ಹನುಮಾನ್ ಚಾಲೀಸಾ ಮಹತ್ವ hanuman chalisa in kannada

ಹನುಮಾನ್ ಚಾಲೀಸಾ ಮಹತ್ವ, Hanuman Chalisa in Kannada, Hanuman Chalisa Information in Kannada, ಹನುಮಾನ್ ಚಾಲೀಸಾ ಕನ್ನಡದಲ್ಲಿ hanuman chalisa lyrics in kannada

ಹನುಮಾನ್ ಚಾಲೀಸಾ ಮಹತ್ವ

ಹನುಮಾನ್ ಚಾಲೀಸಾ ಮಹತ್ವ

ಈ ಲೇಖನಿಯಲ್ಲಿ ಹನುಮಾನ್‌ ಚಾಲೀಸಾ ಮಹತ್ವ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಪ್ರತಿನಿತ್ಯ ಸಾಧ್ಯವಾಗದಿದ್ದರೂ ನಾವು ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

ಹನುಮಾನ್ ಚಾಲೀಸಾವು ರಾಮ ಭಂಟ, ಅಪ್ರತಿಮ ಸಾಹಸಿ, ಅದಮ್ಯ ಚೇತನ ಹನುಮನ ಲೀಲೆಗಳನ್ನು ಮತ್ತು ಆತನ ಖ್ಯಾತಿಯನ್ನು ಸಾರುವ ಒಂದು ಜನಪ್ರಿಯ ಕೃತಿಯಾಗಿದೆ. ಭಕ್ತಿಯ ಪರಾಕಾಷ್ಠೆಗೆ ನಮ್ಮನ್ನು ಕೊಂಡೊಯ್ಯುವ ಈ ಅದ್ಭುತ ಕೃತಿಯನ್ನು ರಚಿಸಿದವರು ಶ್ರೀ ರಾಮಚಂದ್ರನ ಪರಮ ಭಕ್ತರಾದ ತುಳಸಿದಾಸರು.

ಭಗವಾನ್‌ ಹನುಮಂತನು ಶಿಸ್ತನ್ನು ಪ್ರೀತಿಸುತ್ತಾನೆ. ಅದಕ್ಕಾಗಿಯೇ ಹನುಮಂತನ ಭಕ್ತರು ಸಹ ಶಿಸ್ತನ್ನು ಅನುಸರಿಸುತ್ತಾರೆ. ಹನುಮಂತನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ಬಹುಬೇಗ ಈಡೇರಿಸುತ್ತಾನೆ. ಅಂದರೆ, ಹನುಮಂತನು ತನ್ನ ಭಕ್ತರನ್ನು ಸಂಕಟಗಳಿಂದ ದೂರವಿಡುತ್ತಾನೆ. ಹನುಮಂತನ ತನ್ನೆಲ್ಲಾ ಭಕ್ತರ ಸಂಕಟಗಳನ್ನು ದೂರಾಗಿಸುವುದರಿಂದ ಆತನನ್ನು ಸಂಕಟ ಮೋಚನ ಎಂದು ಕರೆಯುತ್ತಾರೆ.

ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ. ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಮಂಗಳವಾರವನ್ನು ಹನುಂತನನ್ನು ನೆನೆಯಲು ವಿಶೇಷ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು ಭಕ್ತಿಯಿಂದ ಹನುಮಂತನನ್ನು ನೆನೆದರೆ ಮತ್ತು ಅವರನ್ನು ಪೂಜಿಸಿದರೆ ಹನುಮಂತನ ಕೃಪೆಗೆ ನಾವು ಪಾತ್ರರಾಗುತ್ತೇವೆ ಎಂದು ವೇದಗಳು ತಿಳಿಸುತ್ತವೆ. ಅಂತೆಯೇ ಈ ದಿನಂದು ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಕೂಡ ಹನುಮಂತನು ನಮ್ಮನ್ನು ಸರ್ವ ವಿಘ್ನಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಹನುಮಾನ್ ಚಾಲೀಸಾವು ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಕಾರಣವಾಗಿದೆ. ಅಂತೆಯೇ ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ತರುತ್ತದೆ.

ದುಷ್ಟ ಶಕ್ತಿಗಳನ್ನು ನಾಶ ಮಾಡುವುದು

ಭಗವಾನ್‌ ಹನುಮಂತನನ್ನು ದುಷ್ಟ ಶಕ್ತಿಗಳನ್ನು ನಾಶ ಮಾಡುವ ಮತ್ತು ದುಷ್ಟ ಶಕ್ತಿಗಳ ಶಕ್ತಿಗಳನ್ನು ನಾಶಮಾಡುವ ದೇವರು ಎಂದು ಪರಿಗಣಿಸಲಾಗುತ್ತದೆ. ನೀವು ದುಃಸ್ವಪ್ನಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಹನುಮಾನ್‌ ಚಾಲೀಸಾವನ್ನಿಟ್ಟು ಮಲಗಬೇಕು. ಇದರಿಂದ ರಾತ್ರಿ ಭಯಾನಕ ಕನಸುಗಳು ಬೀಳುವುದಿಲ್ಲ. ಅಷ್ಟು ಮಾತ್ರವಲ್ಲ, ಭಯ ಹುಟ್ಟಿಸುವಂತಹ ಆಲೋಚನೆಗಳನ್ನು ಕೂಡ ದೂರಾಗಿಸುತ್ತದೆ.

ನಮ್ಮೆಲ್ಲಾ ಆಸೆಗಳು ಈಡೇರುವುದು

ಹನುಮಾನ್‌ ಚಾಲೀಸಾವನ್ನು ಕೇಳುವುದರಿಂದ ಅಥವಾ ನಾವೇ ಸ್ವತಃ ಓದುವುದರಿಂದ ಊಹಿಸಲು ಸಾಧ್ಯವಿಲ್ಲದಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಓರ್ವ ವ್ಯಕ್ತಿಯು 40 ಪದ್ಯಗಳ ಹನುಮಾನ್‌ ಚಾಲೀಸಾವನ್ನು ಶ್ರದ್ಧಾ – ಭಕ್ತಿಯಿಂದ ಪಠಿಸುವುದರಿಂದ ಅವನ ಅಥವಾ ಅವಳ ಮನೋಕಾಮನೆಗಳು ಈಡೇರುವುದು. ನಮ್ಮೆಲ್ಲಾ ಆಸೆಗಳು ಹನುಮಾನ್‌ ಚಾಲೀಸಾ ಓದುವುದರಿಂದ ಈಡೇರುವುದು. ಹನುಮಾನ್‌ ಚಾಲೀಸಾವನ್ನು ನಿಯಮಿತವಾಗಿ ಪಠಿಸಿದರೆ ಹನುಮಂತನ ಆಶೀರ್ವಾದ ದೊರೆಯುವುದು ಮತ್ತು ಆತನ ಅದ್ಭುತ ಶಕ್ತಿ ನಿಮಗೂ ಸಿಗುವುದು.

ಹನುಮಾನ್ ಚಾಲೀಸಾ ಪ್ರಾಮುಖ್ಯತೆ

ಹನುಮಾನ್‌ ಚಾಲೀಸಾವನ್ನು ಪ್ರತಿನಿತ್ಯ ಪಠಿಸಬೇಕು. ಅದರಲ್ಲೂ, ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೇವನು ಅವರ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾನೆ. ರಾಮಾಯಣದ ಸಂದರ್ಭದಲ್ಲಿ ಭಗವಾನ್‌ ಹನುಮಂತನು ರಾವಣನಿಂದ ಶನಿಯನ್ನು ರಕ್ಷಿಸುತ್ತಾನೆ. ಆ ಕಾರಣದಿಂದ ಹನುಮಂತನ ಭಕ್ತರಿಗೆ ಯಾವುದೇ ತೊಂದರೆಯನ್ನು ನೀಡುವುದಿಲ್ಲವೆಂದು ಭರವಸೆಯನ್ನು ನೀಡಿರುತ್ತಾನೆ. ಯಾವ ವ್ಯಕ್ತಿ ಶನಿ ದೋಷವನ್ನು, ಸಾಡೇಸಾತಿ ಶನನಿ ದೋಷವನ್ನು ಮತ್ತು ಶನಿ ಮಹಾದಶಾ ಸೇರಿದಂತೆ ಶನಿಗೆ ಸರಿದಂತೆ ಇನ್ನಿತರ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದರೆ ಅವರು ಪ್ರತಿನಿತ್ಯ ಸಾಧ್ಯವಾಗದಿದ್ದರೆ ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

ಹನುಮಾನ್‌ ಚಾಲೀಸಾ

ಇತರೆ ವಿಷಯಗಳು:

ಮಹಾವೀರ ಜಯಂತಿ ಶುಭಾಶಯಗಳು

ರಾಮ ನವಮಿ ಹಬ್ಬದ ಶುಭಾಶಯಗಳು

Leave a Comment