ಅಗ್ನಿಪಥ ಸೇನಾ ನೇಮಕಾತಿಯ ಹೊಸಶಕೆ, Agnipatha Army Recruitment Update in Kannada, agneepath army application, agneepath scheme details in kannada
ಅಗ್ನಿಪಥ ಸೇನಾ ನೇಮಕಾತಿಯ ಹೊಸಶಕೆ

ಈ ಲೇಖನಿಯಲ್ಲಿ ಅಗ್ನಿಪಥ ಯೋಜನೆಯ ಅದರ ನೇಮಕಾತಿಯ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿಯನ್ನು ನಾವು ನೀಡಿದ್ದೇವೆ ನೀವು ಇದರ ಅನುಕೂಲವನ್ನು ಪಡೆದುಕೊಳ್ಳಿ.
ಅಗ್ನಿಪಥ ಸೇನಾ ನೇಮಕಾತಿ
ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಅವಕಾಶ ಕಲ್ಲಿಸುವ ʼಅಗ್ನಿಪಥʼ ಎಂಬ ಹೊಸ ನೇಮಕಾತಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಆಯ್ಕೆಯಾದ ಯುವಕರನ್ನು ʼಅಗ್ನಿವೀರʼ ಎಂದು ಕರೆಯಲಾಗುತ್ತದೆ.
ಅಗ್ನಿಪಥ, ದೇಶಭಕ್ತಿ ಪ್ರೇರಿತರಾದ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಇದು ಸೇನೆಯ ಮೂರು ಸೇವೆಗಳ (ಭೂಸೇನ, ನೌಕಪಡೆ ಮತ್ತು ವಾಯುಪಡೆ) ಮಾನವ ಸಂಪನ್ಮೂಲ ನೀತಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಸರ್ಕಾರ ಪರಿಚಯಿಸಿರುವ ಪ್ರಮುಖ ರಕ್ಷಣಾ ನೀತಿ ಸುಧಾರಣೆಯಾಗಿದ್ದು, ತ್ವರಿತಗತಿಯಲ್ಲಿ ಅನುಷ್ಠಾನವಾಗುತ್ತಿದೆ.
ಯೋಜನೆಯ ವಿವರಗಳು
- ಅಗ್ನಿಪಥ ಯೋಜನೆಯಡಿಯಲ್ಲಿ, ಅಗ್ನಿವೀರರನ್ನು ನಾಲ್ಕು ವರ್ಷಗಳ ಅವಧಿಗೆ ವಿವಿಧ ಸೇನಾ ಪಡೆಗಳಲ್ಲಿ ಸಂಬಂಧಿತ ಸೇವಾ ಕಾಯಿದೆಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ.
- ಈ ಮೂಲಕ ಸಶಸ್ತ್ರ ಪಡೆಗಳಲ್ಲಿ ಪ್ರಸಕ್ತ ಅಸ್ತಿತ್ವದಲ್ಲಿರುವ ಶ್ರೇಣಿಗಳಿಗಿಂತ ಭಿನ್ನವಾದ ಒಂದು ವಿಶಿಷ್ಟ ಶ್ರೇಣಿಯನ್ನು ರೂಪಿಸಲಾಗುತ್ತದೆ. ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಅಗ್ನಿವೀರರಿಗೆ ಆ ಸಂದರ್ಭದಲ್ಲಿನ ಸಾಂಸ್ಥಿಕ ಅಗತ್ಯತೆಗಳು ಮತ್ತು ಕಾಲಕಾಲಕ್ಕೆ ಸಶಸ್ತ್ರ ಪಡೆಗಳು ಪ್ರಕಟಿಸಿದ ನೀತಿಗಳ ಆಧಾರದ ಮೇಲೆ ಆ ಪಡೆಗಳಲ್ಲಿ ಶಾಶ್ವತ ದಾಖಲಾತಿಗಾಗಿ ಅರ್ಜಿಸಲ್ಲಿಸಲು ಅವಕಾಶ ನೀಡಲಾಗುತ್ತದೆ.
- ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ತೋರಿಸಿದ ಕಾರ್ಯಕ್ಷಮತೆ ಮತ್ತು ವಸ್ತುನಿಷ್ಠ ಮಾನದಂಡಗಳ ಆಧಾರದ ಮೇಲೆ ಕೇಂದ್ರೀಕೃತ ರೀತಿಯಲ್ಲಿ ಅಗ್ನಿವೀರರ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ಪ್ರತಿ ನಿರ್ದಿಷ್ಟ ತಂಡದಿಂದ ಶೇ ೨೫ ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳ ನಿಯಮಿತ ಕೇಡರ್ ದಾಖಲಿಸಲಾಗುತ್ತದೆ.
- ಆಯ್ಕೆಯು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ವ್ಯಾಪ್ತಿಯಾಗಿದ್ದು, ಈ ವರ್ಷ ೪೬.೦೦೦ ಅಗ್ನಿವೀರರನ್ನು ನೇಮಿಸಿಕೊಳ್ಳಲಾಗುವುದು.
- ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಗಳು ಮತ್ತು ಸಂಸ್ಥೆಗಳಾದ ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನಿಂದ ವಿಶೇಷ ರ್ಯಾಲಿಗಳು ಮತ್ತು ಕ್ಯಾಂಪಸ್ ಸಂದರ್ಶನಗಳೊಂದಿಗೆ ಎಲ್ಲಾ ಮೂರು ಸೇವೆಗಳಿಗೆ ಅನ್ ಲೈನ್ ಮೂಲಕ ನೋಂದಣಿ ಕೈಗೊಳ್ಳಲಾಗುತ್ತದೆ.
- ದಾಖಲಾತಿಯು ʼಆಲ್ ಇಂಡಿಯಾ ಆಲ್ ಕ್ಲಾಸ್ʼ (ಸಂಪೂರ್ಣ ಭಾರತದ ಸಮಗ್ರ ವರ್ಗಗಳು ತತ್ವದ) ಆಧಾರದ ಮೇಲೆ, ಅಂದರೆ ಯಾವುದೇ ಜಾತಿ, ಧರ್ಮ, ಮತ, ಲಿಂಗ, ವರ್ಗಗಳ ಬೇಧವಿಲ್ಲದೇ ನಡೆಯುತ್ತದೆ. ಈ ಹುದ್ದೇಗೆ ಅರ್ಹ ವಯಸ್ಸು ೧೭ ವರ್ಷ ೬ ತಂಗಳಿನಿಂದ ೨೧ ವರ್ಷಗಳ ವ್ಯಾಪ್ತಿಯಲ್ಲಿರುತ್ತದೆ.
- ಕಳೆದ ಎರಡು ವರ್ಷಗಳಲ್ಲಿ ಸೇನಾ ನೇಮಕಾತಿ ಕೈಗೊಳ್ಳಲು ಸಾಧ್ಯವಾಗಿಲ್ಲದ ಕಾರಣ ಉದ್ದೇಶಿತ ನೇಮಕಾತಿಗೆ ಒಂದು ಬಾರಿ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಆ ಪ್ರಕಾರ, ೨೦೨೨ ಕ್ಕೆ ಅಗ್ನಿಪಥ ಯೋಜನೆಗೆ ನೇಮಕಾತಿ ಪ್ರಕ್ರಿಯೆಗೆ ಗರಿಷ್ಠ ವಯಸ್ಸಿನ ಮಿತಿಯನ್ನು ೨೩ ವರ್ಷಗಳಿಗೆ ಹೆಚ್ಚಿಸಲಾಗುತ್ತದೆ.
- ೬ ತಿಂಗಳ ಕಾಲದ ತರಬೇತಿ ನೀಡಿದ ಬಳಿಕ ಮೂರುವರೆ ವರ್ಷಗಳ ಕಾಲ ಸೇವೆಗೆ ನಿಯೋಜಿಸಲಾಗುತ್ತದೆ.
- ಅಗ್ನಿವೀರರನ್ನು ಆಯಾ ವಿಭಾಗಗಳಿಗೆ ಅನ್ವಯವಾಗುವಂತೆ ಸಶಸ್ತ್ರ ಪಡೆಗಳಲ್ಲಿ ದಾಖಲಾತಿಗಾಗಿ ನಿಗದಿಪಡಿಸಿದ ವೈದ್ಯಕೀಯ ಅರ್ಹತೆಯ ಷರತ್ತುಗಳನ್ನು ಪೊರೈಸಬೇಕು.
ಶೈಕ್ಷಣಿಕ ಅರ್ಹತೆ
- ವಿವಿಧ ವಿಭಾಗಗಳಲ್ಲಿ ಪ್ರಸಕ್ತ ಚಾಲ್ತಿಯಲ್ಲಿರುವ ಕನಿಷ್ಟ ಶೈಕ್ಷಣಿಕ ಅರ್ಹತೆಗಳನ್ನೇ ಅಗ್ನಿವೀರರ ದಾಖಲಾತಿಗಾಗಿ ಪರಿಗಣಿಸಲಾಗುತ್ತದೆ.
- ಉದಾ: ಸಾಮಾನ್ಯ ಸೇವಾ(ಜಿಡಿ) ಸೈನಿಕನಿಗೆ ವಿದ್ಯಾರ್ಹತೆ ೧೦ನೇ ತರಗತಿ ಇದ್ದು ಇಲ್ಲೂ ಹಾಗೆಯೇ ಮುಂದುವರಿಯುತ್ತದೆ.
ಅಗ್ನಿವೀರರು
- ಈ ಯೋಜನೆಯ ಅಡಿಯಲ್ಲಿ ಸಂಬಂಧಿತ ಸೇವಾ ಕಾಯಿದೆಗಳ ಅಡಿಯಲ್ಲಿ ಸೇರಿಕೊಳ್ಳುವ ಯುವಪಡೆಗಳನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ.
- ಅಗ್ನಿವೀರರಿಗೆ ಮೂರುಸೇವೆಗಳಲ್ಲಿ ಅನ್ವಯವಾಗುವಂತೆ, ವಿವಿಧ ಇತರ ಭತ್ಯೆಗಳೊಂದಿಗೆ ನಿಗದಿಪಡಿಸಿದ ಮಾನಸಿಕ ಪ್ಯಾಕೇಜ್ ನ ವೇತನ ನೀಡಲಾಗುತ್ತದೆ.
- ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಂಡ ನಂತರ ಅಗ್ನಿವೀರರಿಗೆ ಒಂದು ಬಾರಿ ʼಸೇವಾನಿಧಿʼ ಪ್ಯಾಕೇಜ್ ಪಾವತಿಸಲಾಗುವುದು.
- ಈ ʼಸೇವಾ ನಿಧಿʼ ಯು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ. ಆದರೆ ಇವರಿಗೆ ಗ್ರಾಚ್ಯುಟಿ ಮತ್ತು ಪಿಂಗಣಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಅರ್ಹತೆ ಇರುವುದಿಲ್ಲ. ಅಗ್ನಿವೀರರಿಗೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅವರ ಸೇವಾ ಅವಧಿಯಲ್ಲಿರುವವರೆಗೆ ೪೮ರೂ ಲಕ್ಷ ಮೊತ್ತದ ಉಚಿತ ಜೀವ ವಿಮಾ ರಕ್ಷಣೆ ಒದಗಿಸಲಾಗುತ್ತದೆ.
- ರಾಷ್ಟ್ರ ಸೇವೆಯ ಈ ಅವಧಿಯಲ್ಲಿ ಅಗ್ನಿವೀರರು ಮಿಲಿಟರಿ ಕೌಶಲ್ಯಗಳಾದ ಶಿಸ್ತು, ದೈಹಿಕ ಸಾಮರ್ಥ, ನಾಯಕತ್ವದ ಗುಣಗಳು, ಧೈರ್ಯ ಮತ್ತು ದೇಶಭಕ್ತಿ ಮುಂತಾದ ಮೌಲ್ಯಗಳ ಸಮರ್ಥ ತರಬೇತಿ ಪಡೆದಿರುತ್ತಾರೆ.
- ನಾಲ್ಕು ವರ್ಷಗಳ ಈ ಅವಧಿಯ ಬಳಿಕ ಅಗ್ನಿವೀರರು ನಾಗರಿಕ ಸಮಾಜಕ್ಕೆ ಮರಳಬೇಕಿರುತ್ತದೆ ಮತ್ತು ಅಲ್ಲಿ ಪಡೆದ ತರಬೇತಿಯ ಫಲವಾಗಿ ಅವರು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಗೆ ಅಪಾರ ಕೊಡುಗೆಗಳನ್ನು ನೀಡುವ ಅವಕಾಶವಿರುತ್ತದೆ.
FAQ
ಅಗ್ನಿಪಥ ಯೋಜನೆಯು ಎಷ್ಟದ ಯುವಕರನ್ನು ಸೇನೆಗೆ ಸೇರಲು ಅವಕಾಶ ನೀಡುತ್ತದೆ?
17.5ಯಿಂದ 23ರ ವರ್ಷದ ಯುವಕರನ್ನ ಸೇನೆಗೆ ಸೇರಲು ಅವಕಾಶ ನೀಡುತ್ತದೆ.
ಅಗ್ನಿಪಥ ಯೋಜನೆ ಅಡಿ ನೇಮಕವಾದವರಿಗೆ ಎಷ್ಟು ವರ್ಷ ಸೇವೆ ಸಲ್ಲಿಸಿದ ನಂತರ ಅಗ್ನಿವೀರರನ್ನ ವಾಪಸ್ ಸಮಾಜಕ್ಕೆ ಕಳುಹಿಸಲಾಗುತ್ತದೆ?
ನಾಲ್ಕು ವರ್ಷ.
ಅಗ್ನಿಪಥ ಯೋಜನೆಯಡಿ ನೇಮಕವಾದವರಿಗೆ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಶೇಕಾಡ ಎಷ್ಟರಷ್ಟು ಅಗ್ನಿವೀರರು ವಾಪಸ್ ಕಳುಹಿಸಲಾಗುತ್ತದೆ?
75%
ಇತರೆ ಪ್ರಬಂಧಗಳು:
ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ