Mahatmara Jayanti Prabandha in Kannada

Mahatmara Jayanti Prabandha in Kannada, Mahatmara Jayanti Essay in Kannada, ಮಹಾತ್ಮರ ಜಯಂತಿ ಪ್ರಬಂಧ, About Essay On Mahatma Jayanti

Mahatmara Jayanti Prabandha in Kannada

Mahatmara Jayanti Prabandha in Kannada

ಈ ಲೇಖನಿ ಮಹಾತ್ಮರ ಜಯಂತಿ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ನೀವು ಇದರ ಅನುಕೂಲವನ್ನು ಪಡೆದುಕೊಳ್ಳಿ.

ಪೀಠಿಕೆ

ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ.

ನಡವಳಿಕೆಯಲ್ಲೂ, ಮಾತಿನಲ್ಲೂ, ಮನಸ್ಸಿನ ಭಾವ ಉದ್ದೇಶಗಳಲ್ಲೂ ಒಂದೇ ವಿಧವಾಗಿರುವ ಧೀರನನ್ನು ಮಹಾತ್ಮರೆನ್ನುತ್ತಾರೆ. ಎಂದು ಮಹಾಭಾರತದಲ್ಲಿ ಹೇಳಿದೆ.

ವಿಷಯ ವಿವರಣೆ

ಸಮಾಜದ ಮಾನವಧರ್ಮದ ಒಳಿತಿಗಾಗಿ ಜೀವನವನ್ನು ಸಮರ್ಪಿಸಿಕೊಂಡ ಈ ಮಹಪುರುಷರಿಗೆ ವ್ಯಕ್ತಿಗಳೇ ಮಹಾಪುರುಷರು ಇವರು ಹುಟ್ಟಿದ ದಿನವೇ ಜಯಂತಿ.

ವಾಲ್ಮೀಕಿ, ಬುದ್ಧ,ಮಹಾವೀರ,ಬಸವ,ಕನಕ,ವಿವೇಕಾನಂದ,ಅಂಬೇಡ್ಕರ್‌, ಗಾಂಧಿ, ಮೊದಲಾದ ಮಹಾಪುರುಷರ ಜಯಂತಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದೇವೆ.

ಕಾಲ ಬದಲಾಗಿದೆ ಸಮಾಜ ಬದಲಾಗಿದೆ ವ್ಯಕ್ತಿ ಬದಲಾಗಿದ್ದಾನೆ. ಮಾನವೀಯ ಸಂಬಂಧಗಳು ವ್ಯಾವಹಾರಿಕವಾಗುತ್ತಿದೆ.

ಇದರಿಂದಾಗಿ ಮಹಾಪುರುಷರ ವ್ಯಕ್ತತ್ವ ಜನರ ಮನಸ್ಸಿನಿಂದ ಕಣ್ಮರೆಯಾಗುವ ದುರಂತ ಸನ್ನಿವೇಶ ನಿರ್ಮಾಣವಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನಕದಾಸ ಮೂರ್ತಿ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು.

“ಮಹಾತ್ಮರ, ದಾರ್ಶನಿಕರ ಜಯಂತಿ, ಸರ್ವರ ಜಯಂತಿ ಆಗಬೇಕೆಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರ ವಿವಿಧ ಜಯಂತಿ ಆಚರಿಸುತ್ತಿದೆ” ಎಂದು ಸಿಎಂ ಹೇಳಿದರು.

ಪ್ರತಿ ವರ್ಷ ಅಕ್ಟೋಬರ್ 2ನ್ನು ಜಗತ್ತಿನಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. 152 ವರ್ಷಗಳ ಹಿಂದೆ ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದ ಮಹಾಮನ್ ಮೋಹನ್‌ದಾಸ್ ಕರಮಚಂದ್ ಗಾಂಧಿ ನಂತರ ಮಹಾತ್ಮಾ ಗಾಂಧಿ ಎಂದು ವಿಶ್ವದಾದ್ಯಂತ ಪ್ರಸಿದ್ಧರಾದರು.

ಮಹಾತ್ಮರು ಜಾತಿ, ಧರ್ಮ, ಸಮಾಜ, ಭಾಷೆ, ದೇಶದ ಗಡಿಗಳ ಮೀರಿ ವ್ಯಕ್ತಿತ್ವ ಬೆಳೆಯಿಸಿಕೊಂಡುದರಿಂದ, ವಿಶಾಲ ಹೃದಯ, ಉದಾರ ಮಾನವೀಯ ನಿಲುವುಗಳ ಹೊಂದಿರುವುದರಿಂದ ‘ ಮಹಾತ್ಮ ‘ ರಾಗಿರುತ್ತಾರೆ. ಆದರೆ ಇಂದು ಅನೇಕ ಕಾರಣಗಳಿಗಾಗಿ ಅವರನ್ನು ಒಂದು ಜಾತಿ, ಒಂದು ಧರ್ಮ, ಒಂದು ಸಮಾಜ, ಒಂದು ಭಾಷೆ, ಒಂದು ದೇಶಕ್ಕೆ ಸೀಮಿತಗೊಳಿಸಿ ಈ ಯಾವ ಎಲ್ಲೆಯನ್ನೂ ಮೀರದಂತೆ ಒಂದು ಚೌಕಟ್ಟಿನಲ್ಲಿ ಬಂಧಿಸಿರುವುದು ‘ ಮಹಾತ್ಮ ‘ ಪದದ ಅರ್ಥಕ್ಕೆ, ಮಹಾತ್ಮನಿಗೆ ಅವಮಾನವಲ್ಲವೆ? ಹೀಗೆ ಸೀಮಿತಗೊಳಿಸಿ ಮಹಾತ್ಮರ ಜಯಂತಿಗಳ ಆಚರಿಸುವುದು ಅವು ಅರ್ಥ ಕಳೆದುಕೊಂಡು ಸಂಕುಚಿತಾರ್ಥ ಬರಲು ಕಾರಣವಾಗುತ್ತಿವೆ! ಹಾಗೂ ಮಹಾತ್ಮರ ತತ್ವಗಳ ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಸಮಾಜ ಸೃಷ್ಟಿಗೆ ಕಾರಣವಾಗದೆ.

ಉಪಸಂಹಾರ

ಮಾತಿನಲ್ಲೂ, ಮನಸ್ಸಿನ ಭಾವ ಉದ್ದೇಶಗಳಲ್ಲೂ ಒಂದೇ ವಿಧವಾಗಿರುವ ಧೀರನನ್ನು ಮಹಾತ್ಮರೆನ್ನುತ್ತಾರೆ. ಎಂದು ಮಹಾಭಾರತದಲ್ಲಿ ಹೇಳಿದೆ.ದಾರ್ಶನಿಕರಿಗೆ, ಮಹಾತ್ಮರಿಗೆ ಗೌರವ ಸಮರ್ಪಿಸಲು ಅವರಿಗೆ ಕೃತಜ್ಞರಾಗಿರಲು ಅವರ ಜಯಂತಿಗಳನ್ನು ಆಚರಿಸುವುದು ಬಹಳ ಹಿಂದಿನಿಂದ ರೂಢಿಯಲ್ಲಿದೆ . ಅಂದು ಎಲ್ಲೆಡೆ ಪ್ರಮುಖರಾದವರು ಆ ಮಹಾತ್ಮರ ಮೌಲ್ಯಯುತವಾದ, ಆದರ್ಶವಾದ, ಗೌರವಯುತವಾದ ಬದುಕ, ಅವರ ಅಮೂಲ್ಯ ಸಾಧನೆಯ, ಉದಾತ್ತ ನಡವಳಿಕೆಗಳ ಅನಾವರಣಗೊಳಿಸುತ್ತಾರೆ. ಇದು ಮಕ್ಕಳಾದಿ ಎಲ್ಲರೂ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು, ಉತ್ತಮ ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು, ದೇಶ ಪ್ರೇಮ ಹೆಚ್ಚಿಸಿಕೊಂಡು ದೇಶ ಅಭಿವೃದ್ದಿಯಾಗಲು ಪ್ರೇರಣೆಯಾಗುವುದರಿಂದ ಮಹಾತ್ಮರ ಜಯಂತಿ ಆಚರಣೆಗಳು ಅರ್ಥಪೂರ್ಣವಾಗುತ್ತವೆ.

ಇತರೆ ಪ್ರಬಂಧಗಳು:

100+ ಕನ್ನಡ ಪ್ರಬಂಧಗಳು

ಕನ್ನಡ ನಾಡಿನ ಹಿರಿಮೆ ಪ್ರಬಂಧ 

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ 

Leave a Comment