ಕರ್ನಾಟಕದ ಪ್ರಮುಖ ನದಿಗಳು‌ | Major Rivers of Karnataka in Kannada

ಕರ್ನಾಟಕದ ಪ್ರಮುಖ ನದಿಗಳು, Major Rivers of Karnataka in Kannada, karnataka pramukh nadigalu in kannada, ಕರ್ನಾಟಕದ ನದಿಗಳ ಪಟ್ಟಿ

ಕರ್ನಾಟಕದ ಪ್ರಮುಖ ನದಿಗಳು‌

ಕರ್ನಾಟಕದ ಪ್ರಮುಖ ನದಿಗಳು‌

ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ನದಿಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

Major Rivers of Karnataka in Kannada

ನದಿಗಳುಉಗಮ ಸ್ಥಳಉದ್ದ (ಕಿ.ಮೀ)ಸಂಗಮ ಸ್ಥಳ
ಕೃಷ್ಣಾಮಹಾರಾಷ್ಟ್ರ483ಬಂಗಾಳಕೊಲ್ಲಿ
ತುಂಗಭದ್ರಾಕರ್ನಾಟಕ (ಗಂಗಮೂಲ)381ಕೃಷ್ಣಾ
ಘಟಪ್ರಭಾಕರ್ನಾಟಕ(ಅಂಬೋಳಿ ಬಳಿ)216ಕೃಷ್ಣಾ
ಭೀಮಾಮಹಾರಾಷ್ಟ್ರ(ಭೀಮಾ ಶಂಕರ)298ಕೃಷ್ಣಾ
ಮಲಪ್ರಭಾಪಶ್ಚಿಮಘಟ್ಟ304ಕೃಷ್ಣಾ
ಕಾವೇರಿಪಶ್ಚಿಮಘಟ್ಟ380ಬಂಗಾಳಕೊಲ್ಲಿ
ಅರ್ಕಾವತಿನಂದಿಬೆಟ್ಟ161ಕಾವೇರಿ
ಕಬಿನಿಉತ್ತರ ಮೈನಾಡು230ಕಾವೇರಿ
ಶಿಂಷಾತಿಪಟೂರು215ಕಾವೇರಿ
ಹೇಮಾವತಿಪಶ್ಚಿಮಘಟ್ಟ245ಕಾವೇರಿ
ಉತ್ತರ ಪಿನಾಕಿನನಂದಿದುರ್ಗ61ಬಂಗಾಳಕೊಲ್ಲಿ
ಕಾರಂಜಿಮೇಡಕ್‌ ಜಿಲ್ಲೆ74ಮಾಂಜರ
ದಕ್ಷಿಣ ಪಿನಾಕಿನಿನಂದಿದುರ್ಗ ಬೆಟ್ಟ79ಬಂಗಾಳಕೊಲ್ಲಿ
ಪಾಲಾರ್ನಂದಿದುರ್ಗ ಬೆಟ್ಟ93ಬಂಗಾಳಕೊಲ್ಲಿ
ವೇದಾವತಿಪಶ್ಚಿಮ ಘಟ್ಟ293ತುಂಗಭದ್ರಾ
ಕಾಳಿಪಶ್ಚಿಮ ಘಟ್ಟ184ಅರಬ್ಬೀ ಸಮುದ್ರ
ಅಘನಾಶಿನಿಪಶ್ಚಿಮ ಘಟ್ಟ121ಅರಬ್ಬೀ ಸಮುದ್ರ
ನೇತ್ರಾವತಿಪಶ್ಚಿಮ ಘಟ್ಟ96ಅರಬ್ಬೀ ಸಮುದ್ರ
ಬೆಂಡ್ತಿಸೋಮಶ್ವರ ಕುಂಡ161ಅರಬ್ಬೀ ಸಮುದ್ರ
ಮಹದಾಯಿದೇವಾಂಗ35ಅರಬ್ಬೀ ಸಮುದ್ರ
ಶರಾವತಿಪಶ್ಚಿಮ ಘಟ್ಟ128ಅರಬ್ಬೀ ಸಮುದ್ರ
ಮಾಂಜಾರಬಾಲಘಾಟ116ಗೋದಾವರಿ

ಕೃಷ್ಣಾ ನದಿ

ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ತೆಲಘಾಣ ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ

ತುಂಗಭದ್ರಾ

ಭದ್ರಾ ನದಿಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಭದ್ರಾ ನದಿಯು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ ‘ಕೂಡ್ಲಿ’ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.

ಘಟಪ್ರಭಾ

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ್ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ.

ಮಲಪ್ರಭಾ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ್ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ್ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ್ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದರ ಕಿಲೊಮೀಟರುಗಳು. ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. 

ಕಾವೇರಿ

ಕಾವೇರಿ ಕರ್ನಾಟಕದಾ ಜೀವನದಿ. ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ತಲಕಾವೇರಿಯೆಂಬ ಸರಾಸರಿ ಸಮುದ್ರ ಮಟ್ಟದಿಂದ 4,400 ಅಡಿ ಸ್ಥಳದಲ್ಲಿ ಉಗಮಿಸುವ ಈ ನದಿ, ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಅರ್ಕಾವತಿ

ಅರ್ಕಾವತಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ.

ಶಿಂಷಾ

ಶಿಂಶಾ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುವ ಒಂದು ನದಿಯಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಉಪನದಿಯಾಗಿದೆ.

ವೇದಾವತಿ

ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ.

ಇತರೆ ಪ್ರಬಂಧಗಳು:

ಕರ್ನಾಟಕದ ಪ್ರಮುಖ ಬಂದರುಗಳು

ಕರ್ನಾಟಕದ 31 ಜಿಲ್ಲೆಗಳ ಹೆಸರು

ಕರ್ನಾಟಕ ವಿಶ್ವವಿದ್ಯಾಲಯಗಳು

ಕರ್ನಾಟಕದ ಪ್ರಮುಖ ನದಿ ಯೋಜನೆಗಳು

Leave a Comment