ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ಕುಡಿಯುವ ನೀರು ಮತ್ತು ನೈರ್ಮಲ್ಯ ಪ್ರಬಂಧ ಕುರಿತು ಪ್ರಬಂಧ, ನೀರು ಮತ್ತು ನೈರ್ಮಲ್ಯದ ಕನ್ನಡ ಪ್ರಬಂಧ, Niru Mattu Nairmalya Prabandha in Kannada, niru mattu nairmalya essay in kannada

ನೀರು ಮತ್ತು ನೈರ್ಮಲ್ಯ ಪ್ರಬಂಧ:

ಈ ಲೇಖನಿ ಮೂಲಕ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಒದಗಿಸಿದ್ದೇವೆ.

ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ಪೀಠಿಕೆ:

ನೀರು ಪ್ರತಿಯೊಂದು ಜೀವಿಯು ಜೀವಿಸಲು ನೀರು ಬಹಳ ಮುಖ್ಯವಾಗಿದೆ. ನೈಸರ್ಗಿಕವಾಗಿ ದೊರಕುವ ನೀರು ನಮಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಬಹಳ ಮುಖ್ಯವಾಗಿದೆ. ನೀರು ಕುಡಿಯುವುದರಿಂದ ದೇಹವು ಆರೋಗ್ಯವಾಗಿರಯತ್ತದೆ. ನೈರ್ಮಲ್ಯ ಎಂದರೆ ಆರೋಗ್ಯಪೂರ್ಣ ಅಭ್ಯಾಸಗಳಿಂದ, ಮುಖ್ಯವಾಗಿ ಸ್ವಚ್ಛತೆಯಿಂದ ದೇಹವನ್ನು ಖಾಯಿಲೆಗಳಿಂದ ಮುಕ್ತವಾಗಿಸುವುದು. ಸಂಸಾರ ಸಾಗರವನ್ನು ದಾಟಲು ದೇಹವೆಂಬ ದೋಣಿ ಅಗತ್ಯ. ಇದನ್ನು ಒಳ್ಳೆಯ ಸ್ಥಿತಿಯಲ್ಲಿರಿಸಿಕೊಂಡು ಸದ್ಗುಣ ಶೀಲತೆಯಿಂದ ಮೋಕ್ಷದ ಹಾದಿಯಲ್ಲಿ ಸಾಗಬೇಕು.

ವಿಷಯ ವಿವರಣೆ:

ಜೀವನದ ಅತ್ಯವಶ್ಯಕ ವಸ್ತುಗಳಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ. ನೀರು ಮಾನವನ ಪ್ರಗತಿಯ ಮಾನದಂಡ ಕೊಡ ಹೌದು. ಹಾಗಾದರೆ ನಾವು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿದ್ದರೆ ಅದು ನಮ್ಮ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಪರಿಕಲ್ಪನೆ ನೈರ್ಮಲ್ಯ ಸಾಮೂಹಿಕ, ಕುಟುಂಬ ಮತ್ತು ಶಾಲಾ ನೈರ್ಮಲ್ಯದ ಜೊತೆಗೆ ಪರಿಸರ, ನೀರು, ಗಾಳಿ, ಆಹಾರ ನೈರ್ಮಲ್ಯ ಮುಂತಾದ ಮಾನವ ಜೀವನದ ಎಲ್ಲಾ ಕ್ಷೇತ್ರಗಳಿಗೆ ಇದು ಅನ್ವಯಿಸುತ್ತದೆ.

ನೀರು ಮತ್ತು ನೈರ್ಮಲ್ಯ ನೀರು ಸ್ವಚ್ಚವಾಗಿ ಇಟ್ಟುಕೊಳ್ಳುವುದು ಆರೋಗ್ಯವನ್ನು ಕಾಪಾಡುವುದು. ಪ್ರತಿಯೊಬ್ಬರೂ ರೋಗಗಳನ್ನು ತಡೆಗಟ್ಟಲು ಮತ್ತು ಆರೋಗ್ಯವಾಗಿರಲು ಅಭ್ಯಾಸ ಮಾಡುತ್ತಾರೆ. ಅವುಗಳಲ್ಲಿ ನಾವು ಮೌಖಿಕ ನೈರ್ಮಲ್ಯ, ಕೈ ತೊಳೆಯುವುದು,ಕಣ್ಣು,ಕಿವಿ,ಮುಖ,ಕೂದಲು,ಜನನಾಂಗದ ಪ್ರದೇಶ ಮತ್ತು ಪಾದಗಳನ್ನು ಸ್ವಚ್ಚಗೊಳಿಸುವುದು. ಹಾಗೆ ಉಗುರು ಕತ್ತರಿಸುವುದು

ಬಾಯಿ ಶುಚಿ ಮಾಡುವುದು ಹಲ್ಲಿನ ಅಥವಾ ಹೊಟ್ಟೆಯ ಕಾಯಿಲೆಗಳ ತಡೆಗಟ್ಟುವಿಕೆಗಾಗಿ ಇದಕ್ಕಾಗಿ ಹಲ್ಲುಗಳನ್ನು ಸರಿಯಾಗಿ ಹಲ್ಲುಜ್ಜುವುದು, ಹಲ್ಲಿನ ಪ್ಲೋಸ್‌ ಮತ್ತು ಜಾಲಾಡುವಿಕೆಯ ನಿಯಮಿತ ಬಳಕೆ ಮತ್ತು ದಂತವೈದ್ಯರ ಬೇಟಿ ಮಾಡಿ ಗುಣ ಪಡಿಸಿಕೊಳ್ಳುವುದು.

ನೀರು ಮತ್ತು ನೈರ್ಮಲ್ಯದ ಜಾಗೃತಿ ಕ್ರಮಗಳು:

  • ಕೈಗಳನ್ನು ಸರಿಯಾಗಿ ತೊಳೆಯಬೇಕೆಂದರೆ ಸ್ವಲ್ಪ ಸಾಬೂನನ್ನು ಬಳಸಿ. ಹತ್ತು ಸೆಕೆಂಡುಗಳ ಕಾಲ ಉಜ್ಜಿದ ನಂತರ ತೊಳೆಯಿರಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ ಅಥವಾ ಸ್ವಚ್ಚವಾದ ಬಟ್ಟೆ/ಕಾಗದದಿಂದ ಒರೆಸಿಕೊಳ್ಳಿ
  • ಕಣ್ಣು,ಮೂಗು,ಬಾಯಿ ಮುಟ್ಟಿಕೊಳ್ಳುವಾಗ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಿ ಏಕೆಂದರೆ ಈ ವಲಯದಿಂದಲೆ ರೋಗಾಣುಗಳು ದೇಹವನ್ನು ಪ್ರವೇಶಿಸುವುದು.
  • ನಿಮ್ಮ ದೇಹ ಮತ್ತು ಬಟ್ಟೆಗಳನ್ನು ತಾಜಾ ಮತ್ತು ಸ್ವಚ್ಚವಾಗಿರಿಸಿಕೊಳ್ಳಿ. ನಿಮ್ಮ ಉಗುರುಗಳು ಮತ್ತು ಕಾಲ್ಬೆರಳುಗಳು,ಹಲ್ಲುಗಳು ಮತ್ತು ಕಿವಿಗಳು,ಮುಖ ಮತ್ತು ಕೂದಲನ್ನು ಸ್ವಚ್ಚವಾಗಿರಿಸಿಕೊಳ್ಳಿ.
  • ರೋಗಾಣುಗಳನ್ನು ಹರಡುವಂತಹ ನೊಣಗಳನ್ನು ಮನುಷ್ಯರ ಅಥವಾ ಪ್ರಾಣಿಗಳ ಮಲ-ಮೂತ್ರದ ಸಮೀಪ ಬಾರದಂತೆ ನೋಡಿಕೊಳ್ಳಿ. ಶೌಚಾಲಯವನ್ನು ಬಳಸಿ ಮತ್ತು ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
  • ಆಹಾರ ತಯಾರಿಸುವ ಮುನ್ನ, ಆಹಾರ ಸೇವಿಸುವ ಅಥವಾ ಶಿಶುವಿಗೆ ಆಹಾರ ನೀಡುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.
  • ಮಗುವಿನ ಮಲ ವಿದರ್ಜನೆ ಅಥವಾ ಯಾರಾದರೂ ಕಾಯಿಲೆಯವರು ಇದ್ದರೆ ಸಹಾಯ ಮಾಡಿದ ನಂತರ ಕೈಗಳನ್ನು ಸಬೂನಿಂದ ತೊಳೆದುಕೊಳ್ಳಿ.
  • ಸ್ವಚ್ಚವಾದ,ಸುರಕ್ಷಿತವಾದ ನೀರನ್ನು ಕೊಳಕು ಕೈಗಳು ಅಥವಾ ಲೋಟಗಳಿಂದ ಮುಟ್ಟಬೇಡಿ. ನೀರನ್ನು ರೋಗಾಣುಗಳಿಂದ ಮುಕ್ತವಾಗಿ,ಸುರಕ್ಷಿತವಾಗಿಡಿ.
  • ನಿಮಗೆ ಸಾಧ್ಯವಾದಲ್ಲಿ ತಟ್ಟೆ ಮತ್ತು ಇತರ ಪಾತ್ರೆಗಳನ್ನು ತೊಳೆದ ನಂತರ ಒಣಗಿಸಲು ಸೂರ್ಯ ಕಿರಣಗಳನ್ನು ಬಳಸಿ, ಇದರಿಂದ ರೋಗಾಣುಗಳು ನಾಶವಾಗುತ್ತವೆ.
  • ನೊಣಗಳನ್ನು ಕೊಲ್ಲಲು ಅಥವಾ ಕಡಿಮೆ ಮಾಡಲು ಮನೆ ಮತ್ತು ಸಮುದಾಯವನ್ನು ಕಸ ಮತ್ತು ಕೊಳಕು ಇಲ್ಲದೇ ಸ್ವಚ್ಚವಾಗಿರಿಸಿಕೊಳ್ಳಿ ಕಸವನ್ನು ಸಂಗ್ರಹಿಸುವ,ಸುಡುವ ಅಥವಾ ಹೂಳುವ ತನಕ ಭದ್ರವಾಗಿ ಶೇಖರಿಸಿ.
  • ನೀರಿನಲ್ಲಿ ಧನಕರುಗಳನ್ನು ಮೈತೊಳೆಯುವುದು,ಬಟ್ಟೆ ತೊಳೆಯುವುದು, ಪಾತ್ರೆ ತೊಳೆಯುವುದು, ತ್ಯಾಜ್ಯ ವಸ್ತುಗಳನ್ನು ನೀರಿಗೆ ಹಾಕುವುದು ಕಡಿಮೆ ಮಾಡಬೇಕು. ನೀರು ಕಲುಷಿತವಾಗುತ್ತಿದೆ ಜೊತೆಗೆ ರೋಗಾಣುಗಳು ಹೆಚ್ಚಾಗುತ್ತದೆ.
  • ನಾವು ಸೇವಿಸುವ ಆಹಾರ ಸರಿಯಾಗಿ ತೊಳೆದು ತಿನ್ನಬೇಕು, ಹಾಗೆ ಸೇವಿಸಿದರೆ ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.ಉತ್ತಮವಾಗಿ ಜೀವಿಸುವುದು ಬಹಳ ಮುಖ್ಯ.
  • ನೀರು ನಮ್ಮ ದೇಹದಲ್ಲಿ ಇರುವ ಕಲ್ಮಶಗಳನ್ನು ತೆಗೆದು ಹಾಕುತ್ತದೆ ಅದಕ್ಕೆ ಹೆಚ್ಚಾಗಿ ನೀರು ಸೇವಿಸುವುದು ಒಳ್ಳೆಯದು.
  • ಕೆಲಸ ಮುಗಿದ ನಂತರ ಕೈಗಳನ್ನು ತೊಳೆಯುವುದು ಉತ್ತಮ.
  • ಬಟ್ಟೆಯನ್ನು ಬಿಸಿಲಿನಲ್ಲಿ ಹಾಕಿ ಒಣಗಿಸಿದ ನಂತರ ಧರಿಸುವುದು ಒಳ್ಳೆಯದು.

ನೀರು ಮತ್ತು ನೈರ್ಮಲ್ಯದ ಜಾಗೃತ ಮೂಡಿಸುವುದು:

  • ನಮ್ಮ ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು ಎಂಬುದನ್ನು ಕಲಿಯಲು ನಮಗೆ ಸಹಾಯ ಮಾಡುವಂತಹ ಒಂದು ನಾಟಕದ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸುವುದು.
  • ಜನರ ಒಂದು ಗುಂಪನ್ನು ವೀಕ್ಷಿಸುತ್ತಾ ಒಂದು ಗಂಟೆ ಕಳೆಯಿರಿ ಆ ಸಮಯದಲ್ಲಿ ಅವರ ತಮ್ಮ ಮುಖಗಳನ್ನು, ಬಟ್ಟೆಗಳನ್ನು ಅಥವಾ ಇತರ ಜನರನ್ನು ಎಷ್ಟು ಸಾರಿ ಮುಟ್ಟುತ್ತಾರೆ ಎಂಬುದನ್ನು ಗಮನಿಸಿ ಮತ್ತು ದಾಖಲಿಸಿಕೊಳ್ಳಿ.
  • ರೋಗಾಣುಗಳು ಕೈಗಳಿಂದ ದೇಹದೊಳಗೆ ಯಾವೆಲ್ಲಾ ರೀತಿಯಲ್ಲಿ ಹರಡಬಹುದು ಎಂಬುದರ ಬಗ್ಗೆ ಯೋಚಿಸುವುದು.
  • ಶಾಲೆಯಲ್ಲಿ ಒಂದು ನೈರ್ಮಲ್ಯದ ಕೂಟವನ್ನು ಆರಂಭಿಸಿ, ಶಾಲೆಯ ಆವರಣವನ್ನು ಸ್ವಚ್ಚಗೊಳಿಸುವುದರ ಮೂಲಕ
  • ನೊಣಗಳು,ಕೊಳಕು ಮತ್ತು ರೋಗಾಣುಗಳ ಬಗ್ಗೆ ನಮಗೆ ಏನು ತಿಳಿದಿದೆಯೊ ಅದನ್ನು ಕುಟುಂಬಗಳ ಜೊತೆ ಹಂಚಿಕೊಳ್ಳಿ.

ಉಪಸಂಹಾರ:

ನೀರು ಮತ್ತು ನೈರ್ಮಲ್ಯದ ಬಗ್ಗೆ ಶಾಲೆಗಳಲ್ಲಿ ಅರಿವು ಮೂಡಿಸುವುದು, ಜನರ ಆರೋಗ್ಯವನ್ನು ಕಾಪಾಡುವಂತೆ ಜಾಗೃತಿಯನ್ನು ಮೂಡಿಸುವಂತೆ ನಾಟಕಗಳ ಮೂಲಕ ಹಾಗೂ ಪತ್ರಕೆಗಳ ಮೂಲಕ ಹಾಗೂ ದೂರದರ್ಶನದ ಮೂಲಕ ಅರಿವು ಮೂಡಿಸುವುದು.

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ 

Leave a Comment