ಕರ್ನಾಟಕದ 31 ಜಿಲ್ಲೆಗಳ ಹೆಸರು, Karnataka 31 Districts Names in Kannada, karnataka 31 districts names information in kannada, 31 districts of karnataka
ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

ಈ ಲೇಖನಿಯಲ್ಲಿ ಕರ್ನಾಟಕದ 31 ಜಿಲ್ಲೆಗಳ ಹೆಸರುಗಳನ್ನು ನಾವು ನಿಮಗೆ ಅನುಕೂಲವಾಗುವಂತೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.
Karnataka 31 Districts Names in Kannada
1.ಉಡುಪಿ
- ಇಲ್ಲಿ ಕನಕನ ಕಿಂಡಿ ಇದೆ.
- ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
- ಇಲ್ಲಿ ಮಣಿಪಾಲ್ ವಿಶ್ವವಿದ್ಯಾಲಯವಿದೆ.
- ಇಲ್ಲಿ ಸಿಂಡಿಕೇಟ್ ಬ್ಯಾಂಕ್ ನ್ನು ೧೯೨೫ರಲ್ಲಿ ಸ್ಥಾಪಿಸಲಾಯಿತು.
2.ಶಿವಮೊಗ್ಗ
- ಇಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದೆ.
- ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರವು ಶರಾವತಿ ನದಿಗೆ ಸಂಬಂಧಿಸಿದೆ.
- ಇಲ್ಲಿ ಶಿವಪ್ಪನಾಯಕನ ಅರಮನೆ ಇದೆ.
- ಜೋಗ ಜಲಪಾತವು ಶರಾವತಿ ನದಿಯಿಂದ ಸೃಷ್ಠಿಯಾಗಿದೆ.
3.ದಾವಣಗೆರೆ
- ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಕರೆಯಲಾಗುತ್ತದೆ.
- ದಾವಣಗೆರೆ ವಿಶ್ವವಿದ್ಯಾಲಯ ಇದೆ. ಇದರ ಧ್ಯೇಯವಾಕ್ಯ: ತಮಸೋಮ ಜ್ಯೋತಿರ್ಗಮಯ
- ಇಲ್ಲಿ ಸಮಗ್ರ ಅಂಗವೀಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.
4.ಚಿತ್ರದುರ್ಗ
- ಹೈದರಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಅಲ್ಲಿನ ಪಾಳೆಗಾರ ರಾಜ ವೀರ ಮದಕರಿ ನಾಯಕ ಅಗಿದ್ದ.
- ಮೊಳಕಾಲ್ಮೂರು ರೇಷ್ಮೆಗೆ ಹೆಸರುವಾಸಿಯಾಗಿದೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ತಾಮ್ರ ಉತ್ಷಾದನೆ ಮಾಡುವ ಜಿಲ್ಲೆಯಾಗಿದೆ.
5.ಉತ್ತರಕನ್ನಡ
- ಮುಂಡಗೋಡ ಎಂಬ ಊರು ಟಿಬೇಟಿಯನ್ನರ ಮರುವಸತಿ ಕೇಂದ್ರವಾಗಿದೆ.
- ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ಇದೆ.
- ಸೀಬರ್ಡ್ ನೌಕಾನೆಲೆಯನ್ನು INS ಕದಂಬ ನೌಕಾನೆಲೆ ಎಂದು ಕರೆಯಲಾಗುತ್ತದೆ.
- ಕಾರವಾರ ರವೀಂದ್ರನಾಥ ಟಾಗೋರ್ ಬೀಚ್ ಇದೆ.
6.ದಕ್ಷಿಣಕನ್ನಡ
- ನವಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
- ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
- ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ-ಕಂಬಳ
7.ಚಿಕ್ಕಮಗಳೂರು
- ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
- ಇಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆ ಇದೆ.
- ಕುದುರೆ ಮುಖ ರಾಷ್ಟೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.
8.ತುಮಕೂರು
- ಮಾರ್ಕೋನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
- ಕರ್ನಾಟಕದ ಅತೀ ಹೆಚ್ಚು ಕೆಂಪು ಮಣ್ಣು ಹೊಂದಿದೆ.
- ಕಣಿಕಲ್ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.
9.ಕೊಡಗು
- ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
- ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
- ಇದನ್ನು ಕರ್ನಾಟಕ ಕಾಶ್ಮೀರ ಎಂದು ಕರೆಯಲಾಗುತ್ತದೆ.
- ಇಲ್ಲಿ ಹಾರಂಗಿ ಜಲಾಶಯ ಇದೆ.
10.ಹಾಸನ
- ಶ್ರವಣಬೆಳಗೊಳವನ್ನು ಜೈನರ ಕೇಂದ್ರ ಎಂದು ಕರೆಯುತ್ತಾರೆ.
- ಶ್ರವಣಬೆಳಗೊಳದಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
- ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರೋಮಿಯಂ ಉತ್ಪಾದಿಸುತ್ತದೆ.
11.ಮೈಸೂರು
- ಮೈಸೂರಿನ ತಲಕಾಡು ದೇವಾಲಯಗಳನ್ನು ಜಖಣಾಚಾರಿ ರಚಿಸಿದನು.
- ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿದೆ.
- ಕರ್ನಾಟಕದ ಅತೀ ದೊಡ್ಡ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ.
12.ಚಾಮರಾಜನಗರ
- ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
- ಬಿಳಿಗುಂಡ್ಲು ಎಂಬಲ್ಲಿ ಕಾವೇರಿ ಜಲಮಾಪನ ಕೇಂದ್ರ ಇದೆ.
- ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರನ್ನು ಬಿಳಿಗುಂಡ್ಲು ಎಂಬ ಪ್ರದೇಶದಲ್ಲಿ ಅಳೆಯಲಾಗುವುದು.
13.ಬೀದರ್
- ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ರವರು ಬೀದರ್ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್ ಝರಾ ಇದೆ.
- ಸೋಲಾ ಕಂಬ ಮಸೀದಿ ಇದೆ.
- ವೈಮಾನಿಕ ತರಬೇತಿ ಕೇಂದ್ರವಿದೆ.
14.ಕಲಬುರಗಿ
- ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
- ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
- ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
- ಸನ್ನತಿಯಲ್ಲಿ ಮೌರ್ಯರ ಅರಸ ಅಶೋಕನ ಶಾಸನಗಳಿವೆ.
15.ಯಾದಗಿರಿ
- ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ.
- ಯಾದಗಿರಿ, ಸುರಪುರ, ಶಹಾಪುರ, ಎಂಬ ಮೂರು ತಾಲೂಕುಗಳನ್ನು ಒಳಗೊಂಡಿದೆ.
- ಇದು ಕಾಕತೀಯ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.
16.ರಾಯಚೂರು
- ಇಲ್ಲಿ ಐ.ಐ.ಐ.ಟಿ.ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
- ಇಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣವಿದ್ಯುತ್ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
17.ವಿಜಯಪುರ
- ಇದನ್ನು ಕರ್ನಾಟಕದ ಪಂಜಾಬ್ ಎಂದು ಕರೆಯುತ್ತಾರೆ.
- ಇಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲಾಗಿದೆ.
- ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
18.ಬಾಗಲಕೋಟೆ
- ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
- ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿಯ ಹಳೆಯ ಹೆಸರು ವಾತಾಪಿ.
- ಬಾದಾಮಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ.
19.ಕೊಪ್ಪಳ
- ಇಲ್ಲಿಯ ಸುವರ್ಣ ಗಿರಿ ಅಥವಾ ಕನಕಗಿರಿ ಮೌರ್ಯರ ದಕ್ಷಿಣ ರಾಜಧಾನಿ ಅಗಿತ್ತು.
- ರಾಯಚೂರು ಜಿಲ್ಲೆಯಿಂದ ೧೯೯೭ ರಲ್ಲಿ ಪ್ರತ್ಯೇಕವಾಗಿದೆ
- ಆನೆಗುಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು.
- ಇಲ್ಲಿ ಅಂಜನಾದ್ರಿ ಬೆಟ್ಟವಿದೆ.
20.ಬಳ್ಳಾರಿ
- ೧೯೫೬ಕ್ಕಿಂತ ಮುಂಚೆ ಮದ್ರಾಸ ಪ್ರಾಂತ್ಯದಲ್ಲಿತ್ತು.
- ೧೯೩೨ರಲ್ಲಿ ಕರ್ನಾಟಕದಲ್ಲೆ ಪ್ರಥಮವಾಗಿ ವಿಮಾನ ಸಂಪರ್ಕ ಪಡೆದ ಸ್ಥಳವಾಗಿದೆ.
- ಇಲ್ಲಿ ದರೋಜಿ ಕರಡಿ ಧಾಮ ಇದೆ.
21.ಗದಗ
- ಇಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
- ಇಲ್ಲಿ ಮಾಗಡಿ ಪಕ್ಷಿಧಾಮವಿದೆ. ಇದನ್ನು ಗದುಗಿನ ಪಕ್ಷಿಕಾಶಿ ಎನ್ನುವರು.
- ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಭೀಮ್ ರಾವ್.
22.ಧಾರವಾಡ
- ಕರ್ನಾಟಕದಲ್ಲಿ ಹೋಂ ರೂಲ್ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
- ಇಲ್ಲಿ ಹೈಕೋರ್ಟ್ ಪೀಠವನ್ನು ೨೦೦೮ ಜುಲೈ ೪ ರಂದು ಸ್ಥಾಪಿಸಲಾಗಿದೆ.
- ಕೃಷಿ ವಿಶ್ವವಿದ್ಯಾಲಯ ಇದೆ.
23.ಬೆಳಗಾವಿ
- ಇಲ್ಲಿ ರಾಜಾ ಲಕ್ಕಮ್ಮಗೌಡ ಅಣೆಕಟ್ಟು ಇದೆ. ಇದನ್ನು ಘಟಪ್ರಭಾ ನದಿಗೆ ಕಟ್ಟಲಾಗಿದೆ. ಇದನ್ನು ಹಿಡಕಲ್ ಅಣೆಕಟ್ಟು ಎಂದು ಸಹ ಕರೆಯುತ್ತಾರೆ.
- ಇಲ್ಲಿ ನವಿಲುತೀರ್ಥ ಅಣೆಕಟ್ಟನ್ನು ಮಲಪ್ರಭಾ ನದಿಗೆ ಕಟ್ಟಲಾಗಿದೆ.
- ಇಲ್ಲಿ ಸಾಂಬ್ರಾ ವಿಮಾನ ನಿಲ್ಧಾಣವಿದೆ.
24.ಹಾವೇರಿ
- ರಾಣಿಬೆನ್ನೂರು ಎಂಬಲ್ಲಿ ಕೃಷ್ಣ ಮೃಗ ವನ್ಯಧಾಮ ಇದೆ.
- ಕರ್ನಾಟಕದಲ್ಲಿ ಅತೀ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆಯಾಗಿದೆ
- ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿಯನ್ನು ಬೆಳೆಯುವ ಜಿಲ್ಲೆಯಾಗಿದೆ.
25.ಮಂಡ್ಯ
- ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
- ಶಿವಪುರ ಸತ್ಯಾಗ್ರಹವು ೧೯೩೮, ಎಪ್ರಿಲ್ ೧೧ ರಲ್ಲಿ ನಡೆಯಿತು.
- ಇಲ್ಲಿ ಕರಿಘಟ್ಟ ಗಿರಿಧಾಮವಿದೆ. ಇದರಲ್ಲಿ ಲೋಕಪಾವನಿ ನದಿ ಹರಿಯುತ್ತದೆ.
26.ರಾಮನಗರ
- ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
- ಭಾರತದ ಏಕಮಾತ್ರ ಹದ್ದುಗಳ ಆಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿದೆ.
- ಸಾಲುಮರದ ತಿಮ್ಮಕ್ಕರವರು ರಾಮನಗರ ಜಿಲ್ಲೆಯವರು.
27.ಬೆಂಗಳೂರು ನಗರ
- ಇದರ ಸ್ಥಾಪಕ- ಒಂದನೆಯ ಕೇಂಪೆಗೌಡ
- ಇಲ್ಲಿ ಫ್ರೀಡಂ ಪಾರ್ಕ ಇದೆ.
- ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ)
- ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.
28.ಕೋಲಾರ
- ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
- ಇಲ್ಲಿಯ ಶಿಡ್ಲಘಟ್ಟ ನಗರವು ರೇಷ್ಮೆಗೆ ಹೆಸರುವಾಸಿಯಾಗಿದೆ.
- ಇದರ ಮೊದಲ ಹೆಸರು ಕುವಲಾಲ
- ಇಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿದೆ
29.ಚಿಕ್ಕಮಂಗಳೂರು
- ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
- ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
- ಭಾರತದಲ್ಲಿ ಕಾಫಿಯ ಜನ್ಮಸ್ಥಳ- ಚಿಕ್ಕಮಗಳೂರು
- ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.
30.ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡ ಬಳ್ಳಾಪುರವು ರೇಷ್ಮೆಗೆ ಹೆಸರುವಾಸಿಯಾಗಿದೆ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ ೧೭೫೦ ನವೆಂಬರ್ ೨೦ ಜನಿಸಿದರು.
31. ಚಿಕ್ಕ ಬಳ್ಳಾಪುರ
- ಇಲ್ಲಿಯ ವಿಧುರಾಶ್ವತ್ಥ ಎಂಬ ಸ್ಥಳವು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯಲಾಗುತ್ತದೆ. ಹೀಗೆ ಕರೆದವರು ಪಟ್ಟಾಭಿ ಸೀತಾರಾಮಯ್ಯನವರು.
- ವಿಧುರಾಶ್ವತ್ಥ ದುರಂತವು ೧೯೩೮ ಎಪ್ರಿಲ್ ೨೫ ರಂದು ನಡೆಯಿತು.
- ಇಲ್ಲಿ ಟಿಪ್ಪು ಡ್ರಾಪ್ ಎಂದು ಪ್ರಸಿದ್ಧಿಯಾಗಿರುವ ನಂದಿ ಬೆಟ್ಟ ಇದೆ.
ಇತರೆ ಪ್ರಬಂಧಗಳು: