Pear Fruit Information in Kannada, ಪೇರಳೆ ಹಣ್ಣಿನ ಬಗ್ಗೆ ಮಾಹಿತಿ, pear fruit benefits in kannada, perale hannu in kannada ಮರಸೇಬು, ಪೇರಳೆ ಹಣ್ಣು perale fruit in kannada
Pear Fruit Information in Kannada

ಈ ಲೇಖನಿಯಲ್ಲಿ ಪಿಯರ್ಸ್ ಹಣ್ಣಿನ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.
ಮರಸೇಬು (ಪೇರಳೆ ಹಣ್ಣು)
ವೈದ್ಯಕೀಯ ಶಾಸ್ತ್ರದ ಪ್ರಕಾರ ಪಿಯರ್ಸ್ಸ್ ಹಣ್ಣಿನಲ್ಲಿ ಇರುವ ಔಷಧೀಯ ಗುಣ ಹಾಗೂ ಪೋಕಾಂಶಗಳು ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ನೀಡುತ್ತವೆ.
ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಲ್ಲಿ ಪಿಯರ್ಸ್ ಹಣ್ಣು ಸಹ ಒಂದು. ಇದು ಬಹು ದಿನಗಳ ಕಾಲ ಕೆಡದಂತೆ ಇಡಬಹುದಾದ ಹಣ್ಣು ಎಂದು ಪರಿಗಣಿಸಲಾಗಿದೆ. ಚೀನಾ ಮತ್ತು ಮಧ್ಯಪ್ರಾಚ್ಯ ಎನ್ನುವ ಎರಡು ವಿಭಿನ್ನ ಪ್ರದೇಶಗಳು ಈ ಹಣ್ಣಿನ ಮೂಲ ಸ್ಥಾನ. ಪ್ರಸ್ತುತವಾಗಿ ಒರೆಗಾನ್ ಮತ್ತು ವಾಷಿಂಗ್‍ಟನ್ ಅಲ್ಲಿ ಈ ಹಣ್ಣನ್ನು ಅಧಿಕವಾಗಿ ಬೆಳೆಯುತ್ತಾರೆ. ಉತ್ತಮ ಆದಾಯವನ್ನು ನೀಡುವ ಈ ಹಣ್ಣು ಆರೋಗ್ಯಕ್ಕೂ ಉತ್ತಮ ಪೋಷಣೆ ನೀಡುವುದು. ಗಣನೀಯವಾಗಿ ಇದನ್ನು ಸೇವಿಸಿದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು.
ಆರೋಗ್ಯಕ್ಕೆ ಉತ್ತಮ
ಪಿಯರ್ಸ್ ಹಣ್ಣು ಕಡಿಮೆ ಕ್ಯಲೋರಿ ಹಾಗೂ ಕಡಿಮೆ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಅನಗತ್ಯವಾದ ತೂಕವನ್ನು ಇಳಿಸಲು ಈ ಹಣ್ಣು ಉತ್ತಮ ಆಯ್ಕೆ ಆಗುವುದು. ಇದನ್ನು ಸವಿಯುವುದರಿಂದ ದೀರ್ಘ ಸಮಯಗಳ ಕಾಲ ಹಸಿವನ್ನು ತಡೆಯಬಹುದು. ಇದರಲ್ಲಿ ಅಧಿಕ ಪ್ರಮಾಣದ ನಾರಿನಂಶ ಇರುವುದರಿಂದ ಉತ್ತಮ ಜೀರ್ಣ ಕ್ರಿಯೆ ಹಾಗೂ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು.
ಪಿಯರ್ಸ್ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದನ್ನು ಗಣನೀಯವಾಗಿ ಸೇವಿಸುವುದರಿಂದ ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್ಸ್‍ಗಳ ವಿರುದ್ಧ ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ಹಣ್ಣನ್ನೇ ಮಿತಿಯಿಲ್ಲದೆ ಸೇವಿಸುವುದರಿಂದ ಪ್ರಮಾಣವು ಹೆಚ್ಚಾಗಿ ಕ್ಯಾನ್ಸರ್ ಬರುವ ಸಾಧ್ಯತೆಯೂ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕರುಳಿನಲ್ಲಿ ಉರಿಯೂತದಿಂದ ಉಂಟಾಗುವ ಅನಾರೋಗ್ಯಕ್ಕೆ ಕೊಲೈಟಿಸ್ ಎಂದು ಕರೆಯಲಾಗುವುದು. ಪಿಯರ್ಸ್ ಹಣ್ಣಿನಲ್ಲಿ ಇರುವ ನಾರಿನಂಶವು ಕರುಳಿನ ಆರೋಗ್ಯವನ್ನು ಕಾಪಾಡುವುದು. ಕರುಳಿನಲ್ಲಿ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯಮಾಡುವುದು. ಕೊಲೋನ್ ಸಮಸ್ಯೆ ಇರುವವರು ದಿನದ ಪ್ರಮುಖ ಮೂರು ಊಟದ ಮೊದಲು ಪಿಯರ್ಸ್ ಹಣ್ಣನ್ನು ಸೇವಿಸಬೇಕು. ದಿನಕ್ಕೆ ಅರ್ಧ ಕಿಲೋ ಗಳಷ್ಟು ಪಿಯರ್ಸ್ ಹಣ್ಣನ್ನು ಸೇವಿಸಿದರೆ ಒಂದು ವಾರದಲ್ಲಿ ಕೋಲನ್ ಸಮಸ್ಯೆಯನ್ನು ನಿವಾರಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಣ್ಣಿನ ಸಿಪ್ಪೆಯನ್ನು ತೆಗೆದು ಸೇವಿಸಬೇಕು ಎಂದು ಹೇಳಲಾಗುವುದು.
ಇತರೆ ಪ್ರಬಂಧಗಳು: