ಲವ್ ಕವನಗಳು | Love Kavana in Kannada love quotes in kannada

ಲವ್ ಕವನಗಳು, Love Kavana in Kannada, love quotes in kannada, ಲವ್‌ ಕವನಗಳ ಮಾಹಿತಿ, love kavana gala information in kannada

ಲವ್ ಕವನಗಳು:

ಈ ಲೇಖನಿಯಲ್ಲಿ ಲವ್‌ ಕವನಗಳನ್ನು ಸಂಪೂರ್ಣವಾಗಿ ನಾವು ನಿಮಗೆ ನೀಡಿದ್ದೇವೆ. ಹಾಗೂ ಕವನಗಳ ಸುಂದರ ಮಾಹಿತಿ ನೀಡಿದ್ದೇವೆ.

ಲವ್ ಕವನ:

ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ…
ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ….

ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ

ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

ನಿನ್ನ ಕೋಮಲವಾದ ವದನದಲ್ಲಿ,
ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ,
ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,
ಬಿಳಿ ಹೂಗಳ ಕಂಪಲಿ…

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..

ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ..
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…

ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..

ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ, ಇರುವುದೆ ಇಲ್ಲ ನನ್ನ ನಗೆ..

ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು….

ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ,
ಆ ನಗುವಿಗೆ ಯಾವಾಗಲೂ
ನಾ ಕಾರಣವಾಗಿರಲಿ.

ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು,
ನನ್ನ ಮನದಲ್ಲಿ ಮನೆ ಮಾಡಿದ
ಚಂದ್ರಚಕೋರಿಯು..

ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…

ದೂರದಿರು ನನ್ನನ್ನು ಓ ಗೆಳಯ
ನಿನಗಾಗಿಯೇ ಮೀಸಲಾಗಿದೆ ಈ ಹೃದಯ
ಕನಸ್ಸಲ್ಲು ಅನುಮಾನಿಸದಿರು ನನ್ನ ಪ್ರೀತಿಯ
ಜೀವಸವೆದರು ನೀನೇ ನನ್ನ ಇನಿಯ…

ಕಷ್ಟ ಅಂತ ಬಂದರೆ ಕರುಣೆ ತೋರಿ, ಇಷ್ಟ ಅಂತ
ಬಂದ್ರೆ ಪ್ರೀತಿ ನೀಡು, ನಿನ್‌ ನಂಬಿ ಬಂದವರಿಗೆ
ಉಸಿರು ಇರುವ ತನಕ ಪ್ರೀತಿ, ಸ್ನೇಹ ನೀಡು..

ಮೋಡದ ಜೊತೆಗೆ ಮಳೆ ಫ್ರಿ, ಆರತಿ ಜೊತೆಗೆ ಪ್ರಸಾದ ಫ್ರಿ, ಗುಲಾಬಿ ಗಿಡದ ಜೊತೆಗೆ ಹೂವು ಫ್ರಿ, ಈ ಮೆಸೇಜ್‌ ಜೊತೆಗೆ ನನ್ನ ನೆನಪುಗಳು ಫ್ರೀ..

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ
ಗೊತ್ತಾದಮೇಲೆ ಯಾವತ್ತು ಅವರಿಂದ
ದೂರಾಗಬೇಡಿ ಎಕೆಂದರೆ ಕಲ್ಲಿನಲ್ಲಿ ಬರೆದ
ಹೆಸರು ಯಾವತ್ತೂ ಅಳಿಸಲ್ಲ..

ಇತರೆ ಪ್ರಬಂಧಗಳು:

ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

ಕನ್ನಡ ಭಾಷೆಯ ನುಡಿಮುತ್ತುಗಳು

Leave a Comment