ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ, kannada bhashe ulisuvalli kannadigara pathra essay in kannada, kannada language information in kannada

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ:

ಈ ಲೇಖನಿಯಲ್ಲಿ ಸ್ನೇಹಿತರೇ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗಾರದ ನಾವು ಕನ್ನಡವನ್ನು ಉಳಿಸಿ-ಬೆಳಸಬೇಕು ಎಂಬ ಸಂಪೂರ್ಣ ಮಾಹಿತಿ ನೀಡಿದ್ದೇವೆ.

ಪೀಠಿಕೆ:

ಕನ್ನಡಿಗನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವ ವರೆಗೆ ಕನ್ನಡಿಗನಾಗಿ ಬದುಕಿ ಬಾಳುವುದು ಮನುಷ್ಯತ್ವ ಅಲ್ಲವೇ. ಕನ್ನಡಿಗರು ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಗರನ್ನು ಕನ್ನಡದಲ್ಲಿ ಮಾತನಾಡಿಸಬೇಕು.

ಆಂಗ್ಲಭಾಷೆ ಅಥವಾ ಹಿಂದಿ ಕಲಿತರೇ ಹೊಟ್ಟೆಗೆ ಅನ್ನ ಎಂಬ ಭಾವನೆಯನ್ನು ಬಿಡಬೇಕು. ನಮ್ಮ ಕನ್ನಡ ಭಾಷೆಯಲ್ಲಿಯೇ ಕಲಿತು ಉನ್ನತ ವಿದ್ಯಾಭ್ಯಾಸಕ್ಕೆ ಸೇರಿ ಇಂಗ್ಲಿಷ್ ಕಲಿತು, ಆನಂತರ ನಮಗೆ ಅನ್ನ ಕೊಟ್ಟ ಭಾಷೆ ಎಂದು ಎಲ್ಲವೂ ಇಂಗ್ಲಿಷ್ಮಯ ವಾಗಬಾರದು.

ವಿಷಯ ವಿವರಣೆ:

ಭಾರತದಾದ್ಯಂತ ಜನರು ನಮ್ಮ ನಗರಕ್ಕೆ ಬರುತ್ತಿದ್ದಾರೆ ಆದರೆ ಅವರಿಗೆ ಕನ್ನಡ ತಿಳಿದಿಲ್ಲ ಮತ್ತು ಆದ್ದರಿಂದ ನಮ್ಮದೇ ರಾಜ್ಯದಲ್ಲಿ ಕನ್ನಡವನ್ನು ‘ದ್ವಿತೀಯ’ ಭಾಷೆಯಾಗಿ ಮಾಡಲಾಗುತ್ತಿದೆ. ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಹರಡಬೇಕು. ಈಗ ಹಲವರು ಇಂಗ್ಲಿಷ್ ಮಾತನಾಡುವುದು ಒಳ್ಳೆಯದು.

ಕನ್ನಡದ ಉಳಿವಿಗೆ ನಾವು ಕನ್ನಡಿಗರು ಮಾಡಬಹುದಾದ ಕರ್ತವ್ಯಗಳು:

  • ಕಿಳರಿಮೆ ತೊಡೆದ ನಂತರ, ಎಲ್ಲರೊಂದಿಗೆ ಪುಷ್ಕಳವಾದ ನೇರವಾದ ಕನ್ನಡದಲೇ ಮಾತಾಡಿ.ಎಷ್ಟೋ ಸಲ ನಾವು ಆಡುವ ಸುತ್ತಿ ಬಳಸಿದ ಸಪ್ಪೆ ಕನ್ನಡ‌ ನಮಗೇ ಬೆಸರ ಉಂಟು‌ಮಾಡುತ್ತದೆ.
  • ಕನ್ನಡಪರರೊಂದಿಗೆ ಮಾತ್ರ ನಿಮ್ಮ ವ್ಯಾಪಾರ ವ್ಯವಹಾರಗಳಿರಲಿ..ಅಗ ಮಾತ್ರ ಕನ್ನಡಕ್ಕೆ‌ ಆನೆ‌ಬಲ‌ ಬರುವುದು..
  • ಕನ್ನಡದ ವ್ಯಾಪ್ತಿ ಚಿಕ್ಕದು ಎಂಬ ಕಿಳರಿಮೆ ಇಂದ ಹೊರಬನ್ನಿ..ಕರ್ನಾಟಕ ಎಂಬುದು ಇಟಲಿ, ಜರ್ಮನಿ ಯಷ್ಟೇ ದೊಡ್ಡದು..ಅವರಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದೆವೆ. ಜಗತ್ತಿನ ೨೩ನೇ ಅತಿ ಹೆಚ್ಚು ಜನರಾಡೋ‌ ಭಾಷೆ ಇದು.
  • ವೈಯಕ್ತಿಕವಾಗಿ ಕನ್ನಡಿಗನೊಂದಿಗೆ ಯಾವುದಾದರೂ ಭಾಷೆಲಿ ಮಾತನಾಡಿ..ಅದರೆ ಗುಂಪಿನಲಿ ಯಾರೇ ಇರಲಿ ನಿಮ್ಮ ಬಾಯಿಂದ ಕನ್ನಡವೇ ಬರಲಿ.
  • ಕನ್ನಡಿಗರು ಅಲ್ಪತೃಪ್ತರು, ಅತೀ ಸಹಮತಿಗಳು ಎಂಬ ಹಣೆಪಟ್ಟಿ ಕಳಚುವಂತಾಗಲಿ.. ಕನ್ನಡ‌ ಸಿನಿಮಾನೇ ನೋಡಿ.

ಕನ್ನಡವನ್ನು ಉಳಿಸಲು ಕನ್ನಡಿಗರು ತೆಗೆದುಕೊಳ್ಳಬೇಕಾದ ಕ್ರಮಗಳು:

  • ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಾವಾಗಿ ರಾಜ್ಯದ ಪ್ರತಿ ಶಾಲೆಯಲ್ಲೂ ಕನ್ನಡ ಕಲಿಸಲೇಬೇಕು, ಕರ್ನಾಟಕ ರಾಜ್ಯ ಅಥವಾ ಐಸಿಎಸ್ಇ ಅಥವಾ ಸಿಬಿಎಸ್ಇ, ಯಾವುದೇ ಇರಲಿ, ಕನ್ನಡ ಕಡ್ಡಾಯ ವಿಷಯವಾಗಿರಬೇಕು.
  • ಪಠ್ಯ ಪುಸ್ತಕವು ಉತ್ತಮ ಗುಣಮಟ್ಟದ್ದಾಗಿರಬೇಕು, ಇದರಿಂದಾಗಿ ವಿದ್ಯಾರ್ಥಿಯು ತನ್ನ ೧೦ ನೇ ತರಗತಿಯನ್ನು ಮುಗಿಸುವ ಹೊತ್ತಿಗೆ ಅವನು / ಅವಳು ಒಳ್ಳೆ ಗುಣಮಟ್ಟದ ಕನ್ನಡದಲ್ಲಿ ಏನನ್ನೂ ಬೇಕಾದರೂ ನಿರ್ವಹಿಸಲು ಸಾಧ್ಯವಾಗುತ್ತದೆ.
  • ಈಗಿರುವ ಎಲ್ಲಾ ಕನ್ನಡ ಮಧ್ಯಮ ಶಾಲೆಗಳನ್ನು ಸರಾಗವಾಗಿ ನಿರ್ವಹಿಸಬೇಕು ಮತ್ತು ನಡೆಸಬೇಕು. ಶಾಲೆಗಳಿಗೆ ಸರಿಯಾದ ಕಟ್ಟಡಗಳು ಮತ್ತು ಬೋಧನಾ ಸಿಬ್ಬಂದಿ ಇರಬೇಕು.
  • ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಹರಡಬೇಕು. ಈಗ ಹಲವರು ಇಂಗ್ಲಿಷ್ ಮಾತನಾಡುವುದು ಒಳ್ಳೆಯದು ಮತ್ತು ನಾವು ವಿದ್ಯಾವಂತರು ಅಥವಾ ಉತ್ತಮ ಉದ್ಯೋಗದಲ್ಲಿ ಇದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ. ನಾವು ಈ ಪೊಳ್ಳು ವಾದದಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಲು ಪ್ರಾರಂಭಿಸಬೇಕು
  • ಹೆಚ್ಚಿನ ಜನರು ಅವುಗಳನ್ನು ಓದುತ್ತಾರೆ ಮತ್ತು ಕನ್ನಡದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಪತ್ರಿಕೆಗಳು ಸಹ ಇದರಲ್ಲಿ ಕೊಡುಗೆ ನೀಡಬಹುದು. ಅಂತಹ ಪುಸ್ತಕಗಳನ್ನು ಪ್ರೋತ್ಸಾಹಿಸಬೇಕಾಗಿದೆ, ಜನರು ಅವುಗಳನ್ನು ಹೆಚ್ಚು ಖರೀದಿಸಿ ಕಲಿಯಬೇಕು.
  • ಭಾರತದ ಇತರ ಭಾಷಾ ಗುಂಪುಗಳಿಗೆ ಹೋಲಿಸಿದರೆ ಕನ್ನಡಿಗರು ಕಡಿಮೆ ಓದುತ್ತಾರೆ. ಜನರು ಕಾದಂಬರಿಗಳು, ಪತ್ರಿಕೆಗಳು, ಇತ್ಯಾದಿಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಉಪಸಂಹಾರ:

ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿ, ಕನ್ನಡದೊಂದಿಗೆ, ಹಿಂದಿ ಮತ್ತು ಸಂಸ್ಕøತವನ್ನೂ ಆಯ್ಕೆಯಾಗಿ ನೀಡಲಾಗುತ್ತದೆ. ಇದನ್ನು ಬಿಟ್ಟು, ಆಂಗ್ಲ ಮಾಧ್ಯಮ ಕಾಲೇಜಾಗಲಿ, ಕನ್ನಡ ಮಾಧ್ಯಮವಾಗಲಿ, ಕನ್ನಡವನ್ನು ಕಡ್ಡಾಯ ಭಾಷೆಯಾಗಿಸಬೇಕು. ಹಾಗೇ ನಮಗೆ ಎಲ್ಲಾ ಭಾಷೆ ಕಲಿಯುವುದು ಒಳ್ಳೆಯದು ಜೋತೆಗೆ ಕನ್ನಡವನ್ನು ಮರೆಯಾಬಾರದು, ಕನ್ನಡ ಭಾಷೆಯನ್ನು ಕೂಡ ನಾವು ಉಳಿಸಿ ಬೆಳಸಬೇಕು.

ಇತರೆ ಪ್ರಬಂಧಗಳು:

ಕನ್ನಡ ನಾಡಿನ ಹಿರಿಮೆ ಪ್ರಬಂಧ

ಕನ್ನಡ ಭಾಷೆಯ ಬಗ್ಗೆ ಪ್ರಬಂಧ

Leave a Comment