ಕನ್ನಡ ಕ್ವಿಜ್ ಪ್ರಶ್ನೆಗಳು, Kannada Quiz Questions And Answers in Kannada, ಕನ್ನಡದಲ್ಲಿ ರಸ ಪ್ರಶ್ನೆಗಳು ಮತ್ತು ಉತ್ತರಗಳು
ಕನ್ನಡ ಕ್ವಿಜ್ ಪ್ರಶ್ನೆಗಳು:

ಈ ಲೇಖನಿಯಲ್ಲಿ ಸ್ನೇಹಿತರೇ ನಿಮಗೆ ಸಹಾಯವಾಗುವಂತೆ ಪ್ರಶ್ನೆಗಳು ಮತ್ತು ಉತ್ತರವನ್ನು ನಿಮಗೆ ನೀಡಿದ್ದೇವೆ. ಸ್ವರ್ಧಾ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ನೀಡಿದ್ದೇವೆ.
ಕನ್ನಡ ಕ್ವಿಜ್:
1.ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ.
ಉತ್ತರ- ಬೆಳಗಾವಿ.
2. ಭಾರತೀಯ ವಿಜ್ಞಾನ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ- 1909.
3. ದ. ರಾ. ಬೇಂದ್ರೆಯವರ ಅಂಕಿತನಾಮ ಯಾವುದು?
ಉತ್ತರ- ಅಂಬಿಕಾತನಯ ದತ್ತ.
4. ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?
ಉತ್ತರ- ಭತ್ತ.
5. ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
ಉತ್ತರ- ಡಾಲ್ಫಿನ್.
6. ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ ಮೀಸಲಾತಿಯ ಪ್ರಮಾಣ ಎಷ್ಟು?
ಉತ್ತರ- 50%.
7. ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?
ಉತ್ತರ- 25 ಜನವರಿ.
8. BMCRI ಯ ಪೂರ್ಣ ರೂಪ ಯಾವುದು?
ಉತ್ತರ- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ.
9. ಪ್ರಸಿದ್ಧ ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಬರೆದವರು ಯಾರು?
ಉತ್ತರ- ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ.
10. ಗೋಮಟೇಶ್ವರ ಪ್ರತಿಮೆ ಎಲ್ಲಿದೆ?
ಉತ್ತರ- ಶ್ರಾವಣಬೆಳಗೊಳ.
11. ಭಾರತೀಯ ಧ್ವಜವನ್ನು ತಯಾರಿಸುವ ಏಕೈಕ ಅಧಿಕೃತ ಘಟಕ ಯಾರು?
ಉತ್ತರ– ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘ (KKGSS)
12. ಯಾವ ನಗರವನ್ನು ಚೋಟಾ ಬಾಂಬೆ ಎಂದೂ ಕರೆಯುತ್ತಾರೆ?
ಉತ್ತರ– ಹುಬ್ಬಳ್ಳಿ.
13. ಕರ್ನಾಟಕದ ಜನತಾ ಪಕ್ಷದಿಂದ ಮೊದಲ ಮುಖ್ಯಮಂತ್ರಿ ಯಾರು?
ಉತ್ತರ- ರಾಮಕೃಷ್ಣ ಹೆಗಡೆ.
14. ಕರ್ನಾಟಕದಲ್ಲಿ ಮೊದಲ ಕಬ್ಬಿಣ ಮತ್ತು ಉಕ್ಕಿನ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?
ಉತ್ತರ- ಭದ್ರಾವತಿ.
15. ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಯಾವುದು?
ಉತ್ತರ- ಕುದುರೆಮುಖ (1,894 ಮೀ)
16. ಕರ್ನಾಟಕದ 18ನೇ ಮುಖ್ಯಮಂತ್ರಿ ಯಾರು?
ಉತ್ತರ- ಎಚ್.ಡಿ.ಕುಮಾರಸ್ವಾಮಿ.
17. ಕರ್ನಾಟಕದ ಅತಿ ಎತ್ತರದ ಶಿಖರ ಯಾವುದು?
ಉತ್ತರ- ಮುಳ್ಳಯ್ಯನಗಿರಿ (1,930 ಮೀ).
18. ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?
ಉತ್ತರ- ಅಲ್ಯುಮಿನಿಯಂ.
19. ನೌಕಾಪಡೆ ದಿನವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ- ಡಿಸೆಂಬರ್ 4.
20. ನೀಲಿ ಕ್ರಾಂತಿ ಪಿತಾಮಹ ಯಾರು?
ಉತ್ತರ- ಹರಿಲಾಲ್ ಚೌದರಿ.
21. ಪ್ರಥಮ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾರು?
ಉತ್ತರ- ಶ್ರೀಮತಿ ಸರೋಜಿನಿ ನಾಯ್ಡು.
22. ಭಾರತ ಹಾರಿಸಿದ ಮೊದಲ ಉಪಗ್ರಹದ ಹೆಸರೇನು?
ಉತ್ತರ- ಆರ್ಯಭಟ.
23. ಕನ್ನಡದ ಮೊದಲ ಚಲನಚಿತ್ರ ಯಾವುದು?
ಉತ್ತರ- ಸತಿ ಸುಲೋಚನ.
24. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು?
ಉತ್ತರ- ಕಾಂಗರೂ.
25. ವಿಶ್ವ ಪರಿಸರ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
ಉತ್ತರ- ಜೂನ್ 5.
26. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಉತ್ತರ- ಸರ್. ಎಂ. ವಿಶ್ವೇಶ್ವರಯ್ಯ.
27. ಆಂಧ್ರ ಪ್ರದೇಶದ ಹೊಸ ರಾಜಧಾನಿ ಯಾವುದು?
ಉತ್ತರ- ಅಮರಾವತಿ.
28. ಹೊಯ್ಸಳರ ರಾಜಧಾನಿಯ ಹೆಸರೇನು?
ಉತ್ತರ- ಹಳೇಬೀಡು (ಹಿಂದಿನ ದ್ವಾರಸಮುದ್ರ)
29. ಕಾಲಿಂಗ್ ಕಿಣ್ವಗಳನ್ನು ಉತ್ಪತ್ತಿಮಾಡುವ ಗ್ರಂಥಿ ಯಾವುದು?
ಉತ್ತರ- ಲಾಲಾ ಗ್ರಂಥಿ.
30.ಅತ್ಯಂತ ಪ್ರಕಾಶಮಾನವಾದ ನಕ್ಷತ್ರ?
ಉತ್ತರ- ಸೀರಿಯಸ್.
31. ಈ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ?
ಉತ್ತರ- ಬುಧ ಶುಕ್ರ
32. ಹ್ಯಾಲಿ ಧೂಮಕೇತು ಎಷ್ಟು ವರ್ಷಕ್ಕೊಮ್ಮೆ ಕಾಣಿಸುತ್ತದೆ ?
ಉತ್ತರ- 75 ವರ್ಷ.
33. ಸೂರ್ಯನ ಮೇಲ್ಮೈ ಭಾಗದಲ್ಲಿ ಉಂಟಾಗುವ ಉಷ್ಣಾಂಶ ಎಷ್ಟು ?
ಉತ್ತರ- 6 ಸಾವಿರ ಡಿಗ್ರಿ ಸೆಲ್ಸಿಯಸ್
35. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ- ಹರ್ಡೇಕರ್ ಮಂಜಪ್ಪ.
36. ಕರ್ನಾಟಕದ ಪ್ರಥಮ ಹಿಂದುಳಿದ ವರ್ಗದ ಮುಖ್ಯಮಂತ್ರಿ ಯಾರು?
ಉತ್ತರ- ಡಿ. ದೇವರಾಜ್ ಅರಸು.
37. GST ಯ ವಿಸ್ತೃತ ರೂಪವೇನು?
ಉತ್ತರ- Goods And Service Tax
38. ತಾಳಿಕೋಟೆ ಯುದ್ಧ ಯಾವಾಗ ನಡೆಯಿತು?
ಉತ್ತರ- ಕ್ರಿ.ಶ 1565.
39. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು?
ಉತ್ತರ- ದಂತಿದುರ್ಗ.
40. ವಾಸ್ಕೋಡಿಗಾಮನು ಪ್ರಪ್ರಥಮವಾಗಿ ಭಾರತಕ್ಕೆ ಬಂದು ತಲುಪಿದ ಕಲ್ಲಿಕೋಟೆ ಯಾವ ರಾಜ್ಯದಲ್ಲಿದೆ?
ಉತ್ತರ- ಕೇರಳ.
41. ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
ಉತ್ತರ- ಗ್ರೀಕ್.
42. ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
ಉತ್ತರ- 2.
43. ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
ಉತ್ತರ- ಹಂಪಿ.
44. ಖೈಬರ್ ಕಣಿವೆ ಎಲ್ಲಿದೆ?
ಉತ್ತರ- ಪಾಕಿಸ್ತಾನ.
45. ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
ಉತ್ತರ- ಫೆಭೃವರಿ-28.
46. ‘ವಿಶ್ವ ಭೂ ದಿವಸ’ ವನ್ನು ಯಾವ ದಿನ ಆಚರಿಸುತ್ತಾರೆ?
ಉತ್ತರ- ಎಪ್ರಿಲ್-22.
47. ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”ಎಷ್ಟು?
ಉತ್ತರ- 26.
48. ಕರ್ನಾಟಕದ ಪಂಜಾಬ್(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
ಉತ್ತರ- ವಿಜಯಪುರ.
49. ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
ಉತ್ತರ- 2.
50. ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
ಉತ್ತರ- ಭಾರತ.
51. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
ಉತ್ತರ- ಸರಿಸುಮಾರು 120 ದಿನಗಳು.
52. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿವೆ?
ಉತ್ತರ- ಮೂರು.
53. ಮಾನವನ ಮೆದುಳಿನ ಅತಿ ದೊಡ್ಡ ಭಾಗ ಯಾವುದು?
ಉತ್ತರ- ಮುಮ್ಮೆದುಳು.
54. ಪರಾಗರೇಣುಗಳನ್ನು ಕೇಸರದಿಂದ ಶಲಾಕಾಗ್ರಕ್ಕೆ ವರ್ಗಾಯಿಸುವ ಕ್ರಿಯೆಗೆ ಏನೆಂದು ಹೆಸರು?
ಉತ್ತರ– ಪರಾಗಸ್ಪರ್ಶ.
55. ಭಾಷೆಯ ಆಧಾರದ ಮೇಲೆ ಮೊದಲು ರಚನೆಯಾದ ರಾಜ್ಯ ಯಾವುದು?
ಉತ್ತರ– ಆಂಧ್ರಪ್ರದೇಶ.
56. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿವೆ?
ಉತ್ತರ- ಮೂರು.
57. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ- ಡಾ. A. P. J.ಅಬ್ದುಲ್ ಕಲಾಂ.
58. ಶ್ರೀಲಂಕಾ ಬ್ರಿಟಿಷರಿಂದ ಯಾವಾಗ ಸ್ವಾತಂತ್ರ್ಯ ಪಡೆಯಿತು?
ಉತ್ತರ- 1948.
59. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ನೀಡಿದವರು ಯಾರು?
ಉತ್ತರ- ಲಾಲ್ ಬಹದ್ದೂರ್ ಶಾಸ್ತ್ರಿ.
60. ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
ಉತ್ತರ- 1986.
61. ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
ಉತ್ತರ- ಗುರು.
62. ಈ ಗ್ರಹದಲ್ಲಿ ಗಂಟೆಗೆ 1800 ಕಿ.ಮೀ ವೇಗದಲ್ಲಿ ಬಿಸಿ ಮಾರುತಗಳು ಬೀಸುತ್ತವೆ ?
ಉತ್ತರ- ಶನಿ.
63. ಹಂಪಿ ಸ್ಮಾರಕಗಳು ಯಾವ ಜಿಲ್ಲೆಯಲ್ಲಿವೆ?
ಉತ್ತರ-ಬಲ್ಲರಿ.
64. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಯಾರು?
ಉತ್ತರ- ಎಚ್.ವಿ. ನಂಜುಂಡಯ್ಯ.
65. ಕರ್ನಾಟಕ ರಾಜ್ಯದ ರಾಷ್ಟ್ರೀಯ ಉದ್ಯಾನವನದ ಒಟ್ಟು ಸಂಖ್ಯೆ?
ಉತ್ತರ-ಐದು.
66. ಯಾವ ವರ್ಷದಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು?
ಉತ್ತರ- 1973.
67. ಆದಿ ಶಂಕರಾಚಾರ್ಯರು ತಮ್ಮ ನಾಲ್ಕು ‘ಮಠ’ಗಳಲ್ಲಿ ಮೊದಲನೆಯದನ್ನು ಸ್ಥಾಪಿಸಿದರು?
ಉತ್ತರ- ಶೃಂಗೇರಿ.
68. ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
ಉತ್ತರ-ಕುವೆಂಪು.
69. ಕರ್ನಾಟಕ ರಾಜ್ಯದ ಸಿಲ್ಕ್ ಟೌನ್ ಎಂದು ಕರೆಯಲ್ಪಡುವ ಯಾವುದು?
ಉತ್ತರ- ರಾಮನಗರ.
70. ಶ್ರೀರಂಗಪಟ್ಟಣಂನಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋಲನುಭವಿಸಿ ಕೊಲ್ಲಲ್ಪಟ್ಟವರು ಯಾರು?
ಉತ್ತರ- ಟಿಪ್ಪು ಸುಲ್ತಾನ್.
71. ಮೊದಲ ಆಂಗ್ಲೋ ಮೈಸೂರು ಯುದ್ಧ ನಡೆದಾಗ?
ಉತ್ತರ- 1767.
72. “ಕರ್ನಾಟಕ ಸಂಗೀತದ ಪಿತಾಮಹ” ಎಂದು ಕರೆಯಲ್ಪಡುವವರು ಯಾರು?
ಉತ್ತರ- ಪುರಂದರ ದಾಸ.
73. ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
ಉತ್ತರ- ಕೆ.ಚೆಂಗಲರಾಯ ರೆಡ್ಡಿ.
74. ಕರನಾಟಕ ರಾಜ್ಯದಲ್ಲಿ ಪೂರ್ವಕ್ಕೆ ಹರಿಯುವ ನದಿ ಯಾವುದು?
ಉತ್ತರ-ತುಂಗಾ ನದಿ.
75. ಗುಂಬಾಜ್ ನಗರದಲ್ಲಿದೆ?
ಉತ್ತರ- ಬಿಜಾಪುರ.
76. ಕರ್ನಾಟಕದ ರಾಜಧಾನಿ ಯಾವುದು?
ಉತ್ತರ-ಬೆಂಗಳೂರು.
77. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು?
ಉತ್ತರ-30 ಜಿಲ್ಲೆಗಳು.
78. ಕರ್ನಾಟಕದ ಮುಖ್ಯಮಂತ್ರಿ ಯಾರು?
ಉತ್ತರ-ಬಿ ಎಸ್ ಯಡಿಯೂರಪ್ಪ.
79. ಕರನಾಟಕದಿಂದ ಭಾರತ್ ರತ್ನ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ?
ಉತ್ತರ-ವಿಶ್ವೇಶ್ವರಯ್ಯ.
80. ಕರ್ನಾಟಕವನ್ನು ಯಾವಾಗ ಸ್ಥಾಪಿಸಲಾಯಿತು?
ಉತ್ತರ-1 ನವೆಂಬರ್ 1956.
81. SBM ಬ್ಯಾಂಕ್ ನ ಸ್ಥಾಪಕರು ಯಾರು?
ಉತ್ತರ- ಸರ್.ಎಂ.ವಿಶ್ವೇಶ್ವರಯ್ಯ.
82. ಬ್ರಹ್ಮಪುತ್ರ ನದಿಗೆ ಬಾಂಗ್ಲಾದೇಶದಲ್ಲಿ ಯಾವ ಹೆಸರಿದೆ?
ಉತ್ತರ- ಪದ್ಮಾ.
83. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?
ಉತ್ತರ– ಕೊಡಗು.
84. ಕುದುರೆಮುಖ ಯಾವ ಲೋಹದ ಅದಿರಿಗೆ ಪ್ರಸಿದ್ಧವಾಗಿದೆ?
ಉತ್ತರ- ಕಬ್ಬಿಣ.
85. ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ ಇರುವುದು ಎಲ್ಲಿ?
ಉತ್ತರ– ಬಾಗಲಕೋಟ.
86. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ಕಾಲುವೆ ಯಾವುದು?
ಉತ್ತರ– ಸೂಯೆಜ್ ಕಾಲುವೆ.
87. ಲೂ ಮಾರುತಗಳು ಎಲ್ಲಿ ಕಂಡುಬರುತ್ತವೆ?
ಉತ್ತರ ಭಾರತ ಮತ್ತು ಪಾಕಿಸ್ತಾನ.
88. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಆಣೆಕಟ್ಟನ್ನು ಕಟ್ಟಲಾಗಿದೆ?
ಉತ್ತರ– ಮಹಾನದಿ.
89. ಪೆಟ್ರೋಲಜಿ ಎಂಬುವುದು ಯಾವುದರ ಅಧ್ಯಯನ?
ಉತ್ತರ-ಶಿಲೆಗಳು.
90. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?
ಉತ್ತರ-ಕೊಡಗು.
91. ಸಹರಾ ಮರುಭೂಮಿ ಯಾವ ದೇಶದಲ್ಲಿದೆ?
ಉತ್ತರ ಆಫ್ರಿಕಾ.
92. ಕರ್ನಾಟಕದ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ?
ಉತ್ತರ– 28.
93. ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆ ಯಾವುದು?
ಉತ್ತರ-ಬೆಂಗಳೂರು ನಗರ.
94. ಜೈನ ಧರ್ಮದಲ್ಲಿ ಯಾತ್ರಾ ಬಂಧನ ಕರ್ನಾಟಕ ನಗರ?
ಉತ್ತರ-ಶ್ರವಣಬೆಲಗೋಳ.
95. ಚಿತ್ರದುರ್ಗದಲ್ಲಿನ “ಬ್ರಹ್ಮಗಿರಿ” ಶಾಸನವು ಯಾವ ಚಕ್ರವರ್ತಿಗೆ ಸೇರಿದೆ?
ಉತ್ತರ-ಅಶೋಕ.
96. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?
ಉತ್ತರ-ಆತ್ಮರಾಮ್ ಪಾಂಡುರಂಗ.
97. ಮೋಹನ ತರಂಗಿಣಿ ಕೃತಿಯ ರಚನೆಕಾರರು ಯಾರು?
ಉತ್ತರ-ಕನಕದಾಸರು.
98. ಕರ್ನಾಟಕವನ್ನು ಆಳಿದ ಪ್ರಥಮ ಕನ್ನಡದ ರಾಜಮನೆತನ ಯಾವುದು?
ಉತ್ತರ-ಕದಂಬರು.
99. ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರು ಯಾರು?
ಉತ್ತರ-ಫ್ರೆಂಚರು.
100. ಮೊಘಲರ ಕಾಲದಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಿಗಳು ಯಾರು?
ಉತ್ತರ-ಪೋರ್ಚುಗೀಸರು.
101. ಸೂರ್ಯ ದೇವಾಲಯ ಇರುವುದು ಎಲ್ಲಿ?
ಉತ್ತರ-ಕೊನಾರ್ಕ್.
ಇತರೆ ಪ್ರಬಂಧಗಳು: