಈ ಲೇಖನಿಯಲ್ಲಿ ಆಗಮ ಸಂಧಿ ಮತ್ತು ಉದಾಹರಣೆಗಳನ್ನು ನಾವು ನಿಮಗೆ ಅನುಕೂಲವಾಗುವಂತೆ ನಿಮಗೆ ನೀಡಿದ್ದೇವೆ.
ಆಗಮ ಸಂಧಿ ಮತ್ತು ಉದಾಹರಣೆಗಳು
ಸ್ವರದ ಮುಂದೆ ಸ್ವರವು ಬಂದು, ಅಲ್ಲಿ ಸಂಧಿ ಕಾರ್ಯವಾಗುವಾಗ ಒಂದು ಅಕ್ಷರ ಲೋಪವಾಗಿ, ಅಲ್ಲಿ ಆ ಅಕ್ಷರದ ಅರ್ಥ ಕೆಡೆದೆ ಆ ಎರಡು ಸ್ವರದ ಮಧ್ಯೆ ʼಯʼ ಅಥವಾ ʼವʼ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಆಗಮ ಸಂಧಿ ಎನ್ನವರು.
‘ಮನೆ + ಅಲ್ಲಿ ‘ – ಎನ್ನುವಲ್ಲಿ ಸ್ವರದ ಮುಂದೆ ಸ್ವರ ಬಂದಿದೆ . ಲೋಪಸಂಧಿಯ ನಿಯಮದಂತೆ ಹಿಂದಿನ ಸ್ವರ ಲೋಪವಾದರೆ ‘ ಮನಲ್ಲಿ ‘ ಎಂದಾಗಿ ಅರ್ಥ ಕೆಡುತ್ತದೆ . ಹಾಗೆಯೇ ವ್ಯಾಕರಣನ್ನು , ಮಗಿಗೆ , ಗಿರನ್ನು ಕೆರನ್ನು ಎಂದಾಗಿ ಮೇಲಿನ ಎಲ್ಲವೂ ತಮ್ಮ ಅರ್ಥವನ್ನು ಕಳೆದುಕೊಳ್ಳುತ್ತವೆ . ಇಂಥ ಸಂದರ್ಭಗಳಲ್ಲಿ ಆ ಎರಡು ಸ್ವರಗಳ ನಡುವೆ ‘ ಯ’ಕಾರ ಅಥವಾ ‘ ವ’ಕಾರ ಹೊಸದಾಗಿ ಸೇರುತ್ತವೆ.
ಉದಾಹರಣೆಗಳು:
ಮಳೆ + ಇಂದ = ಮಳೆಯಿಂದ
ಕೈ + ಅನ್ನು = ಕ್ಕೆಯನ್ನು
ಆ + ಓಲೆ = ಆವೋಲೆ
ಸೇವೆ + ಇಂದ = ಸೇವೆಯಿಂದ
ಗಿರಿ + ಅನ್ನು = ಗಿರಿಯನ್ನು
ಮೈ + ಇಸು = ಮೇಯಿಸು
ಆಗಮ ಸಂಧಿಯಲ್ಲಿ ಎರಡು ಪ್ರಕಾರಗಳಿವೆ
- ಯ ಕರಾಗಮ ಸಂಧಿ
- ವ ಕರಾಗಮ ಸಂಧಿ
ಯಕರಾಗಮ ಸಂಧಿ
ಸ್ವರದ ಮುಂದೆ ಸ್ವರವು ಬಂದು, ಸಂಧಿ ಕಾರ್ಯ ನಡೆದು, ಒಂದು ಅಕ್ಷರ ಲೋಪವಾಗಿ ಅರ್ಥ ಕೆಡೆದೆ ಅಲ್ಲಿ ಯ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ಯಕರಾಗಮ ಸಂಧಿ ಎನ್ನುವರು.
ಆ , ಇ , ಈ , ಎ , ಏ , ಐ ಸ್ವರಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ನಡುವೆ ‘ ಯ್ ‘ ಕಾರವು ಆಗಮವಾಗುತ್ತದೆ.
ಉದಾ:
ಕೆರೆ + ಅನ್ನು = ಕೆರೆಯನ್ನು
ಮೇ + ಅದೆ = ಮೇಯದೆ
ಮೈ + ಇಂದ = ಮೈಯಿಂದ
ಸತಾ + ಇಸು = ಸತಾಯಿಸು
ಸ್ತ್ರೀ + ಇಂದ = ಸ್ತ್ರೀಯಿಂದ
ವಕಾರಾಗಮಸಂಧಿ
ಸ್ವರದ ಮುಂದೆ ಸ್ವರವು ಬಂದು, ಸಂಧಿ ಕಾರ್ಯ ನಡೆದು, ಒಂದು ಅಕ್ಷರ ಲೋಪವಾಗಿ ಅರ್ಥ ಕೆಡೆದೆ ಅಲ್ಲಿ ವ ಕಾರವೂ ಹೊಸದಾಗಿ ಬಂದು ಸೇರಿದರೆ ಅದನ್ನು ವಕರಾಗಮ ಸಂಧಿ ಎನ್ನುವರು.
ಉ , ಊ , ಋ , ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ‘ ವ ‘ ಕಾರವು ಆಗಮವಾಗುತ್ತದೆ.
ಉದಾ :
ಭಾತೃ + ಇಗೆ = ಭ್ರಾತೃವಿಗೆ
ಮಗು + ಅನ್ನು = ಮಗುವನ್ನು
ಗೋ + ಇಂದ = ಗೋವಿಂದ
ಗೋವಿಂದ = ಗೋ + ಇಂದ ಈ ಸಂಧಿಕಾರ್ಯದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಯ್ , ವ್ ವ್ಯಂಜನಗಳು ಹೊಸದಾಗಿ ಆಗಮವಾಗುತ್ತವೆ.
ಇತರೆ ಪ್ರಬಂಧಗಳು: