prachya smarakagala samrakshane prabandha in kannada

prachya smarakagala samrakshane prabandha in kannada, ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಪ್ರಬಂಧ, prachina smarakagala samrakshane, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಪ್ರಬಂಧ

prachya smarakagala samrakshane prabandha in kannada

ಈ ಲೇಖನಿಯಲ್ಲಿ ಪ್ರಾಚ್ಯ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಪೀಠಿಕೆ:

ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪುರಾತನ ಜ್ಞಾನದ ಪ್ರಜ್ಞೆ ಇರಬೇಕು. ಸ್ಮಾರಕವು ಬಹಿರಂಗವಾಗಿ ವ್ಯಕ್ತಿಯನ್ನು ಪ್ರಶಂಸಿಸಲು ಅಥವಾ ಮುಖ್ಯವಾದ ಘಟನೆಯನ್ನು ನೆನಪಿಸಿಕೊಳ್ಳಲು ಅಥವಾ ಒಂದು ಸಾಮಾಜಿಕ ಸಮೂಹದ ಹಿಂದಿನ ಘಟನೆಗಳ ನೆನಪು ಮತ್ತು ಪ್ರಖ್ಯಾತಗೊಳಿಸುವುದು. ಪ್ರಾಚ್ಯ ಸ್ಮಾರಕಗಳು ನಮ್ಮ ದೇಶದ ಆಸ್ತಿ. ಇದನ್ನು ಸಂರಕ್ಷಿಬೇಕಾದುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. ‘ಪ್ರಾಚ್ಯ’ ಎಂದರೆ ಪುರಾತನ, ಸ್ಮಾರಕಗಳು ಎಂದರೆ ಹಿಂದಿನ ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಾಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು, ಚರ್ಚೆಗಳು, ಅರಮನೆಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವುಗಳು, ಮೂರ್ತಿಗಳು ಇವುಗಳನ್ನೆಲ್ಲ ನಾವು ಪ್ರಾಚೀನ ಸ್ಮಾರಕಗಳು ಎನ್ನಬಹುದು.

ವಿಷಯ ವಿವರಣೆ:

ಪುರಾತನ ಸ್ಮಾರಕಗಳ ಸಂರಕ್ಷಣೆ, ಪುರಾತನ ವಸ್ತುಗಳ ದಟ್ಟಣೆ ಮತ್ತು ಕೆಲವು ಸ್ಥಳಗಳಲ್ಲಿ ಉತ್ಖನನದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಪುರಾತನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ, ಐತಿಹಾಸಿಕ ಅಥವಾ ಕಲಾತ್ಮಕ ವಸ್ತುಗಳ ಕೆಲವು ಸಂದರ್ಭಗಳಲ್ಲಿ ರಕ್ಷಣೆ ಮತ್ತು ಸ್ವಾಧೀನಕ್ಕಾಗಿ ಒದಗಿಸುವುದು ಸೂಕ್ತವಾಗಿದೆ. ಪ್ರಭಾವ ಬೀರುವುದು ಹಾಗೂ ವಿಸ್ಮಯವನ್ನು ಉಂಟುಮಾಡುವುದು ಸ್ಮಾರಕಗಳ ಮುಖ್ಯ ಉದ್ದೇಶವಾಗಿದೆ. ಸ್ಮಾರಕಗಳು ಐತಿಹಾಸಿಕ ಹಾಗೂ ರಾಜಕೀಯ ಮಾಹಿತಿಗಳನ್ನು ತಿಳಿಸುವ ಉದ್ದೇಶದಿಂದಲ್ಲೂ ಸಹ ನಿರ್ಮಿಸಲ್ಪಡುತ್ತದೆ. ಸ್ಮಾರಕಗಳನ್ನು ಸಾವಿರಾರು ವರ್ಷಗಳಿಂದ ನಿರ್ಮಿಸಲಾಗುತ್ತಿವೆ, ಇವು ಹೆಚ್ಚಿನ ಕಾಲ ಇರುವಂತಹವು ಹಾಗೂ ನಾಗರಿಕತೆಯ ಪ್ರಖ್ಯಾತ ಚಿಹ್ನೆಗಳಾಗಿವೆ. ಪ್ರಾಚೀನ ಕಾಲದ ವಿಷಯ ಹೇಳುವ ಅವಶೇಷ, ಸ್ಮಾರಕಗಳನ್ನು ಪ್ರತಿಯೊಬ್ಬರು ರಕ್ಷಿಸಬೇಕಾಗಿದೆ. ಜಿಲ್ಲೆಯಲ್ಲಿರುವ ವೀರಗಲ್ಲುಗಳನ್ನು ನೋಡಿದರೆ ತಲೆಎತ್ತಿ ಸ್ವಾಭಿಮಾನದಿಂದ ನಡೆಯುವ ಪ್ರಜ್ಞೆ ಮೂಡುತ್ತದೆ.

ಚಿತ್ರದುರ್ಗದಲ್ಲಿ ಐತಿಹಾಸಿಕ ಕೋಟೆ, ಸ್ಮಾರಕ, ಅವಶೇಷ, ರಾಜಮಹಾರಾಜರ ಇತಿಹಾಸ ಗೊತ್ತಾಗುತ್ತದೆ. ಯುವಜನಾಂಗ ಚಿತ್ರದುರ್ಗದ ಇತಿಹಾಸ ತಿಳಿದುಕೊಂಡು ದೇಶದ ಸಂಸ್ಕøತಿ, ನಾಗರೀಕತೆಯನ್ನು ಉಳಿಸಬೇಕಾಗಿದೆ. ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಾಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು, ಚರ್ಚೆಗಳು, ಅರಮನೆಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವು ಕಾಣಬಹುದು.

ಪ್ರಾಚೀನ ಸ್ಮಾರಕ” ಎಂದರೆ ಯಾವುದೇ ರಚನೆ, ನಿರ್ಮಾಣ ಅಥವಾ ಸ್ಮಾರಕ ಅಥವಾ ಯಾವುದೇ ತುಮುಲ ಅಥವಾ ಅಂತ್ಯಕ್ರಿಯೆಯ ಸ್ಥಳ, ಅಥವಾ ಯಾವುದೇ ಗುಹೆ, ಬಂಡೆ-ಶಿಲ್ಪ, ಶಾಸನ ಅಥವಾ ಏಕಶಿಲೆ, ಇದು ಐತಿಹಾಸಿಕ, ಪುರಾತತ್ತ್ವ ಶಾಸ್ತ್ರ ಅಥವಾ ಕಲಾತ್ಮಕ ಆಸಕ್ತಿ, ಅಥವಾ ಅದರ ಯಾವುದೇ ಅವಶೇಷಗಳನ್ನು ಒಳಗೊಂಡಿದೆ. ಹಾಗೂ ಪ್ರಾಚ್ಯವಸ್ತು ಸ್ಮಾರಕಗಳೊಡನೆ ನಮಗೆ ಭಾವನಾತ್ಮಕವಾದ ಸಂಬಂಧವಿದೆ. ಸಂರಕ್ಷಿತ ಸ್ಮಾರಕವನ್ನು ಬೇಲಿ ಹಾಕುವುದು, ಮುಚ್ಚುವುದು, ದುರಸ್ತಿ ಮಾಡುವುದು, ಮರುಸ್ಥಾಪಿಸುವುದು ಮತ್ತು ಸ್ವಚ್ಛಗೊಳಿಸುವುದು, ಮತ್ತು ಸಂರಕ್ಷಿತ ಸ್ಮಾರಕವನ್ನು ನಿರ್ವಹಿಸುವ ಅಥವಾ ಅನುಕೂಲಕರವಾಗಿ ಭದ್ರಪಡಿಸುವ ಉದ್ದೇಶಕ್ಕಾಗಿ ಅಗತ್ಯವಿರುವ ಯಾವುದೇ ಕಾರ್ಯವನ್ನು ನಿರ್ವಹಣೆ ಮಾಡುವುದು.

ಐತಿಹಾಸಿಕ ಸ್ಮಾರಕ, ಅವಶೇಷಗಳನ್ನು ಸಂರಕ್ಷಿಸುವರು ಇತಿಹಾಸ ಪ್ರೀತಿಸುತ್ತಾರೆ. ಚಿತ್ರದುರ್ಗದ ಬೆಟ್ಟ ಹಾಗೂ ಚಂದ್ರವಳ್ಳಿಯ ಸುತ್ತ ಮುತ್ತ ಭಾಗಗಳಲ್ಲಿ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಕೋಟೆ, ಬತೇರಿ, ಅಂಕಳಿಮಠ, ಕಡಿದಾದ ಬೆಟ್ಟ, ಸಂತೆಹೊಂಡ ಮುರುಘಾಮಠ ಕೆರೆ, ಕಟ್ಟೆ, ಪುಷ್ಕಳಿಗಳು, ದೇವಾಲಯಗಳು ಸುಂದರ ಸೊಬಗನ್ನು ಹೊಂದಿವೆ. ಒಂದೊಂದು ಪ್ರಾಚೀನ ಸ್ಮಾರಕದ ಹಿಂದೆ ಒಂದೊಂದು ಕತೆ ಇರುವುದರಿಂದ ಮುಂದಿನ ಪೀಳಿಗೆಯ ಅರಿವು ವಿಸ್ತರಣೆಗೆ ನಾವು ಸಂರಕ್ಷಿಸಬೇಕಿದೆ. ನಿಯಾಸೆಗೆ ಇಂದಿನ ದಿನಗಳಲ್ಲಿ ದೇವಾಲಯದಲ್ಲಿ ವಿಗ್ರಹಗಳ ಕೆಳಗಿನ ಬುನಾದಿ ಅಗೆದು ಮೂರ್ತಿಗಳನ್ನು ವಿರೂಪಗೊಳಿಸುತ್ತಾರೆ. ಸ್ಮಾರಕಗಳ ಮೇಲೆ ಕೆತ್ತನೆ ಮಾಡಿ ವಿರೂಪಗೊಳಿಸುವ ಕುಕೃತ್ಯಗಳೂ ನಡೆಯುತ್ತಿವೆ.

ಸ್ಮಾರಕಗಳ ಸಂರಕ್ಷಣೆವು ಪ್ರತಿಯೊಂದು ಅಧಿಸೂಚನೆಯ ನಕಲನ್ನು ಸ್ಮಾರಕದ ಮೇಲೆ ಅಥವಾ ಸಮೀಪದಲ್ಲಿ ಎದ್ದುಕಾಣುವ ಸ್ಥಳದಲ್ಲಿ ಸ್ಥಿರಗೊಳಿಸಬೇಕು, ಜೊತೆಗೆ ಕೇಂದ್ರ ಸರ್ಕಾರವು ಒಂದರೊಳಗೆ ಸ್ವೀಕರಿಸಿದ ಅಧಿಸೂಚನೆಯ ವಿಷಯಕ್ಕೆ ಯಾವುದೇ ಆಕ್ಷೇಪಣೆಗಳನ್ನು ಹೊಂದಿದೆ. ಅದನ್ನು ನಿಗದಿಪಡಿಸಿದ ದಿನಾಂಕದಿಂದ ತಿಂಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಹೇಳಲಾದ ಒಂದು ತಿಂಗಳ ಅವಧಿಯ ಮುಕ್ತಾಯದ ನಂತರ, ಕೇಂದ್ರ ಸರ್ಕಾರವು, ಆಕ್ಷೇಪಣೆಗಳನ್ನು ಪರಿಗಣಿಸಿದ ನಂತರ, ಯಾವುದಾದರೂ ಇದ್ದರೆ, ಅಧಿಸೂಚನೆಯನ್ನು ದೃಢೀಕರಿಸಬೇಕು ಅಥವಾ ಹಿಂಪಡೆಯಬೇಕು. ಐತಿಹಾಸಿಕ ಸ್ಮಾರಕಗಳನ್ನು ವಿರೂಪಗೊಳಿಸದಂತೆ ಹಾಗೂ ನೈಸರ್ಗಿಕ ಪರಂಪರೆಯ ತಾಣಗಳು ಅತಿಕ್ರಮಣವಾಗದಂತೆ ತಡೆಯುವ ಮಗತ್ತರವಾದ ಜವಾದ್ದಾರಿಯು ನಮ್ಮ ಮೇಲಿದೆ.

ಉಪಸಂಹಾರ:

ಪ್ರಾಚೀನ ಸ್ಮಾರಕಗಳು ಅವುಗಳ ಹಿಂದಿನ ಇತಿಹಾಸವನ್ನು ಸೂಚಿಸುತ್ತಾವೆ. ಹಿಂದಿನ ಇತಿಹಾಸದ ಅರಿವಿಲ್ಲದೇ ಭವಿಷ್ಯವನ್ನು ನಿರ್ಮೂಣ ಮಾಡಲು ಸಾಧ್ಯವಿಲ್ಲ ಪ್ರತಿಯೊಬ್ಬರಿಗೂ ಪುರಾತನ ಸ್ಮಾರಕಗಳ ಬಗ್ಗೆ ಅರಿವಿರಬೇಕು ಹಾಗೂ ಅದನ್ನು ಸುರಕ್ಷಿತವಾಗಿ ಕಪಾಡಿಕೊಂಡು ಮುಂದಿನ ಪೀಳಿಗೆಗೆ ಮಾದರಿ ಅಗುವ ಪ್ರಜ್ಞೆ ಇರಬೇಕು.

FAQ

ಪ್ರಾಚೀನ ಸ್ಮಾರಕಗಳು ಎಂದರೇನು ?

ಪುರಾತನ ರಾಜ ಮಹಾರಾಜರ ಕಾಲದ ಭವ್ಯ ಕಟ್ಟಡಗಳು, ಯುದ್ಧ ಸಾಮಾಗ್ರಿಗಳು, ನಾಣ್ಯಗಳು, ದೇವಾಲಯಗಳು, ಮಸೀದಿಗಳು, ಚರ್ಚೆಗಳು, ಅರಮನೆಗಳು, ಉಗ್ರಾಣಗಳು, ಸಾಂಸ್ಕೃತಿಕ ಹಬ್ಬಗಳು ಮುಂತಾದವುಗಳು, ಮೂರ್ತಿಗಳು ಇವುಗಳನ್ನೆಲ್ಲ ನಾವು ಪ್ರಾಚೀನ ಸ್ಮಾರಕಗಳು ಎನ್ನಬಹುದು.

ಪ್ರಾಚ್ಯ ಸ್ಮಾರಕ ಎಂಬ ಪದದ ಅರ್ಥ ?

ಪ್ರಾಚ್ಯ ಎಂದರೆ ಪುರಾತನ,ಸ್ಮಾರಕ ಎಂದರೆ ಹಿಂದಿನ ರಾಜ ಮಹಾರಾಜರ ಭವ್ಯವಾದ ಕಟ್ಟಡ.

ಪ್ರಾಚೀನ ವಸ್ತುಗಳು ಮತ್ತು ಕಲಾ ಸಂಪತ್ತು ಕಾಯಿದೆ ಜಾರಿಗೆ ಬಂದದ್ದು ಯಾವಾಗ ?

೧೯೭೨.

ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯನ್ನು ಯಾವ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ?

ಭಾರತ ಸರ್ಕಾರ ಸಂಸ್ಕೃತಿ ಇಲಾಖೆ.

ಇತರೆ ಪ್ರಬಂಧಗಳು:

ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ

ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ

Leave a Comment