ದಾಸವಾಳ ಹೂವಿನ ಉಪಯೋಗ | Hibiscus in Kannada

Hibiscus in Kannada, ದಾಸವಾಳ ಹೂವಿನ ಉಪಯೋಗಗಳು, hibiscus uses in kannada, dasavala hoovu in kannada, hibiscus flower in kannada dasavala hoovu information in kannada

Hibiscus in Kannada

Hibiscus in Kannada

ಈ ಲೇಖನಿಯಲ್ಲಿ ದಾಸವಾಳದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಇದರ ಅನುಕೂಲವನ್ನು ಪಡೆದುಕೊ

ದಾಸವಾಳ ಹೂವು

ದಾಸವಾಳದ ಹೂವು ಹೊಟ್ಟೆ ನೋವು ಮತ್ತು ಬಾಯಿ ಹುಣ್ಣುಗಳಂತಹ ಕಾಯಿಲೆಗಳನ್ನು ನಿವಾರಿಸುತ್ತದೆ. ದಾಸವಾಳದ ಹೂವು ಸ್ಮರಣೆಯನ್ನು ಹೆಚ್ಚಿಸುವಲ್ಲಿ ಸಹ ಪ್ರಯೋಜನಕಾರಿಯಾಗಿದೆ. ದಾಸವಾಳವು ಬಹಳ ಆರೋಗ್ಯ ಉಪಯೋಗ ಹೊಂದಿರುವ ಹೂವಾಗಿದೆ. ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು. ರಕ್ತದೊತ್ತಡ ನಿಯಂತ್ರಣ, ಮುಟ್ಟು, ಕೂದಲು, ಬುದ್ಧಿಶಕ್ತಿ ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ ಹೂ ಮತ್ತು ಅದರ ಎಲೆಗಳು ಉಪಯೋಗವಾಗಿದೆ.

ದಾಸವಾಳ ಎಂದರೆ ಮನೆಯ ಅಂಗಳದಲ್ಲಿ ಅರಳುವ ಹೂವಷ್ಟೇ. ದೇವರ ಪೂಜೆಗೆ, ಮಕ್ಕಳ ಆಟಕ್ಕೆ ಮಾತ್ರ ಈ ಹೂ ಬಳಕೆಯಾಗುತ್ತದೆ ಎಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಕೆಂಪು, ಹಳದಿ, ಕೇಸರಿ ಹೀಗೆ ವಿವಿಧ ಬಣ್ಣಗಳಲ್ಲಿ ಕಾಣುವ ಈ ಹೂವು ಅಂಗಳದ ಅಂದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡಿಕೊಳ್ಳಲೂ ಅತ್ಯುತ್ತಮ ಆಯ್ಕೆಯಾಗಿದೆ.

ದಾಸವಾಳ ಹೂವು ಉಪಯೋಗಗಳು

  • ದಾಸವಾಳ ಗಿಡದ ಎಲೆಗಳನ್ನು ಪುಡಿಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ. ದಾಸವಾಳದ ಹೂವು ಕೂದಲನ್ನು ಬುಡದಿಂದ ದೃಢವಾಗಿಸಲು ಸಹಾಯ ಮಾಡುತ್ತದೆ.
  • ದಾಸವಾಳ ಗಿಡದ ಎಲೆಗಳ ಕಷಾಯವನ್ನು ಕುಡಿಯುವ ಮೂಲಕ ಕಫವನ್ನು ಗುಣಪಡಿಸಲಾಗುತ್ತದೆ. ದಾಸವಾಳದ ಎಲೆಗಳು ಕಫ ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.
  • ಪ್ರಕೃತಿ ದತ್ತವಾಗಿ ಸಿಗುವ ವಸ್ತುಗಳ ಬಳಕೆಯಿಂದ ನಾವು ಹಲವು ಆರೋಗ್ಯಕರ ಲಾಭ ಪಡೆಯಬಹುದು. ಅಂತಹ ಸಸ್ಯಗಳಲ್ಲೇ ಒಂದು ಮನೆಯ ಮುಂದೆ, ನಿಮ್ಮ ತೋಟದಲ್ಲಿ ಅಥವಾ ಛಾವಣಿಯ ಮೇಲೆ ಸುಲಭವಾಗಿ ಬೆಳೆಸಲು ಸಾಧ್ಯವಾಗುವ ದಾಸವಾಳ. ಸಾಮಾನ್ಯವಾಗಿ ಈ ಹೂವನ್ನು ಪೂಜೆಗೆ ಬಳಸುತ್ತಾರೆ.
  • ದಾಸವಾಳವನ್ನು ಡಯೆಟ್​ನ ಭಾಗವಾಗಿಯೂ ಬಳಸಬಹುದು. ಡಯೆಟ್ ಮಾಡಿ ಸುಸ್ತಾಗುವ ಅನುಭವ ಆಗಿದ್ದರೆ, ದಾಸವಾಳದ ಎಸಳುಗಳಿಂದ ಅಂತಹ ಅನುಭವವನ್ನು ಇಲ್ಲವಾಗಿಸಬಹುದು. ರಕ್ತದೊತ್ತಡ ನಿಯಂತ್ರಿಸುವಲ್ಲಿಯೂ ದಾಸವಾಳ ಕೆಲಸ ಮಾಡುತ್ತದೆ. ದಾಸವಾಳದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿದರೆ, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
  • ಕೂದಲಿನ ಸುರಕ್ಷತೆ ಕಾಪಾಡುವ ಹಲವು ಉತ್ಪನ್ನಗಳಲ್ಲಿ ದಾಸವಾಳ ಬಳಕೆಯಾಗಿರುವುದನ್ನು ನೀವು ಗಮನಿಸಿರಬಹುದು. ದಾಸವಾಳ ಕೂದಲಿನ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿದೆ. ಕೂದಲು ಬೆಳವಣಿಗೆ, ತಲೆಹೊಟ್ಟು ಕಡಿಮೆ ಮಾಡಲು ಸಹಕಾರಿಯಾಗಿದೆ. ರಾತ್ರಿ ಮಲಗುವ ವೇಳೆಗೆ ಹೂ ಮುಡಿದು ಮಲಗಿದರೂ ಸಾಕು. ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದಾಸವಾಳ ಸಹಾಯ ಮಾಡುತ್ತದೆ.
  • ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೂ ದಾಸವಾಳ ರಾಮಬಾಣವಾಗಿದೆ. ಋತುಚಕ್ರದ ಸಂದರ್ಭದಲ್ಲಿ ಹೆಚ್ಚು ರಕ್ತಸ್ರಾವವಾದರೆ ದಾಸವಾಳದ ಹೂವಿನ ದಳವನ್ನು ಜಗಿಯಬಹುದು. ಬೆಳಗ್ಗೆ ಎದ್ದು, ಐದಾರು ದಾಸವಾಳದ ಎಸಳು ಜಗಿದು, ನೀರು ಕುಡಿದರೆ ಗಂಭೀರ ಸಮಸ್ಯೆ ದೂರವಾಗಲು ಸಹಕಾರಿಯಾಗುತ್ತದೆ.

ಇತರೆ ಪ್ರಬಂಧಗಳು:

ಮಾನಸಿಕ ಆರೋಗ್ಯ ಪ್ರಬಂಧ

APBS Full Form in Kannada

Leave a Comment