ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ, Kannada Bhashe Mattu Samskruthi Essay, Kannada Bhashe Mattu Samskruthi Prabandha in Kannada

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ:

ಈ ಲೇಖನಿಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ. ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

ಪೀಠಿಕೆ:

ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ… ಕನ್ನಡ. ಕಸ್ತೂರಿ. ಕನ್ನಡ. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. “ಕನ್ನಡ ಭಾಷೆ ನಮ್ಮ ಸಂಸ್ಕೃತಿ”, ಭಾರತವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದು ನಮ್ಮ ಗುರುತಾಗಿದೆ. ಧರ್ಮ, ಕಲೆ, ಬೌದ್ಧಿಕ ಸಾಧನೆಗಳು ಅಥವಾ ಪ್ರದರ್ಶನ ಕಲೆಗಳಲ್ಲಿ ಅದು ನಮ್ಮನ್ನು ವರ್ಣರಂಜಿತ, ಶ್ರೀಮಂತ ಮತ್ತು ವೈವಿಧ್ಯಮಯ ರಾಷ್ಟ್ರವನ್ನಾಗಿ ಮಾಡಿದೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ ಮಾರ್ಗದರ್ಶಿಯಾಗಿ ಆಗಿದೆ.

ಇತಿಹಾಸ:

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.ಪ್ರಸ್ತುತದಲ್ಲಿ, ಕನಿಷ್ಠ ಮೂರು ಪ್ರಾದೇಶಿಕ ಉಪಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ-ಕನ್ನಡ ಹಾಗೂ ಮಂಗಳೂರು-ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ.

ಅಶೋಕನ ಶಿಲಾಶಾಸನಗಳ ಮೂಲಕ ಭಾರತದೆಲ್ಲೆಡೆ ಆರಂಭಿಕ ಲಿಪಿಯಾಗಿ ಜನಪ್ರಿಯಗೊಂಡು, ಎಲ್ಲ ಆಧುನಿಕ ಭಾರತೀಯ ಭಾಷೆಗಳಿಗೆ ಮೂಲ-ಲಿಪಿಯಾದ ಬ್ರಾಹ್ಮೀ ಲಿಪಿಯಿಂದ ಕನ್ನಡ ಭಾಷೆಯ ಲಿಖಿತ ಲಿಪಿರೂಪಗಳನ್ನೂ ಪಡೆದುಕೊಳ್ಳಲಾಗಿದೆ. ಕ್ರಿ.ಶ. ೪೫೦ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯ ಪ್ರಾರಂಭಿಕ ರೂಪವು ದೊರೆತಿದೆ.

ಬಾದಾಮಿ ಚಾಲುಕ್ಯರ ಸಂಸ್ಕೃತದ ಅನೇಕ ಶಾಸನಗಳನ್ನು ಈ ಲಿಪಿಯಲ್ಲೆ ಬರೆಯಲಾಗಿದೆ. ಕನ್ನಡ ಲಿಪಿಯು ನಿರಂತರವಾಗಿ ಬದಲಾವಣೆ ಆಗುತ್ತಲೇ ಇದ್ದು ಇಂದಿನ ಕನ್ನಡ ಲಿಪಿಯು, ಸುಮಾರು ೨,೦೦೦ ವರ್ಷಗಳ ಕಾಲಾವಧಿಯಲ್ಲಿ ಇಂತಹ ವಿಕಸನೀಯ ಬದಲಾವಣೆಗಳಿಂದ ಉಂಟಾದುದು. ಬದಲಾಗದ ಏಕರೂಪ ದೊಂದಿಗೆ ಯಾಂತ್ರಿಕವಾಗಿ ನಕಲಾಗುವ ಅಕ್ಷರ ರೂಪಗಳನ್ನು ನೀಡುವ ಮುದ್ರಣವನ್ನು ಪರಿಚಯಿಸಿದ ಮೇಲೆ, ಪ್ರಸ್ತುತ ಲಿಪಿರೂಪವನ್ನು ಪ್ರಮಾಣೀಕೃತಗೊಳಿಸಲಾಯಿತು.

ಕ್ರಿ.ಶ. ಆರನೆಯ ಶತಮಾನದಿಂದ ಕನ್ನಡದಲ್ಲಿ ಹೊರಡಿಸಿದ ಅನೇಕ ರಾಜಾಜ್ಞೆಗಳನ್ನು ನೋಡಿದಾಗ, ಪ್ರಾಕೃತ ಹಾಗೂ ಕನ್ನಡ ಭಾಷೆಗಳನ್ನು ಪ್ರಾರಂಭಿಕ ಮತ್ತು ನಂತರದ ಕಾಲಗಳಲ್ಲಿ ಕ್ರಮವಾಗಿ ಬಳಸಿದರೂ, ನಂತರ ಬಂದ ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನೂ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕದಂಬರ ಹಲ್ಮಿಡಿ ಶಿಲಾಶಾಸನ ಹಾಗೂ ಚಾಲುಕ್ಯರ ಬಾದಾಮಿ ಗುಹಾ ಶಾಸನೆಗಳು ರಾಜಾನುದಾನಗಳನ್ನು ಘೋಷಿಸುವ ಅತ್ಯಂತ ಪುರಾತನ ಕನ್ನಡ ದಾಖಲೆಗಳಾಗಿವೆ. ಕಾರ್ಯರೂಪಕ ಭಾಗವನ್ನು ಕನ್ನಡದಲ್ಲಿ ಬರೆಯಲಾಗಿದೆ. ವಿಜಯನಗರ ಅರಸರಿಗೆ ಸೇರಿದ ಅನೇಕ ದಾಖಲೆಗಳು ಕನ್ನಡದಲ್ಲಿವೆ. ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರು ಹಾಗೂ ಮೈಸೂರಿನ ಒಡೆಯರೂ ಕೂಡ, ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದರು.

ಬಿಜಾಪುರದ ಅರಸರು, ಶಾಹಜಿ, ಏಕೋಜಿ ಹಾಗೂ ಶಿವಾಜಿಯ ಶಾಸನ ಹಾಗೂ ರಾಜಾಜ್ಞೆಗಳು ಕನ್ನಡದಲ್ಲಿವೆ. ಆಡಳಿತ ಹಾಗೂ ಸಾಮಾನ್ಯ ಉದ್ದೇಶಗಳೆರಡಕ್ಕೂ ಬ್ರಿಟಿಷರು ಕೊಡಗಿನ ಅರಸರು ಹಾಗೂ ಮೈಸೂರು ಒಡೆಯರು ಕನ್ನಡವನ್ನು ವಿಸ್ತೃತವಾಗಿ ಬಳಸಿದರು. ಪ್ರಸ್ತುತದಲ್ಲಿ, ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಮಾಡಿದ್ದು ಭಾಷೆಯನ್ನು ಉತ್ತೇಜಿಸಲು ಹಾಗೂ ರಾಜ್ಯ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲೂ ಅದರ ಬಳಕೆಯನ್ನು ಅನುಷ್ಠಾನಕ್ಕೆ ತರಲು ಹಾಗೂ ಭಾಷೆಯನ್ನು ಬಳಸಲು ಹಲವಾರು ಯೋಜನೆ ಹಾಗೂ ಕ್ರಮಗಳನ್ನು ಅನುಷ್ಠಾನ ಮಾಡಿದೆ. ಹಾಗಾಗಿ ಕನ್ನಡ ಭಾಷೆಗೆ ಸರ್ಕಾರ ಹಾಗೂ ಜನಸಾಮಾನ್ಯರಿಂದಲೂ ಒತ್ತಾಸೆ ದೊರಕಿದೆ.

ಕನ್ನಡ ಭಾಷೆ:

ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿದ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ. ನಾವು ನಮ್ಮ ಕನ್ನಡದ ಸುಗ್ಗಿಯನ್ನು ಕೇವಲ ನವೆಂಬರ್ ಮಾಸದಲ್ಲಿ ಮಾತ್ರವಲ್ಲ ಪ್ರತಿ ದಿನ ಆಚರಿಸಬೇಕು.

ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ನಾವು ದೇಶದ ಯಾವುದೇ ಮೂಲೆಯಲ್ಲಿದ್ದರು ಕನ್ನಡವನ್ನು ಉಳಿಸಿ, ಬೆಳೆಸುವ ಸಂಸ್ಕೃತಿ ಪ್ರತಿಯೊಬ್ಬನ ಕನ್ನಡಿಗನದಾಗಲಿ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ.

ಬೇಲೂರು, ಹಳೇಬೀಡು, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪ ಕಲೆಯು ಕಾವ್ಯವಾಗಿ ಮೈದಳೆದಿದೆ. ಪಂಪ, ರನ್ನ, ಜನ್ನರ ಕಾವ್ಯದ ಸೊಗಸು ಕಾಲವನ್ನೂ ಮೆಟ್ಟಿ ತಮ್ಮ ಚಿರಂತನತೆಯನ್ನು ಮೆರೆಯುತ್ತಿದೆ. ಕನ್ನಡ ಎಂದರೆ ಕೇವಲ ವರ್ಣಮಾಲೆಯಲ್ಲ, ಅದು ಕರುನಾಡ ನೆಲ, ಜಲ, ಜನ, ಬದುಕು, ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ ಎಲ್ಲವನ್ನೂ ಒಳಗೊಂಡಿದೆ. ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಬಸವೇಶ್ವರ, ರನ್ನ-ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು.

ಚಾಮುಂಡಿ ರಕ್ಷೆಯು ನಮಗೆ ಶೃಂಗೇರಿ ಶಾರದೆ ವೀಣೆ- ರಸತುಂಗೆ ಆಗಿದೆ ಇಲ್ಲಿ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ.

ಈ ಪ್ರದೇಶವನ್ನು ಮೊದಲಿಗೆ ‘ಕರಿಯ ಮಣ್ಣಿನ ನಾಡು’ ಎಂದೂ, ‘ಕರುನಾಡು‘ ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, ‘ಕಮ್ಮಿತ್ತು ನಾಡು’ ಎಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು ಎಂದೂ ಕರೆಯುತ್ತಿದ್ದರು.

ಕನ್ನಡ ಸಂಸ್ಕೃತಿ:

ನಮ್ಮ ನೆರೆಯ ಸಂಸ್ಕೃತಿಗಳಿಗೆ ಹೋಲಿಸಿದರೆ ನಾವು ಅನೇಕ ಸಾಂಸ್ಕೃತಿಕ ಹೋಲಿಕೆಗಳನ್ನು ನೋಡುತ್ತೇವೆ ಮತ್ತು ಭಾಷೆ ಸಂಸ್ಕೃತಿಯ ವಿಶಿಷ್ಟ ಗುರುತಾಗುತ್ತದೆ. ಅದೇ ಸಮಯದಲ್ಲಿ, ಕರ್ನಾಟಕ ಮತ್ತು ಕನ್ನಡ ಭಾಷೆಯ ಪ್ರದೇಶಗಳ ಒಂದೇ ವ್ಯಾಪ್ತಿಯಲ್ಲಿ, ನಾವು ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಗಳು ಮತ್ತು ಬಳಕೆಗಳನ್ನು ನೋಡುತ್ತೇವೆ. ಆದ್ದರಿಂದ ಇಡೀ ಸಂಸ್ಕೃತಿಯ ಪ್ರಧಾನ ಲಕ್ಷಣವಾಗಿ ಭಾಷೆಯನ್ನು ಮಾತ್ರ ಪರಿಗಣಿಸುವ ಮಿತಿಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಸಂಸ್ಕೃತಿಯು ತನ್ನ ಅಭಿವ್ಯಕ್ತಿಗೆ ಕೇವಲ ಭಾಷೆಯ ಮೇಲೆ ಅವಲಂಬಿತವಾಗಿಲ್ಲ.

ಭಾರತವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅದು ನಮ್ಮ ಗುರುತಾಗಿದೆ. ಧರ್ಮ, ಕಲೆ, ಬೌದ್ಧಿಕ ಸಾಧನೆಗಳು ಅಥವಾ ಪ್ರದರ್ಶನ ಕಲೆಗಳಲ್ಲಿ ಅದು ನಮ್ಮನ್ನು ವರ್ಣರಂಜಿತ, ಶ್ರೀಮಂತ ಮತ್ತು ವೈವಿಧ್ಯಮಯ ರಾಷ್ಟ್ರವನ್ನಾಗಿ ಮಾಡಿದೆ. ಭಾರತೀಯ ಸಂಸ್ಕೃತಿ ಮಾರ್ಗದರ್ಶನವಾಗಿದೆ.

ಜನರು ಇಂದು ಆಧುನಿಕರಾಗಿದ್ದರೂ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಆಚರಣೆಗೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾರೆ. ಆದ್ದರಿಂದ, ನಾವು ಇನ್ನೂ ಬದುಕುತ್ತಿದ್ದೇವೆ ಮತ್ತು ರಾಮಾಯಣ ಮತ್ತು ಮಹಾಭಾರತದಿಂದ ಮಹಾಕಾವ್ಯದ ಪಾಠಗಳನ್ನು ಕಲಿಯುತ್ತಿದ್ದೇವೆ. ಅಲ್ಲದೆ, ಗುರುದ್ವಾರಗಳು, ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳಿಗೆ ಜನರು ಇನ್ನೂ ಸೇರುತ್ತಾರೆ.

ಭಾರತವು ಅನೇಕ ಸಂಸ್ಕೃತಿಗಳನ್ನು ಹೀರಿಕೊಂಡು ಮುನ್ನಡೆದಿರುವುದರಿಂದ ಪ್ರಬಲ ಮತ್ತು ಬಹು-ಸಂಸ್ಕೃತಿಯ ಸಮಾಜವಾಗಿ ನಿಂತಿದೆ. ಇಲ್ಲಿನ ಜನರು ವಿವಿಧ ಧರ್ಮ , ಸಂಪ್ರದಾಯ ಮತ್ತು ಪದ್ಧತಿಗಳನ್ನು ಅನುಸರಿಸಿದ್ದಾರೆ.

ಭಾರತದಲ್ಲಿನ ಸಂಸ್ಕೃತಿಯು ಜನರ ಜೀವನ, ಆಚರಣೆಗಳು, ಮೌಲ್ಯಗಳು, ನಂಬಿಕೆಗಳು, ಅಭ್ಯಾಸಗಳು, ಕಾಳಜಿ, ಜ್ಞಾನ, ಇತ್ಯಾದಿಗಳಿಂದ ಎಲ್ಲವೂ ಆಗಿದೆ. ಅಲ್ಲದೆ, ಭಾರತವನ್ನು ಅತ್ಯಂತ ಹಳೆಯ ನಾಗರಿಕತೆ ಎಂದು ಪರಿಗಣಿಸಲಾಗಿದೆ.ಅಲ್ಲಿ ಜನರು ತಮ್ಮ ಹಳೆಯ ಕಾಳಜಿ ಮತ್ತು ಮಾನವೀಯತೆಯನ್ನು ಇನ್ನೂ ಅನುಸರಿಸುತ್ತಾರೆ.ಅನೇಕ ವಿಭಿನ್ನ ಯುಗಗಳು ಬಂದು ಹೋಗಿವೆ ಆದರೆ ನಿಜವಾದ ಸಂಸ್ಕೃತಿಯ ಪ್ರಭಾವವನ್ನು ಬದಲಾಯಿಸಲು ಯಾವುದೇ ಯುಗವು ತುಂಬಾ ಶಕ್ತಿಯುತವಾಗಿಲ್ಲ.

ಕನ್ನಡ ಸಂಸ್ಕೃತಿಯಲ್ಲಿ ಜಾನಪದ ನೃತ್ಯ, ಹಾಡು, ನಾಟಕ, ಕಲೆ, ವೇಷಭೂಷಣಗಳು ಆಚರಣೆಗಳು, ಆಡಂಬರಗಳು ಕನ್ನಡದ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಹತ್ವ:

ಭಾರತದ ವಿವಿಧ ಪ್ರಾದೇಶಿಕ ಭಾಷೆಗಳು ಸಂಸ್ಕೃತದ ಪ್ರಭಾವಕ್ಕೆ ಒಳಗಾಗುವುದರೊಂದಿಗೆ ಹಾಗೂ ಸಂಸ್ಕೃತ ಹಾಗೂ ಇತರ ಭಾಷೆಗಳ ನಡುವಣ ಸಂಬಂಧವು ಸದಾಕಾಲ ಆತ್ಮೀಯ, ಸ್ವಾಭಾವಿಕ ಹಾಗೂ ಗಾಢವಾಗಿದೆ. ಶತಮಾನಗಳ ಕಾಲ, ಸಂಸ್ಕೃತ ಚಿಂತನೆಗಳು ಹಾಗೂ ಸಂಸ್ಕೃತಿಯ ಆದರ್ಶಗಳು ಅವಿರತವಾಗಿ ಹರಿಯುವ ಒಂದು ಮಾರ್ಗವಾಗಿ ಕನ್ನಡ ಸಾಹಿತ್ಯವು ಅಕ್ಷರಶಃ ಕಾರ್ಯ ನಿರ್ವಹಿಸಿತು. ಸಂಸ್ಕೃತ ಚಿಂತನೆ ಹಾಗೂ ಚೈತನ್ಯದ ಸುಸಂಗತವಾದ ಸಮೀಕರಣವು ನಡೆಯದಿದ್ದಲ್ಲಿ, ಕರ್ನಾಟಕ ಸಾಹಿತ್ಯವು ತನ್ನ ಶ್ರೀಮಂತ ವೈವಿಧ್ಯತೆ ಹಾಗೂ ಅಮೋಘ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ ಬರಹಗಾರರಿಗೆ ಸಂಸ್ಕೃತವು ಮಾನದಂಡವನ್ನು ಸ್ಥಾಪಿಸಿ ಉತ್ತಮ ಬರವಣಿಗೆಯ ನಿಯಮಗಳನ್ನು ಒದಗಿಸಿತು.ತತ್ವಚಿಂತನೆ, ನೈತಿಕತೆ, ಕಾವ್ಯ ಹಾಗೂ ಸಾಹಿತ್ಯಕ, ವಿಜ್ಞಾನಗಳಲ್ಲಿ ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕವು ಮೆಚ್ಚುವಂತಹ ಕೊಡುಗೆಯನ್ನು ನೀಡಿದೆ.

ಕರ್ನಾಟಕದ ಪ್ರಾರಂಭಿಕ ಜೈನ ಬರಹಗಾರರು ಮೂಲತಃ ಪ್ರಾಕೃತದಲ್ಲಿ ಬರೆದರಾದರೂ ನಂತರ ಸಂಸ್ಕೃತದಲ್ಲಿ ಬರೆದಿದ್ದಾರೆ. ಕನ್ನಡದಲ್ಲಿ ಬರವಣಿಗೆಯನ್ನು ಪ್ರಾರಂಭಿಸುವ ಮುನ್ನ, ಅನೇಕ ಪ್ರಾಕೃತ ಹಾಗೂ ಸಂಸ್ಕೃತ ಕೃತಿಗಳನ್ನು ಕರ್ನಾಟಕದ ಜೈನ ವಿದ್ವಾಂಸರು ರಚಿಸಿದರು. ಹೊಯ್ಸಳರ ಕಾಲದಲ್ಲಿ, ಸಂಸ್ಕೃತ ಕಾವ್ಯಕ್ಕೆ ವಿದ್ಯಾಚಕ್ರವರ್ತಿ ಕುಟುಂಬವು ಗಣನೀಯ ಕೊಡುಗೆಗಳನ್ನು ನೀಡಿತು

ತುಳು ಭಾಷೆಯು, ದ್ರಾವಿಡ ಕುಲಕ್ಕೆ ಸೇರಿದ ಪುರಾತನ ಭಾಷೆಗಳಲ್ಲಿ ಒಂದು. ತುಳು ಮಾತನಾಡುವ ತುಳುವ ಜನರನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕವಾಗಿ ಕಾಣಬಹುದು. ಉತ್ತರದಲ್ಲಿ ಕಲ್ಯಾಣಪುರ ನದಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಪಯಸ್ವಿನಿ / ಚಂದ್ರಗಿರಿ ನದಿಯಿಂದ ತುಳುನಾಡು ಆವೃತವಾಗಿದೆ. ತುಳುವಿಗೆ ತನ್ನದೇ ಆದ ಭಾಷಾ ವೈಚಿತ್ರ್ಯಗಳಿದ್ದರೂ ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳೊಂದಿಗೆ ಅನೇಕ ಸಾಮಾನ್ಯ ಗುಣಲಕ್ಷಣಗಳನ್ನು ಹಂಚಿಕೊಂಡಿದೆ. ಪಾಡ್ದನಗಳು, ಸಂದಿ, ಕಬಿತ, ಉರಳು, ಪಡಿಪು, ನೃತ್ಯ-ಪದ್ಯ, ಗಾದೆ, ಒಗಟು, ಜೋಗುಳ, ಅಜ್ಜಿಕಥೆ, ಇತ್ಯಾದಿಯಾಗಿ ವಿಸ್ತೃತವಾದ ಜಾನಪದ ಸಂಪ್ರದಾಯವನ್ನು ಅದು ಹೊಂದಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿ ಉತ್ಕೃಷ್ಟವಾದದ್ದು, ಶ್ರೀಮಂತವಾದದ್ದು. ವಿಪುಲವಾಗಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ಈ ಅಂಶವನ್ನು ದೃಢೀಕರಿಸುತ್ತವೆ.ಅನೇಕ ವಿಭಿನ್ನ ಯುಗಗಳು ಬಂದು ಹೋಗಿವೆ ಆದರೆ ನಿಜವಾದ ಸಂಸ್ಕೃತಿಯ ಪ್ರಭಾವವನ್ನು ಬದಲಾಯಿಸಲು ಯಾವುದೇ ಯುಗವು ತುಂಬಾ ಶಕ್ತಿಯುತವಾಗಿಲ್ಲ. ಆದ್ದರಿಂದ, ಯುವ ಪೀಳಿಗೆಯ ಸಂಸ್ಕೃತಿಯು ಇನ್ನೂ ಹಳೆಯ ತಲೆಮಾರುಗಳೊಂದಿಗೆ ಸಂಪರ್ಕ ಹೊಂದಿದೆ. ಅಲ್ಲದೆ, ನಮ್ಮ ಜನಾಂಗೀಯ ಸಂಸ್ಕೃತಿಯು ಯಾವಾಗಲೂ ಹಿರಿಯರನ್ನು ಗೌರವಿಸಲು, ಉತ್ತಮವಾಗಿ ವರ್ತಿಸಲು, ಅಸಹಾಯಕರನ್ನು ನೋಡಿಕೊಳ್ಳಲು ಮತ್ತು ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಲು ನಮಗೆ ಕಲಿಸುತ್ತದೆ.

ಉಪಸಂಹಾರ:

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲಿ ಉಜ್ವಲವಾದ ಸ್ಥಾನವಿದೆ. ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸ ಹೊಂದಿರುವ ಶ್ರಿಮಂತವಾದ, ವಿಶಿಷ್ಟವಾದ ಈ ಸಂಸ್ಕೃತಿಗೆ ಮನಸೊಲಾದವರೆ ಇಲ್ಲ. ಇತಂಹ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲಾ ಕನ್ನಡಿಗರ ಅಧ್ಯಾ ಕರ್ತವ್ಯವಾಗಿದೆ.

ಇತರೆ ಪ್ರಬಂಧಗಳು:

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು 

Leave a Comment