Om Namah Shivaya in Kannada | ಓಂ ನಮಃ ಶಿವಾಯ

Om Namah Shivaya in Kannada ಓಂ ನಮಃ ಶಿವಾಯ om namah shivaya mantra information in kannada

Om Namah Shivaya in Kannada

Om Namah Shivaya in Kannada ಓಂ ನಮಃ ಶಿವಾಯ

ಈ ಲೇಖನಿಯಲ್ಲಿ ಹಿಂದೂಗಳ ದೇವರಾದ ಶಿವನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಿದ್ದೇವೆ.

ಓಂ ನಮಃ ಶಿವಾಯ

ನಮಃ ಶಿವಾಯ ಶಾಂತಾಯ ಹರಾಯ ಪರಮಾತ್ಮನೇ !
ಪ್ರಣತಃಕ್ಲೇಶನಾಶಾಯ ಯೋಗಿನಾಂ ಪತಯೇ ನಮಃ !!

ಹಿಂದೂಗಳ ಶ್ರೇಷ್ಠ ದೇವರು ಎಂದರೆ ಶಿವ. ಹಿಂದೂ ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಭೂಮಿಯನ್ನು ಸೃಷ್ಟಿಸಿದ್ದಾರೆ. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ವಿಷ್ಣು ಅದಕ್ಕೆ ಜೀವ ನೀಡುತ್ತಾನೆ ಮತ್ತು ಮಹೇಶ್ವರ ಎಲ್ಲವನ್ನೂ ಲಯಗೊಳಿಸುತ್ತಾನೆ ಎಂದು ನಂಬಲಾಗಿದೆ.

ಓಂ ನಮಃ ಶಿವಾಯ ಮಂತ್ರದಲ್ಲಿದೆ ಶಕ್ತಿ

ಶಿವನನ್ನು ಪೂಜಿಸುವವರು ಹೆಚ್ಚಾಗಿ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪಠಿಸುತ್ತಾ ಇರುತ್ತಾರೆ. ಆದರೆ ಈ ಮಂತ್ರ ಕೇವಲ ಶಿವನ ಭಕ್ತರಿಗಾಗಿ ಮಾತ್ರವಲ್ಲ. ಇದನ್ನು ಪಠಿಸಿದರೆ ಇತರರಿಗೂ ಲಾಭವಿದೆ. ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ. ಇದರಿಂದ ನೀವು ಜೀವನದ ಗುರಿಯನ್ನು ತಲುಪಬಹುದಾಗಿದೆ. ಈಗಿನ ಕಾಲದಲ್ಲಿ ಮನಸ್ಸಿಗೆ ಶಾಂತಿಯೆನ್ನುವುದು ಸಿಗುವುದೇ ಕಷ್ಟ. ಒತ್ತಡದ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಶಾಂತಿ ಕಳೆದುಹೋಗಿರುತ್ತದೆ. ಜೀವನದಲ್ಲಿ ಕೆಲವೊಂದು ಸಂದರ್ಭದಲ್ಲಿ ಅತಿಯಾದ ಒತ್ತಡದಿಂದ ನೀವು ಹೊರ ಬರಬೇಕಾಗುತ್ತದೆ. ಕೈಲಾಸನಾಥ ಪರಶಿವನ ಕುರಿತ ರೋಚಕ ಜನ್ಮ ವೃತ್ತಾಂತ ಜೀವನದಲ್ಲಿ ಯಾವುದೇ ಸಂಕಷ್ಟದ ಸಂದರ್ಭ ಎದುರಾದರೂ ಆ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿದರೆ ಆಧ್ಯಾತ್ಮಿಕ ಶಕ್ತಿ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದರಿಂದ ಜೀವನದ ಸಂಕಷ್ಟದಿಂದ ಪಾರಾಗಬಹುದು.

ಓಂ ನಮಃ ಶಿವಾಯ ಮಂತ್ರವನ್ನು ಪುನಃರುಚ್ಛರಿಸುವುದು ಹೇಗೆ?

ಇದನ್ನು ಯಾರೂ ಬೇಕಾದರೂ ಪಠಿಸಬಹುದಾಗಿದೆ. ಬಡವ, ಶ್ರೀಮಂತ, ಯುವಕರು, ಹಿರಿಯರು, ಕಿರಿಯರು ಹೀಗೆ ಯಾರು ಬೇಕಾದರೂ ಮಂತ್ರವನ್ನು ಪಠಿಸಬಹುದಾಗಿದೆ. ನಿಮಗೆ ಆರಾಮದಾಯಕವಾಗಿರುವ ಮತ್ತು ಶಾಂತಿಯುತ ಸ್ಥಳದಲ್ಲಿ ಕೂತು ಈ ಮಂತ್ರವನ್ನು ಪಠಿಸಬೇಕು. ನೀವು ಮಂತ್ರವನ್ನು ಉಚ್ಛರಿಸುವುದು ಒಂದೇ ವೇಗದಲ್ಲಾಗಿರಬೇಕು.

ಜೀವನ ಎನ್ನುವುದು ಹೂವಿನ ಹಾಸಿಗೆಯಲ್ಲ. ಅನೇಕ ಗೊಂದಲಗಳು ಹಾಗೂ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿರುವುದು. ಮಾನಸಿಕ ಒತ್ತಡ ಹೆಚ್ಚಾದಂತೆ ಮಾನಸಿಕ ನೆಮ್ಮದಿ ಹಾಳಾಗುವುದು. ಅಂತಹ ಸಂದರ್ಭದಲ್ಲಿ ನಮ್ಮ ಮಾಣಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಅಥವಾ ಆರೈಕೆ ಮಾಡಲು ಇರುವ ಏಕೈಕ ವಿಧಾನವೆಂದರೆ “ಓಂ ನಮಃ ಶೀವಾಯ” ಎನ್ನುವ ಮಂತ್ರದ ಪಠಣೆ ಎನ್ನಲಾಗುತ್ತದೆ.

ಇತರೆ ಪ್ರಬಂಧಗಳು:

ಗೌರಿ ಗಣೇಶ ಹಬ್ಬದ ಶುಭಾಶಯಗಳು

ಗಣೇಶ ಚತುರ್ಥಿ ಹಬ್ಬದ ಮಹತ್ವ

ನಾಗರ ಪಂಚಮಿ ಹಬ್ಬದ ಮಹತ್ವ

Leave a Comment