ಕನ್ನಡ ಮಂತ್ರಗಳು Pdf | Kannada Mantra Pdf

ಕನ್ನಡ ಮಂತ್ರಗಳು pdf in kannada, Kannada Mantragalu Pdf, kannada mantragalu information in kannada, ಕನ್ನಡದಲ್ಲಿ ಮಂತ್ರಗಳು

ಕನ್ನಡ ಮಂತ್ರಗಳು Pdf

kannada mantra pdf

ಈ ಲೇಖನಿಯಲ್ಲಿ ಕನ್ನಡ ಮಂತ್ರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಹಾಗೂ ನಿಮಗೆ ಅನುಕೂಲವಾಗುವಂತೆ ವಿಷಯವನ್ನು ಒದಗಿಸಿದ್ದೇವೆ.

ಕನ್ನಡ ಮಂತ್ರಗಳು:

ಯೋಗಿಗಳು ಅಥವಾ ಋಷಿಮುನಿಗಳು ತನ್ನ ದೇಹವನ್ನು ಚೈತನ್ಯಪೂರ್ಣವಾಗಿರಿಸಿಕೊಳ್ಳಲು ಧ್ಯಾನಗಳನ್ನು ಮಾಡುತ್ತಾರೆ. ಧ್ಯಾನಗಳಿಂದ ನೂರಕ್ಕೂ ಹೆಚ್ಚು ವರ್ಷಗಳವರೆಗೆ ಗುಹೆಗಳಲ್ಲಿ ತಮ್ಮ ಜೀವನವನ್ನು ನಡೆಸಿದ್ದ ಸಾಕಷ್ಟು ಸಾಧು ಸಂತರುಗಳ ಉದಾಹರಣೆಗಳಿವೆ. ಮಂತ್ರಗಳನ್ನು, ಧ್ಯಾನವನ್ನು ಮಾಡುವುದರಿಂದ ಮನಸ್ಸು ಮತ್ತು ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಬಹುದು. ಮಂತ್ರ, ಧ್ಯಾನಗಳು ಮನಸ್ಸನ್ನು ಶುದ್ಧೀಕರಿಸುತ್ತದೆ. ಸುಮಾರು 10 ದಶಲಕ್ಷಕ್ಕೂ ಹೆಚ್ಚಿನ ಮಂತ್ರಗಳಿವೆ. ಕೆಲವು ಮಂತ್ರಗಳು ಬಲು ಚಿಕ್ಕದಾದ ಹಾಗೂ ಚೊಕ್ಕವಾದ ಮಂತ್ರಗಳಾದರೆ, ಇನ್ನು ಕೆಲವು ಅರ್ಥಗರ್ಭಿತ ದೊಡ್ಡ ದೊಡ್ಡ ಸಾಲುಗಳ ಮಂತ್ರಗಳಾಗಿವೆ.

ಕಷ್ಟಗಳು ಮನುಷ್ಯರಿಗೆ ಬರದೆ ಕಲ್ಲಿಗೆ ಬರುತ್ತದೆಯೇ ಎಂಬ ಮಾತನ್ನು ಕೇಳಿರಬಹುದು. ಅಂದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಕಷ್ಟ, ಸುಖ ಎಲ್ಲವನ್ನೂ ಕೂಡ ನೋಡಲೇಬೇಕು. ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ ಎರಡನ್ನೂ ಕೂಡ ಸಮಾನವಾಗಿ ಸ್ವೀಕರಿಸಬೇಕು. ಆದರೆ ಕೆಲವು ಮಂದಿ ಮಾತ್ರ ಸುಖ ಎಂಬುದನ್ನು ನೋಡದೆ ಯಾವಾಗ ನೋಡಿದರೂ ಏನಾದರೂ ತೊಂದರೆಯಲ್ಲೇ ಸಿಲುಕಿರುತ್ತಾರೆ. ಇಂಥವರು ಕಷ್ಟದ ಸಮಯದಲ್ಲಿ ಯಾವಯಾವ ಮಂತ್ರಗಳನ್ನು ಪಠಿಸುವುದು.

ಮಂತ್ರಗಳು:

1) ಓಂ:

ಓಂ ಎನ್ನುವುದು ಸರ್ವವ್ಯಾಪಿ ಶಬ್ಧವಾಗಿದೆ. ಎಲ್ಲಾ ಮಂತ್ರಗಳಲ್ಲೂ ಕೂಡ ಹೆಚ್ಚಾಗಿ ಈ ಶಬ್ಧವನ್ನು ಉಪಯೋಗಿಸಲಾಗುತ್ತದೆ. ಓಂ ನ್ನು ‘ಪ್ರಣವ’ ಎಂದೂ ಕೂಡ ಕರೆಯಲಾಗುತ್ತದೆ. ಧ್ಯಾನವನ್ನು ಆರಂಭಿಸುವ ಮೊದಲು ಓಂ ಎನ್ನುವ ಶಬ್ಧವನ್ನು ಉಚ್ಛಾರ ಮಾಡಲಾಗುತ್ತದೆ. ಓಂ ಶಬ್ಧವು ಮನುಷ್ಯನಲ್ಲಿನ ಅಹಂ ನ್ನು ದೂರಾಗಿಸುತ್ತದೆ. ಓಂ ಶಬ್ಧವು ದೇಹದಲ್ಲಿನ ಎಲ್ಲಾ ನರನಾಡಿಗಳಿಗೆ ಹೊಸ ಚೈತನ್ಯವನ್ನು ತುಂಬುತ್ತದೆ.

2) ಗುರು ಸ್ತೋತ್ರ:

ಗುರುರ್‌ ಬ್ರಹ್ಮ ಗುರುರ್‌ ವಿಷ್ಣುಗುರುರ್‌ ದೇವೋ ಮಹೇಶ್ವರ
ಗುರುಹ್‌ ಸಾಕ್ಷಾತ್‌ ಪರಃ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ

ಅಜ್ಞಾನವನ್ನು ತೊಲಗಿಸಿ, ಜ್ಞಾನವನ್ನು ನೀಡುವ ಗುರುವಿಗೆ ವಂದನೆಯನ್ನು ಸಲ್ಲಿಸುವ ಮಂತ್ರ ಇದಾಗಿದೆ. ಗುರು ಎಂದರೆ ಕತ್ತಲೆಯನ್ನು ಅಥವಾ ಅಜ್ಞಾನವನ್ನು ಹೋಗಲಾಡಿಸುವವನು, ಬ್ರಹ್ಮನೆಂದರೆ ಸೃಷ್ಟಿಕರ್ತ, ಗುರು ವಿಷ್ಣುವೆಂದರೆ ಉಳಿಸಿಕೊಳ್ಳುವವನು, ಗುರುದೇವ ಮಹೇಶ್ವರ ಎಂದರೆ ವಿಧ್ವಂಸಕ, ಗುರು ಸಾಕ್ಷಾತ್‌ ಪರಬ್ರಹ್ಮನೆಂದರೆ ಗುರು ನಿಜವಾಗಿಯೂ ಬ್ರಹ್ಮನೇ ಆದ್ದರಿಂದ ಆ ಗುರುವಿಗೆ ನನ್ನ ನಮನ ಎಂಬರ್ಥವನ್ನು ಈ ಸ್ತೋತ್ರ ಸಾರುತ್ತದೆ.

3)ಗಣಪತಿ ಮಂತ್ರ:

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಗಣೇಶ ಅಡೆತಡೆಗಳನ್ನು ಹೋಗಲಾಡಿಸುವವನು. ಭಕ್ತರು ಸಂತೋಷದಿಂದಿರಲು ಕಷ್ಟ ಕಾಲದಲ್ಲಿ ಗಣೇಶನ ಪೂಜೆ ಮತ್ತು ಪಠಣ ಮಾಡಿದರೆ ಮನಸ್ಸಿನ ಸಮತೋಲನ ಸ್ಥಿತಿಯನ್ನು ಕಾಯ್ದು ಕೊಳ್ಳಬಹುದು. ಸುಲಭವಾಗಿ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

4)ಸರಸ್ವತಿ ಮಂತ್ರ:

ಶುಕ್ಲಅಂ ಬ್ರಹ್ಮ್ವಿಚಾರ್ -ಸಾರ್ ಪರಮಾದ್ಯಾಮ್ ಜಗದ್ವ್ಯಾಪಿನೀಮ್ ವೀಣನಾ ಪುಸ್ತಕ್ – ಧಾರಿಂನೀಭಾಮಯ್ ದಾಮ್ -ಜಾಡ್ ಯಾಪಾನ್ಧಕಾರಅಪಹಾಮ್ – ಹಸ್ತೇ ಸ್ಫ್ಯಾಟಿಕ್ ಮಾಲಿಕಾಂ ವಿಧತೀಮ್ ಪರಮಾಸನೇ ಶಾಂಸ್ಥಿತಾಂ ವಂದೇ ತಾಂ – ಪರಮೇಶ್ವರೀಮ್ ಭಾಗವತೀಮ್ ಬುದ್ಧಿ ಪ್ರದಾಂ ಶ್ರದ್ದಾಂ |

ತಾಯಿ ಸರಸ್ವತಿ, ವಿದ್ಯೆ ಮತ್ತು ಬುದ್ಧಿವಂತಿಕೆಯ ದೇವತೆ. ಕಷ್ಟ ಕಾಲದಲ್ಲಿ ಸರಸ್ವತಿ ಮಂತ್ರ ಪಠಣ ಮಾಡಿದರೆ ನಮಗೆ ಚಿಂತನೆಯ ಸ್ಪಷ್ಟತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಂಡು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ನೀಡುತ್ತಾಳೆ.

5)ಶಿವನ ಮಂತ್ರ :

ಪಂಚಾಕ್ಷರಿ ಮಂತ್ರ : ಓಂ ನಮಶಿವಾಯ – ರುದ್ರ ಮಂತ್ರ : ಓಂ ನಮೋ ಭಗವತೇ ರುದ್ರಾಯ -ಶಿವ ಗಾಯತ್ರಿ : ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಹ್ ಪ್ರಚೋದಯಾತ್ |

ಪರಮಾತ್ಮ ಶಿವನನ್ನು ಕಠಿಣ ಕಾಲದಲ್ಲಿ ನೆನೆದರೆ ಕಷ್ಟಗಳು ದೂರವಾಗುತ್ತವೆ. ಸ್ಪಷ್ಟ ಗ್ರಹಿಕೆ ಮತ್ತು ಎಲ್ಲಾ ತೊಂದರೆಗಳನ್ನು ಮುಕ್ತಗೊಳಿಸಲು ಜೀವನದ ತೊಂದರೆಗಳನ್ನು ನಿವಾರಿಸಲು ಕಠಿಣ ಕಾಲದಲ್ಲಿ ಕೆಳಗಿನ ಮಂತ್ರಗಳ ಪಠಣ ಮಾಡಬೇಕು.

ಬ್ರಹ್ಮ ದೇವ್ರ ಮಂತ್ರ:

ಓಂ ಈಮ್ ಹ್ರಿಮ್ ಶ್ರೀಮ್ ಕ್ಲಿಂ ಸಹೂ ಸತ್ ಚಿತ್ ಏಕಂ ಬ್ರಹ್ಮ |

ಶನಿ ಮಂತ್ರ :

“ಓಂ ನೀಲಾಂಜನ ಸಮಾಭಾಸಂ

ರವಿ ಪುತ್ರ ಯಾಮಾಗ್ರಜಂ

ಛಾಯಾ ಮಾರ್ತಂಡ ಸಂಭೂತಂ

ತಂ ನಮಾಮಿ ಶನೇಶ್ವರಂ”|

6)ಶ್ರೀ ರಾಮ ಮಂತ್ರ :

“ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ,

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ.

ಓಂ ಕ್ಲೀಮ್‌ ನಮೋ ಭಗವತೇ ರಾಮಚಂದ್ರಾಯ ಸಕಲಜನ ವಶ್ಯಕಾರಾಯ ಸ್ವಾಹಃ|

7)ನರಸಿಂಹ ಮಂತ್ರ:

“ಉಗ್ರಂ ವೀರಂ ಮಹಾವಿಷ್ಣು ಜ್ವಲಂತಂ ಸರ್ವತೋಮುಖಂ

ನರಸಿಂಹನ್‌ ಭೀಷನಂ ಭದ್ರಮ್‌ ಮೃತ್ಯೋಮೃತ್ಯುಮ ನಮಾಯಹಂ..”

8)ಸುಬ್ರಮಣ್ಯ ಸ್ವಾಮಿ ಮೂಲ ಮಂತ್ರ:

“ಓಂ ಶ್ರೀಮ್‌ ಹ್ರೀಮ್‌ ವ್ರಿಮ್‌ ಸೌಮ್‌ ಸರವನ ಭವ”

9)ಶ್ರೀಕೃಷ್ಣ ಮಂತ್ರ:

“ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ |

ಹೇ ನಾಥ ನಾರಾಯಣ ವಾಸುದೇವಾಯ||

ನಮೋ ಭಗವತೇ ಶ್ರೀ ಗೋವಿಂದಾಯ “

10)ವಿಷ್ಣು ಮಂತ್ರ:

“ಓಂ ಭಗವತೇ ವಾಸುದೇವಾಯ ನಮಃ

ಓಂ ನಮೋ ನಾರಾಯಣಾಯ ನಮಃ

ಓಂ ನಾರಾಯಣಾಯ ವಿದ್ಯಹೇ,

ವಾಸುದೇವಾಯ ಧೀಮಹೀ

ತನ್ನೋ ವಿಷ್ಣು ಪ್ರಚೋದಯಾತ್..”‌

11)ಲಕ್ಷೀ ಮಂತ್ರಗಳು:

“ಓಂ ಧನಾಯ ನಮೋ ನಮಃ

ಓಂ ಧನಾಯ ನಮಃ ಓಂ

12)ಆಂಜನೇಯ ಮಂತ್ರ:

“ಓಂ ಹನುಮತೇ ನಮಃ

ಓಂ ಐಮ್‌ ಬ್ರೀಮ್‌ ಹನುಮತೇ, ಶ್ರೀರಾಮ ಧೂತಾಯ ನಮಃ.

ಓಂ ಅಂಜನೇಯ ವಿಧ್ಯಹೇ ಮಹಾ ಚಾಲಾಯ ಧೀಮಹೇ

ಧನ್ನೋ ಹನುಮಾನ್‌ ಪ್ರಚೋದಯಾಥ್‌,

ಓಂ ಆಂಜನೇಯ ವಿಧ್ಯಹೇ ವಾಯು ಪ್ರತ್ರಾಯ ಧೀಮಹೀ

ಥನ್ನೋ ಹನುಮಾನ್‌ ಪ್ರಚೋದಯಾಥ..”

ಕನ್ನಡ ಮಂತ್ರಗಳು Pdf Download

PDF Nameಕನ್ನಡ ಮಂತ್ರಗಳು pdf
No. of Pages3
PDF Size98KB
LanguageKannada
Categoryಮಂತ್ರಗಳು
Download LinkAvailable ✓
Topicsಕನ್ನಡ ಮಂತ್ರಗಳು pdf

ಇತರೆ ಪ್ರಬಂಧಗಳು:

ವಿರುದ್ಧಾರ್ಥಕ ಪದಗಳು ಕನ್ನಡ 50

ಪತ್ರ ಬರೆಯುವ ವಿಧಾನ ಕನ್ನಡ

50 ಒಗಟುಗಳು ಮತ್ತು ಉತ್ತರಗಳು

Leave a Comment