Sign Up

Sign Up to our social questions and Answers Engine to ask questions, answer people’s questions, and connect with other people.

Sign In

Login to our social questions & Answers Engine to ask questions answer people’s questions & connect with other people.

Forgot Password

Lost your password? Please enter your email address. You will receive a link and will create a new password via email.

You must login to ask a question.

Please briefly explain why you feel this question should be reported.

Please briefly explain why you feel this answer should be reported.

Please briefly explain why you feel this user should be reported.

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ, Ativrushti Anavrushti essay in Kannada, ativrushti anavrushti prabandha in kannaḑa

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

ಈ ಲೇಖನಿಯ ಮೂಲಕ ಅತಿವೃಷ್ಟಿ ಅನಾವೃಷ್ಟಿಯ ಸಂಪೂರ್ಣ ಮಾಹಿತಿ ನೀಡಿದೇವೆ, ಸ್ನೇಹಿತರೆ ನಿಮಗೆ ಉಚಿತವಾಗಿ ಮಾಹಿತಿ ನೀಡಿದ್ದೇವೆ.

ಪೀಠಿಕೆ:

ಅತಿವೃಷ್ಟಿ ಅನಾವೃಷ್ಟಿ ನಾವುವಾಸಿಸುವ ಭೂಮಿ,ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವನ್ನು ಎಂದು ಕರೆಯುತ್ತಾರೆ,ಸಾಗರ, ನದಿ, ಅರಣ್ಯ, ಬೆಟ್ಟಗುಡ್ಡ, ಪರ್ವತ ಮುಂತಾದವು ಸಹಜ ಪರಿಸರವಾಗಿದೆ.ಕೃಷಿ ಭೂಮಿ, ಕೈಗಾರಿಕೆ, ಅಣೆಕಟ್ಟು, ನಗರಗಳು, ಕಾಲುವೆಗಳು ಇತ್ಯಾದಿ ಮಾನವ ನಿರ್ಮಿತ ಪರಿಸರವಾಗಿದೆ. ಪರಿಸರವಿಲ್ಲದೇ ಮಾನವ ಬದುಕಲು ಸಾಧ್ಯವಿಲ್ಲ.

ವಿಷಯ ವಿವರಣೆ:

ಮನುಷ್ಯ ಸ್ವಾರ್ಥಕ್ಕಾಗಿ ಸುಖಕ್ಕಾಗಿ ಪರಿಸರವನ್ನು ದುರ್ಬಳಕೆ ಮಾಡುತ್ತಿದ್ದಾನೆ, ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಅತಿವೃಷ್ಟಿ ಅನಾವೃಷ್ಟಿ ಹವಮಾನದ ಏರುಪೇರುಯಾಗಿದಲ್ಲಿ ಬೀಕರವಾದ ಮಳೆ ಬರುವುದು, ಇದರಿಂದ ಪ್ರಕೃತಿ ಭಾರೀ ಮಳೆಯು ಅತ್ಯಂತ ತೀವ್ರವಾದ ಬಿರುಗಾಳಿಗಳನ್ನು ತರುತ್ತದೆ. ಗುಡುಗು, ಮಳೆಗಳು ಬಹಳ ಜೋರಾಗಿ ಮಳೆ ಪ್ರಾರಂಭವಾಗುತ್ತದೆ. ಈ ಚಂಡಮಾರುತಕ್ಕೆ ಹಲವು ಗ್ರಾಮಗಳು ನಾಶವಾಗಿದೆ. ಅತಿವೃಷ್ಟಿ ಮತ್ತು ಮಳೆಯಿಂದ ಅನೇಕ ಹಳ್ಳಿಗಳು ಹಾಳಾಗಿವೆ. ಅತಿವೃಷ್ಟಿಯಿಂದ ಅದೆಷ್ಟೋ ಜನ ಹಾಳಾದಿದ್ದಾರೆ.

ಅತಿವೃಷ್ಟಿಯಿಂದ ಮನೆಗಳು ನಾಶವಾಗಿದೆ. ಭಾರೀ ಮಳೆಯಿಂದಾಗಿ ಎಲ್ಲ ಸಂಪರ್ಕವೂ ಸ್ಥಗಿತಗೊಂಡಿದೆ. ಅತಿವೃಷ್ಟಿಯಿಂದ ತುಂಬ ಜನ ನಾಶವಾಗುತ್ತಾರೆ.ಭಾರಿ ಮಳೆಗೆ ತೀವ್ರವಾದ ಬಿರುಗಾಳಿಗಳ ಹಿಡಿತದಲ್ಲಿ ಅನೇಕ ಜನರು ಸಾಯುತ್ತಾರೆ. ಹಾಗೆ ಬೆಳೆಗಳು ನಾಶವಾಗುತ್ತಿದೆ. ತೀವ್ರವಾದ ಮಳೆಯಿಂದ ಹಸುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಪ್ರಕೃತಿಯಲ್ಲಿ ಅಸಮತೋಲನ ಹೆಚ್ಚಾಗುತ್ತದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಜನರಿಗೆ ತಿನ್ನಲು ಆಹಾರವಿಲ್ಲದೆ ಅಲ್ಲಿ, ಇಲ್ಲಿ ಅಲೇದಾಡುತ್ತಿದ್ದಾರೆ. ಅತಿವೃಷ್ಟಿ ತಪ್ಪಿಸಲು ಹವಾಮಾನ ಇಲಾಖೆಗಳನ್ನು ತಪಿಸುವುದು, ಹಾಗೂ ಹೆಚ್ಚಿನ ಮಳೆಯ ಸಾಧ್ಯತೆ ಇದ್ದಾಗ ಹವಾಮಾನ ಇಲಾಖೆ ಮಾಹಿತಿ ನೀಡುವುದು.ಹಾಗೆ ಅಲ್ಲಿಂದ ಜನರನ್ನು ಸ್ಥಳಾಂತರಿಸುವುದು. ಸರ್ಕಾರದಿಂದ ಜನರಿಗೆ ಊಟದ ವ್ಯವಸ್ಥೆ ಮಾಡುವುದು.

ಇತ್ತೀಚಿಗೆ ಕರ್ನಾಟಕದ ರಾಯಚೂರು, ವಿಜಾಪುರ, ಗುಲ್ಬರ್ಗ, ಜಿಲ್ಲೆಗಳಲ್ಲಿ ಅಕಾಲದಲ್ಲಿ ಅತಿವೃಷ್ಟಿ ಉಂಟಾಗಿ, ಆ ಭಾಗದಲ್ಲಿ ಎಂದೂ ಬೀಳದಷ್ಟು ಮಳೆ ಸುರಿಯಿತು. ಊರುಊರುಗಳೇ ಪ್ರವಾಹದಲ್ಲಿ ಮುಳುಗಿದವು. ಜಲಪ್ರಳಯವೇ ಅಯಿತು. ಸಾವಿರಾರು ಮನೆಗಳು ನಾಶವಾದವು. ಜನ-ಜಾನುವಾರುಗಳು ಪ್ರವಾಹದಲ್ಲಿ ಸಿಲುಕಿ ಪ್ರಾಣಕಳೆದುಕೊಂಡರು. ಬೆಳೆದ ಬೆಳೆಗಳು ನಾಶವಾದವು.

ಬಹಳ ಜನರಿಗೆ ನಿಲ್ಲಲು ನೆಲೆ ಇಲ್ಲದೆ, ತಿನ್ನಲು ಆಹಾರವಿಲ್ಲದೆ, ಜನರನ್ನು ಹೆಲಿಕ್ಯಾಪ್ಟರ್‌, ದೋಣಿಗಳನ್ನು ಬಳಸಿ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದರು. ಇನ್ನು ಕೆಲವರಿಗೆ ಆಹಾರವನ್ನು ಅವರ ಸ್ಥಳಗಳಿಗೆ ಹೆಲಿಕ್ಯಾಪ್ಟರ್‌ ಬಳಸಿ ಆಹಾರ ನೀಡಲಾಯಿತು. ಇಂತಹ ಪರಿಸ್ಥಿತಿ ಬಂದು ಜನರ ಜೀವನ ಕಷ್ಟದ ಪರಿಸ್ಥಿತಿಗೆ ಬಂದಿದೆ.

ಭಾರತದಲ್ಲಿ ಪ್ರವಾಹವನ್ನು ತಪ್ಪಿಸಲು ಸರ್ಕಾರವು ಬೃಹತ್‌ ಅನೆಕಟ್ಟುಗಳನ್ನು ನಿರ್ಮಿಸಿದೆ. ಇದರಿಂದ ಸ್ವಲ್ಪ ಪ್ರವಾಹದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಪ್ರವಾಹದ ಪರಿಸ್ಥಿತಿ ಉಂಟಾದಗ ನೀರನ್ನು ಸಮುದ್ರಕ್ಕೆ ಬೀಡಲಾಗುತ್ತದೆ. ಹೆಚ್ಚು ಮಳೆಯಾದಗ ಆ ಸ್ಥಳದ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪುವಂತೆ ವ್ಯವಸ್ಥೆ ಮಾಡುವುದು.

ಇಂತಹ ಪರಿಸ್ಥಿತಿಯಲ್ಲಿ ದೇಶದ ಮೂಲೆ ಮೂಲೆಗಳಿಂದ ಪರಿಹಾರ ನಿಧಿಯಾದ ಹಣದ ಸಂಗ್ರಹಣೆ ಮಾಡುವುದು. ಕಷ್ಟದ ಪರಿಸ್ಥಿತಿಯಿಂದ ಹೊರಗೆ ಬರಲು ವಿದೇಶಗಳು ಕೂಡ ಸಹಕಾರವನ್ನು ನೀಡಿದೆ.

ಉಪಸಂಹಾರ:

ಈ ಮೂಲಕ ತಿಳಿಯುವುದೆನೇಂದರೆ ಅತಿವೃಷ್ಟಿ ಅನಾವೃಷ್ಟಿಯಿಂದ ದೇಶದಲ್ಲಿ ಹಲಾವಾರು ಸಮಸ್ಯೆಗಳನ್ನು ಎದುರಿಸಿದೆ. ಪ್ರಕೃತಿಯಲ್ಲಿ ಅತಿವೃಷ್ಟಿಯಿಂದ ಮಳೆಯು ಹೆಚ್ಚಾಗಿ ಜನರ ಜೀವನ ಕಷ್ಟದ ಪರಿಸ್ಥಿತಿಗೆ ತಲುಪಿದೆ. ಮನೆ, ಜಾನುವಾರು, ಎಲ್ಲವು ನಾಶವಾಗಿದೆ, ಅತಿವೃಷ್ಟಿ ಹೆಚ್ಚಾಗದಂತೆ ಜಾಗೃತಿ ಮಾಡಿಸುವುದು.

Ativrushti Anavrushti essay in Kannada quotation and answer

FAQ

ಅತಿವೃಷ್ಟಿ ಎಂದರೇನು?

ಅತಿವೃಷ್ಟಿ ಅರ್ಥ ಅತಿಯಾದ ಹಾನಿಕಾರ ಮಳೆ,ಜೀವಸಂಕುಲವನ್ನೆ ನಾಶಮಾಡುವುದು ಅತಿವೃಷ್ಟಿ.

ಅತಿವೃಷ್ಟಿ ವಿರುದ್ಧ ಪದ?

ಅತಿವೃಷ್ಟಿ ವಿರುದ್ದ ಪದ ಅನಾವೃಷ್ಟಿ

ಅನಾವೃಷ್ಟಿ ಎಂದರೇನು?

ಬೀಳಾಬೇಕಾದಷ್ಟು ಮಳೆ ಬಾರದಿರುವುದು ಬರಗಾಲ ಉಂಟು ಮಾಡುತ್ತದೆ ಇದು ಅನಾವೃಷ್ಟಿ.

ಇತರೆ ಪ್ರಬಂಧಗಳು:

ನನ್ನ ಕನಸಿನ ಭಾರತ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

Related Posts

Leave a comment

close