ಬುದ್ಧನ ಜೀವನ ಚರಿತ್ರೆ ಕನ್ನಡ

ಬುದ್ಧನ ಜೀವನ ಚರಿತ್ರೆ ಕನ್ನಡ

ಈ ಲೇಖನಿಯು ಬುದ್ಧನ ಜೀವನ ಚರಿತ್ರೆಯ ಸಂಪೂರ್ಣ ಮಾಹಿತಿ ನೀಡಿ, ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ಪೀಠಿಕೆ:

ಗೌತಮ ಬುದ್ದನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಇವನು ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ, ಈತನು ಜನಿಸುವ ಮೊದಲೇ ಜ್ಯೋತಿಷ್ಯರು ಶುದ್ಧೋದನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ದ ವ್ಯಕ್ತಿಯಾಗಿ, ಮಹಾಪುರುಷನಾಗುತ್ತಾನೆ ಎಂದು.

ಗೌತಮ ಬುದ್ಧ ಜೀವನ :

ಗೌತಮ ಬುದ್ದನು (ಕ್ರಿ. ಪೂ ೫೫೭-೪೪೭) ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಎಂಬ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ.ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡದನು. ಬುದ್ದನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಿದ್ದಳು. ಅದುದರಿಂದ ಸಿದ್ದಾರ್ಥ ʼಗೌತಮʼ ನೆಂದು ಕರೆಯಲ್ಪಡುತ್ತಾರೆ.

ಶುದ್ದೋಧನ ಮಗ ಚಕ್ರವರ್ತಿಯಾಗಬೇಕು ಎಂಬ ಅಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾನೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದು ಅವನ ವಿವಾಹವನ್ನು ಮಾಡುತ್ತಾನೆ. ಗೌತಮನಿಗೆ ʼರಾಹುಲʼ ಎಂಬ ಮಗನು ಹುಟ್ಟುತ್ತಾನೆ.

ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ ʼದರ್ಶನʼವಾಗುತ್ತದೆ. ಇಡೀ ಜಗತ್ತು ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದನು ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟದನು. ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.

ಬುದ್ಧನ ಲಕ್ಷಣ:

ಸಿದ್ಧಾರ್ಥನಾಗಿ ಜನಿಸಿದಾಗಲೇ ಅವನಲ್ಲಿ ಅಪೂರ್ವವಾದ ಮಾಹಾಪುರುಷನ ಲಕ್ಷಣ ಇರುವುದು ದೈವಜ್ಞರು ಅರಿತಿದ್ದರು. ಸಿದ್ಧಾರ್ಥನಿಗೆ ೩೨ ಚಿನ್ನೆಗಳಿದ್ದು. ನೀಳಬಾಹು, ವಿಶಾಲವಾದ ಎದೆ, ಊರ್ಧ್ವಮುಖ ರೋಮಧಾರೆ, ದೇಹವನ್ನು ಬಾಗಿಸದೆ ಮಂಡಿ ಮುಟ್ಟುವಷ್ಟು ನೀಳವಾದ ಕೈಗಳು , ಉದ್ದವಾದ ಬೆರಳುಗಳು, ಅತೀ ಮೃದುವಾದ ಹಸ್ತ ಮತ್ತು ನವಿರಾದ ಪಾದಗಳನ್ನು ಹೊಂದಿದ್ದನೆಂದು ವಿಭೂತಿ ಪುರುಷರಲ್ಲಿ ಇರಬೇಕಾದ ಸರ್ವಲಕ್ಷಣಗಳನ್ನು ದಿಗ್ಗನಿಕಾಯ ಎಂಬ ಬೌದ್ಧಗ್ರಂಥ ತಿಳುಸುತ್ತದೆ.

ಬುದ್ಧನ ಅಧ್ಯಾತ್ಮದತ್ತ ಒಲವು:

ಬುದ್ದನು ರಾಜ ಅರಮನೆಯಲ್ಲಿ ಸುಖದ ಜೀವನವನ್ನು ಕಂಡಿದ್ದನು.ತಾನು ಒಬ್ಬ ಮಹಾ ಯೋಗಿಯಾಗಬೇಕು, ಜ್ಞಾನಿಯಾಗಬೇಕೆಂಬ ತುಡಿತ ಇದ್ದುದರಿಂದ ಗೌತಮ ಬುದ್ದನು ಈ ವೈಭವದ ಮತ್ತು ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಹಾತೊರೆಯುತ್ತಾನೆ. ಅಲ್ಲದೇ ತಾನಿರುವ ಅರಮನೆಯ ಹೊರಗೆ ಏನಿದೆ ಎಂಬ ಕೌತುಕವೂ ಅವನಿಗಿತ್ತು. ಹೀಗಿರುವಾಗ ಒಂದು ದಿನ ತನ್ನ೨೯ ನೇ ವಯಸ್ಸಿನಲ್ಲಿ ವಾಯುವಿಹಾರಕ್ಕಾಗಿ ಅರಮನೆಯಿಂದ ಹೊರಟು.ಹೊರಗೆ ಬಂದು ಅಲ್ಲಿ ವಿಚಾರಗಳನ್ನು ನೋಡಿ ಜೀವನದಲ್ಲಿ ತನಗೆ ಅರಿವಿಲ್ಲದೇ ಮೊದಲ ಬಾರಿಗೆ ಜುಗುಪ್ಸೆಗೊಳ್ಳುತ್ತಾನೆ. ಅದೇನೆಂದರೆ ಓರ್ವ ಮುದುಕ, ರೋಗಿ, ಶವಯಾತ್ರೆ ಹಾಗೂ ಅಲೆದಾಡುವ ಓರ್ವ ತಪಸ್ವಿಯನ್ನು ಕಂಡು ದಿವ್ಯದರ್ಶನವಾಗುತ್ತದೆ. ಈ ನಾಲ್ಕು ವಿಚಾರಗಳನ್ನು ಕಂಡ ಕೊಡಲೇ ಗೌತಮ ಕುತೂಹಲಕ್ಕೆ ಒಳಗಾಗುತ್ತಾನೆ. ನಂತರ ಅರಮನೆಗೆ ಹಿಂತಿರುಗಿ ನಿಜ ತಿಳಿದುಕೊಳ್ಳಲು ಗುರುಗಳ ಹುಡುಕಾಟ ಮಾಡಲು ಬಹಳಷ್ಟು ಕಷ್ಟಪಡುತ್ತಾನೆ. ಆದರೆ ಅದು ಕೂಡ ಗೌತಮನಿಗೆ ಜೀವನದ ಬಗೆಗೆ ಸತ್ಯ ವಿಚಾರಗಳನ್ನು ತಿಳಿಸದೇ ಜೀವನದ ಸತ್ಯತೆಯನ್ನು ತಳಿಯುವುದಕ್ಕಾಗಿ ಬುದ್ದನು ತನ್ನ ಎಂಭತ್ತು ವರ್ಷದವರೆಗೆ ಪ್ರಪಂಚ ಪರ್ಯಟನೆ ಮಾಡುತ್ತಾನೆ. ಅಲ್ಲದೇ ಪರ್ಯಟನೆಯ ಜೊತೆಜೊತೆಗೆ ಸತ್ಯ ದರ್ಶನದ ಬಗೆಗೆ ಜನರಿಗೆ ಭೋಧನೆಗಳನ್ನು ನಿರಂತವಾಗಿ ಮಾಡುತ್ತಾನೆ. ಬಡವ ಹಾಗೂ ದುರ್ಬಲರ ಸೇವೆಯನ್ನು ಮಾಡುತ್ತಾನೆ. ವಿಮೋಚನ ಕೆಲಸ ಕಾರ್ಯಗಳನ್ನು ಮಾಡಬೇಕು. ಹಾಗೂ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಹಾಗಾಗಿ ನಾವು ಪರರಿಗೆ ಹಾಗೂ ಮಾನವೀಯತೆಗೆ ಬೆಲೆ ಕೊಡಬೇಕು ಎಂಬುವುದು ಗೌತಮ ಬುದ್ದನು ಭೋಧಿಸಿದ ಮುಖ್ಯ ತತ್ವಗಳು.

ಬುದ್ಧರ ಸಂದೇಶಗಳು:

*ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು. ಸಂಶೋಧನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು. ಇದುವೇ ಬುದ್ದ ಧರ್ಮ.

*ಬುದ್ಧ ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಪಾಲಿ ಭಾಷೆಯಲ್ಲಿ “ಧಮ್ಮ” ಎಂದು ಕರೆದನು.ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು.

*ಆದರೆ ಈ ಸಿದ್ದಿಗೆ ಸ್ವಂತ ಪ್ರಯತ್ನ ಸಾಧನೆ ಮಾತ್ರ ಕಾರಣ ಎಂದು ಹೇಳಿದರು,ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು.

*ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ದನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಬುದ್ದನೆಂದು ಸಂಬೋಧಿಸಲು ಅವನು ತನ್ನ ಶಿಷ್ಯರಿಗೆ ಸೂಚಿಸಿದ. ಬುದ್ದನ ಮೊದಲ ಶಿಷ್ಯ ಆನಂದ. ಬುದ್ದ ಎಂದರೆ ನಿದ್ದೆಯಿಂದ ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ.

*ಬುದ್ದ ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. “ಆಸೆಯೇ ದುಃಖಲಕ್ಕೆ ಮೂಲ” ಎಂಬುದು ಅವನ ಪ್ರಸಿದ್ಧ ತತ್ವ.

ಉಪಸಂಹಾರ:

ಈ ಮೂಲಕ ತಿಳಿಯುವುದೆನೇಂದರೆ “ಆಸೆಯೇ ದುಃಖಕ್ಕೆ ಮೂಲ”ಹಾಗೂ ಬಡವ ಮತ್ತು ದುರ್ಬಲರಿಗೆ ಸೇವೆ ಮಾಡುವುದು, ಹಾಗೆ ಸಹಾಯ ಮಾಡುವುದು, ಬುದ್ದನು ಅವನ ಭೋದನೆಯಲ್ಲಿ ಹೇಳಿದ್ದಾರೆ.

FAQ

ಗೌತಮ ಬುದ್ಧನ ಮಗನ ಹೆಸರೇನು?

ಗೌತಮ ಬುದ್ಧನ ಮಗನ ಹೆಸರು ರಾಹುಲ್‌ ಎಂದು.

ಗೌತಮ ಬುದ್ಧನ ಪತ್ನಿ

ಗೌತಮ ಬುದ್ಧನ ಪತ್ನಿ ಯಶೋಧರ.

ಗೌತಮ ಬುದ್ಧನ ತಂದೆ ತಾಯಿಯ ಹೆಸರು

ಗೌತಮ ಬುದ್ದನ ತಂದೆ ಶುದ್ದೋಧನ ಮತ್ತು ತಾಯಿ ಮಾಯಾದೇವಿ.

ಗೌತಮ ಬುದ್ಧನ ಮತ್ತೊಂದು ಹೆಸರು

ಗೌತಮ ಬುದ್ಧನ ಮತ್ತೋದು ಹೆಸರು ಸಿದ್ದಾರ್ಥ.

ಇತರೆ ಪ್ರಬಂಧಗಳು:

ಸಾವಯವ ಕೃಷಿ ಪ್ರಬಂಧ | savayava krishi prabandha in kannada

ನನ್ನ ಕನಸಿನ ಭಾರತ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

Leave a Comment