ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ

ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ, kavi kanda suryodaya varnane prabandha in kannada

ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ:

ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ
ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ

ಈ ಲೇಖನಿಯಲ್ಲಿ ಕನ್ನಡ ಕವಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ವಿವರಿಸಿದ್ದೇವೆ.

ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಪ್ರಬಂಧ:

ಲೋಕವನ್ನು ಮುತ್ತಿದ ಅಂಧಕಾರವನ್ನು ತನ್ನ ಕಿರಣಗಳಿಂದ ಓಡಿಸುವ ಸೂರ್ಯ ನಮ್ಮ ಕಣ್ಣಿಗೆ ಕಾಣಿಸುವ ದೇವರು. ಪುಣ್ಯನದಿ, ಸರೋವರ ತೀರಗಳಲ್ಲಿ ಆಸ್ತಿಕರು ಸೂರ್ಯೋದಯ, ಸೂರ್ಯಾಸ್ತಗಳಲ್ಲಿ ತಮ್ಮೆರಡು ಕೈಗಳಿಂದ ಅರ್ಘ್ಯ ಪ್ರಧಾನ ಮಾಡುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುವಂತಹುದು.

ಇರುಳ ಕತ್ತಲು ಹರಿದು ಅರುಣೋದಯವಾಗುವ ಪ್ರಭಾತ ಕಾಲದ ಸೊಗಸು ದೈವಿಕವಾದುದು, ಭಾವಗೀತಾತ್ಮಕವಾದುದು. ಈ ಮಧುರ ದೃಶ್ಯದ ಸೊಗಸನ್ನು ಎಷ್ಟು ಜನ ಹಿಂದಿನ ಕವಿಗಳು ನೋಡಿ ಅನುಭವಿಸಿದ್ದಾರೆ ಎಂದು ಪರಿಶೀಲಿಸ ಹೊರಟರೆ ನಿಜವಾಗಿಯೂ ನಮಗೆ ನಿರಾಶೆ ಯಾಗುತ್ತದೆ. ಸೂರ್ಯೋದಯವೂ ಕಾವ್ಯದ ಒಂದು ವರ್ಣನಾಂಶ ಎಂದೇನೋ ಶಾಸ್ತ್ರದಲ್ಲಿದೆ. ಆದರೆ ನಮ್ಮ ಬಹುಜನ ಹಿಂದಿನ ಕವಿಗಳಿಗೆ ಸೂರ್ಯೋದಯ ಕೇವಲ ಕಾಲ ಸೂಚಕ; ಇಲ್ಲವೇ ಶೃಂಗಾರಪೂರ್ಣವಾದ ಚಂದ್ರಿಕಾ ವಿಹಾರದ ಇರುಳಿನ ಮುಕ್ತಾಯದ ಸೂಚನೆ. ಸೂರ್ಯೋದಯ ದೃಶ್ಯಕ್ಕಿಂತ ಅದರ ಪರಿಣಾಮವನ್ನು, ಕುಮುದ ಮುಚ್ಚಿತು, ಕಮಲ ಅರಳಿತು, ಚಕ್ರವಾಕಗಳು ಸೇರಿದುವು, ಚಕೋರ ಕೊರಗಿತು, ತಾರೆ ಮಸುಳಿದವು – ಇತ್ಯಾದಿ ಕವಿಸಮಯ ನಿರ್ಮಿತವಾದ ಸಂಕೇತಗಳಿಂದ ಬಣ್ಣಿಸುವುದು ಅವರ ಪದ್ಧತಿ. ಸೂರ್ಯೋದಯ ಎನ್ನುವುದು ಎಂತಹ ಅಪೂರ್ವ ಘಟನೆ.

ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ:

ಕುವೆಂಪು:

ಕುವೆಂಪು ಎಲ್ಲರೂ ಬಲ್ಲಂತೆ ನಿಸರ್ಗದ ಕವಿ. ಅದರಲ್ಲೂ ಸೂರ್ಯ, ಸೂರ್ಯೋದಯ, ಸೂರ್ಯಾಸ್ತಗಳನ್ನು ವಿಧವಿಧವಾಗಿ ಬಣ್ಣಿಸಿ ಈ ಕವಿ ಬರೆದಂತೆ ಮತ್ತಾರೂ ಬರೆದಿರಲಾರರು.

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ʼಯುಗದ ಕವಿ ಜಾಗದ ಕವಿʼ ಎನಿಸಿಕೊಂಡಿದ್ದಾರೆ.

ಕವಿಯ ಪಾಲಿಗೆ ಸೂರ್ಯ ಬರೀ ಬೆಳಕನ್ನಷ್ಟೇ ನೀಡಬಲ್ಲ ಒಂದು ಸಾಮಾನ್ಯ ಆಕಾಶಕಾಯವಲ್ಲ. ಈ ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆಯನ್ನು ಹರಿಸಲು ದಯಮಾಡಿಸುವ ಮಾಯಗಾರ!

“ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣಿರೋ”

ಎಂದು ಸೂರ್ಯ ಚಂದ್ರರು ಅಮೃತದ ಹಣ್ಣು ಎಂದಿದ್ದಾರೆ.

ಓಡು ಹೊರಗೆ ಓಡು ನೋಡು
ಬಂದ ನೋಡು ದಿನಮಣಿ!
ಹಚ್ಚ ಹಸಿರು ಬಯಲ ಮೇಲೆ
ಮಿರುಗುತಿಹವು ಹಿಮಮಣಿ!

ಬೇಂದ್ರೆ:

ಬೇಂದ್ರೆಯವರ ‘‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ’’ ಕವಿತೆಯಂತೂ ಬೆಳಗಿನ ಜಾವದ ಸಮಸ್ತ ಸೊಬಗನ್ನು ಪದಗಳ ರೂಪದಲ್ಲಿ ಶಾಶ್ವತವಾಗಿ ಸೆರೆ ಹಿಡಿದುಬಿಟ್ಟಿದೆ

ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ರಮ್ಯ ತಾಣದಲ್ಲಿ ಚಿತ್ರೀಕರಣಗೊಂಡು, ಬೆಳ್ಳಿಮೋಡ ಚಿತ್ರದಲ್ಲಿ ಬಳಕೆಯಾಗಿರುವ ಈ ಗೀತೆಯೊಂದು ಅದ್ಭುತ ದೃಶ್ಯ ಕಾವ್ಯವಾಗಿ ಅರಳಿದೆ ಈ ಹಾಡನ್ನು ಎಲ್ಲಿ,ಯಾವಾಗ ಕೇಳಿದರೂ ಮುಂಜಾವಿನ ಶುಭ್ರ,

‘‘ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲಾ ತೊಯ್ದವನು’’

‘‘ದೇವ’’ನೆನ್ನುವುದರಲ್ಲಿ ಕವಿಗೆ

ಯಾವುದೇ ಅನುಮಾನವಿಲ್ಲ!

ಬಿ. ಆರ್‌. ಲಕ್ಷಣರಾವ್‌:

ಬಿ. ಆರ್‌. ಲಕ್ಷಣರಾವ್‌ ಅವರ ಕವಿತೆಯೊಂದರಲ್ಲಿ ಇಳೆ ಮತ್ತು ರವಿಯ ಮಧುರ ಮಿಲನದ ಬಗೆಗೊಂದು ಮೋಹಕವಾದ ವರ್ಣನೆ ಇದೆ. ತನ್ನ ಪ್ರಿಯತಮನ ಆಗಮನಕ್ಕಾಗಿ ಕಾದಿರುವ ಪ್ರೇಯಸಿಯ ಸಡಗರ, ಕಾತುರಗಳನ್ನು ಸೊಗಸಾಗಿ ಬಣ್ಣಿಸುತ್ತಿದೆ ಕವಿತೆ.

ಹಸಿರು ಸೀರೆಗೊಪ್ಪುವ ಹೂ ಕುಬುಸ, ಇಬ್ಬನಿಯ ಮಾಲೆ ತೊಟ್ಟು ತನ್ನ ಇನಿಯನನ್ನು ಮೆಚ್ಚಿಸಲು ಕಾದು ನಿಂತಿದ್ದಾಳೆ ಭೂರಮಣಿ. ಅವಳ ನಿರೀಕ್ಷೆ ವ್ಯರ್ಥವಾಗಲಿಲ್ಲ. ಪ್ರಿಯೆಯನ್ನು ಕಾಣಲು ಸೂರ್ಯ ಬಾನಿನ ಅಂಚಿಂದ ಬಂದೇ ಬಿಟ್ಟ.

ಕಂಡೊಡನೆ ನೇಸರನ ಕೆಂಪಾದವು ಕೆನ್ನೆ
ಪುಲಕಿಸಿ ನಸು ಬಿಸಿಯೇರಿತು ಒಡಲು
ಅವನು ಸೋಕಿದೊಡನೆ
ನಾಚಿಕೆಯ ಮಂಜುತೆರೆ ಸರಿಸುತ ಪ್ರಿಯತಮನು
ಇಳೆಯ ಚುಂಬಿಸಿದನು!

ಲಕ್ಷ್ಮೀನಾರಾಯಣ ಭಟ್ಟ:

ಈ ಕವಿತೆಯಲ್ಲಿ ಉದಯರವಿ ಭೂತಾಯಿಯ ಹಣೆಗಿಟ್ಟ ಭಾಗ್ಯಬಿಂಬವಾಗಿದ್ದಾನೆ. ಕೆಂಪಗೆ, ಗುಂಡಗಿರುವ ಸೂರ್ಯ ಭೂದೇವಿಯ ಹಣೆಯಲ್ಲಿ ಕುಂಕುಮದ ಬೊಟ್ಟಿನಂತೆ ಕಾಣಿಸುತ್ತಿದ್ದಾನೆ ಎಂಬ ಉಪಮೆ ಅದೆಷ್ಟು ಸಮಂಜಸವೆನಿಸುತ್ತದೆ ಅಲ್ಲವೇ?

‘‘ಬಾ ಬಾ ಓ ಬೆಳಕೇ ಕರುಣಿಸಿ ಈ ನೆಲಕೆ’’ ಎಂಬ ಭಟ್ಟರದೇ ಇನ್ನೊಂದು ಕವಿತೆಯಲ್ಲಿ, ಸೂರ್ಯ ವಿಶ್ವದೆದೆಯ ಮೇಲೆ ಮೆರೆಯುತ್ತಿರುವ ಪುಟ್ಟ ಪದಕ! ಬಾಂದಳದ ನೊಸಲಿನಲ್ಲಿ ವಿರಾಜಿಸುವ ತಿಲಕ!

ವಿಶ್ವದೆದೆಯ ಪದಕವೆ
ಬಾಂದಳದ ತಿಲಕವೆ
ನಿನ್ನೊಳಗಿರುವ ಸತ್ಯ ತೋರು
ಬಂಗಾರದ ಫಲಕವೇ!

ಕೋಟ್ಯಾನುಕೋಟಿ ವರ್ಷಗಳಿಂದ ಬೆಳಗುತ್ತಿದ್ದು, ಈಗಲೂ ಇರುವ, ನಮ್ಮ ನಂತರವೂ ಇರುವ ತೇಜೋಮಯ ಸೂರ್ಯನ ಮುಂದೆ ನಮ್ಮ ಬದುಕು ಅದೆಷ್ಟು ಹ್ರಸ್ವ! ನಾವೆಷ್ಟು ಅಲ್ಪಾಯುಷಿಗಳು

ಯುಗಯುಗಾಂತರಗಳಾಗಿ ಉರುಳುತ್ತಿರುವ ಕಾಲಚಕ್ರದ ಯಾವುದೋ ಒಂದು ಹಂತದಲ್ಲಿ, ಸಣ್ಣಗೆ ಬಂದು ಮರೆಯಾಗಿ ಹೋಗುವ ನಮ್ಮೆಲ್ಲರ ಮದ, ಮತ್ಸರ, ಅಹಂಕಾರಗಳಿಗೆ ಕಿಂಚಿತ್ತಾದರೂ ಅರ್ಥವಿದ್ದೀತೇ.

ಶಿವರುದ್ರಪ್ಪ:

ಈ ಕವಿತೆಯಲ್ಲಿ ಕವಿ ಶಿವರುದ್ರಪ್ಪನವರಿಗೆ ಬಾಗಿಲಿನ ಹೊರಗೆ ಬಂದು ನಿಂತಿರುವವರು ಯಾರೆಂದು ಚೆನ್ನಾಗಿ ತಿಳಿದಿದೆ. ಆದರೂ ಬಂದವರನ್ನು ನೀವು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ.

ಬಾಗಿಲ ಮರೆಯಲ್ಲಿ ಅಡಗಿ ಕುಳಿತಿರುವ ಮಗುವನ್ನು ತಾನು ಕಂಡೇ ಇಲ್ಲವೆನ್ನುವಂತೆ ನಟನೆ ಮಾಡುತ್ತಿರುವ ತಾಯಿಯಂತಿದೆ ಅವರ ವರ್ತನೆ. ಕವಿ ಮತ್ತು ರವಿಯ ನಡುವೆ ನಡೆದಿರುವ ಈ ಕಣ್ಣುಮುಚ್ಚಾಲೆ ಆಟ ಒಂದು ಸುಂದರ ಕವಿತೆಯೊಂದನ್ನು ನಮಗೆ ಉಡುಗೊರೆಯಾಗಿ ತಂದಿದೆ.

ಯಾರವರು ಯಾರವರು ಯಾರು?
ಬಾಗಿಲಲಿ ಬಂದವರು ನಿಂದವರು ಯಾರು?
ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು?
ತುಂಬಿದ್ದ ಕತ್ತಲನು ಕಳೆದವರು ಯಾರು?
ಬಾಳ ನಂದನದಲ್ಲಿ ಮಂದಾರ ಗಂಧವನು
ತಂದು ತುಂಬಿದ ಕುಸುಮ ಸುಂದರನು ಯಾರು?

ಇತರೆ ಪ್ರಬಂಧಗಳು:

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡದಲ್ಲಿ

ಕುವೆಂಪು ಅವರ ಕವನಗಳು

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

Leave a Comment