ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, Plastic Tyajya Nirvahane Prabandha in Kannada, Plastic Tyajya Nirvahane Essay in Kannada ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪ್ರಬಂಧ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪ್ರಬಂಧ

ಈ ಲೇಖನಿಯ ಮೂಲಕ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ಪೀಠಿಕೆ:

ಪ್ಲಾಸ್ಟಿಕ್ ಬಾಳಿಕೆ ಬರುವ ಬಹುಮುಖ ವಸ್ತುವಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ಸಮಾಜಕ್ಕೆ ಜೀವನದ ಗುಣಮಟ್ಟ, ಉದ್ಯೋಗಗಳು ಮತ್ತು ಆರ್ಥಿಕ ಚಟುವಟಿಕೆಗಳಂತಹ ಹಲವು ವಿಧಗಳಲ್ಲಿ ಪ್ರಯೋಜನಗಳನ್ನು ತಂದಿವೆ. ಆದಾಗ್ಯೂ, ತ್ಯಾಜ್ಯ ಪ್ಲಾಸ್ಟಿಕ್ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಜೈವಿಕ ವಿಘಟನೀಯವಲ್ಲ ಎಂಬ ಅಂಶದ ದೃಷ್ಟಿಯಿಂದ, ಇದು ವಾತಾವರಣದಲ್ಲಿ ಹೆಚ್ಚು ಕಾಲ ಉಳಿಯಬಹುದು ಮತ್ತು ಆದ್ದರಿಂದ ಪ್ಲಾಸ್ಟಿಕ್ ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ನಮ್ಮ ಜೀವಿತಾವಧಿಯಲ್ಲಿ ಪ್ಲಾಸ್ಟಿಕ್‌ಯನ್ನು ತೆಗೆದು ಹಾಕುವ ಮಾರ್ಗವಿಲ್ಲ. ತ್ಯಾಜ್ಯ ನಿರ್ವಹಣೆ ಭಾರತದಲ್ಲಿ ದೊಡ್ಡ ಸವಾಲು ಅಗಿದೆ. ಒಂದು ಗ್ರಾಂ ಪ್ಲಾಸ್ಟಿಕ್‌ ನಾಶವಾಗಲು 450 ವರ್ಷಗಳು ಸಂಪೂರ್ಣವಾಗಿ ಬೇಕಾಗುತ್ತದೆ.

ವಿಷಯ ವಿವರಣೆ:

ಪ್ಲಾಸ್ಟಿಕ್ ಮರುಬಳಕೆ ದರಗಳನ್ನು ಹೆಚ್ಚಿಸಲು ಹಲವು ದೇಶಗಳು ವಿವಿಧ ತಂತ್ರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ವಿಧಾನಗಳಾದ ಮರುಬಳಕೆ, ಸುಡುವಿಕೆ, ಭೂಕುಸಿತ ಮತ್ತು ಪೈರೋಲಿಸಿಸ್ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಸವಕಳಿ, ಶಕ್ತಿಯ ಬೇಡಿಕೆ ಮತ್ತು ನೀರಿನ ಬಳಕೆಗೆ ಸಂಬಂಧಿಸಿದ ಪರಿಸರ ಪರಿಣಾಮಗಳ ಸೂಚಕಗಳಾಗಿ ಸೇರಿಸಲ್ಪಟ್ಟಿದೆ. ಇದು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಆಯ್ಕೆಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ಒಳಗೊಂಡಿರುವ ಚಟುವಟಿಕೆಗಳ ಪರಿಸರ ಪರಿಣಾಮವನ್ನು ತನಿಖೆ ಮಾಡುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಪ್ಲಾಸ್ಟಿಕ್ ಮಾಲಿನ್ಯವು ಅಪಾಯಕಾರಿ ಎತ್ತರವನ್ನು ತಲುಪಿದೆ ಮತ್ತು ಪ್ರತಿ ದಿನವೂ ವೇಗವಾಗಿ ಹೆಚ್ಚುತ್ತಿದೆ. ಇದು ನಮ್ಮ ಸುಂದರ ಗ್ರಹವನ್ನು ನಾಶಪಡಿಸುತ್ತಿರುವುದರಿಂದ ಮತ್ತು ಎಲ್ಲಾ ರೀತಿಯ ಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಕಸದಿಂದ ಭೂ ಮತ್ತು ಜಲಪರಿಸರ ವ್ಯವಸ್ಥೆಗಳೆರಡರ ಮೇಲೂ ಆಗುವ ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಿ ಏಕ ಪ್ಲಾಸ್ಟಿಕ್‌ ಬಳಕೆ ಕಡಿತ ಮಾಡಿದೆ.

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಪರಿಣಾಮ:

  • ತ್ಯಾಜ್ಯ ಪ್ಲಾಸ್ಟಿಕ್ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಜೈವಿಕ ವಿಘಟನೀಯವಲ್ಲ ಎಂಬ ಅಂಶದ ದೃಷ್ಟಿಯಿಂದ, ಇದು ವಾತಾವರಣದಲ್ಲಿ ಹೆಚ್ಚು ಕಾಲ ಉಳಿಯಬಹುದು ಮತ್ತು ಆದ್ದರಿಂದ ಪ್ಲಾಸ್ಟಿಕ್ ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ.
  • ಪ್ಲಾಸ್ಟಿಕ್‌ ಅನ್ನು ಒಮ್ಮೆ ತಯಾರಿಸಿದ ಮೇಲೆ ಅದನ್ನು ನಾಶಗೊಳಿಸುವುದು ದೀರ್ಘಾಕಾಲವಾಗುತ್ತದೆ. ಇದು ಪರಿಸರಕ್ಕೆ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ.
  • ಪ್ಲಾಸ್ಟಿಕ್ ಅನೇಕ ರೂಪಾಂತರಗಳಲ್ಲಿ ಲಭ್ಯವಿದೆ. ಒಂದು ಕಡೆ ನಮ್ಮ ದಿನ ನಿತ್ಯದ ಎಲ್ಲಾ ಶಾಪಿಂಗ್‌ ಮತ್ತು ದಿನಸಿಗಳಿಗೆ ಹಾಗೂ ಮಕ್ಕಳ ಅಟಿಕೆಗಳಲ್ಲಿ ಹೆಚ್ಚಾಗಿ ಬಳಸುತ್ತ ಇದ್ದೇವೆ.
  • ಅಭಿವೃದ್ದಿ ಹೊಂದುತ್ತಿರುವ ನಮ್ಮ ದೇಶಕ್ಕೆ ದೊಡ್ಡ ಸವಾಲಾಗಿದೆ ಇದು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನು ಉಂಟುಮಾಡಿದೆ.
  • ಪ್ಲಾಸ್ಟಿಕ್‌ ಗಳಲ್ಲಿ ಬಿಸೆನಾಲ್‌ ಎ, ಥಾಲೇಟ್ಗಳು, ಆಂಟಿಮಿನಿಟ್ರಾಕ್ಸೆ ಡ್‌ , ಪಾಲಿ-ಪ್ಲೋರಿನೇಟೆಡ್‌, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇವೆ. ಅವು ಮಾನವ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುತ್ತದೆ.
  • ಪ್ಲಾಸ್ಟಿಕ್‌ ಹುಟ್ಟು ಹಾಕುವ ಅಪಾಯಗಳು ಒಂದೆರಡಲ್ಲ. ಅದು ನಾನಾ ವಿಧವಾದ ಅಡ್ಡಿ ಅತಂಕಗಳನ್ನೂ ದುಷ್ಟರಿಣಾಮಗಳನ್ನೂ ಉಂಟುಮಾಡುತ್ತದೆ. ಪ್ಲಾಸ್ಟಿಕ್‌ ತಯಾರಿಕಾ ಹಂತದಲ್ಲಿಯೇ ದೊಡ್ಡ ಮಟ್ಟದ ಮಾಲಿನ್ಯವನ್ನು ಉಂಟುಮಾಡುತ್ತದೆ. ಪರಿಸರ,ಮಾನುಷ್ಯ ಮತ್ತು ಪ್ರಾಣಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
  • ಮನುಷ್ಯರ ಮೇಲೆ ಪ್ಲಾಸ್ಟಿಕ್‌ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೋಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ವಿವಿಧ ಬಗೆಯ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಬಹುದು.
  • ನರಮಂಡಲಕ್ಕೆ ದಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತವೆ. ಹಾಗೇ ಪ್ಲಾಸ್ಟಿಕ್‌ ಅಂಶಗಳು ದೇಹಕ್ಕೆ ಸೇರಿಕೊಂಡಲ್ಲಿ ಮಕ್ಕಳ ಬೆಳವಣಿಗೆಗೆ ತೊಂದರೆ, ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ಮೋನುಗಳ ಬದಲಾವಣೆಗಳು, ವೀರ್ಯಾಣುಗಳ ಸಂಖ್ಯೆ ಕ್ಷೀಣಗೊಳ್ಳುವಿಕೆ, ಬಂಜೆತನ ಮುಂತಾದ ತೊಂದರೆಗಳನ್ನು ಉಂಟುಮಾಡ ಬಲ್ಲದು.
  • ಉಪಯೋಗಿಸಿದ ಬಿಸಾಡುವ ಪ್ಲಾಸ್ಟಿಕ್‌ ತಟ್ಟೆ-ಲೋಟಗಳಲ್ಲಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತದೆ, ಅದ್ದರಿಂದ ಮಲೇರಿಯಾ, ಫೈಲೇರಿಯಾ,(ಅನೆಕಾಲು ರೋಗ), ಡೆಂಗ್ಯೂ, ಚಿಕುನ್‌ ಗುನ್ಯಾದಂಥ ಸಾಂಕಾಮಿಕ ರೋಗಗಳು ಹೆಚ್ಚಾಗುತ್ತದೆ.

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಕ್ರಮಗಳು:

ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಕಸದಿಂದ ಭೂ ಮತ್ತು ಜಲಪರಿಸರ ವ್ಯವಸ್ಥೆಗಳೆರಡರ ಮೇಲೂ ಆಗುವ ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಿ, ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಕರೆ ನೀಡಿದರು.ಜೊತಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ.

ಮರುಬಳಕೆಯನ್ನು ಕಡ್ಡಾಯಗೊಳಿಸುವ ಮೂಲಕ ಅಥವಾ ಮರುಬಳಕೆಗೆ ಧನಸಹಾಯ ನೀಡುವ ಮೂಲಕ ತ್ಯಾಜ್ಯದ ಕಾರಣದಿಂದ ಅಸ್ತಿತ್ವದಲ್ಲಿರುವ ಜಾಗತಿಕ ಪರಿಸರ ಸಮಸ್ಯೆಗೆ ವ್ಯತ್ಯಾಸವನ್ನು ಮಾಡಬಹುದು.ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸುವ ಮೊದಲ ಮತ್ತು ಪ್ರಮುಖ ಹೆಜ್ಜೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತಪ್ಪಿಸುವುದು.

ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸರಿಯಾದ ಕ್ರಮದಲ್ಲಿ ಮಿಲೇವಾರಿ ಮಾಡಬೇಕು. ಸರಕಾರದ ಕ್ರಮಗಳನ್ನು ಅನುಸರಿಸಬೇಕು.

ಪ್ಲಾಸ್ಟಿಕ್‌ ಯನ್ನು ಮರುಬಳಕೆ ಮಾಡಬಹುದು. ಏಕಬಳಕೆ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಇದರ ಮೊದಲ ಹೆಜ್ಜೆ, ಇದರೊಂದಿಗೆ ಸಮರ್ಪಕ ರೀತಿಯಲ್ಲಿ ತ್ಯಾಜ್ಯಗಳ ನಿರ್ವಹಣೆ ಮಾಡುವುದು ಬಹಳ ಮುಖ್ಯ.

ಹಲವಾರು ಜಿಲ್ಲೆಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಪನ್ಮೂಲವಾಗಿಸಿದ್ದಾರೆ. ರಾಣಿಬೆನ್ನೂರಿನಲ್ಲಿ ತ್ಯಾಜ್ಯದಿಂದ ಉದ್ಯಾನವನವನ್ನೇ ನಿರ್ಮಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಹುಲಗಿಯ ಬಹುಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಾಣ ಮಾಡಲಾಯಿತು.

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಜನ ಸಾಮಾನ್ಯರ ಕರ್ತವ್ಯ:

ಪ್ಲಾಸ್ಟಿಕ್ ‌ಬಳಸುವುದನ್ನು ನಾವು ಖಂಡಿತವಾಗಿಯೂ ತಪ್ಪಿಸಬಹುದು. ಉದಾಹರಣೆಗೆ, ಪ್ಲಾಸ್ಟಿಕ್ ಚೀಲಗಳನ್ನು ಬಳಸುವ ಬದಲು, ನಾವು ಶಾಪಿಂಗ್‌ಗೆ ಹೋಗುವಾಗ ಸೆಣಬು, ಬಟ್ಟೆ ಅಥವಾ ಕಾಗದದ ಚೀಲವನ್ನು ಸುಲಭವಾಗಿ ಆರಿಸಿಕೊಳ್ಳಬಹುದು. ಅಂತೆಯೇ, ಪಾರ್ಟಿಗಳ ಸಮಯದಲ್ಲಿ ಬಿಸಾಡಬಹುದಾದ ಪ್ಲಾಸ್ಟಿಕ್ ಕಟ್ಲರಿ ಮತ್ತು ಪಾತ್ರೆಗಳನ್ನು ಬಳಸುವ ಬದಲು ನಾವು ಸ್ಟೀಲ್, ಪೇಪರ್, ಥರ್ಮಾಕೋಲ್ ಅಥವಾ ಮರುಬಳಕೆ ಮಾಡಬಹುದಾದ ಅಥವಾ ವಿಲೇವಾರಿ ಮಾಡಲು ಸುಲಭವಾದ ಯಾವುದೇ ವಸ್ತುವನ್ನು ಬಳಸಬಹುದು.

ಪ್ಲಾಸ್ಟಿಕ್‌ ಬಳಸುವುದು ಕಡಿಮೆ ಮಾಡಬೇಕು ಹಾಗೆ ನಾವು ಎಲ್ಲರೂ ಇದರ ಬಗ್ಗೆ ಯೋಚನೆ ಮಾಡಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು. ದೇಶದ ಅಭಿವೃದ್ದಿಗೆ ಮಾರಕವಾಗಿರುವುದು ಪ್ಲಾಸ್ಟಿಕ್‌ ಅದನ್ನು ಕಡಿಮೆ ಮಾಡಬೇಕು. ಸರಕಾರದ ಅದೇಶವನ್ನು ನಾವು ಪಾಲಿಸಬೇಕು.

ಜನರು ಪ್ಲಾಸ್ಟಿಕ್‌ ಬಳಸಿದ ನಂತರ ಅದನ್ನು ರಸ್ತೆಯ ಭಾಗದಲ್ಲಿ ಎಸೆಯಬಾರದು ಅದನ್ನು ಸರಿಯಾಗಿ ವಿಗಂಡಿಸಬೇಕು. ಹಸಿಕಸ ಮತ್ತು ಒಣಕಸವನ್ನು ವಿಗಂಡಿಸುವುದು ಒಳ್ಳೆಯದು. ಹಾಗೇ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು.

ಉಪಸಂಹಾರ:

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ಇದು ಕೇವಲ ಸರ್ಕಾರ ಕೆಲಸವಲ್ಲ. ಇದರಲ್ಲಿ ಸಮುದಾಯದ ಪಾತ್ರ ಹಾಗೂ ಜವಾಬ್ದಾರಿ ಹೆಚ್ಚಿದೆ. ಪ್ಲಾಸ್ಟಿಕ್‌ ಮರುಬಳಕೆ ಹೇಗೆ ಮುಖ್ಯವೋ, ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವುದು ಅದಕ್ಕಿಂತ ಮುಖ್ಯ. ನಾಗರಿಕರಾಗಿ ನಾವು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು. ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳನ್ನು ಕಡಿಮೆ ಮಾಡುವುದು. ಹಾಗೇ ಸಣ್ಣ ಸಣ್ಣ ನಿರ್ಧಾರಗಳು ಬೃಹತ್‌ ಬದಲಾವಣೆಗೆ ಕಾರಣವಾಗುತ್ತದೆ. ನಮ್ಮ ಭವಿಷ್ಯದ ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದೂ ಅಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗೋಣ. ಸ್ವಚ್ಚ ಆರೋಗ್ಯಕರ ಪರಿಸರ ನಿರ್ಮಿಸೋಣ.

FAQ

ಪ್ಲಾಸ್ಟಿಕ್‌ ಎಂದರೇನು?

ಪ್ಲಾಸ್ಟಿಕ್‌ ಒಂದು ಕೃತಕವಾಗಿ ತಯಾರಿಸಿರುವ ಮತ್ತು ಶಾಖ ಪ್ರಯೋಗದಿಂದ ಮೆದುವಾಗಿ ಅಚ್ಚು ಹೋಯಲು ಒದಗುವ ಮೆದು ಪದ್ದಾರ್ಥ.

ಪ್ಲಾಸ್ಟಿಕ್‌ ನ ಇತರ ಹೆಸರೇನು ?

ರಾಳ,ಮರವಜ್ರ ಎಂದು ಕರೆಯುತ್ತಾರೆ.

ಮಾನವ ಮೊದಲು ತಯಾರಿಸಿದ ಪ್ಲಾಸ್ಟಿಕ್‌ ಯಾವುದು ?

ಸೆಲ್ಯೂಲಯಿಡ್.

ಪ್ಲಾಸ್ಟಿಕ್‌ ನ ವರ್ಗೀಕರಣ ಯಾವುವು ?

ಥರ್ಮೊ ಪ್ಲಾಸ್ಟಿಕ್ಕುಗಳು, ಥರ್ಮೊಸೆಟ್ಟಿಂಗ್‌ ಪ್ಲಾಸ್ಟಿಕ್ಕುಗಳು, ಎಲಾಸ್ಟೊಮರುಗಳು.

ಇತರೆ ಪ್ರಬಂಧಗಳು:

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಮಣ್ಣಿನ ಮಾಲಿನ್ಯ ಬಗ್ಗೆ ಪ್ರಬಂಧ

ನೀರು ಮತ್ತು ನೈರ್ಮಲ್ಯ ಪ್ರಬಂಧ

Leave a Comment