Kuvempu Kavanagalu in Kannada | ಕುವೆಂಪು ಅವರ ಕವನಗಳು

KuveKuvempu Kavanagalu in Kannada language, ಕುವೆಂಪು ಅವರ ಕವನಗಳು ಕನ್ನಡ, Kuvempu Quotes in Kannada About Karnataka

Kuvempu Kavanagalu in Kannada

ಕುವೆಂಪು ಅವರ ಕವನಗಳು

ಈ ಲೇಖನಿಯಲ್ಲಿ ಕುವೆಂಪು ಅವರ ಕವನಗಳನ್ನು ಎಲ್ಲರಿಗೂ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ.

ಕುವೆಂಪು ಅವರ ಕವನಗಳು

೧. ಪಕ್ಷಿಕಾಶಿ

ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ:

ಇದು ಪಕ್ಷಿಕಾಶಿ!

ದೇವನದಿಯಲ್ಲಿ ದ್ವೀಪಕೃಪೆಯಲ್ಲಿ

ಭಾವತರುವಾಸಿ

ಪ್ರಾಣಪಕ್ಷಿಕುಮಿಹುದು ರಕ್ಷೆಯಲ್ಲಿ

ನಿತ್ಯಮವಿನಾಶಿ:

ಶಕ್ತಿ ಸುತ್ತಲೂ ಕಾವಲಿಹುದು ಕಾಣ್‌

ಅಗ್ನಿಜಲರಾಶಿ:

ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು

ಅಲ್ಲೆ ಇಟ್ಟು ಬಾ;

ಬಿಂಕದುಕುತಿಯನು ಕೊಂಕು ಯುಕುತಿಯನು

ಎಲ್ಲ ಬಿಟ್ಟು ಬಾ;

ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,

ಹಮ್ಮನುಳಿದು ಬಾ:

ಇಕ್ಷು ಮಧುರಮನೆ ಮೋಕ್ಷ ಪಕ್ಷಿಯುಲಿ

ನಾಡಿನಾಡಿಯಲಿ ಹಾಡಿ ಹರಿದು ನಲಿ

ದಾಡಬಹುದು ಬಾ!

೨.ಕನ್ನಡ ಡಿಂಡಿಮ

ಬಾರಿಸು ಕನ್ನಡ ಡಿಂಡಿಮ,

ಓ ಕರ್ನಾಟಕ ಹೃದಯ ಶಿವ!

೩. ನನ್ನ ಮನೆ

ಮನೇ ಮನೇ ಮುದ್ದು ಮನೇ

ಮನೇ ಮನೇ ನನ್ನ ಮನೇ!

೪.ದೋಣಿ ಸಾಗಲಿ ಮುಂದೆ ಹೋಗಲಿ

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ

ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ

೫. ಓ ನನ್ನ ಚೇತನ

ಓ ನನ್ನ ಚೇತನ ಆಗು ನೀ ಅನಿಕೇತನ!

ರೂಪರೂಪಗಳನ್ನು ದಾಟಿ,

ನಾಮಕೋಟಿಗಳನ್ನು ಮೀಟಿ,

ಎದೆಯ ಬಿರಿಯೇ ಭಾವದೀಟಿ,

ಓ ನನ್ನ ಚೇತನ ಆಗು ನೀ ಅನಕೇತನ!

೬. ಎಲ್ಲಾದರು ಇರು…ಎಂತಾದರು ಇರು..

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

೭. ಜೇನಾಗುವಾ

ಶಿವನೆನ್ನ ಸುಖಕೆ ಸುಖಿ;

ಶಿವೆ ನಿನ್ನ ಸುಖಕೆ ಸುಖಿ;

ಶಿವಶಿವೆಯರಾ ಸುಖವ

ಸವಿವಖಿಲ ಲೋಕ ಸುಖಿ!

ಬಾ ಬಾರ, ಬಾರ ಸುಖಿ,

ನಾ ನಿನಗೆ ನೀನೆನಗೆ ಜೇನಾಗುವಾ!

ರಸ ದೇವಗಂಗೆಯಲಿ ಮಿನಾಗುವಾ!

೮. ಕೋಗಿಲೆ ಮತ್ತು ಸೋವಿಯತ್‌ ರಷ್ಯ

ದೇವರು ಸೆರೆಯಾಳ್‌, ದೇಗುಲ ಸೆರೆಮನೆ,

ಕಾವಲು ಪೂಜಾರಿ!

೯. ನಮ್ಮ ದೇವರಮನೆ

ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ;

ಇಲ್ಲಿಯೆ ಕಣಾ ಅ ಹರಿದ್ವಾರ!

ಕುವೆಂಪು

ತನುವು ನಿನ್ನದು ಮನವು ನಿನ್ನದು

ಎನ್ನ ಜೀವನ ಧನವು ನಿನ್ನದು –ಕುವೆಂಪು

ಇತರೆ ಪ್ರಬಂಧಗಳು:

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಕನ್ನಡ ಭಾಷೆಯ ನುಡಿಮುತ್ತುಗಳು

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಇನ್ನು ಹೆಚ್ಚಿನ ಕವನಗಳನ್ನು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ವಿಷಯಗಳ ಕವನಗಳನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Kannada Kavanagalu App

ಕುವೆಂಪು ಅವರ ಕವನಗಳ ಕುರಿತು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಹಾಗೆ ನಿಮಗೆ ಗೋತ್ತಿರುವ ಅಥವಾ ಇಷ್ಟ ಅಗುವ ಕವನಗಳನ್ನು Comment ಮಾಡುವ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Leave a Comment