Navratri 2nd Day in Kannada | ನವರಾತ್ರಿ ಎರಡನೇ ದಿನ ಬ್ರಹ್ಮಚಾರಣಿ ದೇವಿ ಆರಾಧನೆ

Navratri 2nd Day in Kannada, ನವರಾತ್ರಿ ಎರಡನೇ ದಿನ ಬ್ರಹ್ಮಚಾರಣಿ ದೇವಿ ಆರಾಧನೆ, navratri second day image in kannada, navratri 2nd day information in kannada

Navratri 2nd Day in Kannada

Navratri 2nd Day in Kannada
Navratri 2nd Day in Kannada ನವರಾತ್ರಿ ಎರಡನೇ ದಿನ ಬ್ರಹ್ಮಚಾರಣಿ ದೇವಿ ಆರಾಧನೆ

ಈ ಲೇಖನಿಯಲ್ಲಿ ಬ್ರಹ್ಮಚಾರಣಿ ದೇವಿ ಆರಾಧನೆಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ. ನೀವು ಇದರ ಅನುಕೂಲ ಪಡೆದುಕೊಳ್ಳಿ. ದೇವಿ ನಿಮಗೂ ನಿಮ್ಮ ಕುಟುಂಬಕ್ಕೂ ಶಾಂತಿ, ನೆಮ್ಮದಿ ಮತ್ತು ಸಮೃದ್ದಿ ನೀಡಲಿ.

ಬ್ರಹ್ಮಚಾರಣಿ ದೇವಿ ಆರಾಧನೆ

ನವರಾತ್ರಿಯ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ 9 ಅವತಾರಗಳನ್ನು ಪೂಜಿಸಲಾಗುವುದು. ಎರಡನೇ ದಿನದಂದು ದುರ್ಗಾ ದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಪೂಜಿಸಲಾಗುವುದು. ಸುದೀರ್ಘವಾದ ಪೂಜೆಯ ಮೂಲಕ ದುರ್ಗಾದೇವಿಯ ಬ್ರಹ್ಮಚಾರಿಣಿ ಅವತಾರವನ್ನು ಭಕ್ತರು ಪೂಜಿಸಿ ಆಕೆಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಬ್ರಹ್ಮಚಾರಿಣಿ ಪೂಜೆ ವಿಧಾನ

Navratri 2nd Day in Kannada

ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಕಲಶದ ಬಳಿ ಇರಿಸಬೇಕು. ಬಳಿಕ ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ ವಿಶೇಷವಾಗಿ ಮಲ್ಲಿಗೆ ಹೂ ಹಾಗೂ ಹೂವುಗಳನ್ನು ಅರ್ಪಿಸಬೇಕು. ತುಪ್ಪದ ದೀಪ ಬೆಳಗಿ ಶ್ರೀ ದುರ್ಗಾ ಸಪ್ತಶತಿಯನ್ನು ಓದಬೇಕು. ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೆ ಪಠಿಸಬೇಕು. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಭೋಗವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು.

ಬ್ರಹ್ಮಚಾರಿಣಿ ಪೂಜೆಯ ಫಲ ಬ್ರಹ್ಮಚಾರಿಣಿ ಅನಂತ ಫಲಗಳನ್ನು ನೀಡ್ತಾಳೆ. ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ. ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ. ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ. ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ.

ಬ್ರಹ್ಮಚಾರಿಣಿಯ ಕತೆ

Navratri 2nd Day in Kannada

ಬ್ರಹ್ಮಚಾರಿಣಿ ದೇವಿಯು ಬುದ್ದಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ. ಈಕೆ ತನ್ನ ಭಕ್ತರಿಗೆ ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ ಎಂದು.

ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ. ಅಖಂಡ ತಪಸ್ಸನ್ನು ಮಾಡಿದ ಸಲುವಾಗೇ ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರ್ತಾಳೆ. ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದ್ರೆ ವಿಶೇಷ ವರಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ. ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದ್ರೆ ಬೇಡಿದ ವರಗಳನ್ನು ಕರುಣಿಸ್ತಾಳೆ ಎಂಬ ನಂಬಿಕೆ ಇದೆ.

ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಶಿವನು ಬೂದಿಬಡುಕ, ಸ್ಮಶಾನವಾಸಿ, ಬಡವ, ಭಿಕ್ಷುಕ. ಅಂಥವನನ್ನು ಯಾಕೆ ಬಯಸುತ್ತಿದ್ದೀ ಎಂದೆಲ್ಲ ಆಕ್ಷೇಪಿಸಿದ. ಆದರೆ ಪಾರ್ವತಿ ಅದಕ್ಕೆಲ್ಲ ಕಿವಿಗೊಡಲಿಲ್ಲ. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವ ಆಕೆಗೆ ಒಲಿದ.

Navratri 2nd Day in Kannada

ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ

ಇತರೆ ವಿಷಯಗಳು:

ಬ್ರಹ್ಮಚಾರಿಣಿ ದೇವಿ ಮಹತ್ವ ಮತ್ತು ಮಂತ್ರ

ನವರಾತ್ರಿ ಹಬ್ಬದ ಶುಭಾಶಯಗಳು

ಶ್ರೀ ಲಕ್ಷ್ಮೀ ಅಷ್ಟೋತ್ತರ ಶತನಾಮಾವಳಿ

ಶಿವ ಅಷ್ಟೋತ್ತರ

ಶ್ರೀ ಗೌರಿ ಅಷ್ಟೋತ್ತರ ಕನ್ನಡ

Leave a Comment