ಆರೋಗ್ಯಕ್ಕೆ ಸಂಬಂಧಿಸಿದ ಗಾದೆ ಮಾತುಗಳು, ಆರೋಗ್ಯವೇ ಭಾಗ್ಯ ಗಾದೆ ಮಾತಿನ ಅರ್ಥ ವಿವರಣೆ, arogyave bhagya gade mathu vistarane in kannada information
ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

ಹಣ ಆಸ್ತಿ ಮಾಡಿದ ಎಷ್ಟೋ ಜನರು ಅನ್ನ ತಿನ್ನಲಾಗದೇ ಪರಿತಪಿಸುತ್ತಿದ್ದಾರೆ, ಕಾರಣ ಭಾಗ್ಯ ಇಲ್ಲದಿರುವುದು ಆಹಾರದಲ್ಲಿ ಸಮತೋಲನವನ್ನು ಕಾಪಾಡದೇ ಇರುವುದು. ಎಲ್ಲರೂ ಆರೋಗ್ಯ ಚೆನ್ನಾಗಿಡಬೇಕೆಂದು ಹಾತೊರೆಯುತ್ತಾರೆ.ಋಷಿಮುನಿಗಳು ಅನಾದಿಕಾಲದಿಂದಲೂ ಮಿತಆಹಾರ ಹಾಗೂ ಉಪವಾಸದ ಪ್ರಾಮುಖ್ಯತೆಯನ್ನು ಸಾರಿದ್ದಾರೆ. ಇದು ಇಂದು ವೈಜ್ಞಾನಿಕವಾಗಿಯೂ ಸಾಬೀತಾಗಿರುವುದು ನಮ್ಮ ಮಿತ, ವ್ಯವಸ್ಥಿತ ಆಹಾರ ಪದ್ಧತಿ ಸೂಚಿಸುತ್ತದೆ ಹಾಗಾಗಿ ಸತ್ಯದ ಅರಿವಿನಿಂದಾಗಿ ಉತ್ತಮ ಆಚರಣೆಗಳೊಂದಿಗೆ ಮೂಢನಂಬಿಕೆಗಳಿಂದ ವಿಮುಕ್ತರಾಗಿ ಸ್ವಸ್ಥ ಹಾಗೂ ಶುದ್ಧ ಆರೋಗ್ಯದ ಪ್ರಾಮುಖ್ಯತೆಯನ್ನು ಅರಿತು ಬಾಳಬೇಕು..ಇದು ಪ್ರಕೃತಿ ಮಾತೆಯ ವರಪ್ರಸಾದದಿಂದ ಸಾಧ್ಯವಾಗುತ್ತದೆ. ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಹಣ ಸಂಪಾದಿಸುವ ಭರದಲ್ಲಿ ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಒತ್ತಡದ ಮಧ್ಯೆ ಕೆಲಸ ಮಾಡುವಾಗ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು. ಇಂದಿನ ನಮ್ಮ ಒತ್ತಡದ ಬದುಕಿನಲ್ಲಿ ನಮ್ಮ ಆರೋಗ್ಯ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯವೆನ್ನುವ ಭಾಗ್ಯವಿದ್ದಾಗ ಮಾತ್ರ ನಾವು ಭೂಮಿಯಲ್ಲಿ ಜನ್ಮ ತಾಳಿದ್ದಕ್ಕೆ ಬದುಕು ಸಾರ್ಥಕ
ಇತರೆ ವಿಷಯಗಳು:
ಸೋಲು ಗೆಲುವಿನ ಸೋಪಾನ ಗಾದೆ ಮಾತು ವಿವರಣೆ