ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡದಲ್ಲಿ | Dara Bendre Information in Kannada

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡದಲ್ಲಿ, Dara Bendre Information in Kannada, dara bendre jeevana charitre in kannada, dara bendre in kannada

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡದಲ್ಲಿ

Dara Bendre Information in Kannada
ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡದಲ್ಲಿ

ಈ ಲೇಖನಿಯಲ್ಲಿ ದ ರಾ ಬೇಂದ್ರೆ ಅವರ ಬಗ್ಗೆ ನಿಮಗೆ ಉಚಿತವಾಗಿ ಮಾಹಿತಿಯನ್ನು ನೀಡಿದ್ದೇವೆ.

ದ ರಾ ಬೇಂದ್ರೆ ಜನನ:(ಜನವರಿ31-1896-ಅಕ್ಟೋಬರ್‌26-1981)

ಬೇಂದ್ರಯವರು ಕರ್ನಾಟಕದಲ್ಲಿ ವರ ಕವಿ ಎಂದು ಪ್ರಸಿದ್ದರಾಗಿದ್ದಾರೆ. ಇವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ಅವರ ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ. ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ.

ಜೀವನ:

ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ದ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. 1973 ರಲ್ಲಿ ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ. ಬೇಂದ್ರೆಯವರು ಹೆನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್‌ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ.ಮಾಡಿಕೊಂಡರು. ಹಿಡಿದಿದ್ದು ಅಧ್ಯಾಪಕ ವೃತ್ತಿ. ೧೯೩೫ ರಲ್ಲಿ ಎಂ.ಎ.ಮಾಡಿಕೊಂಡು ಕೆಲಕಾಲ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ, ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.

ಸಾಹಿತ್ಯ:

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದ್ದರು. ೧೯೧೮ ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. ” ಗರಿ”, “ಕಾಮಕಸ್ತೂರಿ”, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ.

ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ʼಸ್ವಧರ್ಮʼ ಎನ್ನುವ ಪತ್ರಿಕೆಯಲ್ಲಿ. ಮೊದಲು ಪ್ರಕಟಗೊಂಡ ʼಬೆಳಗುʼ ಕವಿತೆಯು 1932ರಲ್ಲಿ ಪ್ರಕಟಗೊಂಡ ಬೇಂದ್ರಯವರ ಗರಿ ಸಂಕಲನದ ಮೊದಲ ಕವನವಾದ ʼಗರಿʼ ಸಂಕಲನದಲ್ಲಿದೆ. ಅದರಲ್ಲಿ ಮೊದಲ ಕವನವಾದ ಈ ಕವಿತೆಯು ರಚನೆಗೊಂಡದ್ದು 1919ರಲ್ಲಿ 2019ಯೂ ಪ್ರಸಿದ್ದವಾಗಿದೆ.

ಕವನ ಸಂಕಲನ:

*೧೯೨೨-ಕೃಷ್ಣಾಕುಮಾರಿ

*೧೯೩೨-ಗರಿ

*೧೯೩೪-ಮೂರ್ತಿ ಮತ್ತು ಕಾಮಕಸ್ತೂರಿ

*೧೯೩೭-ಸಖೀಗೀತ

*೧೯೩೮-ಉಯ್ಯಾಲೆ

*೧೯೩೮-ನಾದಲೀಲೆ

*೧೯೪೩-ಮೇಘದೂತ

*೧೯೪೬-ಹಾಡುಪಾಡು

*೧೯೫೧-ಗಂಗಾವತರಣ

*೧೯೫೬-ಸೂರ್ಯಪಾನ

*೧೯೫೬-ಹೃದಯಸಮುದ್ರ

*೧೯೫೬-ಮುಕ್ತಕಂಠ

*೧೯೫೭-ಚೈತ್ಯಾಲಯ

*೧೯೫೭-ಜೀವಲಹರಿ

೧೯೫೭-ಅರಳು ಮರಳು……

ವಿಮರ್ಶೆ:

*೧೯೪೦-ಸಾಹಿತ್ಯಸಂಶೋಧನೆ

*೧೯೪೫-ವಿಚಾರ ಮಂಜರಿ

*೧೯೫೪-ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ

*೧೯೫೯-ಮಹಾರಾಷ್ಟ್ರ ಸಾಹಿತ್ಯ

*೧೯೬೭-ಕಾವ್ಯೋದ್ಯೋಗ

*೧೯೭೬-ಕುಮಾರವ್ಯಾಸ ಪುಸ್ತಿಕೆ

ಪ್ರಶಸ್ತಿ ಮತ್ತು ಪುರಸ್ಕಾರ:

*೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ.

*೧೯೫೮ರಲ್ಲಿ ʼಅರಳು ಮರಳುʼ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ.

*೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ

*೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್‌ ಬಹುಮಾನ

*೧೯೬೮ರಲ್ಲಿ ʼಪದ್ಮಶ್ರೀʼ ಪ್ರಶಸ್ತಿ ಲಭಿಸತು

*೧೯೭೩ರಲ್ಲಿ ʼನಾಕುತಂತಿʼ ಕೃತಿಗೆ ಜ್ಞಾನಪೀಠ ಪ್ರಶಸ್ತಿ.

*ಕೇಂದ್ರ ಸಾಹಿತ್ಯ ಆಕಾಡೆಮಿಯ ಫೆಲೋಷಿಪ್‌ ಪಡೆದರು.

FAQ

ದ ರಾ ಬೇಂದ್ರೆಯವರ ಪೂರ್ಣ ಹೆಸರೇನು?

ದತ್ತಾತ್ರೇಯ ರಾಮಚಂದ್ರ ಬೇಂದ್ರೆ.

ದ ರಾ ಬೇಂದ್ರೆಯವರ ಜನ್ಮ ದಿನ ಯಾವಾಗ?

ಇವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು.

ದ ರಾ ಬೇಂದ್ರೆಯವರ ತಂದೆ-ತಾಯಿ ಹೆಸರೇನು?

ತಂದೆ- ರಾಮಚಂದ್ರ ಭಟ್ಟ, ತಾಯಿ-ಅಂಬಿಕೆ.

ದ ರಾ ಬೇಂದ್ರೆಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

“ನಾಕುತಂತಿ” ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಇತರೆ ಪ್ರಬಂಧಗಳು:

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ

ಗಿರೀಶ್ ಕಾರ್ನಾಡ್ ಅವರ ಜೀವನ ಚರಿತ್ರೆ

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಬಗ್ಗೆ ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಹಾಗೆ ನಿಮಗೆ ಗೋತ್ತಿರುವ ವಿಷಯವನ್ನು Comment ಮಾಡುವ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Leave a Comment