ನೀರಿನ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ | Nirina Samrakshane Prabandha

ಕುಡಿಯುವ ನೀರಿನ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ, Nirina Samrakshane Prabandha in Kannada, ನೀರಿನ ಬಗ್ಗೆ ಪ್ರಬಂಧ, Water Conservation Essay In Kannada, nirina samrakshane essay in kannada language

ನೀರಿನ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ:

ನೀರಿನ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ | Nirina Samrakshane Prabandha
ನೀರಿನ ಸಂರಕ್ಷಣೆ ಪ್ರಬಂಧ ಕನ್ನಡದಲ್ಲಿ | Nirina Samrakshane Prabandha

ಈ ಲೇಖನಿಯ ಮೂಲಕ ನೀರಿನ ಸಂರಕ್ಷಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಸ್ನೇಹಿತರೇ ಎಲ್ಲರಿಗೂ ಸಹಾಯವಾಗುವಂತೆ ಉಚಿತವಾಗಿ ಮಾಹಿತಿ ನೀಡಿದ್ದೇವೆ.

ಪೀಠಿಕೆ:

ನೀರು ಬಹಳ ಮುಖ್ಯ ಲಭ್ಯವಿರುವ ನೀರನ್ನು ಜಾಗೃತೆಯಿಂದ ಮತ್ತು ಮಿತವ್ಯಯದಿಂದ ಬಳಸಿ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ. ಜೀವಸಂಕುಲ ಉಗಮ ಮತ್ತು ಬೆಳವಣಿಗೆಗೆ ಕಾರಣವಾದ ನೀರನ್ನು ಸಂಪರ್ಕವಾಗಿ ನಿರ್ವಹಿಸುವುದರಿಂದ ನೀರಿನ ಸಂರಕ್ಷಣೆ ಮಾಡಬಹುದು

ವಿಷಯ ವಿವರಣೆ:

ನೀರಿನ ಮಾಲಿನ್ಯವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು. ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ. ನಾವು ಲಭ್ಯವಿರುವ ನೀರನ್ನು ಜಾಗೃಕತೆಯಿಂದ ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ನೀರನ್ನು ಉಳಿಸುವುದು.

ನೀರು ಎಲ್ಲ ಜೀವಿಗಳಿಗೆ ಅಗತ್ಯವಾದ ವಸ್ತುವಾಗಿದೆ, ಇದು ಭೂಮಿಯ ಮೇಲ್ಮೈಯ ಶೇ.೭೦ ಭಾಗದಷ್ಟು ಕಂಡುಬರುತ್ತದೆ. ಆದರೆ ಶುದ್ದ ಕಡಿಯುವ ನೀರು ಕೇವಲ ಶೇ.೩ರಷ್ಟು ಮಾತ್ರವೇ ಲಭ್ಯವಿರುತ್ತದೆ.

ಜೀವ ಸಂಕುಲ ಉಗಮ, ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸಬಹುದು. ನೀರಿನಲ್ಲಿ ಕ್ಲೋರೀನ್‌ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರಸಿ ಶುದ್ದಿಕರಿಸುವುದರ ಮೂಲಕ ಶುದ್ಥ ಕುಡಿಯುವ ನೀರನ್ನು ಪೂರೈಸುವುದು.

ತ್ಯಾಜ್ಯವಸ್ತುಗಳನ್ನು ಕೆರೆ, ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಟರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು.

ನೀರಿನಲ್ಲಿರುವ ಕಲುಷಿತ ಅಂಶಗಳನ್ನು ವಿವಿಧ ವಿಧಾನಗಳಿಂದ ಬೇರ್ಪಡಿಸಿ, ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು. ಹಾಗೆ ಮಳೆಗಾಲದಲ್ಲಿ ಭೂಮಿಗೆ ಬಿದ್ದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಸಣ್ಣ ಹಳ್ಳ-ತೊರೆಗಳಿಗೆ ಚೆಕ್ ಡ್ಯಾಮ್ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು.

ಮಳೆ ನೀರನ್ನು ನೇರವಾಗಿ ಸಂಗ್ರಹಿಸುವುದು ಬಳಸುವುದು ಇದರಿಂದ ನೀರು ಸಂಗ್ರಹಿಸಬಹುದು. ಹಾಗೆ ನೀರನ್ನು ಉಳಿಸುವುದು ಮತ್ತು ಅದರ ಅನಗತ್ಯ ವ್ಯರ್ಥವನ್ನು ಕಡಿಮೆ ಮಾಡುವುದು

ಪ್ರಕೃತಿ ನಮಗೆ ನೀಡಿರುವ ಸಂಪನ್ಮೂಲಗಳಲ್ಲಿ ಅತ್ಯಮೂಲ್ಯವಾದುದು ನೀರು. ನೀರಿಲ್ಲದೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯಲು ಅಸಾಧ್ಯ, ನೀರಿನ ಸಮಸ್ಯೆಯನ್ನು ತಡೆಗಟ್ಟಲು ಇರುವ ಮಾರ್ಗವೆಂದರೆ ನೀರಿನ ಸಂರಕ್ಷಣೆ.

ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವುದರ ಮೂಲಕ ನೀರಿನ ಸಂರಕ್ಷಣೆ ಮಾಡುವುದು ಅಗತ್ಯವಿದೆ, ಮೀತಿಮೀರಿ ಕೊಳವೆ ಬಾವಿ ತೆಗೆಸುವುದರಿಂದ ಅಂರ್ತಜಾಲ ಮಟ್ಟ ಕುಸಿಯುತ್ತದೆ.ನೀರನ್ನು ಸಂರಕ್ಷಿಸುವ ದೃಷ್ಟಿಯಿಂದ ಜಲಮೂಲಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಉಪಸಂಹಾರ:

ನೀರಿನ ಸಂರಕ್ಷಣೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ನೀರಿನ ಮಹತ್ವದ ಬಗ್ಗೆ ಕಾರ್ಯಕ್ರಮದ ಮೂಲಕ ತಳಿಸುವುದು ಅದರ ಜೊತೆಗೆ ನೀರಿನ ಸಂಗ್ರಹಣೆ ಬಹಳ ಮುಖ್ಯವಾಗಿದೆ ಮುಂದಿನ ಪೀಳಿಗೆಗೆ ನೀರಿನ ಅವಶ್ಯಕತೆಯನ್ನು ಪೂರೈಸುವುದು ಹೀಗೆ ಮುಂತಾದ ಕ್ರಮಗಳಿಂದ ಜನರಲ್ಲಿ ಜಾಗೃತಿ ಮೂಡಿಸುವುದು. ಹೀಗೆ ಎಲ್ಲರೂ ಜಾಗೃತರಾದಗ ಮಾತ್ರ ನಾವು ನೀರಿನ ಸಮಸ್ಯೆಯನ್ನು ಸ್ವಲ್ಪಮಟ್ಟಿಗಾದರೂ ಪರಿಹರಿಸಬಹುದು.

FAQ

ನೀರಿನ ಮೂಲಗಳ ಹೆಸರು?

ನೀರಿನ ಮೂಲಗಳು ಕಾಲುವೆ,ನದಿ,ಕೊಳವೆ ಬಾವಿ, ಕೆರೆ.

ನೀರಿನ ಉಪಯೋಗಗಳು?

ನೀರಿನ ಕುಡಿಯುವುದರಿಂದ ಆಹಾರ ಪೋಷಕಾಂಶಗಳಿಗೆ ಅನುಕೂಲವಾಗುತ್ತದೆ, ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ, ರಕ್ತ ಒತ್ತಡ ಕಡಿಮೆ ಮಾಡುತ್ತದೆ, ಹಾಗೆ ಹಲಾವಾರು ಉಪಯೋಗಗಳನ್ನುಇದೆ.

ನೀರಿನ ಸಂರಕ್ಷಣೆ?

ನೀರನ್ನು ಉಳಿಸುವುದು ಮತ್ತು ಅದರ ಅನಗತ್ಯ ವ್ಯರ್ಥವನ್ನು ಕಡಿಮೆ ಮಾಡುವುದರಿಂದ ನೀರಿನ ಸಂರಕ್ಷಣೆ ಮಾಡಬಹುದು.

ಇತರೆ ಪ್ರಬಂಧಗಳು:

ಗ್ರಂಥಾಲಯ ಮಹತ್ವ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ

ಸಾವಯವ ಕೃಷಿ ಪ್ರಬಂಧ

ನೀರಿನ ಸಂರಕ್ಷಣೆ ಪ್ರಬಂಧ ಬಗ್ಗೆ ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ ಹಾಗೆ ನಿಮಗೆ ಗೋತ್ತಿರುವ ವಿಷಯವನ್ನು Comment ಮಾಡುವ ಮೂಲಕ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Leave a Comment