Grammar in kannada, ಕನ್ನಡ ವ್ಯಾಕರಣ ಮಾಹಿತಿ, kannada vyanjanagalu, kannada grammar namapada in kannada, grammar information in kannada
Grammar in Kannada

ಈ ಲೇಖನಿಯಲ್ಲಿ ಕನ್ನಡ ವ್ಯಾಕರಣದ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ನಾವು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.
ವ್ಯಾಕರಣ ಎಂದರೇನು?
ʼಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರುʼ
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ.
ಲಿಂಗಗಳು
ಒಂದು ನಾಮಪ್ರಕೃತಿ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗವೆಂದು ಹೆಸರು.
ಲಿಂಗಗಳ ವಿಧಗಳು
೧.ಪುಲ್ಲಿಂಗ
೨.ಸ್ತ್ರೀಲಿಂಗ
೩.ನಪುಂಸಕಲಿಂಗ
ಪುಲ್ಲಿಂಗ
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.
ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ….
ಸ್ತೀಲಿಂಗ
ಸ್ತೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತೀಲಿಂಗ.ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದೇ ಸ್ತೀಲಿಂಗ.
ಉದಾ:- ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ…
ನಪುಂಸಕ ಲಿಂಗ
ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅಥ್ರ ವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು. ಪುಲ್ಲಿಂಗವೂ ಅಲ್ಲದ, ಸ್ತೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗಗಳಾಗಿವೆ.
ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ..
ವಚನಗಳು
ವ್ಯಾಕರಣದ ದೃಷ್ಟಿಯಲ್ಲಿ ವಚನ ಎಂದರೆ ಸಂಖ್ಯೆ ಎಂದರ್ಥ.
ವಚನಗಳ ವಿಧಗಳು
- ಏಕವಚನ.
- ಬಹುವಚನ.
ಏಕವಚನ
ಒಬ್ಬ ವ್ಯಕ್ತಿ , ಒಂದು ವಸ್ತು, ಒಂದು ಸ್ಥಳ ಎಂದು ಹೇಳುವ ಶಬ್ಬಗಳಿಗೆ ಏಕವಚನ ಎಂದು ಕರೆಯಲಾಗಿದೆ.
ಉದಾ ; ಅರಸು, ನೀನು, ಮನೆ , ನಾನು, ಮರ, ಕವಿ , ತಂದೆ, ತಾಯಿ….
ಬಹುವಚನ
ಒಂದಕ್ಕಿಂತ ಹೆಚ್ಚು ವ್ಯಕ್ತಿ, ವಸ್ತುಗಳನ್ನು ಕುರಿತು ಹೇಳುವ ಶಬ್ಬಗಳಿಗೆ ಬಹುವಚನ ಎಂದು ಹೆಸರು..
ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು…
ವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು.
ವಿಭಕ್ತಿ ಪ್ರತ್ಯಯಗಳ ವಿಧಗಳು
ಕ್ರಮ ಸಂಖ್ಯೆ | ವಿಭಕ್ತಿ ಪ್ರತ್ಯಗಳ ಹೆಸರು | ಹೊಸಗನ್ನಡ ಪ್ರತ್ಯಯ | ಹಳೆಗನ್ನಡ ಪ್ರತ್ಯಯ | ಕಾರಕಗಳು |
೧ | ಪ್ರಥಮ ವಿಭಕ್ತಿ | ಉ | ಮ್ | ಕರ್ತೃ |
೨ | ದ್ವಿತೀಯ ವಿಭಕ್ತಿ | ಅನ್ನು | ಅಮ್ | ಕರ್ಮ |
೩ | ತೃತೀಯ ವಿಭಕ್ತಿ | ಇಂದ | ಇಮ್ | ಕರಣ |
೪ | ಚತುರ್ಥಿ ವಿಭಕ್ತಿ | ಗೆ | ಕೆ | ಸಂಪ್ರಧಾನ |
೫ | ಪಂಚಮಿ ವಿಭಕ್ತಿ | ದೆಸೆಯಿಂದ | ಅತ್ತಣಿಂ | ಅಪಧಾನ |
೬ | ಷಷ್ಠಿ ವಿಭಕ್ತಿ | ಆ | ಆ | ಸಂಬಂಧ |
೭ | ಸಪ್ತಮಿ ವಿಭಕ್ತಿ | ಅಲ್ಲಿ | ಒಳ್ | ಅಧಿಕರಣ |
ಕ್ರಿಯಾ ಪದ
ವಾಕ್ಯದಲ್ಲಿ ಒಂದು ವಸ್ತುವಿನ ಕ್ರಿಯೆಯ ಅರ್ಥವನ್ನು ಸೂಚಿಸುವ ಪದಗಳೇ ಕ್ರಿಯಾಪದ
ಉದಾ: ೧.ದೀಪವು ಉರಿಯುತ್ತದೆ.
೨.ಹಸುವು ಹಾಲನ್ನು ಕೊಡುತ್ತದೆ.
೩.ತಾಯಿಯು ಅಡುಗೆಯನ್ನು ಮಾಡುತ್ತಾಳೆ.
ಧಾತುಗಳ ವಿಧಗಳು
- ಮೂಲಧಾತು (ಸಹಜ) ಗಳು
- ಸಾಧಿತ ಧಾತುಗಳು
ಮೂಲಧಾತು
ಒಂದು ಭಾಷೆಯಲ್ಲಿ ಆರಂಭದಿಂದಲೂ ಇರುವ ಧಾತುಗಳಿಗೆಮೂಲಧಾತು / ಸಹಜಧಾತು ಎಂದು ಹೆಸರು
ಉದಾ : ಮಾಡು, ಹೋಗು , ಬರು, ನಡೆ, ನೋಡು, ಓದು..
ಸಾಧಿತ ಧಾತುಗಳು
“ಕೆಲವು ಕನ್ನಡ ನಾಮಪ್ರಕೃತಿಗಳ ಮೇಲೆ , ಅನುಕರಣ ಶಬ್ಧಗಳ ಮೇಲೆ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಧಾತುಗಳೆನಿಸುತ್ತವೆ.
ಕರ್ತೃ ಪದ
ಕ್ರಿಯೆಯ ಕೆಲಸವನ್ನು ಯಾರು ಮಾಡಿದರು / ಯಾವುದು ಮಾಡಿತು ಎಂದು ತಿಳಿಸುವ ಪದವನ್ನು ಕರ್ತೃಪದವೆಂದು ಕರೆಯುವರು.
ಇತರೆ ಪ್ರಬಂಧಗಳು: