ಕರ್ನಾಟಕದ ಅತಿ ದೊಡ್ಡ ಜಾತ್ರೆ | Karnataka Biggest Fair

ಕರ್ನಾಟಕದ ಅತಿ ದೊಡ್ಡ ಜಾತ್ರೆ, Karnataka Athi Dodda Jatre in Kannada, Sirsi Jatre Information in Kannada, ಜಾತ್ರೆ ಮಾಹಿತಿ in kannada karnataka biggest fair

ಕರ್ನಾಟಕದ ಅತಿ ದೊಡ್ಡ ಜಾತ್ರೆ

ಕರ್ನಾಟಕದ ಅತಿ ದೊಡ್ಡ ಜಾತ್ರೆ

ಈ ಲೇಖನಿಯಲ್ಲಿ ಮಾರಿಕಾಂಬ ಜಾತ್ರೆಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಶಿರಸಿ ಮಾರಿಕಾಂಬಾ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಸ್ಥಾನವು ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. 2 ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆಯು ವಿಜೃಂಭಣೆಯಿಂದ ನಡೆಯುತ್ತದೆ.

ಶಿರಸಿ ಮಾರಿಕಾಂಬ ದೇವಿಗೆ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಭಕ್ತರಿದ್ದಾರೆ. ಜಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ.

ಕರ್ನಾಟಕದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಅಂದರೆ ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ. ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈಕೆಯನ್ನು ಭೇಟಿಯಾಗಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದರೆ ಖಂಡಿತವಾಗಿ ಎಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಅದೇನೋ ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

ಜಾತ್ರಾ ವಿಧಿ ವಿಧಾನ

ಸಾಯಿರಾಸಿ ಮಾರಿಕಾಂಬಾ ದೇವಿ ಜಾತ್ರೆಗೆ ಸಂಬಂಧಿಸಿದ ವಿಧಿವಿಧಾನಗಳು ಜ.26ರಿಂದ ಆರಂಭವಾಗಲಿದ್ದು, ಮೇ 26ರಂದು ದೇವಿಯ ಪೂರ್ವಕ್ಕೆ ಮೊದಲ ದ್ವಾರ, 22ರಂದು ಪೂರ್ವಕ್ಕೆ ಮೊದಲ ನಿರ್ಗಮನ, 2ನೇ ನಿರ್ಗಮನ. 25 ರಂದು ಉತ್ತರ, 1 ರಂದು ಪೂರ್ವಕ್ಕೆ 3 ನೇ ನಿರ್ಗಮನ, 4 ರಂದು ಮರ ಕಡಿಯುವುದು. 8 ರಂದು ರಥದ ಮರವನ್ನು ತರುವುದು, ಅದೇ ರಾತ್ರಿ ಪೂರ್ವಕ್ಕೆ ಬಿಡಲಾಗುವುದು. ಮೇ 9 ರಂದು ಅಗೆಯುವುದು, ದೇವಿಯನ್ನು ವಿಸರ್ಜಿಸಲಾಗುತ್ತದೆ.

ಕೋವಿಡ್ ಮತ್ತು ಒಮಿಕ್ರಾನ್ ಭಯದ ಕಾರಣ, ಸರ್ಕಾರದ ಹೊಸ ಆದೇಶವು ಮಾರಿಕಾಂಬಾ ದೇವಾಲಯದ ದೇಗುಲಕ್ಕೆ ನಾಳೆ (ಶನಿವಾರ) ಮಾತ್ರ ದೇಗುಲದ ದರ್ಶನಕ್ಕೆ ಅವಕಾಶ ನೀಡಿದೆ. ಬೇರೆ ಯಾವುದೇ ಸೇವೆಗಳಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತೆಯೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಗತ್ಯ.

ಶಿರಸಿಯ ಶ್ರೀ ಮಾರಿಕಾಂಬಾ ದೇವಾಲಯವು ಉತ್ತರ ಕನ್ನಡದ ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯ ಉತ್ತರ ಕರ್ನಾಟಕದಲ್ಲಿದ್ದರು ಕೂಡ ಇದರ ಕೀರ್ತಿ ಸಂಪೂರ್ಣ ಕರ್ನಾಟಕವನ್ನೇ ಆವರಿಸಿಕೊಂಡಿದೆ. ದೇಶ ವಿದೇಶಗಳಿಂದ ಭಕ್ತರು ಈಕೆಯ ಆಶೀರ್ವಾದವನ್ನು ಪಡೆಯಲು ಇಲ್ಲಿಗೆ ಬರುತ್ತಾರೆ. ಎರಡು ವರ್ಷಗಳಿಗೊಮ್ಮ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವವೇ ಇಲ್ಲಿನ ವಿಶೇಷ.

ಶ್ರೀ ಮಾರಿಕಾಂಬಾ ದೇವಸ್ಥಾನದ ಇತಿಹಾಸ

ಹಾನಗಲ್‌ನಿಂದ ಶಿರಸಿಗೆ ದೇವಿಯ ವಿಗ್ರಹ ಬಂದಿತೆಂದು ಪುರಾಣಗಳು ಹೇಳುತ್ತವೆ. ಹಾನಗಲ್‌ನಲ್ಲಿ ಪ್ರಬಲ ಶಕ್ತಿ ಪೀಠಗಳಿವೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ವನವಾಸದಲ್ಲಿದ್ದ ಧರ್ಮರಾಯ ವಿರಾಟನಗರದ ಕಡೆಗೆ ಹೊರಟಿದ್ದ. ಅವರು ಗ್ರಾಮದ ಪ್ರವೇಶದ್ವಾರದಲ್ಲಿ ದುರ್ಗೆಯನ್ನು ನೋಡಿದರು. ಸಮಾಜದ ರಕ್ಷಣೆ, ದಯೆ ಮತ್ತು ಕಲ್ಯಾಣಕ್ಕಾಗಿ ಅವರು ಅಲ್ಲಿ ಆಕೆಯನ್ನು ಪೂಜಿಸಿದರು ಎನ್ನಲಾಗುತ್ತದೆ. ಹಾನಗಲ್‌ನ್ನು ಆ ಸಂದರ್ಭದಲ್ಲಿ ವಿರಾಟನಗರ ಎಂದು ಕರೆಯಲಾಗುತ್ತಿತ್ತು. ಇದನ್ನು ಚಾಲುಕ್ಯರ ಶಾಸನಗಳಲ್ಲಿ‘ವಿರಾಟನ ಕೋಟೆ’ಎಂದೂ ಉಲ್ಲೇಖಿಸಲಾಗಿದೆ. ಹಾನಗಲ್‌ ಮಹಾರಾಷ್ಟ್ರದ ವಿರಾಟನಗರ ಎಂದು ಸಂಶೋಧಕರೂ ದಾಖಲಿಸಿದ್ದಾರೆ. ಕುಂತಿ ದಿಬ್ಬ (ಕುಂತಿಯ ದಿಬ್ಬ) ಹಿಂದೆ ಶ್ರೀ ದೇವಿಯು ಕುಳಿತಿದ್ದ ತ್ರಿಭುವನೇಶ್ವರಿಯ ಸ್ಥಾನವಾಗಿತ್ತು ಎಂದು ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಇಲ್ಲಿ ಶ್ರೀ ದೇವಿಯ ಜಾತ್ರೆಯು ಶ್ರದ್ಧೆ ಮತ್ತು ಭಕ್ತಿಯಿಂದ ನಡೆಯುತ್ತದೆ.

ಮೆರವಣಿಗೆ

ಫಾಲ್ಗುಣ ಮಾಸದಲ್ಲಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಇದು ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ. ರಾಜ್ಯದೆಲ್ಲೆಡೆಯಿಂದ ಭಕ್ತರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯ ದಿನ ದೇವಿಯ ಮೂಲ ವಿಗ್ರಹಕ್ಕೆ ಸರ್ವಾಲಂಕಾರವನ್ನು ಮಾಡಿ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಹತ್ತಿರದ ಬಿಡ್ಕಿ ಮೈದಾನದಲ್ಲಿ ಸ್ಥಾಪಿಸಿ ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ದೇವಿಗೆ ವಿವಾಹ ಮಾಡುವ ಸಂಪ್ರದಾಯದೊಂದಿಗೆ ಆರಂಬವಾದ ಜಾತ್ರೆಯು 9ನೇ ದಿನ ಕೋಣ ಬಲಿ ಕೊಟ್ಟು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ಬಲಿ ಕೊಡುವ ಕೋಣವು ಬ್ರಾಹ್ಮಣ ಮುಖವಾಡ ಧರಿಸಿ ಬ್ರಾಹ್ಮಣ ಯುವತಿಯನ್ನು ವಿವಾಹವಾದ ಯುವಕ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಆದರೆ ಈಗ ಕೋಣ ಬಲಿಯನ್ನು ಇಲ್ಲಿ ನಿಷೇಧಿಸಲಾಗಿದ್ದು, ಕೋಣವನ್ನು ಬಲಿ ಕೊಡುವ ಬದಲು ಬೂದುಕುಂಬಳಕಾಯಿಯನ್ನು ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಕೋಣ ಬಲಿ ನಿಷೇಧ

ಇತಿಹಾಸದ ಪ್ರಕಾರ, ಈ ದೇವಾಲಯಕ್ಕೆ ಗಾಂಧೀಜಿ ಭೇಟಿ ನೀಡಿದ್ದಾಗ ಕೋಣ ಬಲಿಯನ್ನು ತಿರಸ್ಕರಿಸಿದ್ದರಂತೆ. ಅಂದಿನಿಂದ ಗಾಂಧೀಜಿಯ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ವ ಭೋಧಿಸಿ , ಮೂಡ ನಂಬಿಕೆ ದೂರ ಮಾಡಿ ಪ್ರಾಣಿ ಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರೂ ಎಂದು ಹೇಳಲಾಗುತ್ತದೆ. ಈ ಹಿಂದೆ ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ನಡೆಯುತ್ತಿದ್ದ ಕೋಣಗಳ ಬಲಿಯನ್ನು ಕೂಡ ನಿಷೇಧಿಸಲಾಗಿದೆ.

ಮಾರಿಕಾಂಬ ಜಾತ್ರೆ

ಜಾತ್ರಾ ಮಹೋತ್ಸವ ಮುಗಿದ 10 ದಿನಗಳವರೆಗೆ ಇಡೀ ಊರಿನವರಿಗೆ ಸೂತಕವಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಯಾವುದೇ ಶುಭ ಕಾರ್ಯವನ್ನು ಆಯೋಜಿಸುವುದಿಲ್ಲ. ಈ ಅವಧಿಯಲ್ಲಿ ದೇವಿಯ ವಿಗ್ರಹವನ್ನು ದೇವಾಲಯದ ಹಿಂಭಾಗದಲ್ಲಿನ ಕೆರೆಯಲ್ಲಿ ಮುಳುಗಿಸಿಟ್ಟು, ದೇವಾಲಯದ ಬಾಗಿಲನ್ನು ಮುಚ್ಚು ಸಂಪ್ರದಾಯವಿದೆ. ನಂತರ ಯುಗಾದಿಯಂದು ಈ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗುತ್ತದೆ. ಮತ್ತು ಜಾತ್ರೆಯ ನಂತರ ಕೋಣವನ್ನು ಹರಾಜಿನಲ್ಲಿ ಮಾರಲಾಗುತ್ತದೆ. ಹಾಗೂ ದೇವಾಲಯದಲ್ಲಿ ಮತ್ತೆ ಎಂದಿನಂತೆ ಪೂಜೆ ಕಾರ್ಯಗಳು ನಡೆಯಲಾರಂಭಿಸುತ್ತದೆ.

ಇತರೆ ಪ್ರಬಂಧಗಳು:

ಕನ್ನಡ ನಾಡು ನುಡಿ ಪ್ರಬಂಧ

ಯುಗಾದಿ ಹಬ್ಬದ ಶುಭಾಶಯಗಳು

Leave a Comment