ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು, Bhoomi Hunnime Festival Wishes in Kannada, bhoomi hunnime habbada shubhashayagalu in kannada, bhoomi hunnime festival in kannada
ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ಈ ಲೇಖನಿಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯವನ್ನು ಎಲ್ಲರಿಗೂ ತಿಳಿಸಿದ್ದೇವೆ. ಹಾಗೂ ನಾಡಿನ ಸಮಸ್ತ ಜನತೆಗೆ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು
Bhoomi Hunnime Habbada Shubhashayagalu
ರಾಜರ ಕಾಲದಿಂದಲೂ ನಡೆದು ಬಂದಿರುವ ‘ನಿಸರ್ಗ’ ಪೂಜೆಗೆ ಅತ್ಯುತ್ತಮ ಉದಾಹರಣೆಯಂತಿರುವ ಹಬ್ಬ ಅಂದ್ರೆ, ಅದು ‘ಭೂಮಿ ಹುಣ್ಣಿಮೆ’ ಹಬ್ಬ. ಈ ಹಬ್ಬವನ್ನು ಮಲೆನಾಡಿನ ಎಲ್ಲಾ ಗ್ರಾಮದಲ್ಲಿನ ರೈತರು ಅತ್ಯಂತ ಸಂಭ್ರಮದಿಂದ ಅಚರಿಸುತ್ತಾ ಬಂದಿದ್ದಾರೆ.
ಭೂಮಿ ಹುಣ್ಣಿಮೆ ಮಲೆನಾಡಿನ ಹಳ್ಳಿಗರಿಗೆ ವಿಶೇಷ ಹಬ್ಬ. ಅದರಲ್ಲೂ ಗದ್ದೆ, ತೋಟ ಹೊಂದಿರುವವರಿಗೆ ಈ ದಿನ ಹೊಸ ಸಡಗರ. ನಸುಕಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭವಾಗುತ್ತವೆ. ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತರುವ ರೈತರು ಅದನ್ನು ಬೇಯಿಸುತ್ತಾರೆ. ಇದರ ಮಿಶ್ರಣಕ್ಕೆ ‘ಚರಗ’ ಎನ್ನುತ್ತಾರೆ. ಈ ಮಿಶ್ರಣವನ್ನು ಗದ್ದೆಗೆ ಬಿತ್ತಿ ಒಳ್ಳೆಯ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತಾರೆ. ಈ ವಿಧಾನಗಳೆಲ್ಲ ಮುಗಿದ ಮೇಲೆ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸುತ್ತಾರೆ.
ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಭತ್ತ ಕೃಷಿಕರೇ ಹೆಚ್ಚು. ಅಂಡಗಿ, ಮಧುರವಳ್ಳಿ, ಕಂಡ್ರಾಜಿ, ಕಲಕರಡಿ, ಹೆಬ್ಬತ್ತಿ, ಮಾಳಂಜಿ, ರಾಮಾಪುರ, ಗುಡ್ನಾಪುರ, ಬಿಸಲಕೊಪ್ಪ, ಮಳಲಗಾಂವ ಮೊದಲಾದ ಹಳ್ಳಿಗಳಲ್ಲಿ ರೈತರು ಹೊಲಕ್ಕೆ ಚರಗ ಬಿತ್ತಿದರು. ಗೋವೆಕಾಯಿ ಕಡಬು, ಕೊಸಂಬರಿ, ಮೊಸರನ್ನವನ್ನು ದೇವಿಗೆ ದೈವೇದ್ಯ ಮಾಡಿ, ಕುಟುಂಬ ಸಮೇತರಾಗಿ ವಿಶೇಷ ಭೋಜನ ಸವಿದರು.

ಗರ್ಭಿಣಿಯರಿಗೆ ಸೀಮಂತ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುವುದು. ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ಹಬ್ಬದ ಹಿಂದಿನ ದಿನ ಜಮೀನಿನ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತದೆ. ಕೆಲವರು ಬಾಳೆ ಗಿಡ ಮತ್ತು ಮಾವಿನ ಎಲೆಗಳನ್ನು ಬಳಸಿ ಮಂಟಪ ತಯಾರಿಸುತ್ತಾರೆ.ಅಲ್ಲದೇ ಮಣ್ಣಿನಲ್ಲಿ ಭೂ ತಾಯಿಯ ಮುಖವನ್ನು ತಯಾರು ಮಾಡಲಾಗುತ್ತದೆ. ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ತುಂಬಿದ ಗರ್ಭಿಣಿಗೆ ಯಾವ ರೀತಿ ಬಯಕೆ ಶಾಸ್ತ್ರ ಮಾಡಿ ಆಕೆಯ ಇಷ್ಟಾರ್ಥಗಳನ್ನು ಪೂರೈಸುತ್ತಾರೆಯೋ, ಅದೇ ರೀತಿಯಲ್ಲೇ ಈ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಜನಪದೀಯ ಆಚರಣೆಗಳು ಅತ್ಯಂತ ವೈಶಿಷ್ಟಪೂರ್ಣವಾಗಿವೆ. ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಗೊಣಬೆ, ಭತ್ತದ ಸಸಿ ಮಡಿ, ಬುಟ್ಟಿಯನ್ನು ಹೊತ್ತೊಯ್ಯುತ್ತಿರುವ ಚಿತ್ರ ಸೇರಿದಂತೆ ಹಲವು ಚಿತ್ರಗಳು ಚಿತ್ತಾರಗಳಾಗಿ ಮೂಡಿಬರುತ್ತವೆ. ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ಭೂಮಿ ಹುಣ್ಣಿಮೆಯ ಹಬ್ಬದಂದು ಭೂಮಿ ತಾಯಿ ಪ್ರಾರ್ಥನೆಯನ್ನು ಮಾಡುತ್ತಾರೆ ಬೆಳೆಯು ಚೆನ್ನಾಗಿ ಬರಬೇಕು ಎಂದು. ಎಲ್ಲರಿಗೂ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ಸಾಧಾರಣವಾಗಿ ಎಂತಹ ಸಂದರ್ಭದಲ್ಲಿಯೂ ತಾಳಿ ಸರವನ್ನು ಬಿಚ್ಚಲೊಪ್ಪದ ಗ್ರಾಮೀಣ ಮಹಿಳೆಯರು, ಭತ್ತದ ಪೈರಿಗೆ ತಮ್ಮ ತಾಳಿ ಸರವನ್ನು ಕಟ್ಟುವ ಸಲುವಾಗಿ ಬಿಚ್ಚಲು ಮುಂದಾಗುತ್ತಾರೆ. ಇದು ಭೂಮಿ ತಾಯಿಗೆ ನಮ್ಮ ಊರಿನ ರೈತರ ಮಹಿಳೆಯರು ಸಲ್ಲಿಸುವ ಒಂದು ವಿಶೇಷವಾದ ಗೌರವ. ಎಲ್ಲರಿಗೂ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು

ನಂತರ ಭತ್ತದ ಪೈರಿಗೆ ಪೂಜೆ ಸಲ್ಲಿಸಿದ ತರುವಾಯ ಆಹಾರದ ಎಡೆಯನ್ನು ಮಾಡಿ ಕಾಗೆಗೆ ನೀಡುತ್ತಾರೆ. ಭೂಮಿ ಹುಣ್ಣಿಮೆ ಹಬ್ಬದ ವೇಳೆಯಲ್ಲಿ ಇಲಿಗೂ ಒಂದು ಎಡೆ ನೀಡಿ ನಮ್ಮ ಬೆಳೆಗೆ ತೊಂದರೆ ಕೊಡಬೇಡ ಎಂದು ಪ್ರಾರ್ಥಿಸಲಾಗುತ್ತದೆ. ಪೂಜೆ ವೇಳೆಯಲ್ಲಿ ಒಂದು ಕಡುಬನ್ನು ಗದ್ದೆಯ ಕೆಲವು ಸಸಿಗಳನ್ನು ಕಿತ್ತು ಅದರ ಕೆಳಗೆ ಹುಗಿಯಲಾಗುತ್ತೆ. ಎಲ್ಲರಿಗೂ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು
ಇತರೆ ವಿಷಯಗಳು: