ಭೂಮಿ ಹುಣ್ಣಿಮೆ ಹಬ್ಬದ ಬಗ್ಗೆ ಮಾಹಿತಿ | Bhumi Hunnime Festival in Kannada

ಭೂಮಿ ಹುಣ್ಣಿಮೆ ಹಬ್ಬದ ಬಗ್ಗೆ ಮಾಹಿತಿ, Bhumi Hunnime Festival in Kannada, bhumi hunnime festival information in kannada, bhumi hunnime festival details in kannada

ಭೂಮಿ ಹುಣ್ಣಿಮೆ ಹಬ್ಬದ ಬಗ್ಗೆ ಮಾಹಿತಿ

Bhumi Hunnime Festival in Kannada

ಈ ಲೇಖನಿಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

Bhumi Hunnime Festival in Kannada

ನಾವು ಆಚರಿಸುವ ಅನೇಕ ಹಬ್ಬಗಳಿಗೆ ಭೂಮಿ ತಾಯಿ ಜೊತೆ ಸಂಬಂಧವಿರುತ್ತದೆ. ಬಹುತೇಕ ಹಬ್ಬಗಳಲ್ಲಿ ಒಂದಲ್ಲಾ ಒಂದು ವಿಧಾನದಲ್ಲಿ ಭೂಮಿಗೆ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಇಂದು ಅಂದ್ರೆ ಅಕ್ಟೋಬರ್ ತಿಂಗಳಲ್ಲಿ ಮಲ್ನಾಡ್ ಕಡೆ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ.

ಈ ಹಬ್ಬವನ್ನು ರಾಜರ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮಲ್ನಾಡ್‌ನ ಗ್ರಾಮಗಳಲ್ಲಿ ಈ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಗುವುದು. ಈ ದಿನ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಲಾಗುವುದು.

ಭೂಮಿ ಹುಣ್ಣಿಮೆಯು ಭೂಮಿ ತಾಯಿಯನ್ನು ಪೂಜಿಸುವ ಹಬ್ಬವಾಗಿದೆ, ವರ್ಷವಿಡೀ ಅಗೆಯುವ ಮತ್ತು ತೊಂದರೆಗೊಳಗಾದವರಿಗೆ ಕ್ಷಮಿಸಿ, ಅವಳಿಗೆ ಪ್ರಸಾದವನ್ನು ಅರ್ಪಿಸಿ ಮತ್ತು ಉತ್ತಮ ಫಸಲನ್ನು ಪ್ರಾರ್ಥಿಸಿ. ಪಾಶ್ಚಿಮಾತ್ಯ ಜನರಿಗೆ ಮತ್ತು ನಗರಗಳಲ್ಲಿನ ಜನರಿಗೆ ಇದು ಅರ್ಥಹೀನ ಆಚರಣೆಯಂತೆ ಕಾಣಿಸಬಹುದು. ಇದು ನೈಸರ್ಗಿಕ ವಿಷಯ ಮತ್ತು ಮಣ್ಣಿನೊಂದಿಗೆ ಸಂಪರ್ಕ ಹೊಂದಿದ ಜನರಿಗೆ ಅವರ ಸ್ವಂತ ವಿಸ್ತರಣೆಯಾಗಿದೆ. ತಾಯಿ ಭೂಮಿ ನಮಗೆ ಜನ್ಮ ನೀಡುತ್ತದೆ ಮತ್ತು ನಮ್ಮ ಜೀವನವನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸುತ್ತದೆ. ಅದಕ್ಕಾಗಿಯೇ ನಮ್ಮ ಹಳ್ಳಿಗಳಲ್ಲಿ ಭಾರತೀಯ ರೈತರು ಅವಳನ್ನು ತಾಯಿಯಂತೆ ಕಾಣುತ್ತಾರೆ. ಬೆಳೆಗಳು ಹೂ ಬಿಡುವ ಮತ್ತು ಧಾನ್ಯವನ್ನು ಉತ್ಪಾದಿಸುವ ಸಮಯ ಇದು. ಆದ್ದರಿಂದ ಜನರು ಭೂಮಿಯನ್ನು ಗರ್ಭಿಣಿ ಮಹಿಳೆ ಎಂದು ಪರಿಗಣಿಸುತ್ತಾರೆ. ಅವರು ಅವಳನ್ನು ಪೂಜಿಸುತ್ತಾರೆ ಮತ್ತು ಗರ್ಭಿಣಿ ಮಹಿಳೆಯ ಸಂದರ್ಭದಲ್ಲಿ ನಾವು ಮಾಡುವಂತೆ ಅನೇಕ ಭಕ್ಷ್ಯಗಳನ್ನು ಅರ್ಪಿಸುತ್ತಾರೆ. ಇಂತಹ ಕೆಲವು ಖಾದ್ಯಗಳನ್ನು ಮಣ್ಣಿನಲ್ಲಿ ಹುದುಗಿಸಿ ಮಣ್ಣಿನಲ್ಲಿ ಹರಡಿ ಗರ್ಭಿಣಿ ಭೂಮಿ ತಾಯಿಯ ಅನ್ನದ ಹಂಬಲವನ್ನು ನೀಗಿಸುತ್ತದೆ ಎಂಬ ನಂಬಿಕೆಯಿದೆ. 

ಹಬ್ಬದ ತಯಾರಿ

ಹಬ್ಬದ ಹಿಂದಿನ ದಿನ ಜಮೀನಿನ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತದೆ. ಕೆಲವರು ಬಾಳೆ ಗಿಡ ಮತ್ತು ಮಾವಿನ ಎಲೆಗಳನ್ನು ಬಳಸಿ ಮಂಟಪ ತಯಾರಿಸುತ್ತಾರೆ.ಅಲ್ಲದೇ ಮಣ್ಣಿನಲ್ಲಿ ಭೂ ತಾಯಿಯ ಮುಖವನ್ನು ತಯಾರು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನ ರಾತ್ರಿ ತಮ್ಮ ಹಿತ್ತಲಲ್ಲಿ ಬೆಳೆದ ಹಿರೇಕಾಯಿ, ಕುಂಬಳಕಾಯಿ, ಬದನೆಕಾಯಿ, ಮೊದಲಾದ ತರಕಾರಿಗಳನ್ನು ಹೆಚ್ಚಿ ಹಚ್ಚಂಬಲಿ ಎನ್ನುವ ವಿಭಿನ್ನವಾದ ಪದಾರ್ಥವನ್ನು ತಯಾರಿಸಲಾಗುತ್ತದೆ. ಕೆಲ ಭಾಗಗಳಲ್ಲಿ ಈ ಹಬ್ಬಕ್ಕೆ ವಾರಗಳ ಮೊದಲೇ ತಯಾರಿ ನಡೆಯುತ್ತದೆ. ಹೋಳಿಗೆ, ಸಜ್ಜಿಗೆ ಹೀಗೆ ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸುತ್ತದೆ.

ನಂತರ ಮರುದಿನ ಬೆಳಗ್ಗೆ ಅದನ್ನು ತೆಗೆದುಕೊಂಡು ಹೋಗಿ ಕೃಷಿ ಭೂಮಿಗೆ ಹಾಕಲಾಗುತ್ತದೆ. ನಂತರ ಮನೆಯಲ್ಲಿ ತಯಾರಾದ ಅಡುಗೆಯನ್ನು ಬುಟ್ಟಿಯಲ್ಲಿ ತೆಗೆದುಕೊಂಡು ಕುಟುಂಬದ ಎಲ್ಲಾ ಸದಸ್ಯರು ಜಮೀನಿಗೆ ಹೋಗುತ್ಥಾರೆ. ಭತ್ತದ ಪೈರಿಗೆ ಹೆಣ್ಣುಮಕ್ಕಳು ತಮ್ಮ ತಾಳಿ ಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ ಸಲ್ಲಿಸುವ ಅಪರೂಪದ ಸಂಪ್ರದಾಯವಿದೆ.

ಭೂ ತಾಯಿಗೆ ಪೂಜೆ

ಗರ್ಭಿಣಿಯರಿಗೆ ಸೀಮಂತ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುವುದು. ಈ ಹಬ್ಬದಲ್ಲಿ ಭೂಮಿ ತಾಯಿಗೆ ಪೂಜೆ ಮಾಡಲು ತಿನಿಸುಗಳು ಹಾಗೂ ಹೊಲದಲ್ಲಿ ಬೆಳೆದ ಬುಟ್ಟಿಯನ್ನು ತುಂಬಿ ತೆಗೆದುಕೊಂಡು ಹೋಗಲಾಗುವುದು. ಈ ಬುಟ್ಟಿಗಳನ್ನು ಮಹಿಳೆಯರು ಕೆಲವು ವಾರಗಳಿಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿರುತ್ತಾರೆ.

ಬುಟ್ಟಿ ತಯಾರಿಸುವುದು

ಬುಟ್ಟಿಗೆ ಸೆಗಣಿ, ಕೆಮ್ಮಣ್ಣು ಹಚ್ಚಿ ಒಣಗಿಸಲಾಗುವುದು. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುವುದು. ನಂತರ ಹಬ್ಬದ ಹಿಂದಿನ ದಿನವೇ ಬುಟ್ಟಿಗೆ ಹೊಲದಲ್ಲಿ ಬೆಳೆದ ತರಕಾರಿಗಳನ್ನು ತುಂಬಲಾಗುವುದು. ಕೆಲವೊಂದು ಬಗೆಯ ಸಿಹಿ ತಿನಿಸುಗಳನ್ನು ಕೂಡ ತಯಾರಿಸಲಾಗುವುದು.

ಗದ್ದೆ ಪೂಜೆ

ಅಡುಗೆಯನ್ನು ಬುಟ್ಟಿಯಲ್ಲಿ ತುಂಬಾ ಕುಟುಂಬದ ಸದಸ್ಯರೆಲ್ಲರೂ ಜಮೀನಿಗೆ ಹೋಗಿ, ಮುತ್ತೈದೆಯರು ತಮ್ಮ ತಾಳಿಯನ್ನು ಬಿಚ್ಚಿ ಭತ್ತಕ್ಕೆ ಕಟ್ಟಿ ಪೂಜೆಯನ್ನು ಮಾಡುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ತಾಳಿಯನ್ನು ದೇವರ ಸಮಾನವಾಗಿ ಪೂಜಿಸಲಾಗುತ್ತದೆ. ತುಂಬಾ ಸಂಪ್ರದಾಯಸ್ಥ ಹೆಣ್ಮಕ್ಕಳು ಯಾವುದೇ ಕಾರಣಕ್ಕೆ ಕುತ್ತಿಗೆಯಿಂದ ತಾಳಿಯನ್ನು ಬಿಚ್ಚುವುದಿಲ್ಲ, ಆದರೆ ಈ ಸಂದರ್ಭದಲ್ಲಿ ತಮ್ಮ ತಾಳಿಯಿಂದಲೇ ಭೂ ತಾಯಿಗೆ ಅಲಂಕರಿಸಿ ಪೂಜೆ ಮಾಡುವುದೇ ವಿಶೇಷತೆ. ಈ ದಿನ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಗಿಡದ ಮಂಟಪ ಮಾಡಿ, ಮಾವಿನೆಲೆಯ ತೋರಣ ಕಟ್ಟಿ ದೇವರಿಗೆ ಪೂಜೆ ಮಾಡಲಾಗುವುದು. ಭೂ ತಾಯಿಗೆ ಬಗೆ-ಬಗೆಯ ತಿಂಡಿಗಳನ್ನು ಅರ್ಪಿಸಿ, ಬಾಗಿನ ನೀಡಿ ನಮ್ಮನ್ನು ಹರಿಸುವಂತೆ ಪ್ರಾರ್ಥಿಸಲಾಗುವುದು. ಹೋಳಿಗೆ, ಸಜ್ಜೆರೊಟ್ಟಿ, ಶೇಂಗಾ ಉಂಡೆ ಮುಂತಾದ ವಿಶೇಷ ಖಾದ್ಯಗಳನ್ನು ಈ ಹಬ್ಬದಲ್ಲಿ ತಯಾರಿಸಲಾಗುವುದು. ಕಾಗೆ, ಇಲಿಗಳಿಗೆ ಆಹಾರ ನೀಡಲಾಗುವುದು.

ಇತರೆ ವಿಷಯಗಳು:

ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ

ಹಬ್ಬಗಳ ಮಹತ್ವ ಪ್ರಬಂಧ

ಯುಗಾದಿ ಹಬ್ಬದ ಮಹತ್ವ ಪ್ರಬಂಧ

Leave a Comment