ಕನ್ನಡ ಭಾಷೆಯ ಬಗ್ಗೆ ಪ್ರಬಂಧ | Kannada Bhasheya Bagge Prabandha

ಕನ್ನಡ ಭಾಷೆಯ ಬಗ್ಗೆ ಪ್ರಬಂಧ ಪೀಠಿಕೆ, Kannada Bhasheya Bagge Prabandha in Kannada, Kannada Bhashe Bagge Essay in Kannada

ಕನ್ನಡ ಭಾಷೆಯ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಸ್ನೇಹಿತರೇ ಕನ್ನಡ ಭಾಷೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ಪೀಠಿಕೆ:

ಭಾಷೆ ಎಂಬುವುದು ದೇವರು ಮಾನವನಿಗೆ ಕಲ್ಪಿಸಿಕೊಟ್ಟಿರುವ ಅಮೂಲ್ಯ ವರ ನಮ್ಮ ಕನ್ನಡ ಭಾಷೆ.ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಒಂದು ಮಾರ್ಗವೆಂದರೆ ಅದು ಭಾಷೆ.ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತ ದೇಶದಲ್ಲಿ ಬೆಳೆಯುತ್ತಿರುವ ಅನೇಕ ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆಯೂ ಕೂಡ ಒಂದು.ಜಗತ್ತಿನ ಪ್ರಸಿದ್ಧ ಭಾಷೆಯಲ್ಲಿ ಕನ್ನಡವು ಒಂದಾಗಿದೆ.ಕನ್ನಡ ಭಾಷೆಗೆ ತನ್ನದೆ ಆದ ಪ್ರಾಮುಖ್ಯತೆ ಇದೆ.

ಸೆಪ್ಟೆಂಬರ್ 23 ಅನ್ನು ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತವು ಹಲವು ಭಾಷೆಗಳ ತವರು. ಅದರ ಬದಲಾಗುತ್ತಿರುವ ರಾಜ್ಯಗಳೊಂದಿಗೆ, ಭಾಷೆಗಳು, ಜನರ ಉಪಭಾಷೆಗಳು ಮತ್ತು ಸಂಸ್ಕೃತಿಯು ಬದಲಾವಣೆಗಳನ್ನು ಅನುಸರಿಸಿತು

ವಿಷಯ ವಿವರಣೆ:

ಶಿವಕೋಟಿಯಾಚಾರ್ಯರ ವಡ್ಡಾರಾಧನೆಯು ಹಳೆಯ ಕನ್ನಡದಲ್ಲಿ ಅಸ್ತಿತ್ವದಲ್ಲಿರುವ ಮೊದಲ ಗದ್ಯ ಕೃತಿಯಾಗಿದೆ. ಆದಾಗ್ಯೂ, ರಾಷ್ಟ್ರಕೂಟ ರಾಜ ನೃಪತುಂಗ ಅಮೋಘವರ್ಷಕ್ಕೆ ಸಾಮಾನ್ಯವಾಗಿ ಹೇಳಲಾದ ಕವಿರಾಜಮಾರ್ಗವು ಕನ್ನಡದ ಅತ್ಯಂತ ಪ್ರಾಚೀನ ಕೃತಿಗಳಲ್ಲಿ ಒಂದಾಗಿದೆ. ಹತ್ತನೇ ಶತಮಾನದಲ್ಲಿ, ಚಂಪೂ ಶೈಲಿಯ ಸಂಯೋಜನೆಯನ್ನು ಪರಿಪೂರ್ಣಗೊಳಿಸಲಾಯಿತು. ಪಂಪ ಈ ಕಲೆಯ ಮಾಸ್ಟರ್-ಪ್ರವರ್ತಕ ಅವರನ್ನು ಕನ್ನಡ ಕಾವ್ಯದ ಪಿತಾಮಹ ಎಂದು ಕರೆಯಲಾಗುತ್ತದೆ. ಮಹಾಕಾವ್ಯ ಸಂಪ್ರದಾಯವನ್ನು ಮುಂದುವರೆಸಿದವರು ಪೊನ್ನ ಮತ್ತು ರನ್ನ. ಪಂಪ, ಪೊನ್ನ ಮತ್ತು ರನ್ನರನ್ನು ಮೂರು ರತ್ನಗಳೆಂದು ಪರಿಗಣಿಸಲಾಗುತ್ತದೆ ಮತ್ತು ಅವರ ಅವಧಿಗೆ ‘ಸುವರ್ಣಯುಗ’ ಎಂಬ ವಿಶೇಷಣವನ್ನು ಬಳಸಲಾಗುತ್ತದೆ.

ಕನ್ನಡ ಭಾಷೆಯ ಮಹತ್ವ:

ಕನ್ನಡಿಗರ ಹಮ್ಮೆ ಕನ್ನಡ ಭಾಷೆ. ಕನ್ನಡವು ಒಂದು ಅದ್ಭುತ ಭಾಷೆ “ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು”ಎಂದು ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದಾರೆ.ಕನ್ನಡ ಭಾಷೆಯ ಎಳ್ಗೆಗಾಗಿ ಸರ್ಕಾರ,ಹತ್ತು ಹಲವಾರು ಸಂಘಟನೆಗಳು.ರಾಜಕೀಯ ಪಕ್ಷಗಳು,ಅನೇಕರು ಅವರದೇ ಆದ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ.ಕನ್ನಡ ಭಾಷೆಯ ಬಗ್ಗೆ ನಾವು ಜಾಗ್ರತವಾಗುವುದು ಒಂದು ಕಾವೇರಿ ನೀರು,ಕನ್ನಡ ರಜ್ಯೋತ್ಸವ, ಸಾಹಿತ್ಯಗಳಲ್ಲಿ ಕನ್ನಡದ ಮಹತ್ವ ಹೆಚ್ಚಿದೆ. ಕನ್ನಡಕ್ಕಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಶ್ರಮಿಸಿದ ಮಹನೀಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸೇರಿದಂತೆ,ಈ ದಿನ ಕನ್ನಡಕ್ಕೆ ಸಂಬಂಧಿಸಿದ ಹತ್ತು ಹಲವು ಕಾರ್ಯಕ್ರಮಗಳನ್ನು ಎರ್ಪಡಿಸಲಾಗುತ್ತದೆ.”ಕನ್ನಡವೆಂದರೆ ಬರಿ ನುಡಿಯಲ್ಲ,ಹಿರಿದಿದೆ ಅದರರ್ಥ, ಜಲವೆಂದರೆ ಕೇವಲ ನೀರಲ್ಲ,ಅದು ಪಾವನ ತೀರ್ಥ” ಎಂದು ನಿತ್ಯೋತ್ಸವ ಕವಿ ನಿಸಾರ್‌ ಅಹ್ಮದ್‌ ಬರೆದಿದ್ದಾರೆ.ಕನ್ನಡ ಭಾಷೆಗಿರುವ ಮಹತ್ವವೆ ಅಂಥದ್ದು.ಕನ್ನಡ ಭಾಷೆಗಾಗಿ ಕನ್ನಡ ರಾಜ್ಯೋತ್ಸವವನ್ನು ಮಾಡುವುದು ಅದರ ಮಹತ್ವ ಹೆಚ್ಚಿಸುವುದು.ನಮ್ಮ ಕರ್ನಾಟಕದ ರಾಜ್ಯ ಭಾಷೆ ಕನ್ನಡ. ಪುರಾತನವಾದ ಭಾಷೆಗಳಲ್ಲಿಒಂದೂ ಅಗಿರುವ ಕನ್ನಡ ಜನರು ಆಡು ನುಡಿಯಾ ಬಳಸುತ್ತಲಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿಇಪ್ಪತೋಂಬತ್ತನೆ ಸ್ಥಾನ ಕನ್ನಡಕ್ಕಿದೆ.ತುಂಬಾ ಜನರ ಮಾತೃಭಾಷೆ ಕನ್ನಡ,ಕನಡವನ್ನು ಗೌರವಿಸುತ್ತಾರೆ.ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನುಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ.ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕನ್ನಡದ ಬಗ್ಗೆ ಮಾತನಾಡುವಾಗ ಆಗಾಗ್ಗೆ ಹೊರಹೊಮ್ಮುವ ಮತ್ತೊಂದು ಚರ್ಚೆಯ ವಿಷಯವೆಂದರೆ ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ. ವಿದ್ವಾಂಸರ ಪ್ರಕಾರ, ಪ್ರಾಕೃತವು ಕರ್ನಾಟಕದ ಸಮಾಜದಲ್ಲಿ ಮೊದಲಿನಿಂದಲೂ ಒಂದು ಸ್ಥಾನವನ್ನು ಹೊಂದಿದೆ.

ಮಹಿಳಾ ಕವಿಗಳಲ್ಲಿ ಅಕ್ಕ ಮಹಾದೇವಿ ಪ್ರಮುಖರು; ಅವಳು ಮಂತ್ರಗೋಪ್ಯ ಮತ್ತು ಯೋಗಾಂಗತ್ರಿವಿಧಿಯನ್ನು ಬರೆದಳು ಎಂದು ಹೇಳಲಾಗುತ್ತದೆ. ಸಿದ್ಧರಾಮ ಅವರು ತ್ರಿಪದಿ ಮಾಪಕದಲ್ಲಿ ಬರೆದಿದ್ದಾರೆ ಮತ್ತು ಅವರ 1,379 ಅಸ್ತಿತ್ವದಲ್ಲಿರುವ ಕವಿತೆಗಳು ಕಂಡುಬರುತ್ತವೆ. ಸ್ದಬ್ದಮಣಿ ದರ್ಪಣವನ್ನು ಕೇಸಿರಾಜನು ಬರೆದನು. ನಂತರದ ಹೊಯ್ಸಳರ ಆಶ್ರಯದಲ್ಲಿ ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಲಾಯಿತು. ಕನ್ನಡ ಭಾಷೆಯಲ್ಲಿ ವೈಷ್ಣವ ನಂಬಿಕೆಯನ್ನು ಪ್ರಚಾರ ಮಾಡಿದ ಮೊದಲ ಬರಹ ಇದು. ಸರ್ವಜ್ಞ, ‘ಜನರ ಕವಿ’ ಎಂದು ಪರಿಗಣಿಸಲ್ಪಟ್ಟಿರುವ ದಡ್ಡ ಮತ್ತು ಅಲೆಮಾರಿ ವೀರಶೈವ ಕವಿ, ಕನ್ನಡದ ಅತ್ಯಂತ ಪ್ರಸಿದ್ಧವಾದ ಕೆಲವು ಕೃತಿಗಳನ್ನು ಒಳಗೊಂಡಿರುವ ತ್ರಿಪದಿ ಮೀಟರ್‌ನಲ್ಲಿ ಬರೆದ ನೀತಿಬೋಧಕ ವಚನಗಳನ್ನು ಬರೆದಿದ್ದಾರೆ.

ಕನ್ನಡ ಭಾಷೆಯ ಚರಿತ್ರೆ:

ಪ್ರಾಕೃತ, ಸಂಸ್ಕೃತ ಮತ್ತು ತಮಿಳು ಜೊತೆಗೆ ಕನ್ನಡವು ಅತ್ಯಂತ ಹಳೆಯ ಭಾಷೆಯಾಗಿದೆ. ಕನ್ನಡ ಭಾಷೆಯು ದ್ರಾವಿಡ ಭಾಷೆಗಳಲ್ಲಿ ಬಹಳ ಪುರಾತನವಾದ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ.ಕನ್ನಡವು ಭಾರತದ ೨೨ ಅಧಿಕೃತ/ಆಡಳಿತ ಭಾಷೆ. ದಕ್ಷಿಣ ಭಾರತಗಳ ಮೂಲವೆಂದು ಗುರುತುಲ್ಪಟ್ಟಿರುವ ಮೂಲದ್ರಾವಿಡದಿಂದ ಕನ್ನಡವು ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿರಬಹುದೆಂದು ಹೇಳಲಾಗುತ್ತದೆ.ಕನ್ನಡವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದಾಗಿದ್ದು,ಸುಮಾರು ೨೫೦೦ ಸಾವಿರ ವರ್ಷಗಳಷ್ಟು ಹಳೆಯ ಭಾಷೆಯಾಗಿದೆ.ಕನ್ನಡ ಎರಡು ಸಾವಿರ ಹಳೆಯದಷ್ಟೇ ಅಲ್ಲ,ನಾವು ಮಾತನಾಡುವುದನ್ನು ಬರೆಯಬಹುದು,ಬರೆದುದ್ದನ್ನ ಓದಬಹುದಾದ ಭಾಷೆ. ಈ ವಿಶಿಷ್ಟತೆ ಹಲವಾರು ಭಾಷೆಗಳಲ್ಲಿ ಅವಕಾಶವಿಲ್ಲ. ಕನ್ನಡ ಚರಿತ್ರೆಗಳು ಹಲವಾರು ನಾವು ಕಾಣಬಹುದು.

ಉಪಸಂಹಾರ:

ಕನ್ನಡ ಭಾಷೆಯು ಸಾಮಾನ್ಯವಾಗಿ ಎಲ್ಲರೂ ಬಳಸುವ ಭಾಷೆ, ಕನ್ನಡ ಭಾಷೆಯ ವಿಶೇಷತೆಗಳು ಹಲವು ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸುವುದು ಭಾಷೆ.ಭಾಷೆಯ ಮೂಲಕ ಸಂವಹನ ನೆಡೆಯಲು ಸಾಧ್ಯವಾಗುತ್ತದೆ.ಭಾಷೆಯ ಮಹತ್ವವನ್ನು ನೋಡಬಹುದು ಜೊತೆಗೆ ಅದರ ಚರಿತ್ರೆಗಳನ್ನು ತಳಿಯಬಹುದು.ಕನ್ನಡ ಭಾಷೆಗೆ ಅದರದೇ ಆದ ಸಾಮರ್ಥವಿದೆ. ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡದ ಮಹತ್ವವನ್ನು ತೋರಿಸುತ್ತದೆ.

FAQ

ಕನ್ನಡದ ಮೊದಲ ಶಾಸನ ?

೨೦೦೭, ಹಲ್ಮಿಡಿ ಶಾಸನ.

ಕನ್ನಡ ಮೊದಲ ರಾಷ್ಟ್ರಕವಿ ಯಾರು ?

ಕುವೆಂಪು.

ಕನ್ನಡ ಮೊದಲ ಗ್ರಂಥ ಯಾವುದು ?

ಕವಿರಾಜ ಮಾರ್ಗ.

ಕನ್ನಡ ಮೊದಲ ಪತ್ರಿಕೆ ?

೧೮೪೩, ಜುಲೈ೧ ,ಮಂಗಳೂರು ಸಮಾಚಾರ.

ಕನ್ನಡ ಮೊದಲ ನಾಟಕ ಯಾವುದು ?

ಮಿತ್ರವಿಂದಾ ಗೋವಿಂದ.

ಇತರೆ ಪ್ರಬಂಧಗಳು:

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

ಕನ್ನಡ ಭಾಷೆಯ ನುಡಿಮುತ್ತುಗಳು

ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ

Leave a Comment