Proverbs in Kannada | ಗಾದೆಗಳು ಕನ್ನಡ

Proverbs in Kannada, proverbs in Kannada with explanation, 5 ಗಾದೆಗಳು ಮತ್ತು ವಿವರಣೆ, ಗಾದೆ ಮಾತುಗಳು ಮತ್ತು ವಿವರಣೆ, gadegalu in Kannada

Proverbs in Kannada

Proverbs in Kannada
Proverbs in Kannada ಗಾದೆಗಳು ಕನ್ನಡ

ಈ ಲೇಖನಿಯಲ್ಲಿ ಗಾದೆಗಳ ಬಗ್ಗೆ ಸಂಪೂರ್ಣವಾದ ವಿವರಣೆಯನ್ನು ನಾವು ನಿಮಗೆ ನೀಡಿದ್ದೇವೆ.

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ”

ವೇದಾ ಸುಳ್ಳಾದರೂ ಗಾದೆ ಸುಳ್ಳಾಗದು ಇಲ್ಲಿ ಬೆಕ್ಕು ಹಾಗು ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರು, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ. ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ. ಇವರು ಇತರರು ಕಷ್ಟಪಡುವುದನ್ನು ಕಂಡು ಸಂತೋಷಪಡುತ್ತಾರೆ. ತಮಗೆ ಆಗದವರಿಗೆ ಏನಾದರೂ ಆಪತ್ಹು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಾಚ್ತೋಷವಾಗುತ್ತದೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ

ಮಕ್ಕಳನ್ನು ಚಿಕ್ಕವರಾಗಿದ್ದಾಲೇ ತಿದ್ದಬೇಕು ಇಲ್ಲವೆಂದರೆ ಅವರು ಬೆಳೆದು ದೊಡ್ಡವಾದ ಮೇಲೆ ಮಾತುಕೇಳುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ನಾವು ಏನು ಕಲಿಸುತ್ತೇವೆ ಆದೇ ಮುಂದೆ ಬರುತ್ತದೆ. ಚಿಕ್ಕವರಾಗಿದ್ದಾಗಲೇ ಕೆಲವು ಮಕ್ಕಳನ್ನು ತಿದ್ದಲು ಸಾಧ್ಯವಾಗುವುದಿಲ್ಲ. ಗಿಡವಾಗಿರುವಾಗ ಬಗ್ಗಿಸಲು ಸಾಧ್ಯವಾಗದೆ ದೊಡ್ಡಮರವಾದ ಮೇಲೆ ಬಗ್ಗಿಸಿ ನೇರಮಾಡಲು ಸಾಧ್ಯವಿಲ್ಲವೋ ಹಾಗೇ ಅವರನ್ನು ತಿದ್ದವುದು ಕಷ್ಟ.

ಮಾಡಿದ್ದುಣ್ಣೋ ಮಹಾರಾಯ

ವ್ಯಕ್ತಿ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಕೆಟ್ಟ ಕೆಲಸ ಮಾಡುವವರಿಗೆ ಕೆಟ್ಟದೇ ಅಗುತ್ತದೆ. ಕೃತ್ಯ ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು. ತಪ್ಪು ಯಾರೇ ಮಾಡಿ ಇರಲಿ ಅದರ ಫಲ ಅನುಭವಿಸುತ್ತಾರೆ. ಮಾಡಿದ್ದುಣ್ಣೋಮಹಾರಾಯ

 “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ

ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿ ಇಲ್ಲ ಹಾಗೇ ತಾಯಿ ಇಲ್ಲದೇ ಇದ್ದರೇ ಜೀವನ ಅಂಧಕಾರದಲ್ಲಿ ಮುಳುಗುತ್ತದೆ. ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿನಂತೆ. ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ, ಮೆಣಸಿನ ಕಾಯಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವದಿಲ್ಲ. ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ.

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

ಸತ್ಯ ಸದಾ ಜೀವಂತವಾದುದು; ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸುಳ್ಳಿಗೆ ಸುಖವಿಲ್ಲ. ಸುಳ್ಳಿನ ಒಡನಾಟ ಕೆಸರೊಳಗೆ ಮುಳ್ಳು ತುಳಿದಂತೆ. ಸುಳ್ಳು ಹೇಳಿ ಆ ಸುಳ್ಳು ಬಯಲಾದಾಗ ಮನುಷ್ಯ ತನ್ನ ಗೌರವ ಅಂತಸ್ತು ನಂಬಿಕೆ ಕಳೆದು ಕೊಳ್ಳುವುದರ ಜೊತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.

ಸತ್ಯ ಶಾಶ್ವತವಾದದ್ದು ಆ ದೃಷ್ಟಿಯಿಂದಲೇ ನಮ್ಮ ರಾಷ್ಟೀಯ ಲಾಂಛನದಲ್ಲಿ (ಅಶೋಕ ಚಕ್ರ) ಸತ್ಯಮೇವ ಜಯತೆ’ ಎಂಬ ಬರಹ ಕಲ್ಪಂತಾರಸ್ಥಾಯಿಯಾಗಿ ರಾರಾಜಿಸುತ್ತದೆ. ಸತ್ಯದ ದಾರಿಯಲ್ಲಿ ನಡೆಯುವನಿಗೆ ಯಾವುದೇ ಭಯವಿಲ್ಲ ಅದೇ ಸುಳ್ಳಿನ ದಾರಿಯಲ್ಲಿ ನೆಡೆಯುವವನಿಗೆ ಸತ್ಯದ ಭಯವಿರುತ್ತದೆ.

ಸತ್ಯ ಸೋಲಬಹುದು ಅದರೆ ಯಾವತ್ತು ಸಾಯುವುದಿಲ್ಲ. ಸುಳ್ಳಿನ್ನು ತುಂಬಾ ದಿನ ಮುಚ್ಚಿ ಇಡಲು ಸಾಧ್ಯವಿಲ್ಲ ಅದು ಹೊರಗೆಬರಲೇ ಬೇಕು. ಸುಳ್ಳಿ ಹೇಳಿಕೊಂಡು ಸುಖವಾಗಿ, ನೆಮ್ಮದಿಯಾಗಿ, ಸಂತೋಷವಾಗಿ, ಇರಲು ಸಾಧ್ಯಾವಿಲ್ಲ.

ಅತಿ ಆಸೆ ಗತಿ ಕೆಡಿಸಿತು

ಮನುಷ್ಯನಿಗೆ ಆಸೆ ಇರಬೇಕು. ಅದೇ ಅತೀಯಾದರೆ ಜೀವನದಲ್ಲಿ ಬಹಳ ನೋವು ಅನುಭವಿಸಬೇಕಾಗುತ್ತದೆ. ಹೌದು ಮನುಷ್ಯನಿಗೆ ಆಸೆ ಇರಬೇಕು. ಅಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆ ಇಲ್ಲದವ ಬದುಕಲಾರ. ಮನುಷ್ಯನ ಆಸೆಗೂ ಒಂದು ಮೀತಿ ಇದೆ. ಅತಯಾದ ಆಸೆ ಅವನ ದುಃಖಕ್ಕೆ ಕಾರಣವಾಗುತ್ತದೆ. ಮನುಷ್ಯರು ಅತಿಯಾದ ಆಸೆಯಲ್ಲಿ ಅವರ ಜೀವನದ ಅಮೂಲ್ಯವಾದ ಕ್ಷಣಗಳನ್ನು ಮರೆತು ಜೀವನ ನೆಡೆಸುತ್ತಾರೆ.

ಪ್ರತಿದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದ ರೈತನೊಬ್ಬನು ಒಂದೇ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯ ಹೊತ್ತವನ್ನು ಸೀಳಿ ಒಂದೂ ಸಿಗದೇ ನಿರಾಶೆಯಾದನು. ಈ ರೀತಿಯ ಕಥೆಯ ಹಾಗೆ ನಮ್ಮ ಜೀವನ ಅಗಬಾರದು. ಅತಿ ಆಸೆ ಗತಿ ಕೆಡಿಸಿತು.

ಇತರೆ ಪ್ರಬಂಧಗಳು:

ಗಾದೆ ಮಾತುಗಳು ಕನ್ನಡದಲ್ಲಿ

ಕನ್ನಡ ಗಾದೆಗಳು ಮತ್ತು ವಿವರಣೆ

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

Leave a Comment