ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ । Puttaraj Gawai Information in Kannada

ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ, Puttaraj Gawai Information in Kannada, Puttaraj Gawai Jeevana Charitre in Kannada puttaraj gawai in kannada

ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ

puttaraj gawai in kannada

ಈ ಲೇಖನಿಯಲ್ಲಿ ಪುಟ್ಟರಾಜ ಗವಾಯಿಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಅದರ ಅನುಕೂಲ ಪಡೆದುಕೊಳ್ಳಿ.

ಜೀವನ

ಪುಟ್ಟರಾಜ ಗವಾಯಿಗಳು ಅವಿಭಜಿತ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯ) ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಬಡ ಕನ್ನಡ ಲಿಂಗಾಯತ ಕುಟುಂಬದಲ್ಲಿ ಮಾರ್ಚ್ 3,1911 ರಲ್ಲಿ ಜನಿಸಿದರು.ಅವರ ಪೋಷಕರು ರೇವಯ್ಯ ವೆಂಕಟಪುರಮಠ ಮತ್ತು ಸಿದ್ದಮ್ಮ.ಅವರು 6 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು.ಅವರು 10 ತಿಂಗಳ ಮಗುವಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡರು,ನಂತರ ಅವರ ತಾಯಿಯ ಚಿಕ್ಕಪ್ಪ ಚಂದ್ರಶೇಖರಯ್ಯ ಅವರ ಆಶ್ರಯದಲ್ಲಿ ಬೆಳೆದರು.

ಉಭಯ ಗಾನ ವಿಶಾರದ ಪುಟ್ಟರಾಜ ಗವಾಯಿಗಳು ಕರುನಾಡ ಕಂಡ ಧೀಮಂತ ಸಂಗೀತಗಾರ ಮತ್ತು ಶಿವಯೋಗಿ. ಪಂಚಾಕ್ಷರಿ ಗವಾಯಿಗಳ ಪರಮ ಶಿ‍ಷ್ಯರಾಗಿ ನವಲಗುಂದದ ವೀರಾಶ್ರಮದ ಪೀಠಾಧಿಪತಿಯಾಗಿ ಸಾಕಷ್ಟು ಸಾಮಾಜಿಕ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ. ಸಾಕಷ್ಟು ಅಂಧರ ಬಾಳಿಗೆ ದಾರಿದೀಪವಾದ ಪುಣ್ಯಚೇತನ ಪುಟ್ಟರಾಜ ಗವಾಯಿಗಳು.

2016 ರಲ್ಲಿ ಇವರ ಜೀವನಾಧಾರಿತ ಚಲನಚಿತ್ರ `ಶಿವಯೋಗಿ ಶ್ರೀ ಪುಟ್ಟಯ್ಯಜ್ಜ’ ಬಿಡುಗಡೆಯಾಯಿತು. ಚಿತ್ರದಲ್ಲಿ ವಿಜಯ ರಾಘವೇಂದ್ರ ಗವಾಯಿಗಳ ಪಾತ್ರವನ್ನು ಮಾಡಿದ್ದಾರೆ.

ಶಿಕ್ಷಣ

ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ ಯಾರು ತಿಳಿದಿದ್ದರು? ತಮ್ಮ ಗುರು ಕಲಿತಂತೆಯೇ ಪುಟ್ಟರಾಜರೂ ಸಹ ಸುತ್ತಲಿನ ಪಂಡಿತರಿಂದ ಸಂಗೀತವನ್ನು, ಸಂಗೀತ ವಾದ್ಯ ಗಳನ್ನು ಅಲ್ಲದೆ, ಸಂಸ್ಕೃತ ಹಾಗು ಕನ್ನಡದ ವ್ಯಾಕರಣ ಮೊದಲಾದವುಗಲನ್ನೂ ಸಹ ಕಲಿತರು. ತಮ್ಮೊಂದಿಗೆ ಜೊತೆಯಾಗಿ ಕಲಿಯುತ್ತಿದ್ದ ಇತರ ಬಾಲಕರಿಗೆ ತಾವೇ ಪಾಠ ಹೇಳಿಕೊಡುವಷ್ಟು ಪರಿಣತರಾದರು. ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳಲ್ಲಿ ಅಲ್ಲದೆ, ಪುಟ್ಟರಾಜರು ತಬಲಾ,ಹಾರ್ಮೋನಿಯಮ್,ಪಿಟೀಲು, ಸಾರಂಗಿ, ಶಹನಾಯಿ ಮೊದಲಾದ ವಾದ್ಯಗಳನ್ನು ನುಡಿಸುವದರಲ್ಲೂ ಸಹ ಪರಿಣತರಾದರು.

ಪೀಠಾಧಿಪತಿ

ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. ‘ಕಾಯಕವೇ ಕೈಲಾಸವಯ್ಯ’ ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು.

ಪುಟ್ಟರಾಜ ಗವಾಯಿಗಳ ಕೊಡುಗೆ

ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಟೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಿಯೂ ಪಾಲಿಸಿಕೊಂಡು ಸ್ವತಃ ದೇವರಾದರು.

ಸಾಧನೆ

ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ.

ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ರುದ್ರಾಕ್ಷಿ ಸರ , ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರ ಗಳನ್ನು ಧರಿಸಿ ,ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವು ಗವಾಯಿಗಳ ವ್ಯಕ್ತಿತ್ವದಲ್ಲಿ ಇತ್ತು. ಇಲ್ಲೂ, ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕಿತ್ತು.ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವುದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.

ಕೊನೆಯದಾಗಿ

ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನೆರೆದ ಭಕ್ತ ಜನ,ಗದಗ ಸಪ್ಟಂಬರ್ ೧೮,೨೦೧೦ ಗವಾಯಿಗಳ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಗದಗಿಗೆ ಬಂದಿದ್ದರು. ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಪಂ! ಪುಟ್ಟರಾಜ ಗವಾಯಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಟ್ಟರಾಜ ಗವಾಯಿ ಅವರು ಅಂಧ ಹಾಗೂ ಅನಾಥರ ಕಣ್ಮಣಿ ಆಗಿದ್ದರು ಎಂದರು. ಗವಾಯಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕಾಗಿ ಸುಮಾರು ೪೫೦ ಮಂದಿ ಸ್ವಾಮೀಜಿಗಳು ಪಂಚಾಕ್ಷರಿ ಗವಾಯಿ ಅವರ ಗದ್ದುಗೆ ಸಮೀಪದಲ್ಲಿಯೇ ವೀರಶೈವ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಮಾಧಿಯ ಸಿದ್ದತೆ ನಡೆಸಿದ್ದರು. ಸಮಾಧಿಯ ಶುದ್ದೀಕರಣ, ಪೂಜೆಗೆ ಆಕಳ ಹಾಲು, ಮೊಸರನ್ನು ಬಳಸಲಾಗಿತ್ತು. ವೀರಶೈವ ಧರ್ಮದ ಅನುಸಾರವಾಗಿ ರುದ್ರಾ ಭಿಷೇಕ ಪಾದೋದಕ ಪ್ರಸಾದಗಳ ಮೂಲಕ ಗವಾಯಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. [೪] ಚಿರನಿದ್ರೆಗೆ ಜಾರಿದ ಸಂಗೀತ ಸಾಮ್ರಾಟ ಪಂಡಿತ ಪುಟ್ಟರಾಜ ಗವಾಯಿ ಅವರ ಪಾರ್ಥಿವ ಶರೀರವನ್ನು ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಇರುವ ಪಂಡಿತ ಪಂಚಾಕ್ಷರ ಗವಾಯಿಗಳ ಗದ್ದುಗೆಯ ಪಕ್ಕದಲ್ಲಿಯೇ ಸಕಲ ಧಾರ್ಮಿಕ ವಿಧಿವಿಧಾನ ಹಾಗೂ ಸರಕಾರಿ ಗೌರವಗಳೊಂದಿಗೆ ಶನಿವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇತರೆ ಪ್ರಬಂಧಗಳು

ಕನ್ನಡ ಸಂಸ್ಕೃತಿ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ

Leave a Comment