Brahmacharini Mantra in Kannada | ಬ್ರಹ್ಮಚಾರಿಣಿ ದೇವಿ ಮಹತ್ವ ಮತ್ತು ಮಂತ್ರ

Brahmacharini Mantra in Kannada, ಬ್ರಹ್ಮಚಾರಿಣಿ ದೇವಿ ಮಹತ್ವ ಮತ್ತು ಮಂತ್ರ, brahmacharini devi mantra in kannada, brahmacharini devi story in kannada

Brahmacharini Mantra in Kannada

Brahmacharini Mantra in Kannada
Brahmacharini Mantra in Kannada ಬ್ರಹ್ಮಚಾರಿಣಿ ದೇವಿ ಮಹತ್ವ ಮತ್ತು ಮಂತ್ರ

ಈ ಲೇಖನಿಯಲ್ಲಿ ನಿಮಗೆ ಅನುಕೂಲವಾಗುವಂತೆ ಬ್ರಹ್ಮಚಾರಿಣಿ ಮಂತ್ರ ಹಾಗೂ ಅದರ ಕಥೆಯನ್ನು ಸಂಪೂರ್ಣವಾಗಿ ನೀಡಿದ್ದೇನೆ.

ಬ್ರಹ್ಮಚಾರಿಣಿ ಅರ್ಚನೆಯ ಮಂತ್ರ

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ
ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ 9 ಅವತಾರಗಳನ್ನು ಪೂಜಿಸಲಾಗುವುದು. ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಪೂಜಿಸಲಾಗುವುದು. ಸುದೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಭಕ್ತರು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಬ್ರಹ್ಮಚಾರಿಣಿ ದೇವಿಯೆಂದರೆ ಜ್ಞಾನವನ್ನು ಹೊಂದಿರುವಾಕೆ. ಒಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಕಮಂಡಲವಿದೆ. ಬ್ರಹ್ಮಚಾರಿಣಿ ದೇವಿಯು ಭಕ್ತರಿಗೆ ಜ್ಞಾನವನ್ನು ನೀಡುವಳು. ಬ್ರಹ್ಮಚಾರಿಣಿ ಎಂದರೆ ಮದುವೆಯಾಗದೆ ಇರುವ ಮತ್ತು ಯುವ ಎಂದರ್ಥ. ಬ್ರಹ್ಮಚಾರಣಿ ದೇವಿಯನ್ನು ಪೂಜಿಸುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮವಿಶ್ವಾಸವು ಸಿಗುವುದು.

ಬ್ರಹ್ಮಚಾರಣಿ ಕಥೆ

ದೇವಿಯು ಕುಶ್ಮಾಂದ ಅವತಾರವನ್ನು ಪಡೆದ ಬಳಿಕ ಬ್ರಹ್ಮಚಾರಣಿಯಾದರು. ಈಶ್ವರ ದೇವನ್ನು ವಿರೋಧಿಸುತ್ತಿದ್ದ ದಕ್ಷ ಪ್ರಜಾಪತಿಯ ಮನೆಯಲ್ಲಿ ಪಾರ್ವತಿಯು ಜನಿಸುವರು. ಈ ಅವತಾರವನ್ನು ಬ್ರಹ್ಮಚಾರಣಿ ಎಂದು ಪೂಜಿಸಲಾಗುವುದು.

ಮುಂದಿನ ಜನ್ಮದಲ್ಲಿ ತನಗೆ ಒಳ್ಳೆಯ ತಂದೆ ಮತ್ತು ಶಿವನನ್ನು ಆರಾಧಿಸುವವರು ಸಿಗಲಿ ಎಂದು ದೇವಿಯು ಘೋರ ತಪಸ್ಸು ಮಾಡುವರು. ಆಕೆ ಪಾದಯಾತ್ರೆ ಮಾಡಿದ ಬಳಿಕ ಸಾವಿರಾರು ವರ್ಷಗಳ ಕಾಲ ಶಿವನನ್ನು ಮದುವೆಯಾಗಬೇಕೆಂದು ತಪಸ್ಸು ಮಾಡುವರು. ಆಕೆ ಹೂಗಳು ಹಾಗೂ ಹಣ್ಣುಗಳನ್ನು ಮಾತ್ರ ಸೇವನೆ ಮಾಡುತ್ತಿದ್ದಳು. ಅಂತಿಮವಾಗಿ ಇದನ್ನು ತ್ಯಜಿಸಿ, ಕೇವಲ ಗಾಳಿಯನ್ನು ಉಸಿರಾಡಿ ಬದುಕುತ್ತಿದ್ದಳು. ಇದರಿಂದಾಗಿ ಬ್ರಹ್ಮಚಾರಿಣಿಯನ್ನು ಅಪರ್ಣಾ ಎಂದು ಕರೆಯಲಾಗುತ್ತದೆ.

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಪೂಜೆ

ಬ್ರಹ್ಮಚಾರಿಣಿ ದೇವಿಗೆ ತುಂಬಾ ಇಷ್ಟವಾಗಿರುವಂತಹ ಹೂವೆಂದರೆ ಅದು ಮಲ್ಲಿಗೆ. ಇದರಿಂದ ನವರಾತ್ರಿಯ ಎರಡನೇ ದಿನವು ನೀವು ಮಲ್ಲಿಗೆ ಹೂವಿನೊಂದಿಗೆ ಪೂಜೆ ಮಾಡಿ, ಬ್ರಹ್ಮಚಾರಿಣಿ ತಾಯಿಯ ಆಶೀರ್ವಾದ ಪಡೆಯಿರಿ. ಬ್ರಹ್ಮಚಾರಿಣಿ ದೇವಿಯ ದೈವಿಸ್ವರೂಪದ ಬಗ್ಗೆ ಆಲೋಚಿಸಿ ಮತ್ತು ಆರತಿಯೊಂದಿಗೆ ಸುಮಾರು 16 ವಿವಿಧ ಅಪರ್ಣೆಗಳನ್ನು ಮಾಡಿ

ಬ್ರಹ್ಮಚಾರಿಣಿಯ ಮಹತ್ವ

ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು.

ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು. 

ನವರಾತ್ರಿ ಎರಡನೇ ದಿನದ ಬ್ರಹ್ಮಚಾರಿಣಿ ಮಂತ್ರಗಳು

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಸ್ತುತಿ

ಯಾ ದೇವಿ ಸರ್ವಭುತೇಶ್ ಮಾ ಬ್ರಹ್ಮಚಾರಿಣಿ ರುಪನೆ ಸಂಸ್ಥಿತಾ

ನಮಸ್ತಸ್ಯೈ ನಮಸ್ತಸಾಯಿ ನಮಸ್ಟಾಸ್ಯೈ ನಮೋ ನಮಃ

ನವರಾತ್ರಿ ಎರಡನೇ ದಿನ ಬ್ರಹ್ಮಚಾರಿಣಿ ದೇವಿ ಧ್ಯಾನ

ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ

ಜಾಪಮಾಲಾ ಕಾಮಂಡಲು ದಾರ ಬ್ರಹ್ಮಚಾರಿಣಿ ಶುಭಾಮ್

ಗೌರವರ್ಣ ಸ್ವಧೀತಾನಸ್ಥಿತ ದ್ವಿತೀಯ ದುರ್ಗಾ ತ್ರಿನೇತ್ರಂ

ಧವಾಲಾ ಪರಿಧನಾ ಬ್ರಹ್ಮರೂಪಾ ಪುಷ್ಪಲಂಕರ ಭೂಶಿಂತಂ

ಪರಮಾ ವಂದನಾ ಪಲ್ಲವರಧರಂ ಕಾಂತ ಕಪೋಲಾ ಪಿನಾ

ಪಯೋಧರಂ ಕಾಮನಿಯಾ ಲವಣಯಂ ಶೆರ್ಮಮುಖಿ ನಿಮ್ನಾನಾಭಿ ನಿತಂಬನಿಮ್

ಇತರೆ ವಿಷಯಗಳು:

ನವರಾತ್ರಿ ಹಬ್ಬದ ಶುಭಾಶಯಗಳು

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

ಗೌರಿ ಗಣೇಶ ಹಬ್ಬದ ಶುಭಾಶಯಗಳು 

ಶ್ರೀ ಗೌರಿ ಅಷ್ಟೋತ್ತರ ಕನ್ನಡ

Leave a Comment