ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು, kannada sandigalu mattu udaharanegaļu in kannada, Kannada Sandhigalu With Examples list pdf
ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು:

ಈ ಲೇಖನಿಯ ಮೂಲಕ ಕನ್ನಡ ಸಂಧಿಗಳು ಮತ್ತು ಉದಾಹರಣೆಗಳ ಸಂಪೂರ್ಣವಾದ ಮಾಹಿತಿ ಒದಗಿಸಿದೇವೆ,ಹಾಗೂ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.
ಸಂಧಿಗಳು:
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ, ಅರ್ಥಕ್ಕೆ ಹಾನಿಯಾಗದೆ ಕೂಡುವುದಕ್ಕೆ ಸಂಧಿ ಎಂದು ಹೆಸರು.
ಉದಾಹರಣೆ:
ಮಗು+ಇಗೆ= ಮಗುವಿಗೆ
ಹೊಸ+ಕನ್ನಡ=ಹೊಸಗನ್ನಡ
ಸಂಧಿಗಳಲ್ಲಿ ವಿಧ:
೧.ಕನ್ನಡ ಸಂಧಿ.
೨.ಸಂಸ್ಕೃತ ಸಂಧಿ.
ಕನ್ನಡ ಸಂಧಿ:
ಕನ್ನಡ ಸಂಧಿ ಎಂದರೇನು?
ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ. ಅಥವಾ ಒಂದು ಕನ್ನಡ ಪದ, ಇನ್ನೊಂದು ಸಂಸ್ಕೃತ ಪದ ಕೂಡಿ ಸಂಧಿಯಾದರೂ ಕನ್ನಡ ಸಂಧಿಯಾಗಬಹುದು.
ಕನ್ನಡ ಸಂಧಿಗಳು ಯಾವುವು?
*ಲೋಪ ಸಂಧಿ
*ಆಗಮ ಸಂಧಿ
*ಆದೇಶ ಸಂಧಿ
ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂಧಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
ಸಂಧಿ ಪ್ರಕಾರಗಳು:
ಸಂಧಿ ಕಾರ್ಯದಲ್ಲಿ ಪಾಲ್ಗೊಳ್ಳುವ ಅಕ್ಷರಗಳ ಅಧಾರದ ಮೇಲೆ ಸಂಧಿಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಾಗಿ ವಿಂಗಡಿಸಲಾಗಿದೆ.
೧. ಸ್ವರಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಸ್ವರಸಂಧಿ ಎನ್ನುತ್ತಾರೆ.
ಸ್ವರ+ಸ್ವರ =ಸ್ವರಸಂಧಿ
೨.ವ್ಯಂಜನ ಸಂಧಿ:
ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನಿಸುವುದು.
ಸ್ವರ+ವ್ಯಂಜನ= ವ್ಯಂಜನ ಸಂಧಿ
ವ್ಯಂಜನ+ಸ್ವರ= ವ್ಯಂಜನ ಸಂಧಿ
ಸ್ವರಸಂಧಿಗಳು:
೧.ಲೋಪ ಸಂಧಿ:
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಮೊದಲ ಪದದ ಕೊನೆಯ ಸ್ವರವು ಲೋಪವಾಗುವುದು.
ಉದಾಹರಣೆ:
ಮಾತು+ಇಲ್ಲ=ಮಾತಿಲ್ಲ(ʼಉʼ ಕಾರ ಲೋಪ)
ಮಾಡು+ಇಸು= ಮಾಡಿಸು (ʼಉʼ ಕಾರ ಲೋಪ)
ಬೇರೆ+ಒಂದು= ಬೇರೊಂದು (ʼಎʼ ಕಾರ ಲೋಪ)
ಊರು+ಊರು= ಊರೂರು
ಬಲ್ಲೆನು+ಎಂದು= ಬಲ್ಲೆನೆಂದು
೨. ಆಗಮ ಸಂಧಿ:
ಸಂಧಿ ಕಾರ್ಯ ಮಾಡಿದಾಗ ಒಂದು ಅಕ್ಷರವು ಹೊಸದಾಗಿ ಬಂದು ಸೇರುವುದನ್ನು ಆಗಮ ಸಂಧಿ ಎನ್ನುವರು. ಎರಡು ವಿಧ
೧.ಯಕಾರಾಗಮ ಸಂಧಿ.
ಆ, ಇ, ಈ, ಎ, ಏ, ಐ, ಓ, ಸ್ವರಗಳ ಮುಂದೆ ಸ್ವರ ಬಂದರೆ ಸಂಧಿ ಪದದಲ್ಲಿ ʼಯ್ʼ ವ್ಯಂಜನವು ಹೊಸದಾಗಿ ಆಗಮ ವಾಗುತ್ತದೆ. ಇದಕ್ಕೆ ಯಕಾರಾಗಮ ಸಂಧಿ ಎಂದು ಹೆಸರು.
ಉದಾಹರಣೆ:
ಗಾಳಿ+ಅನ್ನು= ಗಾಳಿಯನ್ನು
ಮಳೆ+ಇಂದ= ಮಳೆಯಿಂದ
ಕೆರೆ+ಅಲ್ಲಿ= ಕೆರೆಯಲ್ಲಿ
೨. ವಕಾರಾಗಮ ಸಂಧಿ:
ಉ,ಊ, ಋ, ಓ, ಔ, ಸ್ವರಗಳ ಮುಂದೆ ಸ್ವರವು ಬಂದರೆ ಸಂಧಿ ಪದದಲ್ಲಿʼವ್ʼ ವ್ಯಂಜನವು ಹೊಸದಾಗಿ ಆಗಮವಾಗುತ್ತದೆ. ಇದಕ್ಕೆ ವಕಾರಾಗಮ ಸಂಧಿ ಎಂದು ಹೆಸರು.
ಉದಾಹರಣೆ:
ಗುರು+ಅನ್ನು=ಗುರುವನ್ನು
ಹೂ+ಇದು= ಹೂವಿದು
ಮಾತೃ+ಅನ್ನು= ಮಾತೃವನ್ನು
ವ್ಯಂಜನ ಸಂಧಿ:
೧.ಆದೇಶ ಸಂಧಿ:
ಸಂಧಿಯಾಗುವಾಗ ಒಂದು ವ್ಯಂಜನದ ಸ್ಥಾನದಲ್ಲಿ ಮತ್ತೂಂದು ವ್ಯಂಜನ ಬರುವುದಕ್ಕೆ ಆದೇಶ ಸಂಧಿಯೆಂದು ಕರೆಯುತ್ತಾರೆ.
ಆದೇಶ ಸಂಧಿಯಲ್ಲಿ ಎರಡನೆಯ ಪದದಲ್ಲಿ ಇರುವ ಕ, ತ, ಪ ಎಂಬ ವ್ಯಂಜನಗಳಿಗೆ ಪ್ರತಿಯಾಗಿ, ಕ್ರಮವಾಗಿ ಗ, ದ, ಬ ಎಂಬ ವ್ಯಂಜನಗಳು ಆದೇಶವಾಗುವುವು.
ಉದಾಹರಣೆ:
ಬೆಟ್ಟ+ತಾವರೆ= ಬೆಟ್ಟದಾವರೆ
ಮಳೆ+ಕಾಲ= ಮಳೆಕಾಲ
ಕಣ್+ಪನಿ= ಕಂಬನಿ
ಇತರೆ ಪ್ರಬಂಧಗಳು:
ಕನ್ನಡ ಸಂಧಿಗಳು ಮತ್ತು ಉದಾಹರಣೆಗಳ ಬಗ್ಗೆ ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಹಾಗೆ ನಿಮಗೆ ಗೋತ್ತಿರುವ ಅಥವಾ ಇಷ್ಟ ಅಗುವ ಕವನಗಳನ್ನು Comment ಮಾಡುವ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.