ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information, 8 ಜ್ಞಾನಪೀಠ ಪ್ರಶಸ್ತಿ ವಿಜೇತರು, Jnanapeeta prashasti winners list in kannada

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಈ ಲೇಖನಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು

ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿ ಪಟ್ಟಿ ಹೀಗೆದೆ. ಕುವೆಂಪು, ದ.ರಾ ಬೇಂದ್ರೆ,ಶಿವರಾಮ ಕಾರಂತ,ಮಾಸ್ತಿ ವೆಂಕಟೇಶ ಅಯ್ಯಂಗಾರ್‌,ವಿ.ಕೃ ಗೋಕಾಕ್‌,ಯು.ಆರ್.‌ ಅನಂತಮೂರ್ತಿ,ಗಿರೀಶ್‌ ಕಾರ್ನಾಡ್‌,ಚಂದ್ರಶೇಖರ್‌ ಕಂಬಾರ. ಇವರು ಜ್ಞಾನಪೀಠ ಪ್ರಶಸ್ತಿ ಪಡೆದವರು.

೧.ಕುವೆಂಪು:

ಬಾಲ್ಯ:

ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ(ಡಿಸೆಂಬರ್‌ ೨೯,೧೯೦೪) ಜನಿಸಿದ್ದು.ಕುವೆಂಪು ಅವರ ತಾಯಿಯ ತವರೂರಾದ ಚಿಕ್ಕಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೂಡಿ ಎಂಬಲ್ಲಿ ಜನಿಸಿದರು.ತಂದೆ ವೆಂಕಟಪ್ಪ, ತಾಯಿ ಸೀತಾಮ್ಮ. ಅಗ್ರಮಾನ್ಯ ಕವಿ,ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಅವರ ಕಾವ್ಯನಾಮ ಕುವೆಂಪು, ಅವರು ಕವಿ,ಲೇಖಕ,ಫ್ರಾಧ್ಯಾಪಕ,ಪ್ರಾಂಶುಪಾಲ, ಕುಲಪತಿಯಾಗಿ ಅವರ ವೃತ್ತಿ ಜೀವನವನ್ನು ನೇಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡಿದರು.ಇವರು ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ ಶೈಲಿಯಲ್ಲಿ ರಚಿಸಿದ್ದಾರೆ.

ಶಿಕ್ಷಣ:

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್‌ ಮಿಷನ್‌ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ ಪದವಿಯನ್ನೂ, ಕನ್ನಡದಲ್ಲಿ ಎಂ.ಎ ಪದವಿಯನ್ನೂ ಪಡೆದರು.ಟಿ. ಎಸ್.‌ ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ವೃತ್ತಿಜೀವನ:

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಧ್ಯಾಪಕರೂ,ಪ್ರಾಂಶುಪಾಲರೂ ಅಗಿದ್ದರು. ನಂತರ ಉಪಕುಲಪತಿಗಳಾದರು.ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು.ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು. ನಂತರ ಅವರು ಹೇಮಾವತಿ ಅವರನ್ನು ಮದುವೆಯಾದರು. ಪೂರ್ಣಚಂದ್ರ ತೇಜಸ್ವಿ,ಕೋಕಿಲೋದಯ ಚೈತ್ರ,ಇಂದುಕಲಾ, ಹಾಗೂ ತಾರಿಣಿ ಅವರ ಮಕ್ಕಳು. ಅವರು ಸಾಹಿತ್ಯ ಕೃಷಿ, ಕೃತಿಗಳು, ನುಡಿನಮನ, ಸ್ಮಾರಕಗಳು, ಕುವೆಂಪು ಕರಿತು ಕೃತಿಗಳು,ನಾಟಕ-ಚಲನಚಿತ್ರ-ಧಾರಾವಾಹಿ, ಕೊಡುಗೆ ಅವರ ಕಾದಂಬರಿಗಳು, ನಾಟಕಗಳು, ಕಥಾ ಸಂಕಲನಗಳು.

೨.ದ.ರಾ. ಬೇಂದ್ರೆ:

ದತ್ತಾತ್ತೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು.ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ಬೇಂದ್ರೆಯವರು ೧೮೯೬ ಇಸವಿ ಜನವರಿ ೨೧ ರಂದು ಜನಿಸಿದರು. ತಂದೆ ರಾಮಚಂದ್ರಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ.

ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು.೧೯೧೮ರಲ್ಲಿ ಅವರ ಮೊದಲ ಕವನ”ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು.ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. “ಗರಿ”,”ಕಾಮಕಸ್ತೂರಿ”,”ಸೂರ್ಯಪಾನ”,”ನಾದಲೀಲೆ”,”ನಾಕುತಂತಿ”, ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಅವರು ಸಾಹಿತ್ಯ,ಕವನ ಸಂಕಲನ,ವಿಮರ್ಶೆ,ಪ್ರಶಸ್ತಿ,ಪುರಸ್ಕಾರ,ಬಿರುದುಗಳು ಲಾಭಿಸಿದೆ.

ಕವನ ಸಂಕಲನ:

*ಕೃಷ್ಣಾಕುಮಾರಿ

*ಗರಿ

*ಮೂರ್ತಿ ಮತ್ತು ಕಾಮಕಸ್ತೂರಿ.

*ಸಖೀಗೀತ

*ಉಯ್ಯಾಲೆ

*ನಾದಲೀಲೆ

*ಹಾಡುಪಾಡು

*ಗಂಗಾವತರಣ

*ಸೂರ್ಯಪಾನ

*ಜೀವಲಹರಿ….

ವಿಮರ್ಶೆ:

*ಸಾಹಿತ್ಯ ಸಂಶೋಧನೆ

*ವಿಚಾರ ಮಂಜರಿ

*ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ.

*ಮಹಾರಾಷ್ಟ್ರ ಸಾಹಿತ್ಯ

*ಕುಮಾರವ್ಯಾಸ ಪುಸ್ತಿಕೆ….

ಪ್ರಶಸ್ತಿಮತ್ತು ಪುರಸ್ಕಾರ:

*ಪದ್ಮಶ್ರೀ ಪ್ರಶಸ್ತಿ (೧೯೬೮)

*ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ

*ಕೇಂದ್ರ ಸಾಹಿತ್ಯ ಆಕಾಡೆಮಿಯ ಫೆಲೋಷಿಪ್‌ ಪಡೆದರು.

*ʼಅರಳು ಮರಳುʼ ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ……

ಮರಣ:

೧೯೮೧ ಅಕ್ಟೋಬರ ೨೬ರಲ್ಲಿ ಮುಂಬಯಿನಲ್ಲಿ ನಿಧನರದರು.

೩.ಶಿವಾಮ ಕಾರಂತ:

ಕೋಟಾ ಶಿವರಾಮ ಕಾರಂತ (ಅಕ್ಟೋಬರ್‌೧೦,೧೯೦೨-ಸೆಪ್ಟೆಂಬರ್‌ ೧೨,೧೯೯೭)-“ಕಡಲತೀರದ ಭಾರ್ಗವ”, ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ.ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ,ಪದ್ಮಭೂಷಣ, ಪಂಪ ಪ್ರಶಸ್ತಿ,ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್‌ ಪುರಸ್ಕರಗಳಿವೆ.

ಪರಿಸರ ಹೋರಟ:

ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ.ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಡಿದ ಕಾರಂತರು, ಕೈಗಾ ಅಣುವಿದ್ಯುತ್‌ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ಧಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪೀತಿಯ “ಕಾರಂತಜ್ಞ” ಅಗಿದ್ದರು.

ಕೃತಿಗಳು:

ಕವನ ಸಂಕಲನಗಳು:

೧.ರಾಷ್ಟ್ರಗೀತ ಸುಧಾಕರ

೨.ಸೀಳ್ಗವನಗಳು

ಕಾದಂಬರಿಗಳು:

೧.ಅದೇ ಊರು,ಅದೆ ಮರ

೨.ಅಳಿದ ಮೇಲೆ

೩.ಅಂಟಿದ ಅಪರಂಜಿ

೪.ಅಳ,ನಿರಾಳ

೫.ಇದ್ದರೂ ಚಿಂತೆ

೬.ಇನ್ನೊಂದೇ ದಾರಿ

೭.ಇಳೆಯೆಂಬ

೮.ಉಕ್ಕಿದನೊರೆ

೯.ಒಡಹುಟ್ಟಿದವರು

೧೦.ಒಂಟಿ ದನಿ……..ಇತರೆ

ಚಲನಚಿತ್ರವಾಗಿರುವ ಕಾದಂಬರಿಗಳು:

೧.ಕುಡಿಯರ ಕೂಸು

೨.ಚಿಗುರಿದ ಕನಸು

೩.ಚೋಮನ ದುಡಿ

೪.ಬೆಟ್ಟದ ಜೀವ

೫.ಮೂಕಜ್ಜಿಯ ಕನಸುಗಳು

ನಾಟಕ:

೧.ಅವಳಿ ನಾಟಕಗಳು

೨.ಏಕಾಂಕ ನಾಟಕಗಳು

೩.ಐದು ನಾಟಕಗಳು

೪.ಕಟ್ಟೆ ಪುರಾಣ

೫.ಕರ್ಣಾರ್ಜುನ

೬.ಕಠಾರಿ ಭೆರವ

೭.ಕೀಚಕ ಸೈರಂಧ್ರಿ

೮.ಗರ್ಭಗುಡಿ

೯.ಗೀತ ನಾಟಕಗಳು

೧೦.ಜಂಬದ ಜಾನಕಿ………..ಇತರೆ

ಸಣ್ಣ ಕತೆ:

*ಕವಿಕರ್ಮ

*ತೆರೆಯ ಮರೆಯಲ್ಲಿ

*ಹಸಿವು

*ಹಾವು

ಹರಟೆ/ವಿಡಂಬನೆ:

*ಗ್ನಾನ

*ಚಿಕ್ಕ ದೊಡ್ಡವರು

*ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು

*ಮೈಲಿಕಲ್ಲಿನೊಡನೆ ಮಾತುಕತೆಗಳು

*ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ:

*ಅಪೂರ್ವ ಪಶ್ಚಿಮ

*ಅರಸಿಕರಲ್ಲ

*ಅಬೂವಿನಿಂದ ಬರಾಮಕ್ಕೆ

*ಪಾತಾಳಕ್ಕೆ ಪಯಣ

*ಪೂರ್ವದಿಂದ ಅತ್ಯಪೂರ್ವಕ್ಕೆ

*ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ:

*ಸ್ಮೃತಿಪಟಲದಿಂದ

*ಹುಚ್ಚು ಮನಸ್ಸಿನ ಹತ್ತು ಮುಖಗಳು……ಇತರೆ ಹಲಾವರು ರಚಿಸಿದ್ದಾರೆ.

೪.ಮಾಸ್ತಿ ವೆಂಕಟೇಶ ಅಯ್ಯಂಗಾರ್:‌

ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್‌ ೬,೧೮೯೧-ಜೂನ್‌ ೬,೧೯೮೬) ಕನ್ನಡದ ಒಬ್ಬ ಅಪ್ರತಿಮ ಲೇಖಕರು.ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು.ಇವರು ಶ್ರೀನಿವಾಸ್‌ ಎಂಬ ಕಾವ್ಯ ನಾಮದಡಿಯಲ್ಲಿ ಬರೆಯುತ್ತಿದರು.ಮಾಸ್ತಿ ಕನ್ನಡದ ಆಸ್ತಿ ಎಂದು ಪ್ರಖ್ಯಾತಿ ಹೊಂದಿದರು. ಇವರು ಸಣ್ಣಕಥೆಗಳ ಜನಕ ಎಂದು ಕರೆಯುತ್ತಾರೆ.

ಬಾಲ್ಯ ಜೀವನ:

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಲಿ ಜೂನ್‌ ೬,೧೮೯೧ರಂದು ಜನಿಸಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಅವರ ವಿದ್ಯಾಬ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು.ಅವರು ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ,ಮಳವಳ್ಳಿ,ಮೈಸೂರು,ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು.ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಬೇರೆಯರಿಗೂ ಬಿಟ್ಟುಕೊಡಲಿಲ್ಲ.

ಸಾಹಿತ್ಯ:

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ.ಎಂಥ ಕಷ್ಟ ಕಾಲದಲ್ಲೂ ಅವರ ಜೀವನವನ್ನೆದುರಿಸಿದವರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು.ಜಿ ಪಿ ರಾಜರತ್ನ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ೧೯೧೦ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ʼಮಾತುಗಾರ ರಾಮಣ್ಣʼ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩.ಇದರಲ್ಲಿ ಸಣ್ಣಕತೆಗಳು,ಕಾದಂಬರಿಗಳು,ನಾಟಕಗಳು,ವಿಮರ್ಶೆಗಳು,ಪ್ರಬಂಧಗಳು,ಧಾರ್ಮಿಕ ಕೃತಿಗಳು ಅನುವಾದ “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು

ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ,ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನು ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು

ರವೀಂದ್ರನಾಥ ಠಾಕೂರ್‌, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ,ಶಿವಾಜಿ, ಮೊದಲಾದ ನಾಟಕಗಳನ್ನು ಮಾಸ್ತಿ ಅವರು ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು ಜ್ಞಾನಪೀಠ ಪ್ರಶಸ್ತಿಗಳಿಸಿದ ಕೃತಿ ಚಿಕವೀರ ರಾಜೇಂದ್ರ-ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕರಿತದ್ದು.ಮತ್ತೊಂದು”ಚನ್ನಬಸವನಾಯಕ”

ಕಾದಂಬರಿ:

*ಚನ್ನಬಸವ ನಾಯಕ(೧೯೫೦)

*ಚಿಕವೀರ ರಾಜೇಂದ್ರ(೧೯೫೬)

ಪ್ರಶಸ್ತಿಗಳು:

*ಜ್ಞಾನಪೀಠ ಪ್ರಶಸ್ತಿ(೧೯೮೩) (ಚಿಕವೀರ ರಾಜೇಂದ್ರ ಕೃತಿಗೆ)

*ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್(‌೧೯೭೭)

*ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್(‌೧೯೫೬)

*ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮)

*ಕನ್ನಡ ಸಾಹಿತ್ಯ ಪರಿಷತ್ತಿನ ಅಧಕ್ಷ ಪದವಿ (೧೯೫೩)

*ದಕ್ಷಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬)

೫.ವಿನಾಯಕ ಕೃಷ್ಣ‌ ಗೋಕಾಕ್:

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ,ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್‌ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರ ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ದಿ, ಪ್ರಸಿದ್ದಿಗಳನ್ನು ಪಡೆದರು.

ಬಾಲ್ಯ ಜೀವನ:

೧೯೦೯ರ ಆಗಸ್ಟ್‌ ೯ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕ ಹುಟ್ಟದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು.

ವಿನಾಯಕರ ವಿದ್ಯಾಬ್ಯಾಸ ಸವಣೂರು ಧಾರಾವಾಡಗಳಲ್ಲಿ ನಡೆಯಿತು. ಬೇಂದ್ರ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಅಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ. ಇಂಗ್ಲೀಷ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.

ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು.ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕ ೧೯೯೨ ಎಪ್ರಿಲ್‌ ೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು.

ಕೃತಿಗಳು:

ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್‌ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು.

ಕಾದಂಬರಿಗಳು:

*ಸಮರಸವೇ ಜೀವನ.

*ಇಜ್ಜೋಡು.

*ಏರಿಳಿತ.

*ಸಮುದ್ರಯಾನ.

*ನಿರ್ವಹಣ ನರಹರಿ.

ಕವನ ಸಂಕಲನಗಳು:

*ಕಲೋಪಾಸಕ.

*ಪಯಣ.

*ಸಮುದ್ರಗೀತೆಗಳು.

*ನವ್ಯ ಕವಿಗಳು.

*ತ್ರಿಶಂಕುವಿನ ಪ್ರಜ್ಞಾ ಪ್ರಭಾತ.

*ಊರ್ಣನಾಭ.

*ಉಗಮ.

*ಬಾಳದೇಗುಲದಲ್ಲಿ.

*ಭಾರತ ಸಿಂಧೂರ………ಇತರೆ

ಸಾಹಿತ್ಯ ವಿಮರ್ಶೆ:

*ಕವಿಕಾವ್ಯ ಮಹೋನ್ನತಿ

*ನವ್ಯ ಮತ್ತು ಕಾವ್ಯ ಜೀವನ.

*ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು.

*ಸಾಹಿತ್ಯದಲ್ಲಿ ಪ್ರಗತಿ.

*ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು.

ಪ್ರವಾಸ ಕಥನ:

*ಪಯಣಿಗ.

*ಸಂತೋಷ.

ಅವರ ಗೌರವಗಳು ಸಾಹಿತ್ಯ-ಸಂಸ್ಕೃಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವನ್ನುನೀಡಿ ಸನ್ಮಾನಿಸಿದೆ.

೬.ಯು.ಆರ್.‌ ಅನಂತಮೂರ್ತಿ:

ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿ ʼಮೇಳಿಗೆʼ ಹಳ್ಳಿಯಲ್ಲಿ ೧೯೩೨ರ ಡಿಸೆಂಬರ್‌ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ,ತಾಯಿ ಸತ್ಯಮ್ಮ(ಸತ್ಯಭಾಮ) ಅವರು ಕನ್ನಡ ಸಾಹಿತಿಗಳಲ್ಲೋಬ್ಬರು. ಇಂಗ್ಲೀಷ್‌ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ವಿದ್ಯಾಭ್ಯಾಸ:

ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದಾಭ್ಯಾಸವನ್ನು ಅರಂಭಿಸಿದರು. ನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಸಿದರು. ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ನಂತರ ಅನಂತಮೂರ್ತಿ ೧೯೭೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಷ್‌ ವಿಭಾಗದಲ್ಲಿ ಪ್ರಧ್ಯಾಪಕ ಮತ್ತು ಬೋಧಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಕೃತಿಗಳು:

ಕಥಾ ಸಂಕಲನ:

*ಎಂದೆಂದೂ ಮುಗಿಯದ ಕತೆ(೧೯೫೫)

*ಪ್ರಶ್ನೆ(೧೯೬೩)

*ಮೌನಿ(೧೯೭೨)

*ಆಕಾಶ ಮತ್ತು ಬೆಕ್ಕು(೨೦೦೧)

*ಕ್ಲಿಪ್‌ ಜಾಯಿಂಟ್‌

*ಘಟಶ್ರಾದ್ಧ

*ಸೂರ್ಯನ ಕುದುರೆ

*ಎರಡು ದಶಕದ ಕತೆಗಳು…..ಇತರೆ.

ಕಾದಂಬರಿಗಳು:

ಸಂಸ್ಕಾರ(೧೯೬೫)

*ಭಾರತೀಪುರ(೧೯೭೩)

*ಅವಸ್ಥೆ

*ಭವ(೧೯೯೪)

*ದಿವ್ಯ(೨೦೦೧)….ಇತರೆ.

ನಾಟಕ:

ಅವಾಹನೆ(೧೯೬೮)

ಕವನ ಸಂಕಲನ:

*ಹದಿನೈದು ಪದ್ಯಗಳು

*ಮಿಥುನ

*ಅಜ್ಜನ ಹೆಗಲ ಸುಕ್ಕುಗಳು

*ಅಭಾವ

*ಸಮಸ್ತ ಕಾವ್ಯ

ಆತ್ಮ ಕತೆ:

*ಸುರಗಿ

*ಮೊಳಕೆ

ಚಲನಚಿತ್ರವಾದ ಕೃತಿಗಳು:

*ಘಟಶ್ರಾದ್ದ

*ಸಂಸ್ಕಾರ

*ಬರ

*ಅವಸ್ಥೆ

*ಮೌನಿ…

ಪ್ರಶಸ್ತಿ ಮತ್ತು ಪುರಸ್ಕಾರಗಳು:

*ಕೃಷ್ಣರಾವ್‌ ಚಿನ್ನದ ಪದಕ(೧೯೫೮)

*ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ(೧೯೮೩)

*ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೧೯೮೩)

*ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ

ನಿಧನ:

ಡಾ. ಅನಂತಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಲಘು ಹೃದಯಾಘಾತದಿಂದ ೨೦೧೪ ರ ಅಗಸ್ಟ್‌ ೨೨ರಂದು ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

೭.ಗಿರೀಶ್‌ ಕಾರ್ನಾಡ್:‌

ಗಿರೀಶ್‌ ಕಾರ್ನಾಡ್‌ರು ೧೯೩೮ ಮೇ ೧೯ ರಂದು ಮಹರಾಷ್ಟದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್‌ ಕಾರ್ನಾಡ್‌ , ತಾಯಿ ಕೃಷ್ಣಾ ಬಾಯಿ. ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ನಿರ್ದೇಶಕ,ಸಿನಿಮಾನಟ, ಚಿಂತಕ ಹಾಗೂ ಹೋರಾಟಗಾರರು. ಇವರು ಕನ್ನಡ, ಇಂಗ್ಲೀಷ ಭಾಷೆಗಳಲ್ಲಿ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. ಇವರು ಜೂನ್‌೧೦,೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು.

ನಾಟಕ ರಚನೆ:

ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡ್‌ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರಾವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು.ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜು ಮಲ್ಲಿಗೆ,ನಾಗಮಂಡಲ,ತಲೆದಂಡ, ಹಾಗೂ ಅಗ್ನಿ ಮತ್ತು ಮಳೆ.

ನಾಟಕಗಳು:

*ಮಾ ನಿಷಾಧ- ಏಕಾಂಕ ನಾಟಕ

*ತುಘಲಕ್‌

*ಯಯಾತಿ

*ಅಂಜುಮಲ್ಲಿಗೆ

*ಹಿಟ್ಟಿನ ಹುಂಜ ಅಥವಾ ಬಲಿ

*ನಾಗಮಂಡಲ

*ತಲೆದಂಡ

*ಒಡಕಲು ಬಿಂಬ……..

ಪ್ರಶಸ್ತಿಗಳು:

*ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

*ಗುಬ್ಬಿ ವೀರಣ್ಣ ಪ್ರಶಸ್ತಿ.

*ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ.

*ಪದ್ಮಶ್ರೀ(೧೯೭೪)

*ಪದ್ಮಭೂಷಣ(೧೯೯೨)

*ಜ್ಞಾನಪೀಠ(೧೯೯೮)

*ಕಾಳಿದಾಸ ಸಮ್ಮಾನ್‌…..

೮.ಡಾ.ಚಂದ್ರಶೇಖರ ಕಂಬಾರ:

ಡಾ.ಚಂದ್ರಶೇಖರ ಕಂಬಾರ (ಜನನ-ಜನವರಿ ೨,೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು.ಇವರು ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ವೃತ್ತಿಜೀವನ:

ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಅವರ ಸಾಹಿತ್ಯದ ಗುರು ಎಂದೇ ಗುರುತಿಸಲ್ಪಟ್ಟ ಶ್ರೀಗೋಪಾಲಕೃಷ್ಣ ಅಡಿಗರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಾಗರದ ಲಾಲ್‌ ಬಹದೂರ್‌ ಕಲಾ, ವಿಜ್ಞಾನ ಮತ್ತು ಎಸ್.ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಕೃತಿಗಳು:

ಕಾವ್ಯಗಳು:

*ಮುಗುಳು (೧೯೫೮)

*ಹೇಳತೇನ ಕೇಳ (೧೯೬೪)**

*ತಕರಾರಿನವರು.

*ಸಾವಿರಾರು ನೆರಳು.

*ಬೆಳ್ಳಿ ವೀನು

*ಅಕ್ಕಕ್ಕು ಹಾಡುಗಳೆ…..

ನಾಟಕಗಳು:

*ಬೆಂಬತ್ತಿದ ಕಣ್ಣು

*ನಾರ್ಸಿಸ್ಸ್‌

*ಜೋಕುಮಾರಸ್ವಾಮಿ

*ಕಿಟ್ಟಿಯ ಕಥೆ

*ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ…

ಈ ಮೂಲಕ ನಮ್ಮ ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು. ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.ಹಾಗೆ ಮುಂದೆ ಇನ್ನೂ ಹೆಚ್ಚು ಪ್ರಶಸ್ತಿಗಳು ಲಾಭಿಸಲಿ.

ಇತರೆ ಪ್ರಬಂಧ:

FAQ

ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಕುವೆಂಪು ಅವರ ʼಶ್ರೀ ರಾಮಾಯಣ ದರ್ಶನಂʼ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಕಿದೆ.

ಶಿವರಾಮ ಕಾರಂತರ ತಂದೆ ತಾಯಿಯ ಹೆಸರು?

ಶಿವರಾಮ ಕಾರಂತರ ತಂದೆ ಶ್ರೇಷ ಕಾರಂತ,ತಾಯಿ ಲಕ್ಷೀ ಕಾರಂತ.

ಕಡಲ ತೀರದ ಭಾರ್ಗವ ಯಾರು?

ಶಿವರಾಮ ಕಾರಂತ ಅವರನ್ನು ಕಡಲ ತೀರ ಭಾರ್ಗವ ಎಂದು ಕರೆಯುತ್ತಾರೆ.

ಇತರೆ ಪ್ರಬಂಧಗಳು:

ಸಾವಯವ ಕೃಷಿ ಪ್ರಬಂಧ | savayava krishi prabandha in kannada

ನನ್ನ ಕನಸಿನ ಭಾರತ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

Leave a Comment