Kannada Varnamale | ಕನ್ನಡ ವರ್ಣಮಾಲೆ ಅಕ್ಷರಗಳು  

Kannada Varnamale, ಕನ್ನಡ ವರ್ಣಮಾಲೆ ಅಕ್ಷರಗಳು, kannada varnamale aksharagalu, kannada varnamale total letter, kannada swaragalu

Kannada Varnamale ಕನ್ನಡ ವರ್ಣಮಾಲೆ ಅಕ್ಷರಗಳು

Kannada Varnamale ಕನ್ನಡ ವರ್ಣಮಾಲೆ ಅಕ್ಷರಗಳು  

ಈ ಲೇಖನಿಯಲ್ಲಿ ಸ್ನೇಹಿತರೇ ನಿಮಗೆ ಅನುಕೂಲವಾಗುವಂತೆ ಕನ್ನಡ ವರ್ಣಮಾಲೆಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.  

ಕನ್ನಡ ವರ್ಣಮಾಲೆ ಅಕ್ಷರಗಳು  

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ ಕ್ಷ ಙ್ಞ

ಕನ್ನಡ ವರ್ಣಮಾಲೆ ಅಕ್ಷರಗಳು  ಎಂದರೇನು?

ವರ್ಣ ಮತ್ತು ಅಕ್ಷರ ಸಮೂಹವನ್ನು ಸರಳ ಭಾಷೆಯಲ್ಲಿ ಕನ್ನಡ ವರ್ಣಮಾಲೆ ಎನ್ನುವರು.

ಮೂಲರೂಪದಲ್ಲಿ ಅಕ್ಷರಗಳು ಸಂಕೇತಗಳಾಗಿದ್ದು ನಮ್ಮ ಬಾಯಿಯಿಂದ ಹೊರಬರುವ ಧ್ವನಿಯ ಲಿಖಿತ ರೂಪವಾಗಿದೆ.

ಮೂರು ಭಾಗಗಳಾಗಿ ವಿಗಂಡಿಸಲಾಗಿದೆ

ಸ್ವರಗಳು – 13
ಯೋಗವಾಹಗಳು – 2
ವ್ಯಂಜನಗಳು – 34

ಸ್ವರಗಳು  Swaragalu:

ಅ   ಆ ಇ ಈ ಉ ಊ ಋ ಎ ಏ ಐ ಒ ಓ ಔ

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಸ್ವರಗಳ ವಿಧಗಳು

೧.ಹೃಸ್ವ ಸ್ವರಗಳು ಹಾಗೂ ೨.ದೀರ್ಘ ಸ್ವರಗಳು.

೧.ಹೃಸ್ವ ಸ್ವರಗಳು

ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ

೨.ದೀರ್ಘ ಸ್ವರಗಳು

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು.

ದೀರ್ಘಸ್ವರ ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ

ವ್ಯಂಜನಗಳು 

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ (೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು.

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ಎರಡು ವಿಧ

ವರ್ಗೀಯ ವ್ಯಂಜನಗಳು  (೨೫ : ಕ,ಚ,ಟ,ತ,ಪ-ವರ್ಗಗಳು)

ಅವರ್ಗೀಯ ವ್ಯಂಜನಗಳು  (೯-ಯ ಇಂದ ಳ ವರೆಗೆ)

ವರ್ಗೀಯ ವ್ಯಂಜನ
ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು  (೨೫)  ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು.

ಕ-ವರ್ಗ, = ಕ, ಖ, ಗ, ಘ, ಙ.
ಚ-ವರ್ಗ, = ಚ, ಛ, ಜ, ಝ, ಞ.
ಟ-ವರ್ಗ ,= ಟ, ಠ, ಡ, ಢ, ಣ.
ತ-ವರ್ಗ, = ತ, ಥ, ದ, ಧ, ನ.
ಪ-ವರ್ಗ,= ಪ, ಫ, ಬ, ಭ, ಮ.

ಅವರ್ಗೀಯ ವ್ಯಂಜನ

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ

ಅವು ಯಾವುವೆಂದರೆ : ಯ,ರ,ಲ,ವ,ಶ,ಷ,ಸ,ಹ,ಳ.

ಯೋಗವಾಹಗಳು

ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು ಯೋಗವಾಹಗಳೆಂದು ಕರೆಯುತ್ತಾರೆ.

ಅನುಸ್ವಾರ:

ಯಾವುದೇ ಒಂದು ಅಕ್ಷರ ತನ್ನ ಜೊತೆಗೆ ಒಂದು ಬಿಂದುವಿನನ್ನು ಹೊಂದಿದ್ದರೆ ಅದನ್ನು ಅನುಸ್ವಾರ ಎನ್ನುವರು.

ಉದಾ: ಒಂಟೆ,ಅಂಗ,ಇತ್ಯಾದಿ

ವಿಸರ್ಗ:

ಒಂದು ಅಕ್ಷರವು ಒಂದರ ಮೇಲೊಂದು ಎರಡು ಬಿರುದುಗಳನ್ನು ಹೊಂದಿದ್ದರೇ ಅದನ್ನು ವಿಸರ್ಗ ಎನ್ನುವರು.

ಉದಾ: ಬಹುಶಃ, ದುಃಖ ಇತ್ಯಾದಿ.

ಇತರೆ ಪ್ರಬಂಧಗಳು

Swaragalu in Kannada

ತಿಂಗಳುಗಳ ಹೆಸರು ಕನ್ನಡ

Leave a Comment