ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ | Parisara Malinya Prabandha

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, parisara malinya prabandha in kannada, ಪರಿಸರ ಮಾಲಿನ್ಯದ ವಿಧಗಳು, ಪರಿಸರ ಮಾಲಿನ್ಯ ಕುರಿತು ಪ್ರಬಂಧ ಕನ್ನಡದಲ್ಲಿ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಪೀಠಿಕೆ:

ಏರುತ್ತಿರುವ ಜನಸಂಖ್ಯೆ, ವೈಭವ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ.ನಮ್ಮ ಸುತ್ತಮುತ್ತಲಿನ ನೀರು,ಗಾಳಿ,ಭೂಮಿ,ಎಲ್ಲವೂ ಮನುಷ್ಯನ ಅತೀ ಆಸೆ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿದೆ.ಸರ್ಕಾರಗಳು ಪರಿಸರ ಪ್ರೇಮಿಗಳು ಮಾಹಿತಿ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡರು ಮಾಲಿನ್ಯಗಳು ಹೆಚ್ಚುತ್ತಿದೆ.ಈ ಮಾಲಿನ್ಯ ಮನುಕುಲಕ್ಕಷ್ಟೆ ಅಲ್ಲದೆ ಇಡೀ ಜೀವಸಂಕುಲಕ್ಕೆ ಮಾರಕವಾಗುತ್ತಿದೆ.

ಪರಿಸರ ಮಾಲಿನ್ಯದ ವಿಧಗಳು:

೧.ವಾಯುಮಾಲಿನ್ಯ: ಮನುಷ್ಯನ ಜೀವ ಇರುವುದೇ ವಾಯುವಿನಲ್ಲಿ.ವಾಯು ಜೀವಧಾತು ಅದೇ ವಾಯು ಈಗ ಕಲುಷಿತವಾಗುತ್ತಿದೆ.ಗಾಳಿಯಿಲ್ಲದೆ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ ಅದರೇ ಈಗ ವಾಯು ವಿಷ ಅನಿಲವಾಗುತ್ತಿದೆ.ವಾಹನಗಳ ಹೊಗೆ,ಕಾರ್ಖಾನೆಗಳ ಹೊಗೆ,ಪರಿಸರವನ್ನು ಹಾಳು ಮಾಡುತ್ತಿದೆ.ಇದರಿಂದ ವಾಯು ವಿಷವಾಗುತ್ತಿದೆ.

೨.ಶಬ್ದಮಾಲಿನ್ಯ: ಮನುಷ್ಯನ ಕಿವಿ ತಮಟೆ ಮೇಲೆ ಮತ್ತು ಮನುಷ್ಯನ ನೆಮ್ಮದಿಯನ್ನು ಹಾಳುಮಾಡುತ್ತಿದೆ.ವಾಹನಗಳ ಅತಿಯಾದ ಶಬ್ದಗಳು,ಧ್ವನಿವರ್ಧಕಗಳ ಅತಿಯಾದ ಬಳಕೆ,ಮನುಷ್ಯನ ಮೆದುಳಿಗೆ ಹಾಗೂ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ.ಶಬ್ದ ಮಾಲಿನ್ಯದಿಂದ ಮನುಷ್ಯರಷ್ಟೆ ಅಲ್ಲದೆ ಪ್ರಾಣಿಗಳಿಗೂ ತೊಂದರೆ ಅಗುತ್ತದೆ.

೩.ಜಲಮಾಲಿನ್ಯ: ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರು,ತೈಲಬಾವಿಗಳು,ಕೃಷಿಗೆ ಬಳಸುವ ರಾಸಾಯನಿಕ ವಸ್ತುಗಳು,ಇವುಗಳು ನೇರವಾಗಿ ಜಲಮೂಲಗಳಾದ ಕೆರೆ,ಬಾವಿ,ಸರೋವರ,ನದಿಗಳಿಗೆ ತಲುಪುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ.ತ್ಯಾಜ್ಯ ವಸ್ತುಗಳನ್ನು ನದಿ, ಕೆರೆ,ಸರೋವರಗಳಿಗೆ ಸೇರಿಸುವುದರಿಂದ ಜಲಮಾಲಿನ್ಯಗಳು ಹೆಚ್ಚಾಗುತ್ತಿದೆ.ಜಲಮಾಲಿನ್ಯದಿಂದ ಮನುಷ್ಯನ ಆರೋಗ್ಯ ಹಾಳಾಗುವುದರ ಜೊತೆಗೆ ಜಲಚರಗಳಿಗೂ ಹಾನಿಯಾಗುತ್ತದೆ. ಹಾಗೂ ಜಲಮೂಲಗಳಿಗೂ ತೊಂದರೆ ಅಗುತ್ತದೆ.

೪.ಭೂಮಾಲಿನ್ಯ: ಭೂಮಾಲಿನ್ಯಕ್ಕೆ ಮುಖ್ಯ ಕಾರಣವೇ ಅರಣ್ಯನಾಶ,ಮರಗಳನ್ನು ಕಡಿಯುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ.ಮಣ್ಣಿನ ಸವಕಳಿ ಉಂಟಾಗುತ್ತದೆ.ತ್ಯಾಜ್ಯ ವಸ್ತುಗಳ ಅನಿಯಮಿತ ಬಳಕೆ ಹೆಚ್ಚುತ್ತಿದೆ. ಇದರಿಂದ ಮಾಲಿನ್ಯ ಉಂಟಾಗುತ್ತದೆ.

ಪರಿಸರ ಮಾಲಿನ್ಯದ ದುಷ್ಟರಿಣಾಮಗಳು:

೧.ಆಮ್ಲ ಮಳೆಯೂ ಕೂಡ ಪರಿಸರ ಮಾಲಿನ್ಯದ ಕಾರಣದಿಂದಲೇ ಆಗುತ್ತಿದೆ.ಇದರಿಂದ ಅನೇಕ ಸ್ಮಾರಕಗಳು, ಕಟ್ಟಡಗಳು ,ಭೂಮಿಯ ಫಲವತ್ತತೆ ನಾಶವಾಗುತ್ತಿದೆ.

೨.ಕಾಡಿನ ನಾಶದಿಂದಾಗಿ ಹಸಿರು ಮನೆ ಪರಿಣಾಮ ಉಂಟಾಗಿ ಇಂಗಾಲದ ಡೈ ಅಕ್ಸೈಡ್‌ ಮೀಥೇನ್‌ ಗಳು ಭೂಮಿಯ ಉಷ್ಣತೆ ಹೆಚ್ಚಿಸಲು ಕಾರಣವಾಗುತ್ತಿದೆ.

೩.ಕಾಡು ಪ್ರಾಣಿಗಳು,ಸರೀಸೃಪಗಳು,ಪಕ್ಷಿಗಳು,ಪರಿಸರ ನಾಶದಿಂದ ತೊಂದರೆಗೊಳಗಾಗುತ್ತಿವೆ.ಅವುಗಳ ಜೀವ ಮತ್ತು ಜೀವನ ನೇರವಾಗಿ ಪ್ರಕೃತಿಗೆ ಸಂಬಂಧಿಸಿದೆ ಅದರಿಂದ ಪ್ರಕೃತಿಯಲ್ಲಿ ಸ್ವಲ್ಪ ಬದಲಾವಣೆಯಾದರು ಅವುಗಳ ನಾಶಕ್ಕೆ ಕಾರಣವಾಗುತ್ತದೆ.ಪರಿಸರಕ್ಕೆ ಪ್ರಾಣಿಗಳ ಸಂಬಂಧ ಬಹಳ ಹತ್ತಿರವಾದ ಸಂಬಂಧವಾಗಿದೆ.ಪರಿಸರ ಮಾಲಿನ್ಯಗಳು ಎಲ್ಲಾ ಜೀವಿಗಳಿಗೆ ತೊಂದರೆಯಾಗುತ್ತಿದೆ.

೪.ಪರಿಸರ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಇದರಿಂದ ಕಾಯಿಲೆಗಳು ಉಂಟಾಗುತ್ತದೆ.

೫.ಓಜೋನ್‌ ಪದರದ ನಾಶದಿಂದ ಅತಿನೇರ ಕಿರಣಗಳು ನೇರವಾಗಿ ಭೂಮಿಯನ್ನುತಲುಪಿ ಚರ್ಮ, ಕ್ಯಾನ್ಸರ್‌,ಕಣ್ಣಿನ ತೊಂದರೆಗಳಿಗೆ ಕಾರಣವಾಗುತ್ತಿದೆ.

ಪರಿಹಾರ ಕ್ರಮಗಳು:

೧.ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ,ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ.ಇದರಿಂದ ಪರಿಸರಕ್ಕೂ ನಿರಾಳವಾಗುತ್ತದೆ.ಆರೋಗ್ಯವು ಚೆನ್ನಾಗಿರುತ್ತದೆ.

೨.ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ.ಇತರೆ ಗಿಡ ನೆಡುವುದರಿಂದ ಪರಿಸರ ಪೋಷಿಸಲು ಸಹಾಯವಾಗುತ್ತದೆ.

೩.ತ್ಯಾಜ್ಯ ವಸ್ತುಗಳ ಬಳಕೆ ಕಡಿಮೆ ಮಾಡಿವುದು.ಇಂಗು ಗುಂಡಿಗಳನ್ನು ಸ್ಥಾಪಿಸುವುದು.ಒಳಚರಂಡಿ ವ್ಯವಸ್ಥೆ ಕಲ್ಪಸುವುದು.

ಉಪಸಂಹಾರ:

ಪರಿಸರ ಮಾಲಿನ್ಯದಲ್ಲಿ ಮಾಲಿನ್ಯವನ್ನು ತಡೆಗಟ್ಟುವಂತೆ ಮಾಡುವುದು ಅದರ ಜೊತೆ ಅದರ ಪರಿಹಾರ ಕ್ರಮಗಳನ್ನು ಕೈಗೂಳ್ಳವುದು.ಮಾಲಿನ್ಯದ ಬಗ್ಗೆ ಅರಿವು ಮೂಡುವಂತೆ ಮಾಡುವುದು.ಈ ಮೂಲಕ ಪರಿಸರವನ್ನ ಅಷ್ಟೆ ಅಲ್ಲಾದೇ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇತರ ಪ್ರಬಂಧಗಳು:

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಪುಸ್ತಕಗಳ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment