ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ, ahara mattu arogya prabandha in kannada, ಆಹಾರ ಮತ್ತು ಆರೋಗ್ಯ ಪ್ರಬಂಧ ಕನ್ನಡ, ahara mattu arogya essay in kannada

ಈ ಲೇಖನಿಯಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ, ಸ್ನೇಹಿತರೆ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

ಆಹಾರ ಮತ್ತು ಆರೋಗ್ಯ ಪ್ರಬಂಧ
ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ:

ಪೀಠಕೆ:

ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿ ಇದೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸುಗಿಂತ ಬೇರೆ ಭಾಗ್ಯವಿಲ್ಲ, ಆರೋಗ್ಯದ ಗುಟ್ಟು ಆಹಾರದಲ್ಲಿ ಇದೆ, ಸಮತೋಲನ ಆಹಾರವು ಮನುಷ್ಯನ ಆಯುಸ್ಸುನ್ನು ಸಹಜವಾಗಿ ವೃದ್ದಿಸುತ್ತದೆ.

ವಿಷಯ ವಿವರಣೆ:

ಮನುಷ್ಯನ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅದು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ. ಮನುಷ್ಯನ ಸ್ಮರಣಶಕ್ತಿ, ಆಲೋಚನೆ, ಸಹಜ ನಡವಳಿಕೆ ಸ್ವಾಭಾವಗಳಿದ್ದರೆ ಅದು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯಗಳನ್ನು ಹೊಂದಿರುವವನೇ ಆರೋಗ್ಯವಂತ. ಇವನು ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ.

ಆರೋಗ್ಯವೆಂದರೆ ಕೇವಲ ರೋಗರಹಿತ ಅಥವಾ ದೈಹಿಕ ನ್ಯೂನತೆ ಗಳಿಲ್ಲದ ಸ್ಥಿತಿಯಲ್ಲ. ಇದು ಬೌತಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ. ದೇಹವನ್ನು ಕಟ್ಟುವ ಕೆಲಸವನ್ನು ಪ್ರೋಟೀನ್‌ ಮತ್ತು ಕ್ಯಾಲ್ಸಿಯಂ ಮಾಡುತ್ತದೆ. ಶಕ್ತಿಯನ್ನು ನೀಡುವ ಕೆಲಸವನು ಶರ್ಕರಪಿಷ್ಟ,ಕೊಬ್ಬು ಮತ್ತು ಪ್ರೋಟೀನ್‌ ಮಾಡುತ್ತದೆ.

ದೇಹದ ಬೆಳವಣಿಗೆಗೆ ಪ್ರಚೋದಿಸುವ ಕೆಲಸವನ್ನು ಜೀವಸತ್ವ ಮತ್ತು ಖನಿಜಗಳು ಮಾಡುತ್ತವೆ. ಪ್ರೋಟೀನ್ ಗಳು ಸಸ್ಯಹಾರಗಳನ್ನು ಸೇವಿಸುವುದರ ಮೂಲಕ ಪಡೆಯಬಹುದು, ಹಾಗೆ ಪ್ರಾಣಿಜನ್ಯ ವಸ್ತುಗಳಿದಂದಲೂ ಪಡೆಯಬಹುದು. ಮಾಂಸ, ಮೀನು, ಹಾಲು, ಮೊಟ್ಟೆ, ದ್ವಿದಳ ಧಾನ್ಯ ಅವುಗಳಲ್ಲಿ ಬೇರೆ ಬೇರೆ ರೀತಿಯ ಪ್ರೋಟೀನಗಳು ಇರುತ್ತದೆ.

ನಮ್ಮ ದೇಹಕ್ಕೆ ಪ್ರಾಣಿಜನ್ಯ ವಸ್ತುಗಳಿಂದ ಮೀನು, ಮಾಂಸ, ಮೊಟ್ಟೆ, ಹಾಲು, ಬೆಣ್ಣೆ, ಗಿಣ್ಣು, ಇವುಗಳು ಪ್ರಾಣಿಜನ್ಯ ಕೊಬ್ಬಿನ ಮೂಲ. ಹಾಗೆ ಸಸ್ಯಜನ್ಯ ವಸ್ತುಗಳು ತೆಂಗಿನಕಾಯಿ, ನೆಲಗಡಲೆ, ಕೊಬ್ಬರಿ, ಎಳ್ಳು, ಇವುಗಳಿಂದ ದೊರೆಯುವ ಎಣ್ಣೆ ಸಸ್ಯಜನ್ಯ ಕೊಬ್ಬಿನ ಮೂಲ.

ಉಪ್ಪುನೀರು, ಮೀನು, ಕಡಲ ಮೀನು, ಚಿಪ್ಪು ಮೀನುಗಳಲ್ಲಿ ಅಯೋಡಿನ್‌ ಇದೆ. ನಮ್ಮ ದೇಹವು ಆರೋಗ್ಯವಾಗಿರಲು ಒಣ ಹಣ್ಣುಗಳನ್ನು ಸೇವಿಸುವುದು ಇದರಿಂದ ಅವರ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆ ಜೊತೆಗೆ ಹಣ್ಣುಗಳನ್ನು ಸೇವಿಸುವುದು ಆರೋಗ್ಯವನ್ನು ಕಾಪಾಡುತ್ತದೆ.

ನಾವೆಲ್ಲರೂ ಜೀವಿಸಲು ಮತ್ತು ಬೆಳವಣಿಗೆಗೆ ಆಹಾರ ಬೇಕು.ಆಹಾರವು ನಮಗೆ ಚಲಿಸಲು ಮತ್ತು ಕೆಲಸ ಮಾಡಲು ಶಕ್ತಿಯನ್ನು ನೀಡುತ್ತದೆ. ಹಾಗೆ ಉತ್ತಮ ಆಹಾರವು ಆರೋಗ್ಯ ಸಮಸ್ಯೆಗಳನ್ನು ದೊರವಿರಿಸುತ್ತದೆ.

ನಾವು ನಮ್ಮ ಹೆಚ್ಚಿನ ಆಹಾರವನ್ನು ಪ್ರಾಣಿಗಳು ಮತ್ತು ಸಸ್ಯಗಳಿಂದ ಪಡೆಯುತ್ತೇವೆ. ಅಕ್ಕಿ ಮತ್ತು ಗೋಧಿ ನಾವು ತಿನ್ನುವ ಕೆಲವು ಮುಖ್ಯ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು ಬಹಳಷ್ಟು ಅಗತ್ಯವಾಗಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಆಹಾರದಲ್ಲಿ ಸಾರಿಯಾದ ಪೋಷಕಾಂಶಗಳು ಇರುವುದು ಬಹಳ ಮುಖ್ಯ. ನಮ್ಮ ದೇಹಕ್ಕೆ ಅನುಕೂಲವಾಗುವಂತೆ ಆಹಾರ ಸೇವಿಸುವುದು ಉತ್ತಮ, ನಮ್ಮ ಆಹಾರ ಮತ್ತು ಆರೋಗ್ಯ ಬಹಳ ಮುಖ್ಯ

ನಮ್ಮ ದೇಹಕ್ಕೆ ಆಹಾರ ಬಹಳ ಮುಖ್ಯ ಹಾಗೆ ಉತ್ತಮ ಆಹಾರವು ಬಹಳ ಮುಖ್ಯ ಆರೋಗ್ಯ ಜೀವನ ನೆಡೆಸಲು ಇದು ಮುಖ್ಯವಾಗಿರುತ್ತದೆ. ಮತ್ತು ಆರೋಗ್ಯವೇ ಭಾಗ್ಯ.

ಉಪಸಂಹಾರ:

ಈ ಮೂಲಕ ತಿಳಿಯುವುದೆನೆಂದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ನಾವೆಲ್ಲರೂ ಜೀವಿಸಲು ಮತ್ತು ಬೆಳವಣೆಗೆಗೆ ಆಹಾರಬೇಕು ಉತ್ತಮ ಆಹಾರವು ಆರೋಗ್ಯ ಸಮಸ್ಯೆಗಳನ್ನು ದೊರವಿರಿಸುತ್ತದೆ. ಕಲಿಯುಗದಲ್ಲಿ ಅಧುನಿಕತೆಯ ಸೊಗಿನಲ್ಲಿ ಅತೀ ರಾಸಾಯನಿಕ ಪದ್ದಾರ್ಥಗಳನ್ನು ತೆಗೆದುಕೊಳ್ಳತ್ತಿದ್ದೇವೆ. ಇದರ ಬದಲು ನೈಸರ್ಗಿಕವಾಗಿ ಬೆಳೆಯುವ ಹಾಗು ದೊರಕುವ ಆಹಾರಗಳನು ತಿಂದು ಆರೋಗ್ಯದ ಜೊತೆಗೆ ಪರಿಸರವನ್ನು ಕಾಪಾಡಿಕೊಳ್ಳಬಹುದು.

FAQ

ಆಹಾರ ಧಾನ್ಯಗಳ ಹೆಸರು?

ಅಕ್ಕಿ, ರಾಗಿ,ಜೋಳ, ಇವುಗಳು ಆಹಾರ ಧಾನ್ಯಗಳು

ದ್ವಿದಳ ಧಾನ್ಯಗಳು ಎಂದರೇನು?

ದ್ವಿದಳ ಧಾನ್ಯಗಳು ಎಂದರೆ ಬೇಳೆಕಾಳುಗಳು ದೈನಂದಿನವೂ ಉಪಯೋಗಿಸುವ ತೊಗರಿ ಉದ್ದು ಹೆಸರು ಕಡಲೆಬೆಳೆ ಕಡಲೆಕಾಯಿ ಇದೇ ಮೊದಲಾದವನ್ನು ದ್ವಿದಳ ಧಾನ್ಯಗಳೆನ್ನುವರು.

ಏಕವಾರ್ಷಿಕ ಸಸ್ಯಗಳು ಎಂದರೇನು?

ತಮ್ಮ ಇಡೀ ಜೀವನ ಶಕ್ತಿಯನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸುತ್ತವೆ ಇವುಗಳನ್ನು ಏಕವಾರ್ಷಿಕ ಸಸ್ಯಗಳು ಎನ್ನುತ್ತಾರೆ.

ಇತರೆ ಪ್ರಬಂಧಗಳು:

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಸಾವಯವ ಕೃಷಿ ಪ್ರಬಂಧ | savayava krishi prabandha in kannada

ನನ್ನ ಕನಸಿನ ಭಾರತ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

Leave a Comment